See also 2sight
1sight ಸೈಟ್‍
ನಾಮವಾಚಕ
  1. ನೋಟ; ದೃಷ್ಟಿ (ಶಕ್ತಿ); ನೋಡುವ ಶಕ್ತಿ.
  2. ನೋಟ; ದರ್ಶನ; ಈಕ್ಷಣ; ಅವೇಕ್ಷಣ; ವೀಕ್ಷಣ; ಪ್ರೇಕ್ಷಣ; ನೋಡುವಿಕೆ ಯಾ ನೋಡಲ್ಪಡುವಿಕೆ.
  3. ದೃಷ್ಟಿ; ಯಾವುದನ್ನೇ ನೋಡುವ ಯಾ ಗಮನಿಸುವ ರೀತಿ: in my sight he can do no wrong ನನ್ನ ದೃಷ್ಟಿಯಲ್ಲಿ, ನನಗೆ ಕಂಡಂತೆ ಅವನು ಯಾವುದೇ ತಪ್ಪನ್ನು ಮಾಡಲಾರ.
  4. ನೋಟ; ದೃಷ್ಟಿ; ನೋಟದ, ದೃಷ್ಟಿಯ – ವ್ಯಾಪ್ತಿ; (ಕಣ್ಣಿಗೆ) ಕಾಣುವಷ್ಟು, ದೃಷ್ಟಿಗೋಚರವಾಗುವಷ್ಟು – ದೂರ.
  5. ನೋಟ; ಪ್ರದರ್ಶನ; ದೃಶ್ಯ; ಕಂಡದ್ದು: a sad sight awaited us ದುಃಖಕರ ನೋಟ ನಮಗಾಗಿ ಕಾದಿತ್ತು. the daffodils were a beautiful sight ‘ಡ್ಯಾಹೊಡಿಲ್‍’ ಹೂವುಗಳು ಸುಂದರವಾದ ನೋಟವಾಗಿದ್ದವು. a sight to see (or worth seeing) ನೋಡಬೇಕಾದ ನೋಟ; ಪ್ರೇಕ್ಷಣೀಯವಾದ,ನೋಡಲರ್ಹವಾದ – ನೋಟ; ದರ್ಶನೀಯ ದೃಶ್ಯ.
  6. (ಸಾಮಾನ್ಯವಾಗಿ ಬಹುವಚನದಲ್ಲಿ) ನೋಡ(ಲು) ತಕ್ಕ ನೋಟಗಳು; ಪ್ರೇಕ್ಷಣೀಯ ದೃಶ್ಯಗಳು: we went to see the sights of the place ನಾವು ಆ ಊರಿನ ಪ್ರೇಕ್ಷಣೀಯ ದೃಶ್ಯಗಳನ್ನು ನೋಡಲು ಹೋದೆವು.
  7. (ಆಡುಮಾತು) ಸಖತ್‍; ಎಷ್ಟೋ ಪಾಲು; ತುಂಬ; ಬಹಳಷ್ಟು; ಅಪಾರ: that is a long sight better ಅದು ಎಷ್ಟೋ ಪಾಲು ಮೇಲು. it will cost a sight of money ಅದಕ್ಕೆ ಸಖತ್‍ ಹಣ ತಗಲುತ್ತದೆ.
    1. (ಫಿರಂಗಿ, ಬಂದೂಕು ಯಾ ಚಾಕ್ಷುಷ ಯಂತ್ರ, ಮೊದಲಾದವುಗಳಲ್ಲಿ ಗುರಿ ಇಟ್ಟು ನೋಡಲು ನೆರವಾಗುವ) ಗುರಿಕಣ್ಣು; ಲಕ್ಷ್ಯಕ.
    2. ಹಾಗೆ ನೋಡಿದ, ವೀಕ್ಷಿಸಿದ ಗುರಿ.
  8. (ಆಡುಮಾತು) ಹಾಸ್ಯಾಸ್ಪದವಾದ, ಅಸಹ್ಯಕರವಾದ ಅಥವಾ ಅಸ್ತವ್ಯಸ್ತವಾದ – ವ್ಯಕ್ತಿ ಯಾ ವಸ್ತು.
ಪದಗುಚ್ಛ
  1. a (perfect) sight (ಆಡುಮಾತು) ದ್ರಾಬೆ ನೋಟ; ಅವಲಕ್ಷಣ ದೃಶ್ಯ: his face is a (perfect) sight ಒಳ್ಳೇ ದ್ರಾಬೆ ಮುಸುಡಿ ಅವನದು; ಶುದ್ಧ ಅವಲಕ್ಷಣ ಮುಖ ಅವನದು.
  2. a sight for sore eyes ಕಣ್ಣಿಗೆ ತಂಪು; ನೋಟಕ್ಕೆ ಪ್ರಿಯವಾದ ವ್ಯಕ್ತಿ ಯಾ ವಸ್ತು, ಮುಖ್ಯವಾಗಿ ಇಷ್ಟವಾದ ಭೇಟಿಗಾರ.
  3. a sight for the gods ದೇವತಾರ್ಹ ದೃಶ್ಯ; ದೇವತೆಗಳಿಗೂ ಸಹ ನೋಡಲರ್ಹವಾದ ನೋಟ; ಕಣ್ಣಿಗೆ ತಂಪಾದ ನೋಟ.
  4. at first sight
    1. ಮೊದಲ ನೋಟದಲ್ಲಿಯೇ; ಪ್ರಥಮ ವೀಕ್ಷಣದಲ್ಲೇ: love at first sight ಮೊದಲ ನೋಟದಲ್ಲಿಯೇ ಹುಟ್ಟಿದ ಪ್ರೇಮ.
    2. ಮೊದಲ ನೋಟಕ್ಕೆ; ಮೇಲು ನೋಟಕ್ಕೆ; ಸ್ಥೂಲದೃಷ್ಟಿಗೆ; ಆಪಾತತಃ: at first sight , the argument seems sound, but it is really invalid ಆ ವಾದವು ಆಪಾತತಃ ಸಾಧುವೆಂದು ತೋರುತ್ತದೆ, ಆದರೆ ನಿಜವಾಗಿ ಅದು ತರ್ಕಸಮ್ಮತವಲ್ಲ.
  5. at (or on) sight ಕಂಡಲ್ಲಿ; ಕಂಡೊಡನೆಯೇ; ನೋಡಿದ ಕೂಡಲೇ; ಕಣ್ಣಿಗೆ ಬಿದ್ದ ಕ್ಷಣವೇ: shoot at sight ಕಂಡೊಡನೆಯೇ ಗುಂಡು ಹಾರಿಸು. pay (draft etc.) at sight ಡ್ರಾಫ್‍ ಮೊದಲಾದವನ್ನು ನೋಡಿದ ಕೂಡಲೇ ಪಾವತಿ ಮಾಡು. play music at sight (ಲಿಖಿತ ಸಂಗೀತ ಕೃತಿಯ ಸ್ವರಾಂಕನಗಳನ್ನು) ಕಂಡೊಡನೆಯೇ ಆ ಕೃತಿಯನ್ನು (ಪೂರ್ವಾಭ್ಯಾಸವಿಲ್ಲದೆಯೇ) ನುಡಿಸು, ವಾದನ ಮಾಡು.
  6. sight of $^1$catch.
  7. get a sight of (ಯಾವುದೇ ಪ್ರೇಕ್ಷಣ ವಸ್ತುವಿನ ಯಾ ದೃಶ್ಯದ ವಿಷಯದಲ್ಲಿ) ದರ್ಶನವಾಗು; ನೋಟ – ಪಡೆ, ದೊರೆ, ಸಿಗು.
  8. have lost sight of (ಯಾವನೇ ವ್ಯಕ್ತಿ) ಕಣ್ಣಿಗೆ ಬೀಳದಾಗಿರು; (ಯಾವನೇ ವ್ಯಕ್ತಿಯ) ಇರವು ಬರವುಗಳೇ ಗೊತ್ತಾಗದಿರು, ಚಲನವಲನಗಳು ತಿಳಿಯದಾಗಿರು.
  9. in (or within) sight of
    1. ದೃಶ್ಯವಾಗಿ; ಕಾಣುವಂತೆ; (ಯಾವುದೇ ಸ್ಥಾನಕ್ಕೆ, ಸ್ಥಾನದಿಂದ) ಕಾಣಿಸುವಂತೆ: he came in sight of the fort ಕೋಟೆ ಕಾಣುವಂಥ ಸ್ಥಾನಕ್ಕೆ, ಕಾಣುವಷ್ಟು ಹತ್ತಿರ ಅವನು ಬಂದ.
    2. ಕೋಟೆಗೆ, ಕೋಟೆಯಿಂದ, ತಾನು ಕಾಣಿಸುವಷ್ಟು ಹತ್ತಿರ ಅವನು ಬಂದ (ರೂಪಕವಾಗಿ ಸಹ).
  10. in sight
    1. (ಕಣ್ಣಿಗೆ) ಕಾಣುವಂತೆ; ಕಾಣುವಷ್ಟು ದೂರದಲ್ಲಿ; ದೃಷ್ಟಿಯ ವ್ಯಾಪ್ತಿಗೊಳಪಟ್ಟು; ದೃಷ್ಟಿಗೋಚರವಾಗಿ.
    2. (ರೂಪಕವಾಗಿ) (ನೋಟಕ್ಕೆ ಬೀಳುವಷ್ಟು) ಹತ್ತಿರ; (ದೃಷ್ಟಿಗೋಚರವಾಗುವಷ್ಟು) ಸಮೀಪ(ದಲ್ಲಿ).
  11. keep sight of (or keep person or thing in sight) (ವ್ಯಕ್ತಿಯನ್ನು, ವಸ್ತುವನ್ನು) ಕಣ್ಣು ಮುಂದೆಯೇ ಇಟ್ಟುಕೊಂಡಿರು; ಕಣ್ಣು ತಪ್ಪದೆ ನೋಡಿಕೊಳ್ಳುತ್ತಿರು; ದೃಷ್ಟಿಯಲ್ಲೇ ಇಟ್ಟುಕೊಂಡಿರು.
  12. $^1$know by sight.
  13. $^1$line of sight.
  14. long sight ದೂರದೃಷ್ಟಿ (ರೂಪಕವಾಗಿ ಸಹ).
  15. lose sight of
    1. ಕಾಣದಾಗು; ಕಣ್ಣಿಗೆ ಬೀಳದಿರು; ದೃಷ್ಟಿಯಿಂದ ದೂರವಾಗು; ಮರೆಯಾಗು.
    2. ಗಮನಕ್ಕೆ ಬೀಳದಿರು.
  16. loss of sight ನೋಟ ಕಳೆದುಕೊಳ್ಳುವಿಕೆ; ದೃಷ್ಟಿಹಾನಿ; ನೋಡುವ ಶಕ್ತಿ ಹೋಗಿಬಿಡುವುದು; ಕುರುಡಾಗುವುದು.
  17. lower one’s sights (ರೂಪಕವಾಗಿ) ಮಹತ್ತ್ವಾಕಾಂಕ್ಷೆಯನ್ನು ತಗ್ಗಿಸು, ಕಡಿಮೆಮಾಡು.
  18. out of my sight! ನನ್ನ ಕಣ್ಣಿಂದಾಚೆ ತೊಲಗು! ನನ್ನ ಕಣ್ಣೆದುರು ಇರಬೇಡ.
  19. out of sight ಕಣ್ಣಿಗೆ ಕಾಣದಂತೆ; ದೃಷ್ಟಿಗೆ ಬೀಳದಂತೆ; ಕಣ್ಣಿಗೆ, ದೃಷ್ಟಿಗೆ – ಮರೆಯಾಗಿ.
  20. out of sight out of mind ಕಣ್ಣಿಗೆ ಮರೆಯಾದರೆ ಮನಸ್ಸಿಗೂ ಮರೆಯಾದಂತೆಯೇ.
  21. put out of sight
    1. ಕಣ್ಣಿಗೆ ಕಾಣದಂತೆ ಇರಿಸು; ಮುಚ್ಚಿಡು; ಬಚ್ಚಿಡು.
    2. ಗಮನಿಸದಿರು; ಗಮನಕ್ಕೆ ತೆಗೆದುಕೊಳ್ಳದಿರು; ಗಮನ ಕೊಡದಿರು; ಅಲಕ್ಷಿಸು; ಅಸಡ್ಡೆ ಮಾಡು.
  22. set one’s sights on (ಬಯಸಿದ ವಸ್ತುವಿಗೆ ಯಾ ಉದ್ದೇಶಕ್ಕೆ) ಗುರಿ ಇಡು.