See also 1sight
2sight ಸೈಟ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಹತ್ತಿರ ಹೋದಂತೆ) ಕಾಣು; ನೋಡು: sight land (ಕಡಲ ಕರೆಗೆ ಹತ್ತಿರ ಹೋದಂತೆ) ನೆಲವನ್ನು ಕಾಣು.
  2. (ಮುಖ್ಯವಾಗಿ ಶತ್ರು ವಿಮಾನ, ಅಪರಿಚಿತವಾದ ಯಾವುದೇ ಹಾರುವ ವಸ್ತು, ಹಿಂದೆಂದೂ ಕಂಡಿಲ್ಲದ ಪ್ರಾಣಿ ಯಾ ಸಸ್ಯಜಾತಿ, ಮೊದಲಾದವುಗಳ) ಇರವನ್ನು ಕಂಡುಕೊ.
  3. (ಚಾಕ್ಷುಷ ಯಂತ್ರಸಾಧನದ ಮೂಲಕ ತಾರೆ ಮೊದಲಾದವನ್ನು) ನೋಡು; ವೀಕ್ಷಿಸು.
  4. (ಫಿರಂಗಿ ಮೊದಲಾದ ಶಸ್ತ್ರಗಳಿಗೆ, ಕ್ವಾಡ್ರಂಟ್‍ ಮೊದಲಾದ ಯಂತ್ರಕ್ಕೆ) ಗುರಿಕಣ್ಣನ್ನು ಯಾ ದರ್ಶಕವನ್ನು – ಒದಗಿಸು, ಹವಣಿಸು, ಅಳವಡಿಸು, ಜೋಡಿಸು.
  5. (ಗುರಿ ಹೊಡೆಯಲು ಫಿರಂಗಿ ಮೊದಲಾದವುಗಳ) ಗುರಿಕಣ್ಣನ್ನು ಯಾ ದರ್ಶಕವನ್ನು – ಸರಿಹೊಂದಿಸು.
  6. (ಫಿರಂಗಿ ಮೊದಲಾದವುಗಳ ವಿಷಯದಲ್ಲಿ) ಗುರಿಕಣ್ಣಿನ ಯಾ ದರ್ಶಕದ ಮೂಲಕ ಗುರಿಯಿಡು.