See also 1rocket  3rocket
2rocket ರಾಕಿಟ್‍
ನಾಮವಾಚಕ
  1. ಆಕಾಶಬಾಣ; ಅಗ್ನಿಬಾಣ; ತಾರಾಮಂಡಲ; ಬಾಣಬಿರುಸು, ಸಂಕೇತ ಸೂಚನೆ, ತೊಂದರೆಯಲ್ಲಿರುವ ಹಡಗಿಗೆ ಹಗ್ಗವೆಸೆಯುವುದು ಮೊದಲಾದವಲ್ಲಿ ಉಪಯೋಗಿಸುವ, ಲೋಹದ ಯಾ ಕಾಗದದ ಉರುಳೆಯಾಕಾರದ ಕೋಶ.
  2. ರಾಕೆಟ್‍:
    1. ದಹ್ಯ ಪದಾರ್ಥಗಳ ದಹನದಿಂದ ಪಡೆದ ಶಕ್ತಿಯನ್ನುಪಯೋಗಿಸಿಕೊಂಡು ಎತ್ತರಕ್ಕೆ ಯಾ ದೂರಕ್ಕೆ ಹಾರುವ, ಸಾಮಾನ್ಯವಾಗಿ ಬಾಣ ಬಿರುಸುಗಳಲ್ಲಿ ಬಳಸುವ, ಉರುಳೆ ಆಕಾರದ ಕ್ಷಿಪಣಿ.
    2. ಆಕಾಶಕ್ಕೆ ಹಾರುವ, ವಾಯುವಿನಲ್ಲಿರುವ ಆಕ್ಸಿಜನ್ನನ್ನು ಅವಲಂಬಿಸಿರುವ ಅಂಥ ಇಂಜಿನ್‍.
    3. ರಾಕೆಟ್‍ ಚಾಲಿತ ಕ್ಷಿಪಣಿ.
  3. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ವಾಗ್ದಂಡನೆ; ಆಕ್ಷೇಪಣೆ; ತೀವ್ರವಾದ ಛೀಮಾರಿ.