See also 2neck
1neck ನೆಕ್‍
ನಾಮವಾಚಕ
  1. ಕತ್ತು; ಕುತ್ತಿಗೆ; ಕೊರಳು; ಗೋಣು; ಕಂಠ; ಭುಜಗಳಿಗೂ ತಲೆಗೂ ಸಂಬಂಧ ಕಲ್ಪಿಸುವ ದೇಹಭಾಗ.
  2. (ಜೂಜಿನ ಕುದುರೆ) ಕತ್ತಿನುದ್ದ; ಪಂದ್ಯದಲ್ಲಿ ಎಷ್ಟು ಮುಂದಿದೆ ಎಂಬುದನ್ನು ಅಳೆಯುವಾಗ ಲೆಕ್ಕಕ್ಕೆ ತೆಗೆದುಕೊಳ್ಳುವ ಅದರ ಕುತ್ತಿಗೆ ಹಾಗೂ ತಲೆಯ ಒಟ್ಟು ಉದ್ದದ ಅಳತೆ.
  3. (ಆಹಾರಕ್ಕಾಗಿ ಬಳಸುವ ಪ್ರಾಣಿಯ) ಕತ್ತಿನ ಮಾಂಸ: neck of lamb ಕುರಿಮರಿಯ ಕತ್ತು, ಕತ್ತಿನ ಮಾಂಸ.
  4. (ಷರ್ಟು ಮೊದಲಾದ ಉಡುಪಿನ) ಕತ್ತು; ಕೊರಳ ಭಾಗ.
  5. (ಅಶಿಷ್ಟ) ಸೊಕ್ಕು; ಉದ್ಧಟತನ; ಧಾರ್ಷ್ಟ್ಯ: you have got a neck asking that ಹಾಗೆ ಕೇಳುವ ಉದ್ಧಟತನ ನಿನಗೆ ಇದೆ.
  6. (ಪಾತ್ರೆಯ, ಮುಖ್ಯವಾಗಿ ಸೀಸೆಯ) ಕಂಠ; ಕತ್ತು.
  7. (ದಾರಿ, ಕಣಿವೆ, ಕಾಲುವೆ, ಮೊದಲಾದವುಗಳ) ಕಿರಿದಾದ ಭಾಗ; ಇಕ್ಕಟ್ಟು ಮಾರ್ಗ.
  8. ಕಣಿವೆ.
  9. ಭೂಕಂಠ; ಭೂಶಿರ.
  10. ಕಿರುಗಾಲುವೆ.
  11. (ಪಿಟೀಲು ಮೊದಲಾದವುಗಳಲ್ಲಿ) ಕಂಠ; ಬೆರಳಾಡಿಸುವ ಭಾಗ.
  12. ಕತ್ತು; ಒಂದು ವಸ್ತುವಿನ ಎರಡು ಭಾಗ ಕೂಡಿಸುವ ಇಕ್ಕಟ್ಟು ಭಾಗ.
  13. (ಭೂವಿಜ್ಞಾನ) ಕತ್ತು; ಹಳೆ ಜ್ವಾಲಾಮುಖಿಯ ಬಾಯಿಯ ಬೋಗುಣಿಯಲ್ಲಿ ಯಾ ನಾಳದಲ್ಲಿ ಘನೀಕರಿಸಿದ ಲಾವ ಯಾ ಅಗ್ನಿಶಿಲೆ.
  14. (ವಾಸ್ತುಶಿಲ್ಪ) ಕಂಬದ ಕತ್ತು; ಕಂಬದ ಬೋದಿಗೆಯ ಕೆಳಭಾಗ.
ಪದಗುಚ್ಛ
  1. break one’s neck
    1. ಗೋಣು ಮುರಿ; ಗೋಣುಮುರಿದು ಸಾಯಿ.
    2. (ಮಾಡಲು ಯಾ ಮಾಡುತ್ತ) ಕಷ್ಟಪಡು; ಶ್ರಮಪಡು: I’m not going to break my neck to finish the job today ಆ ಕೆಲಸವನ್ನು ಇಂದೇ ಮುಗಿಸಲು ನಾನು ಶ್ರಮಪಡುವುದಿಲ್ಲ.
  2. $^1$dead from the neck up.
  3. get it in the neck (ಆಡುಮಾತು)
    1. ಕುತ್ತಿಗೆಗೆ ಬರು; ಪ್ರಾಣಾಪಾಯದ, ಕಠಿಣವಾದ – ಪೆಟ್ಟುತಿನ್ನು, ಅನುಭವಿಸು.
    2. ಪ್ರಬಲವಾದ ಆಕ್ಷೇಪಣೆಗೆ, ಖಂಡನೆಗೆ ಯಾ ಶಿಕ್ಷೆಗೆ ಗುರಿಯಾಗು.
    3. ಛೀಮಾರಿ ಮಾಡಿಸಿಕೊ.
  4. neck and crop ಇಡಿಯಾಗಿ; ಅನಾಮತ್ತಾಗಿ; ಪೂರ್ತಾ.
  5. neck and neck (ಜೂಜಿನಲ್ಲಿ) ಸಮಸಮನಾಗಿ ಓಡು (ರೂಪಕವಾಗಿ ಸಹ).
  6. neck of the woods (ಆಡುಮಾತು) ದೂರಪ್ರದೇಶ; ದೂರದಲ್ಲಿರುವ ಪ್ರದೇಶ, ಜಾಗ.
  7. neck or nothing ಆದದ್ದಾಗಲೆಂದು ಗೆಲ್ಲಲು ಇದ್ದುದೆಲ್ಲವನ್ನೂ ಪಣವೊಡ್ಡು.
  8. pain in the neck (ಆಡುಮಾತು) ಪೀಡಿಸುವ, ಕಾಡಿಸುವ, ಗೋಳು ಹುಯ್ದುಕೊಳ್ಳುವ – ವ್ಯಕ್ತಿ; ಬೇಜಾರು ಹುಟ್ಟಿಸುವ, ತರುವ ವಸ್ತು ಮೊದಲಾದವು.
  9. risk one’s neck ಪ್ರಾಣಾಪಾಯದ ಸಂಭವಕ್ಕೆ ಸಿಕ್ಕಿ, ಬಿದ್ದು, ಮೊದಲಾದವುಗಳಿಂದ ಸಾಯುವ ಸ್ಥಿತಿಯಲ್ಲಿರು.
  10. save one’s neck ತಲೆಯುಳಿಸಿಕೊ; ನೇಣು ಹಾಕುವುದನ್ನು ತಪ್ಪಿಸಿಕೊ.
  11. talk through (or through the back of) one’s neck (ಅಶಿಷ್ಟ) ಅವಿವೇಕವಾಗಿ ಯಾ ಹುಚ್ಚುಹುಚ್ಚಾಗಿ ಮಾತನಾಡು.
  12. up to one’s neck (ಆಡುಮಾತು) (ಯಾವುದೇ ವಿಷಯದಲ್ಲಿ) ಕುತ್ತಿಗೆಯವರೆಗೂ ಮುಳುಗಿ; ಸಂಪೂರ್ಣವಾಗಿ ತೊಡಗಿಸಿಕೊಂಡು.