See also 2rocket  3rocket
1rocket ರಾಕಿಟ್‍
ನಾಮವಾಚಕ

ರಾಕೆಟ್‍ ಸಸ್ಯ:

  1. ಪಚ್ಚಡಿಗೆ ಯಾ ಕಾಯಿಪಲ್ಯೆಗಳಿಗೆ ಉಪಯೋಗಿಸುವ ಹಲವು ಬಗೆಯ ಸಸ್ಯ.
  2. ಮುಖ್ಯವಾಗಿ ಹೆಸ್ಪರಿಸ್‍ ಯಾ ಸಿಸಿಂಬ್ರಿಯಂ ಕುಲದ, ಬೇಗ ಬೆಳೆಯುವ ಗಿಡಗಳಲ್ಲೊಂದು.
ಪದಗುಚ್ಛ
  1. base rocket ಸುವಾಸನೆಯ ಹೂವು ಬಿಡುವ ಒಂದು ಕಾಡುಸಸ್ಯ.
  2. blue rocket
    1. ವತ್ಸನಾಭಿ (wolfsbane) ಮತ್ತು ಅಂದವಾದ ಹೂವು ಬಿಡುವ (larkspur) ಸಸ್ಯವಿಶೇಷಗಳು.
    2. = bluebell.
  3. sweet rocket = 1rocket(b).
  4. wall-rocket ಡಿಪ್ಲೊಟ್ಯಾಕ್ಸಿಸ್‍ ಮುರಲಿಸ್‍ ಕುಲದ, ಜಜ್ಜಿದಾಗ ಕೆಟ್ಟವಾಸನೆ ಬರುವಂಥ ಹಳದಿ ಹೂವಿನ ಕಳೆ.
  5. yellow rocket ಹಳದಿ ಹೂವು ಬಿಡುವ, ಕಟುರುಚಿಯ ಎಲೆಗಳುಳ್ಳ ಒಂದು ಬಗೆಯ ಸಸ್ಯ.
See also 1rocket  3rocket
2rocket ರಾಕಿಟ್‍
ನಾಮವಾಚಕ
  1. ಆಕಾಶಬಾಣ; ಅಗ್ನಿಬಾಣ; ತಾರಾಮಂಡಲ; ಬಾಣಬಿರುಸು, ಸಂಕೇತ ಸೂಚನೆ, ತೊಂದರೆಯಲ್ಲಿರುವ ಹಡಗಿಗೆ ಹಗ್ಗವೆಸೆಯುವುದು ಮೊದಲಾದವಲ್ಲಿ ಉಪಯೋಗಿಸುವ, ಲೋಹದ ಯಾ ಕಾಗದದ ಉರುಳೆಯಾಕಾರದ ಕೋಶ.
  2. ರಾಕೆಟ್‍:
    1. ದಹ್ಯ ಪದಾರ್ಥಗಳ ದಹನದಿಂದ ಪಡೆದ ಶಕ್ತಿಯನ್ನುಪಯೋಗಿಸಿಕೊಂಡು ಎತ್ತರಕ್ಕೆ ಯಾ ದೂರಕ್ಕೆ ಹಾರುವ, ಸಾಮಾನ್ಯವಾಗಿ ಬಾಣ ಬಿರುಸುಗಳಲ್ಲಿ ಬಳಸುವ, ಉರುಳೆ ಆಕಾರದ ಕ್ಷಿಪಣಿ.
    2. ಆಕಾಶಕ್ಕೆ ಹಾರುವ, ವಾಯುವಿನಲ್ಲಿರುವ ಆಕ್ಸಿಜನ್ನನ್ನು ಅವಲಂಬಿಸಿರುವ ಅಂಥ ಇಂಜಿನ್‍.
    3. ರಾಕೆಟ್‍ ಚಾಲಿತ ಕ್ಷಿಪಣಿ.
  3. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ವಾಗ್ದಂಡನೆ; ಆಕ್ಷೇಪಣೆ; ತೀವ್ರವಾದ ಛೀಮಾರಿ.
See also 1rocket  2rocket
3rocket ರಾಕೆಟ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ rocked ವರ್ತಮಾನ ಕೃದಂತ rocketing)
ಸಕರ್ಮಕ ಕ್ರಿಯಾಪದ
  1. ಆಕಾಶಬಾಣ ಬಿಡು.
  2. ರಾಕೆಟ್ಟುಗಳಿಂದ ಎಡೆಬಿಡದೆ ಹೊಡೆ.
ಅಕರ್ಮಕ ಕ್ರಿಯಾಪದ
  1. (ಕುದುರೆ ಯಾ ಅದರ ಸವಾರ) ಭಗ್ಗನೆ ಮೇಲಕ್ಕೆ ಹಾರು, ನೆಗೆ; ಸರಕ್ಕನೆ ಎಗರು.
  2. (ಜೀವಂಜೀವ ಮೊದಲಾದ ಹಕ್ಕಿಗಳು) ನೇರವಾಗಿ ಆಕಾಶಕ್ಕೆ ಹಾರು; ವೇಗವಾಗಿ ಎತ್ತರಕ್ಕೆ ಹಾರು.
  3. (ಬೆಲೆ ಮೊದಲಾದವುಗಳು) ವಿಪರೀತವಾಗಿ ಏರು; ಗಗನ ಮುಟ್ಟು.