1catch
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ caught ಉಚ್ಚಾರಣೆ– ಕಾಟ್).
- (ಮುಖ್ಯವಾಗಿ ಬೆನ್ನಟ್ಟಿ) ಹಿಡಿ; ಹಿಡಿದುಕೊ; ವಶಪಡಿಸಿಕೊ: catch a thief ಕಳ್ಳನನ್ನು ಹಿಡಿ.
- (ಬೋನು, ಗಾಳ, ಪಾಶ ಮೊದಲಾದವುಗಳಲ್ಲಿ) ಹಿಡಿ; ಸಿಕ್ಕಿಸು: catch a fish ಮೀನು ಹಿಡಿ.
- (ಕೆಲಸ, ಪ್ರಯಾಣ ಮೊದಲಾದವುಗಳಲ್ಲಿ) ಹಿಡಿ; (ಸಮಕ್ಕೆ) ಬರು; (ಜೊತೆ) ಸೇರಿಕೊ: go on in front, I’ll soon catch you up ಮುಂದೆ ಹೋಗುತ್ತಿರು, ನಾನು ಬೇಗ ನಿನ್ನನ್ನು ಸೇರಿಕೊಳ್ಳುತ್ತೇನೆ.
- ಹಿಡಿದಿಡು; ಹಿಡಿದುಕೊಂಡಿರು; ಹಿಡಿದುಕೊ: a barrel to catch rain ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಪೀಪಾಯಿ.
- (ಪ್ರಯಾಣ ಮಾಡಲು ಸಿದ್ಧವಾದ ವ್ಯಕ್ತಿಯ ವಿಷಯದಲ್ಲಿ) (ರೈಲು ಮೊದಲಾದವನ್ನು)
- ಹಿಡಿ; ಹತ್ತು; ಏರು.
- ಸಕಾಲದಲ್ಲಿರು; ಸಮಯಕ್ಕೆ ಸಿದ್ಧವಾಗಿರು.
- (ಚಲನಚಿತ್ರ ಮೊದಲಾದವನ್ನು) ನೋಡು; ಈಕ್ಷಿಸು; ವೀಕ್ಷಿಸು.
- (ರೇಡಿಯೊ ಮೊದಲಾದವನ್ನು) ಕೇಳು; ಆಲಿಸು.
- (ಕೆಲಸ ಮಾಡುತ್ತಿರುವಾಗ, ಮುಖ್ಯವಾಗಿ ತಪ್ಪು ಮಾಡುತ್ತಿರುವಾಗ, ಏಕಾಏಕಿ) (ಕಂಡು) ಹಿಡಿ; ನೋಡು: I caught the boys stealing apples from my garden ನನ್ನ ತೋಟದಿಂದ ಸೇಬುಗಳನ್ನು ಕದಿಯುತ್ತಿರುವಾಗ ಆ ಹುಡುಗರನ್ನು ಹಿಡಿದೆ, ಪತ್ತೆ ಮಾಡಿದೆ.
- (ಕರ್ಮಣಿಪ್ರಯೋಗ, ಆಡುಮಾತು) ಗರ್ಭಿಣಿಯಾಗಿರು; ಗರ್ಭವತಿಯಾಗು.
- (ಸಾಮಾನ್ಯವಾಗಿ ಸೂಚಿಸಿದ ಸ್ಥಳಕ್ಕೆ) ಹೊಡೆ; (ಪೆಟ್ಟು) ಕೊಡು; ಏಟು ಹಾಕು: I caught him on the nose ಅವನ ಮೂಗಿಗೆ ಒಂದು ಏಟು ಹಾಕಿದೆ, ಪೆಟ್ಟು ಕೊಟ್ಟೆ.
- (ಥಟ್ಟನೆ) ಕಸಿದುಕೊ; ಕಿತ್ತುಕೊ; ಸೆಳೆದುಕೊ.
- (ತಡೆ) ಹಿಡಿ; ಸಿಕ್ಕಿಸು; ಚಲನೆಗೆ ತಡೆಯೊಡ್ಡಿ ಹಿಡಿದಿಡು: nail catches dress ಮೊಳೆ ಉಡುಪಿಗೆ ಸಿಕ್ಕಿಕೊಳ್ಳುತ್ತದೆ. put something to catch the drips ಒಣಗಲು ನೇತು ಹಾಕಿರುವ ಬಟ್ಟೆಗಳನ್ನು ಹಿಡಿದಿಡಲು ಏನನ್ನಾದರೂ ಹಾಕು.
- (ಕ್ರಿಕೆಟ್) ಬುತ್ತಿ ಹಿಡಿ; ಕ್ಯಾಚು ಹಿಡಿ; ಬ್ಯಾಟಿನಿಂದ ಹೊಡೆದ ಚೆಂಡು ನೆಲಕ್ಕೆ ತಗಲುವುದಕ್ಕೆ ಮುಂಚೆಯೇ ಅದನ್ನು ಹಿಡಿ, ಹಿಡಿದು ಹಾಕು.
- (ಕ್ರಿಕೆಟ್) ಕ್ಯಾಚು ಹಿಡಿದು ಬ್ಯಾಟ್ಸ್ಮನ್ನನ್ನು ಹೊರಕಳಿಸು, ಔಟು ಮಾಡು.
- (ಉಸಿರು ಮೊದಲಾದವನ್ನು ಇದ್ದಕ್ಕಿದ್ದಂತೆ ಹಿಡಿದು) ಕಟ್ಟು; ತಡೆ ಹಿಡಿ; ಬಿಗಿ ಹಿಡಿ; ನಿಗ್ರಹಿಸು; ನಿಯಂತ್ರಿಸು.
- ಪಡೆ; ಹೊಂದು; ಈಡಾಗು; ಪಕ್ಕಾಗು; ಗುರಿಯಾಗು; ಸೋಂಕು ಹತ್ತಿರು; ಅಂಟು ತಗುಲಿರು: he caught a cold ಅವನಿಗೆ ನೆಗಡಿ ಅಂಟಿತು.
- (ಅರ್ಥ, ಸ್ವರ, ಧ್ವನಿ, ರಾಗ ಮೊದಲಾದವುಗಳನ್ನು ಇಂದ್ರಿಯ ಯಾ ಮನಸ್ಸಿನಿಂದ) ಹಿಡಿ; ಗ್ರಹಿಸು: ಅರ್ಥ ಮಾಡಿಕೊ; ತಿಳಿದುಕೊ; ಗೊತ್ತಾಗು: did you catch the meaning of the sentence? ನಿನಗೆ ವಾಕ್ಯದ ಅರ್ಥ ತಿಳಿಯಿತೆ?
- ಮೋಸಗೊಳಿಸು; ವಂಚಿಸು: flattery catches the simple-minded ಸರಳ ಸ್ವಭಾವದವರನ್ನು ಹೊಗಳಿಕೆ ವಂಚಿಸುತ್ತದೆ.
- (ಗಮನ, ಚಿತ್ತ, ಕಣ್ಣು ಮೊದಲಾದವನ್ನು) ಸೆಳೆ; ಮೋಹಗೊಳಿಸು; ವಶೀಕರಿಸು; ಆಕರ್ಷಿಸು; ಸೆರೆಹಿಡಿ; ಮರುಳುಗೊಳಿಸು; ವಶಮಾಡಿಕೊ: her smile catches many ಅವಳ ಮುಗುಳುನಗು ಅನೇಕರನ್ನು ಸೆಳೆಯುತ್ತದೆ.
- (ಕೊಂಡಿ, ಅಗುಳಿ ಮೊದಲಾದವನ್ನು) ಸಿಕ್ಕಿಸು; ತಗುಲಿಸು; ಹಾಕು: catch the clasp of a necklace ಸರದ ಕೊಕ್ಕೆ ಹಾಕು.
ಅಕರ್ಮಕ ಕ್ರಿಯಾಪದ
- (ಬೆಂಕಿ ಯಾ ಉರಿಯುವ ವಸ್ತುವಿನ ವಿಷಯದಲ್ಲಿ) ಹೊತ್ತಿಕೊ; ಉರಿಯಲು ಪ್ರಾರಂಭಿಸು.
- ಸಿಕ್ಕಿಕೊ; ಸಿಕ್ಕಿ ಹಾಕಿಕೊ; ತೊಡರಿಕೊ: his foot caught in the hole ಅವನ ಕಾಲು ಕುಳಿಯಲ್ಲಿ ಸಿಕ್ಕಿಕೊಂಡಿತು. caught in the net ಬಲೆಯಲ್ಲಿ ಸಿಕ್ಕಿಬೀಳು.
- (ಬಾಗಿಲು, ಬೀಗ ಮೊದಲಾದವು) ಹಾಕಿಕೊ; ಮುಚ್ಚಿಕೊ: take care, the door lock catches ಎಚ್ಚರ, ಬಾಗಿಲಿನ ಬೀಗ ಹಾಕಿಕೊಳ್ಳುತ್ತದೆ.
- ಹಿಡಿದುಕೊ; ಕಸಿದುಕೊ: catch at an opportunity ಅವಕಾಶ ಹಿಡಿ.
ನುಡಿಗಟ್ಟು
- catch a 2cold.
- catch a glimpse of ಮಿಂಚುನೋಟ ಪಡೆ; ಕ್ಷಣದರ್ಶನ ಪಡೆ.
- catch a likeness ಆಕಾರ ಹಿಡಿ; ಸದೃಶವಾಗಿರುವಂತೆ ಅನುಕರಿಸು; ಯಥಾವತ್ತಾಗಿ–ಚಿತ್ರಿಸು, ವರ್ಣಿಸು, ನಿರೂಪಿಸು, ರೂಪಿಸು.
- catch at
- ಆತುರದಿಂದ–ಹಿಡಿ, ಹಿಡಿಯಲು ಪ್ರಯತ್ನಿಸು; ಆತುರದಿಂದ ಕೈಚಾಚು.
- ತಕ್ಷಣ ಸ್ವೀಕರಿಸು; ಕೂಡಲೇ ಒಪ್ಪಿಕೊ.
- catch a $^2$tartar.
- catch at a straw.
- catch away ಫಕ್ಕನೆ–ಎತ್ತಿಕೊ, ಸೆಳೆದುಕೊ; ಥಟ್ಟನೆ–ಕಸಿದುಕೊ, ಕಿತ್ತುಕೊ.
- catch $^1$fire.
- catch hold of ಹಿಡಿದುಕೊ.
- catch it (ಆಡುಮಾತು) (ಬಯ್ಗಳು, ಖಂಡನೆ, ದೂಷಣೆ, ಶಿಕ್ಷೆ, ಏಟು ಮೊದಲಾದವನ್ನು) ತಿನ್ನು: you’ll catch it if you’re not careful ನೀನು ಎಚ್ಚರಿಕೆ ವಹಿಸದಿದ್ದರೆ ನಿನಗೆ (ಏಟು) ಬೀಳುತ್ತದೆ, (ಶಿಕ್ಷೆ ಮೊದಲಾದವು) ಆಗುತ್ತದೆ. he’ll catch it from his mother ಅವನು ತನ್ನ ತಾಯಿಯಿಂದ ಏಟು ತಿನ್ನುತ್ತಾನೆ.
- catch me!, him! (ವ್ಯಂಗ್ಯವಾಗಿ) ನಾನು, ಅವನು, ಹಾಗೆ ಮಾಡುವುದಿಲ್ಲ ಎಂದು–ಭರವಸೆಯಿಂದಿರು, ಗ್ಯಾರಂಟಿಯಾಗಿರು.
- catch $^1$napping.
- catch on (ಆಡುಮಾತು)
- ಜನಪ್ರಿಯವಾಗು; ಜನಾದರಣೀಯವಾಗು; ಇಷ್ಟವಾಗು.
- ಗ್ರಹಿಸು; ಅರ್ಥ ಮಾಡಿಕೊ; ತಿಳಿದುಕೊ.
- catch one’s breath.
- catch one’s death.
- catch out
- (ಕ್ರಿಕೆಟ್) ಕ್ಯಾಚು ಹಿಡಿದು ಔಟು ಮಾಡು.
- (ತಪ್ಪು ಮಾಡುತ್ತಿರುವಾಗ ಮೊದಲಾದ ಸಂದರ್ಭಗಳಲ್ಲಿ) ಹಿಡಿದು ಹಾಕು; ಪತ್ತೆ ಹಿಡಿ.
- ಏಕಾಏಕಿ ಹಿಡಿ; ಅನಿರೀಕ್ಷಿತವಾಗಿ ಕಂಡುಹಿಡಿ.
- catch sight of = ನುಡಿಗಟ್ಟು \((2)\).
- catch Speaker’s eye (ಪಾರ್ಲಿಮಂಟ್ ಮೊದಲಾದ ಸಭೆಯಲ್ಲಿ ಭಾಷಣದ ಸರದಿಗಾಗಿ) ಅಧ್ಯಕ್ಷನ ಕಣ್ಣಿಗೆ ಬೀಳು; ಅಧ್ಯಕ್ಷನ ಗಮನ ಸೆಳೆ.
- catch the $^1$sun.
- catch up
- = ನುಡಿಗಟ್ಟು \((7)\).
- ಜೊತೆಗೆ ಬರು; ಸಮಕ್ಕೆ ಬರು; ಹಿಡಿ: catch up with the leader in the race ಪಂದ್ಯದಲ್ಲಿ ಮುಂದೆ ಓಡುತ್ತಿರುವವನ ಸಮಕ್ಕೆ ಬಾ.
- ಒಳಗಾಗು; ಭಾಗಿಯಾಗು; ಸಿಕ್ಕಿಬೀಳು; ಸಿಕ್ಕಿಕೊ: caught up in the excitement of the crowd ಗುಂಪಿನ ಉತ್ಸಾಹದಲ್ಲಿ ಸಿಕ್ಕಿಬಿದ್ದ.
- ಉಳಿದ ಯಾ ಬಾಕಿ ಬಿದ್ದ ಕೆಲಸವನ್ನು ಮಾಡಿ ಮುಗಿಸು.
- catch up a habit ಅಭ್ಯಾಸ–ಮಾಡಿಕೊ, ಬೆಳೆಸಿಕೊ.