dozen ಡಸ್‍ನ್‍
ನಾಮವಾಚಕ
(ಬಹುವಚನ dozen ಯಾ dozens).
  1. ಹನ್ನೆರಡು ಡಜನ್ನು: three dozen figs ಮೂರು ಡಜನ್‍ ಅಂಜೂರ. some dozens of people ಅನೇಕ ಮಂದಿ; ಡಜನ್‍ಗಟ್ಟಲೆ ಜನ.
  2. (ಬಹುವಚನ dozens) ಹನ್ನೆರಡು ಹನ್ನೆರಡರ – ತಂಡ, ಕಟ್ಟು, ಗುಂಪು: pack them in dozens ಹನ್ನೆರಡು ಹನ್ನೆರಡಾಗಿ – ಕಟ್ಟಿಡು, ತುಂಬಿಡು.
  3. (ಆಡುಮಾತು) ಸುಮಾರು ಹನ್ನೆರಡು; ಹೆಚ್ಚುಕಡಮೆ ಒಂದು ಡಜನ್ನು: some dozen people ಸುಮಾರು ಹನ್ನೆರಡು ಜನ.
  4. ಸಾಕಷ್ಟು ಹೆಚ್ಚಿನ, ಆದರೆ ನಿರ್ದಿಷ್ಟವಾಗಿ ಗೊತ್ತಿಲ್ಲದ, ಸಂಖ್ಯೆ; ಡಜನ್‍ಗಟ್ಟಲೆ.
ಪದಗುಚ್ಛ

half a dozen (ಸುಮಾರು) ಆರು; ಅರ್ಧ ಡಜನ್ನು.

ನುಡಿಗಟ್ಟು
  1. by the dozen ಡಜನ್‍ಗಟ್ಟಲೆ; ದೊಡ್ಡ ಪ್ರಮಾಣದಲ್ಲಿ; ಹೆಚ್ಚಿನ ಸಂಖ್ಯೆಯಲ್ಲಿ.
  2. daily dozen ಪ್ರತಿನಿತ್ಯದ ವ್ಯಾಯಾಮ: ಬೆಳೆಗ್ಗೆ ಎದ್ದು ಪ್ರತಿನಿತ್ಯ ಮಾಡುವ ವ್ಯಾಯಾಮ.
  3. devil’s dozen = baker’s dozen.
  4. dozens of (ಆಡುಮಾತು) ತುಂಬ; ಬಹಳ; ಅನೇಕಾನೇಕ; ಹಲವಾರು: I’ve been there dozens of times ನಾನು ಅಲ್ಲಿಗೆ ಹಲವಾರು ಸಲ ಹೋಗಿದ್ದೇನೆ.
  5. long dozen = baker’s dozen.
  6. talk nineteen to the dozen (ಬ್ರಿಟಿಷ್‍ ಪ್ರಯೋಗ) ಒಂದೇ ಸಮನೆ ಮಾತನಾಡು; ಎಡೆಬಿಡದೆ ಮಾತನಾಡು; ಮಾತಿನ ಮಳೆ ಸುರಿಸುತ್ತಿರು.