1know
ನೋ
ಕ್ರಿಯಾಪದ
(ಭೂತರೂಪ knew ಉಚ್ಚಾರಣೆ ನ್ಯೂ; ಭೂತಕೃದಂತ known ಉಚ್ಚಾರಣೆ ನೋನ್).
ಸಕರ್ಮಕ ಕ್ರಿಯಾಪದ
- (ಯಾರೆಂಬುದನ್ನು, ಯಾವುದೆಂಬುದನ್ನು) ಅರಿ; ಕಂಡುಕೊ; ತಿಳಿದುಕೊ; ಗುರುತಿಸು: I knew him at once ಅವನು ಯಾರೆಂಬುದನ್ನು ತಕ್ಷಣ ತಿಳಿದುಕೊಂಡೆ. I knew him for an Englishman ಅವನು ಆಂಗ್ಲನೆಂಬುದನ್ನು ಕಂಡುಕೊಂಡೆ. will you know him again? ಅವನನ್ನು ಮತ್ತೊಮ್ಮೆ ಗುರುತಿಸಬಲ್ಲೆಯಾ?
- ವಿವೇಚನಾಶಕ್ತಿ ಹೊಂದಿರು; (ವ್ಯಕ್ತಿಯನ್ನು ವ್ಯಕ್ತಿಯಿಂದ, ವಸ್ತುವನ್ನು ವಸ್ತುವಿನಿಂದ) ಬೇರ್ಪಡಿಸಿ ಗುರುತಿಸು; (ಅವುಗಳ ಪರಸ್ಪರ) ವ್ಯತ್ಯಾಸ, ತಾರತಮ್ಯ, ಭೇದ – ತಿಳಿ, ಅರಿ: know right from wrong ಸರಿಗೂ ತಪ್ಪಿಗೂ ನಡುವಣ (ಪರಸ್ಪರ) ಭೇದ ತಿಳಿ.
- (ವ್ಯಕ್ತಿ, ವಸ್ತು, ಸ್ಥಳಗಳ) ಪರಿಚಯ ಹೊಂದಿರು; (ಅವುಗಳನ್ನು) ತಿಳಿದಿರು, ತಿಳಿದವನಾಗಿರು, ಬಲ್ಲವನಾಗಿರು: I know him by sight ಆತನನ್ನು ಕೇವಲ ನೋಡಿದ್ದೇನೆ ಅಷ್ಟೆ; ನನಗೆ ಅವನ ಮುಖಪರಿಚಯ ಇದೆ. I know him to speak to ಆತನನ್ನು ಮಾತನಾಡಿಸುವಷ್ಟು ಬಲ್ಲೆ.
- (ಭಯ, ನೋವು, ಮೊದಲಾದವನ್ನು ಸ್ವಂತ ಅನುಭವದಿಂದ) ಅರಿತಿರು; ತಿಳಿದವನಾಗಿರು; ಬಲ್ಲವನಾಗಿರು.
- ಒಳಪಟ್ಟಿರು; ಒಳಗಾಗಿರು; her joy knew no bounds ಅವಳ ಆನಂದಕ್ಕೆ ಪಾರವೇ ಇರಲಿಲ್ಲ.
- ಆತ್ಮೀಯವಾಗಿ ತಿಳಿದಿರು; ನಿಕಟ ಯಾ ಆತ್ಮೀಯ ಪರಿಚಯ ಹೊಂದಿರು: they are our neighbours, but we don’t know them ಅವರು ನಮ್ಮ ನೆರೆಯವರು, ಆದರೆ ನಮಗೆ ಅವರ ನಿಕಟ ಪರಿಚಯ ಇಲ್ಲ.
- (ಪ್ರಾಚೀನ ಪ್ರಯೋಗ) ಸಂಭೋಗಿಸು; ಮೈಥುನ ನಡೆಸು.
- ತಿಳಿದಿರು; ಅರಿತಿರು; ತಿಳಿದುಕೊಂಡಿರು; ಅನುಭವ ಯಾ ಓದು ಯಾ ಸುದ್ದಿಯ ಫಲವಾಗಿ (ಯಾವುದನ್ನೇ) ಮನಸ್ಸಿನಲ್ಲಿ ಯಾ ನೆನಪಿನಲ್ಲಿ ಇಟ್ಟುಕೊಂಡಿರು, ಹೊಂದಿರು: doesn’t know your address ನಿನ್ನ ವಿಳಾಸ ತಿಳಿದುಕೊಂಡಿಲ್ಲ, ಗೊತ್ತಿಲ್ಲ. knows a lot about cars ಕಾರುಗಳ ವಿಷಯ ಬಹಳ ಅರಿತಿದ್ದಾನೆ. know what to do ಏನು ಮಾಡಬೇಕೆಂದು ಗೊತ್ತಿರು.
- (ಸಂಗತಿಯೊಂದರ) ಅರಿವು – ಪಡೆದಿರು, ಹೊಂದಿರು; ಬಲ್ಲವನಾಗಿರು; ಗೊತ್ತಿರು: he konws I am waiting ನಾನು ಕಾಯುತ್ತಿರುವುದು ಅವನಿಗೆ ಅರಿವಿದೆ; ನಾನು ಕಾಯುತ್ತಿದ್ದೇನೆಂಬುದು ಅವನಿಗೆ ಗೊತ್ತಿದೆ.
- (ಭಾಷೆ, ವಿಷಯ, ಮೊದಲಾದವುಗಳಲ್ಲಿ) ಪಾಂಡಿತ್ಯ ಹೊಂದಿರು; ಪ್ರಭುತ್ವ ಪಡೆದಿರು; ನಿಷ್ಣಾತನಾಗಿರು; ಒಳ್ಳೆಯ ತಿಳಿವಳಿಕೆ ಹೊಂದಿರು; ಸೈದ್ಧಾಂತಿಕ ಯಾ ಪ್ರಾಯೋಗಿಕ ಜ್ಞಾನ ಹೊಂದಿರು. knows German ಜರ್ಮನ್ ಭಾಷೆಯನ್ನು ಚೆನ್ನಾಗಿ ತಿಳಿದುಕೊಂಡಿದ್ದಾನೆ. knows his tables ಕೋಷ್ಟಕಗಳಲ್ಲಿ ನಿಷ್ಣಾತನಾಗಿದ್ದಾನೆ.
- ಖಚಿತವಾಗಿ ಭಾವಿಸು; ಖಾತರಿಯಾಗಿ ಎಣಿಸು: I know it must be somewhere here ಅದು ಇಲ್ಲೇ ಎಲ್ಲೋ ಇರಬೇಕೆಂದು ನನಗೆ ಖಚಿತವಾಗಿದೆ.
ಅಕರ್ಮಕ ಕ್ರಿಯಾಪದ
ನುಡಿಗಟ್ಟು
- all one knows (how)
- ತಿಳಿದದ್ದನ್ನೆಲ್ಲ.
- ತಾನು ಮಾಡಬಹುದಾದ್ದನ್ನೆಲ್ಲ; ತನ್ನ ಶಕ್ತಿಪೂರ್ತಿ.
- ಕೈಲಾದ ಮಟ್ಟಿಗೂ; ತನ್ನ ಸರ್ವಶಕ್ತಿಯಿಂದಲೂ ಆಗುವಷ್ಟು ಮಟ್ಟಿಗೆ.
- before one knows where one is ದಿಗ್ಭ್ರಮೆಗೊಳಿಸುವಷ್ಟು ಶೀಘ್ರವಾಗಿ; ಕಂಗೆಡಿಸುವಷ್ಟು ಕ್ಷಿಪ್ರವಾಗಿ; ಕಕ್ಕಾಬಿಕ್ಕಿ ಮಾಡುವಷ್ಟು ಬೇಗ.
- be not to know
- ಯಾವುದೇ ರೀತಿಯಲ್ಲಿ ತಿಳಿಯಲಾಗದಂತಿರು; ತಿಳಿದುಕೊಳ್ಳುವ – ಮಾರ್ಗ, ವಿಧಾನ, ರಹಾ ಇಲ್ಲದಿರು: wasn’t to know they’d arrive late ಅವರು ತಡವಾಗಿ ಬರುತ್ತಾರೆಂದು ತಿಳಿದುಕೊಳ್ಳಲಾಗಲಿಲ್ಲ.
- (ಒಬ್ಬನಿಗೆ) ಹೇಳಕೂಡದಂತಿರು; ತಿಳಿಸಬಾರದಂತಿರು: she’s not to know about the party ಸಂತೋಷಕೂಟದ ವಿಷಯ ಅವಳಿಗೆ ತಿಳಿಸಬಾರದು.
- don’t I know it? (ಆಡುಮಾತು) (ವಿಷಾದದಿಂದ ಒಪ್ಪಿಕೊಳ್ಳುವ, ಸಮ್ಮತಿಸುವ ಮಾತಾಗಿ) ನನಗೆ ಗೊತ್ತಿಲ್ಲವೇ? ನನಗೆ ತಿಳಿಯದೇ? (ಗೊತ್ತಿದೆ, ಮನಸ್ಸಿಲ್ಲದಿದ್ದರೂ ಒಪ್ಪಿಕೊಳ್ಳಬೇಕಾಗಿದೆ ಎಂಬರ್ಥದಲ್ಲಿ).
- don’t you know? (ಮಾತಿನ ನಡುವೆ ಸೇರಿಸುವ ನಿರರ್ಥಕ ಪದಗುಚ್ಛವಾಗಿ) ನಿನಗೆ ಗೊತ್ತಿಲ್ಲವೇ? ನಿನಗೆ ತಿಳಿಯದೇ?: It is such a bore, don’t you know? ಅದೊಂದು ಶುದ್ಧ ಬೇಜಾರಿನ ಸಂಗತಿ, ನಿನಗೆ ಗೊತ್ತಿಲ್ಲವೇ?
- for all (or aught) I know ನನಗೆ ತಿಳಿದಿರುವ ಮಟ್ಟಿಗೆ; ನನ್ನ ಅರಿವಿಗೆ ಸಂಬಂಧಿಸಿರುವ ಮಟ್ಟಿಗೆ.
- $^1$god or $^1$god or the $^1$god
- (ನನ್ನ ಯಾ ಮರ್ತ್ಯಮಾನವನ ಅರಿವಿಗೆ, ಮನುಷ್ಯನ ಅರಿವಿಗೆ ಮೀರಿದ್ದು ಎಂಬುದನ್ನು ಸೂಚಿಸಲು ಹೇಳುವ ಮಾತು) ದೇವರೊಬ್ಬನಿಗೆ ಗೊತ್ತು; ಭಗವಂತ ಮಾತ್ರ ಬಲ್ಲ.
- ನನ್ನ ಹೇಳಿಕೆಗೆ ದೇವರೇ ಸಾಕ್ಷಿ; ದೇವರ ಸಾಕ್ಷಿಯಾಗಿ ನಾನು ಹೇಳುವುದೇನೆಂದರೆ.
- has been known to do ಮಾಡುತ್ತಾನೆಂದು ಗೊತ್ತಾಗಿದೆ, ಪ್ರಸಿದ್ಧವಾಗಿದೆ: he has been known to be unreliable ಅವನು ವಿಶ್ವಾಸಾರ್ಹನಲ್ಲ ಎಂಬುದು ಗೊತ್ತಾಗಿದೆ.
- I knew it ನನಗೆ ಅದು ಗೊತ್ತಿತ್ತು. ಅದು ಆಗಿಯೇ ಆಗುತ್ತದೆಂದು ನನಗೆ ಖಾತರಿಯಾಗಿತ್ತು, ಖಚಿತವಾಗಿ ತಿಳಿದಿತ್ತು.
- I know what ಏನೆಂಬುದು ನನಗೆ ಗೊತ್ತು; ಮುಂದಿಡಲು ಯಾ ಮಂಡಿಸಲು ನನ್ನಲ್ಲಿ, ನನ್ನ ಹತ್ತಿರ, ನನ್ನ ಬಳಿ ಒಂದು ಹೊಸ ಕಲ್ಪನೆ, ಅಭಿಪ್ರಾಯ ಯಾ ಸೂಚನೆ ಉಂಟು, ಇದೆ.
- know about (ಒಂದರ, ಒಬ್ಬನ) ವಿಷಯವನ್ನು ತಿಳಿದಿರು; ಸಮಾಚಾರ ಅರಿತಿರು.
- know a $^1$hawk from a handsaw ಸಾಮಾನ್ಯ ಪರಿಜ್ಞಾನ ಪಡೆದಿರು; (ಲೋಕ) ವ್ಯವಹಾರಜ್ಞಾನ ಹೊಂದಿರು; ಸಾಮಾನ್ಯ ವಿವೇಚನೆ ಇರು.
- know a thing or two
- ಅನುಭವ ಪಡೆದಿರು; ಅನುಭವಿಯಾಗಿರು.
- ಚುರುಕುಬುದ್ಧಿಯವನಾಗಿರು; ಸೂಕ್ಷ್ಮ ಪರಿಜ್ಞಾನ ಹೊಂದಿರು.
- know best ಇತರರಿಗಿಂತ ಹೆಚ್ಚು ತಿಳಿದವನು ಮೊದಲಾದವನು ಆಗಿರು ಯಾ ಹಾಗೆ ಹೇಳಿಕೊ.
- know better (than that) ಅದಕ್ಕಿಂತ ಹೆಚ್ಚು ಗೊತ್ತಿರು; ಅದನ್ನು ನಂಬದಿರುವಷ್ಟು, ಅಂತೆ ನಡೆದುಕೊಳ್ಳದಿರುವಷ್ಟು ತಿಳಿದುಕೊಂಡಿರು.
- know better than to do ಹಾಗೆ ಮಾಡುವಷ್ಟು ದಡ್ಡನಲ್ಲ ಯಾ ಅಸಂಸ್ಕೃತನಲ್ಲ, ಅಯೋಗ್ಯನಲ್ಲ.
- know by sight
- ಚಹರೆಯಿಂದ, ನೋಟದಿಂದ, ನೋಡುವುದರಿಂದ (ಮಾತ್ರ)–ಗುರುತಿಸು, ತಿಳಿ.
- ನೋಡಿ ಅಷ್ಟೇ ಇರು; ನೋಡಿ ಮಾತ್ರ ಪರಿಚಯವಿರು.
- know how (ಯಾವುದನ್ನೇ) ಮಾಡುವ ವಿಧಾನವನ್ನು ತಿಳಿದಿರು.
- known as ಆ ಹೆಸರಿನ; ಆ ಹೆಸರು ಉಳ್ಳ, ಪಡೆದ.
- know of ಗೊತ್ತಿರು; ತಿಳಿದಿರು; ಕೇಳಿರು: not that I know of ನನಗೆ ತಿಳಿದ ಮಟ್ಟಿಗೆ ಇಲ್ಲ, ಅಲ್ಲ.
- know (one) by name
- ಹೆಸರಿನಿಂದಷ್ಟೇ ಬಲ್ಲೆ; ಹೆಸರನ್ನು ಮಾತ್ರ ಕೇಳಿ ಬಲ್ಲೆ; ಹೆಸರಷ್ಟೇ ಗೊತ್ತು.
- (ಒಬ್ಬನ, ಒಂದರ) ಹೆಸರು ಗೊತ್ತು; ಹೆಸರು ತಿಳಿಸಬಲ್ಲೆ, ಹೇಳಬಲ್ಲೆ.
- know one’s own mind ಸ್ಥಿರ ಸಂಕಲ್ಪ ಉಳ್ಳವನಾಗಿರು; ದೃಢಮನಸ್ಸುಳ್ಳವನಾಗಿರು; ಸ್ಥಿರಬುದ್ಧಿಯುಳ್ಳವನಾಗಿರು; ದೃಢಚಿತ್ತನಾಗಿರು; ಚಂಚಲಚಿತ್ತನಾಗದಿರು; ಮನಸ್ಸು ಓಲಾಡದಿರು; ನಿಶ್ಚಿತಸಂಕಲ್ಪವುಳ್ಳವನಾಗಿರು.
- know one’s way round
- (ಸ್ಥಳ, ವಿಷಯ, ಕಾರ್ಯಕ್ರಮ, ಮೊದಲಾದವುಗಳ) ಪರಿಚಯ ಪಡೆದಿರು; (ಅವನ್ನು) ಸರಿಯಾಗಿ, ಚೆನ್ನಾಗಿ ತಿಳಿದುಕೊಂಡಿರು.
- ಚೆನ್ನಾಗಿ ತಿಳಿದುಕೊಂಡವನೂ ದಕ್ಷನೂ ಆಗಿರು.
- know (person or thing) to be (ವ್ಯಕ್ತಿ ಯಾ ವಸ್ತುವನ್ನು) ಹಾಗೆಂದು, ಅಂತೆಂದು – ಅರಿ, ತಿಳಿ: know him to be learned ಆತ ವಿದ್ವಾಂಸನೆಂಬುದನ್ನು ತಿಳಿದಿರು.
- know (person or thing) to do (ವ್ಯಕ್ತಿ ಯಾ ವಸ್ತು) ಹಾಗೆ, ಅಂತೆ – ಮಾಡುತ್ತಾನೆ ಯಾ ಮಾಡುತ್ತದೆ ಎಂಬುದನ್ನು ತಿಳಿದಿರು, ಅರಿತಿರು.
- know the ropes (or one’s stuff) ಯಾವುದಾದರೂ ಒಂದು ಕಾರ್ಯಕ್ಷೇತ್ರದ ಪರಿಸ್ಥಿತಿಯನ್ನು, ವಿದ್ಯಮಾನಗಳನ್ನು ತಿಳಿದಿರು; (ಕೈಕೊಂಡ ಕೆಲಸದ ಯಾ ವಿಷಯದ) ವಿವರಗಳ ಯಾ ವಿದ್ಯಮಾನಗಳ ಪೂರ್ಣ ಪರಿಚಯ ಹೊಂದಿರು; ಒಂದು ಕೆಲಸ ಮಾಡುವ ರೀತಿಯನ್ನು ತಿಳಿದಿರು.
- know what one is talking about (ಆಡುಮಾತು) ಏನು ಮಾತನಾಡುತ್ತಿದ್ದೇಯೆ, ಹೇಳುತ್ತಿದ್ದೀಯೆ ಎಂಬುದನ್ನು ತಿಳಿದಿರು; ಅನುಭವದಿಂದ ಯಾ ಅನುಭವವಿರುವ ವಿಷಯವನ್ನು ಮಾತ್ರ ಕುರಿತು ಮಾತನಾಡು.
- know what’s what ಲೋಕಾನುಭವ ಹೊಂದಿರು; ವ್ಯವಹಾರ ಜ್ಞಾನವಿರು; ಏನು, ಎತ್ತ ಎನ್ನುವುದನ್ನು ತಿಳಿದಿರು; ಪ್ರಪಂಚದ ವಸ್ತು ಮತ್ತು ವ್ಯವಹಾರಗಳ ಬಗ್ಗೆ ಸರಿಯಾದ ಯಾ ಸಾಕಷ್ಟು ಸಾಮಾನ್ಯ ಜ್ಞಾನ ಹೊಂದಿರು; ಯಾವುದು ಏನು ಎಂಬುದನ್ನು ಅರಿತಿರು.
- know who’s who ಪ್ರತಿಯೊಬ್ಬ ವ್ಯಕ್ತಿಯೂ ಯಾರು ಏನು ಎಂಬುದನ್ನು ಅರಿತಿರು, ತಿಳಿದಿರು.
- let it be known ತಿಳಿಯುವಂತಾಗಲಿ; ತಿಳಿಯಪಡಿಸಲಿ; ಪ್ರಕಟಿಸಲಿ.
- let me know ನನಗೆ – ತಿಳಿಸು, ತಿಳಿಯಪಡಿಸು, ತಿಳಿಯಹೇಳು, ತಿಳಿಯುವಂತೆ ಮಾಡು.
- make oneself known to somebody ಯಾರೋ ಒಬ್ಬರಿಗೆ ತನ್ನ ಪರಿಚಯ ಮಾಡಿಸಿಕೊ.
- not if I know it ನನ್ನ ಇಚ್ಛೆಗೆ, ಸಂಕಲ್ಪಕ್ಕೆ ವಿರುದ್ಧವಾಗಿ ಮಾತ್ರ.
- not know any better (ಸರಿಯಾದ ಶಿಕ್ಷಣ, ಅನುಭವ, ಮೊದಲಾದವು ಇಲ್ಲದ ಕಾರಣ) ಸರಿಯಾಗಿ, ಸಭ್ಯವಾಗಿ – ವರ್ತಿಸದಿರು.
- not know(one) from $^1$adam ನನಗೆ ಅವನ ಗುರುತೇ ಇಲ್ಲ; ಅವನು ಹೇಗಿದ್ದಾನೆಂಬುದೇ ನನಗೆ ತಿಳಿಯದು.
- not know that... (ಆಡುಮಾತು) ಖಚಿತವಾಗಿಲ್ಲದಿರು; ಸಾಕಷ್ಟು ದೃಢವಾಗಿಲ್ಲದಿರು: I don’t know that I want to go ಹೋಗಬೇಕೆನಿಸಿದೆ ಎಂದು ನನಗೆ ಖಚಿತವಾಗಿಲ್ಲ.
- not know that hit one
- ಇದ್ದಕ್ಕಿದ್ದಂತೆ ಹತನಾಗು; ಹಠಾತ್ತಾಗಿ ಕೊಲ್ಲಲ್ಪಡು; ಇದ್ದಕ್ಕಿದ್ದಂತೆ ಕೊಲೆಯಾಗು.
- ಪೂರ್ತಿ ದಿಗ್ಭ್ರಮೆಗೊಳ್ಳು; ಕಕ್ಕಾಬಿಕ್ಕಿಯಾಗು.
- not want to know (ಒಂದಕ್ಕೆ) ಗಮನ – ಕೊಡದಿರು, ಹರಿಸದಿರು; ತಿಳಿಯಲು ಇಚ್ಛಿಸದಿರು; ಅರಿಯಲು ಇಷ್ಟಪಡದಿರು.
- that’s all you know (about that) ನಿನಗೆ (ಅದರ ಬಗ್ಗೆ) ಗೊತ್ತಿರುವುದೆಲ್ಲ ಅಷ್ಟೇ; ನೀನು ಅಂದುಕೊಂಡಿರುವುದಕ್ಕಿಂತಲೂ ಹೆಚ್ಚು ದಡ್ಡ, ಭಾವಿಸಿಕೊಂಡಿರುವುದಕ್ಕಿಂತಲೂ ಹೆಚ್ಚು ಅಜ್ಞ.
- what do you know (about that)? (ಆಡುಮಾತು ಆಶ್ಚರ್ಯಸೂಚಕವಾಗಿ) ನಿನಗೆ (ಅದರ ಬಗ್ಗೆ) ಏನು ಗೊತ್ತು, ಏನು ತಿಳಿದಿದೆ?
- you know (ಆಡುಮಾತು) (ಕೇಳುಗನಿಗೆ ಆ ವಿಷಯ ಗೊತ್ತು ಯಾ ಅವನು ಅದನ್ನು ತಿಳಿದುಕೊಳ್ಳಬೇಕಾಗಿತ್ತು ಎಂಬುದನ್ನು ನೆನಪು ಮಾಡಲು ಯಾ ಸಂಭಾಷಣೆಯ ನಡುವಣ ತೆರಪನ್ನು ತುಂಬುವ ಮಾತಾಗಿ ಬಳಸುವ) ನಿನಗೆ, ನಿನಗೇ ಯಾ ನಿನಗೂ – ಗೊತ್ತು, ತಿಳಿದಿದೆ.
- you know something (or what)? ನಾನು ನಿನಗೆ ಒಂದು ವಿಷಯ ಹೇಳಲಿದ್ದೇನೆ.
- you know what he or it is ಅವನು ಯಾ ಅದು ಏನು ಎನ್ನುವುದು ನಿನಗೆ ಗೊತ್ತು; ನಿನಗೆ ಅವನ ಯಾ ಅದರ ಗುಣಾವಗುಣಗಳು, ಜಟಿಲ ಸ್ವಭಾವ, ಸ್ವರೂಪ, ಮೊದಲಾದವು ಗೊತ್ತು, ಅವುಗಳ ಪರಿಚಯವಿದೆ.
- you know-what (or-who) (ಯಾರೂ, ಯಾವುದು ಎಂದು ನಿಷ್ಕೃಷ್ಟವಾಗಿ ಹೇಳದೆ ಅಧ್ಯಾಹಾರವಾಗಿರುವಲ್ಲಿ) ‘ನಿನಗೆ ಗೊತ್ತಲ್ಲ, ಯಾರೂ (ಯಾ ಯಾವುದು) ಅಂತ?’
- you never know ಮುಂದೇನು ಎನ್ನುವುದು ಖಚಿತವಾಗಿ ಗೊತ್ತಾಗದು; ಭವಿಷ್ಯ ಅನಿಶ್ಚಿತ; ನಾಳೆಯದು ಪೂರ್ತಿ ಖಾತರಿಯಾಗಿ ತಿಳಿಯುವುದಿಲ್ಲ.