ನೋಟ; ಪ್ರದರ್ಶನ; ದೃಶ್ಯ; ಕಂಡದ್ದು: a sad sight awaited us ದುಃಖಕರ ನೋಟ ನಮಗಾಗಿ ಕಾದಿತ್ತು. the daffodils were a beautiful sight ‘ಡ್ಯಾಹೊಡಿಲ್’ ಹೂವುಗಳು ಸುಂದರವಾದ ನೋಟವಾಗಿದ್ದವು. a sight to see (orworth seeing) ನೋಡಬೇಕಾದ ನೋಟ; ಪ್ರೇಕ್ಷಣೀಯವಾದ,ನೋಡಲರ್ಹವಾದ – ನೋಟ; ದರ್ಶನೀಯ ದೃಶ್ಯ.
(ಸಾಮಾನ್ಯವಾಗಿ ಬಹುವಚನದಲ್ಲಿ) ನೋಡ(ಲು) ತಕ್ಕ ನೋಟಗಳು; ಪ್ರೇಕ್ಷಣೀಯ ದೃಶ್ಯಗಳು: we went to see the sights of the place ನಾವು ಆ ಊರಿನ ಪ್ರೇಕ್ಷಣೀಯ ದೃಶ್ಯಗಳನ್ನು ನೋಡಲು ಹೋದೆವು.
(ಆಡುಮಾತು) ಸಖತ್; ಎಷ್ಟೋ ಪಾಲು; ತುಂಬ; ಬಹಳಷ್ಟು; ಅಪಾರ: that is a long sight better ಅದು ಎಷ್ಟೋ ಪಾಲು ಮೇಲು. it will cost a sight of money ಅದಕ್ಕೆ ಸಖತ್ ಹಣ ತಗಲುತ್ತದೆ.
(ಫಿರಂಗಿ, ಬಂದೂಕು ಯಾ ಚಾಕ್ಷುಷ ಯಂತ್ರ, ಮೊದಲಾದವುಗಳಲ್ಲಿ ಗುರಿ ಇಟ್ಟು ನೋಡಲು ನೆರವಾಗುವ) ಗುರಿಕಣ್ಣು; ಲಕ್ಷ್ಯಕ.
ಹಾಗೆ ನೋಡಿದ, ವೀಕ್ಷಿಸಿದ ಗುರಿ.
(ಆಡುಮಾತು) ಹಾಸ್ಯಾಸ್ಪದವಾದ, ಅಸಹ್ಯಕರವಾದ ಅಥವಾ ಅಸ್ತವ್ಯಸ್ತವಾದ – ವ್ಯಕ್ತಿ ಯಾ ವಸ್ತು.
ಪದಗುಚ್ಛ
a (perfect) sight (ಆಡುಮಾತು) ದ್ರಾಬೆ ನೋಟ; ಅವಲಕ್ಷಣ ದೃಶ್ಯ: his face is a (perfect) sight ಒಳ್ಳೇ ದ್ರಾಬೆ ಮುಸುಡಿ ಅವನದು; ಶುದ್ಧ ಅವಲಕ್ಷಣ ಮುಖ ಅವನದು.
a sight for sore eyes ಕಣ್ಣಿಗೆ ತಂಪು; ನೋಟಕ್ಕೆ ಪ್ರಿಯವಾದ ವ್ಯಕ್ತಿ ಯಾ ವಸ್ತು, ಮುಖ್ಯವಾಗಿ ಇಷ್ಟವಾದ ಭೇಟಿಗಾರ.
a sight for the gods ದೇವತಾರ್ಹ ದೃಶ್ಯ; ದೇವತೆಗಳಿಗೂ ಸಹ ನೋಡಲರ್ಹವಾದ ನೋಟ; ಕಣ್ಣಿಗೆ ತಂಪಾದ ನೋಟ.
at first sight
ಮೊದಲ ನೋಟದಲ್ಲಿಯೇ; ಪ್ರಥಮ ವೀಕ್ಷಣದಲ್ಲೇ: love at first sight ಮೊದಲ ನೋಟದಲ್ಲಿಯೇ ಹುಟ್ಟಿದ ಪ್ರೇಮ.
ಮೊದಲ ನೋಟಕ್ಕೆ; ಮೇಲು ನೋಟಕ್ಕೆ; ಸ್ಥೂಲದೃಷ್ಟಿಗೆ; ಆಪಾತತಃ: at first sight , the argument seems sound, but it is really invalid ಆ ವಾದವು ಆಪಾತತಃ ಸಾಧುವೆಂದು ತೋರುತ್ತದೆ, ಆದರೆ ನಿಜವಾಗಿ ಅದು ತರ್ಕಸಮ್ಮತವಲ್ಲ.
at (oron) sight ಕಂಡಲ್ಲಿ; ಕಂಡೊಡನೆಯೇ; ನೋಡಿದ ಕೂಡಲೇ; ಕಣ್ಣಿಗೆ ಬಿದ್ದ ಕ್ಷಣವೇ: shoot at sight ಕಂಡೊಡನೆಯೇ ಗುಂಡು ಹಾರಿಸು. pay (draft etc.) at sight ಡ್ರಾಫ್ ಮೊದಲಾದವನ್ನು ನೋಡಿದ ಕೂಡಲೇ ಪಾವತಿ ಮಾಡು. play music at sight (ಲಿಖಿತ ಸಂಗೀತ ಕೃತಿಯ ಸ್ವರಾಂಕನಗಳನ್ನು) ಕಂಡೊಡನೆಯೇ ಆ ಕೃತಿಯನ್ನು (ಪೂರ್ವಾಭ್ಯಾಸವಿಲ್ಲದೆಯೇ) ನುಡಿಸು, ವಾದನ ಮಾಡು.
keep sight of (or keep personorthing in sight) (ವ್ಯಕ್ತಿಯನ್ನು, ವಸ್ತುವನ್ನು) ಕಣ್ಣು ಮುಂದೆಯೇ ಇಟ್ಟುಕೊಂಡಿರು; ಕಣ್ಣು ತಪ್ಪದೆ ನೋಡಿಕೊಳ್ಳುತ್ತಿರು; ದೃಷ್ಟಿಯಲ್ಲೇ ಇಟ್ಟುಕೊಂಡಿರು.