See also 2ring  3ring  4ring
1ring ರಿಂಗ್‍
ನಾಮವಾಚಕ
  1. ಉಂಗುರ; ಮುದ್ರಿಕೆ; ಅಂಗುಲೀಯ(ಕ); ಬೆರಳಿಗೆ ಧರಿಸುವ ಆಭರಣ.
  2. ಬಳೆ; ವಲಯ; ದುಂಡುಪಟ್ಟಿ.
  3. ಉಂಗುರ ಗುರುತು; ವರ್ತುಲಾಕೃತಿ; ಸುರುಳಿ; ಸುತ್ತು: has blue rings round his eyes ಅವನ ಕಣ್ಣುಸುತ್ತ ನೀಲಿಗಟ್ಟಿದ ಸುರುಳಿಗಳಿವೆ.
  4. ಮಂಡಲ; ಚಕ್ರ; ವರ್ತುಲ:
    1. ವರ್ತುಲಾಕಾರದಲ್ಲಿ ವಿನ್ಯಾಸಗೊಂಡ ವ್ಯಕ್ತಿಗಳು ಗಿಡ, ಮರ ಮೊದಲಾದವುಗಳು.
    2. ವರ್ತುಲಾಕಾರದ ವಿನ್ಯಾಸ, ವೃತ್ತ.
  5. (ವ್ಯಾಪಾರ ನೀತಿಯ ಹತೋಟಿಗಾಗಿ ಯಾ ರಾಜಕೀಯ ಧೋರಣೆಯ ಹತೋಟಿಗಾಗಿ, ಸಾಮಾನ್ಯವಾಗಿ ಅಕ್ರಮವಾಗಿ ರಚಿಸಿಕೊಂಡ) ಒಳಕೂಟ; ವರ್ತುಲ; ವ್ಯಾಪಾರಗಾರರ ಯಾ ರಾಜಕಾರಣಿಗಳ ಗುಂಪು, ಕೂಟ.
  6. ಸರ್ಕಸ್‍ ರಿಂಗ್‍; ಸರ್ಕಸ್‍ ಕುದುರೆಗಳನ್ನು ಓಡಿಸುವುದಕ್ಕಾಗಿ ಸುತ್ತ ತಡೆಹಾಕಿ ಮಾಡಿದ ಪ್ರದರ್ಶನ ವಲಯ.
  7. (ಆವರಣ ಹಾಕಿದ ಪಂದ್ಯ, ಮುಷ್ಟಿಕಾಳಗ ಮೊದಲಾದವುಗಳ) ರಂಗ; ಕಳ; ಅಖಾಡ.
  8. ಜೂಜಿನಲ್ಲಿ ಪಣವೊಡ್ಡುವ ಆವರಣ; ಜೂಜಾಟದ ಕಕ್ಷೆ, ಕಟ್ಟೆ, ಆವರಣ.
  9. ದನಕರು ಮೊದಲಾದವುಗಳ ಪ್ರದರ್ಶನ ಸ್ಥಳ, ರಂಗ.
  10. ದುಂಡುದಾರಿ; ಸುರುಳಿ ಮಾರ್ಗ; ವರ್ತುಲ ಪಥ.
  11. = gas ring.
  12. = annual ring.
  13. (ಖಗೋಳ ವಿಜ್ಞಾನ)
    1. ಬಳೆ; ಗ್ರಹವೊಂದರ ಸುತ್ತಲೂ ಸ್ವಲ್ಪ ದೂರದಲ್ಲಿ ಅಸಂಖ್ಯಾತ ಕಣಗಳು ಒತ್ತಾಗಿ ಸೇರಿಕೊಂಡು ರೂಪಿಸಿರುವ, ಬಳೆಯಂತೆ ಕಾಣುವ ಕಣಸಮೂಹ.
    2. ಪರಿವೇಷ; ಗುಡಿಕಟ್ಟು; ಪ್ರಭಾವಲಯ; ಕೆಲವು ವೇಳೆ ಚಂದ್ರನ ಸುತ್ತ ಕಾಣಬರುವ ವರ್ತುಲಾಕಾರದ ಪ್ರಭೆ.
  14. (ಪ್ರಾಕ್ತನಶಾಸ್ತ್ರ) ದುಂಡುದಿಬ್ಬ; ಇತಿಹಾಸಪೂರ್ವಕಾಲದ ವರ್ತುಲಾಕಾರದ ಮಣ್ಣಿನ ದಿಂಡು ಮತ್ತು ಕಂದಕ.
  15. (ರಸಾಯನವಿಜ್ಞಾನ) ಉಂಗುರ; ಪರಮಾಣುಗಳು ಒಂದರೊಡನೊಂದು ಬಂಧಿಸಿಕೊಂಡು ಸರಣಿಯಾಗಿ ಆ ಸರಣಿಯ ಎರಡು ತುದಿಗಳೂ ಬಂಧಿಸಿಕೊಂಡಿರುವ ರಚನೆ, ಮುಖ್ಯವಾಗಿ ಕಾರ್ಬನಿಕ ಸಂಯುಕ್ತಗಳಲ್ಲಿ ಕಂಡುಬರುವಂಥದು.
  16. (ಗಣಿತ) ರಿಂಗು; ಧಾತುಗಳ ಒಂದು ಗಣವನ್ನು ಪರಿಗಣಿಸಿದಾಗ ಆ ಗಣದೊಡನೆ ವ್ಯತ್ಯಯನಶೀಲ ಗುಂಪಾಗುವ ಒಂದು ದ್ವಿಚರೀಯ (binary) ಪರಿಕರ್ಮ ಹಾಗೂ ಆ ಪರಿಕರ್ಮದೊಂದಿಗೆ ವಿತರಣಶೀಲವಾಗಿದ್ದು, ಗಣದ ಮೇಲೆ ಸಾಹಚರ್ಯವಾಗಿರುವಂಥ ಎರಡನೆಯ ದ್ವಿಚರೀಯ ಪರಿಕರ್ಮ–ಈ ಎರಡು ಪರಿಕರ್ಮಗಳಿಂದ ಆ ಗಣ ಸಂವೃತವಾಗಿರುವುದಾದರೆ ಅಂಥ ಗಣ.
ಪದಗುಚ್ಛ
  1. arm ring ರಟ್ಟೆಬಳೆ; ತೋಳ್ಬಂದಿ.
  2. make (or run) rings round (ಆಡುಮಾತು)
    1. (ಮತ್ತೊಬ್ಬನಿಗಿಂತ, ಮತ್ತೊಂದಕ್ಕಿಂತ) ವಿಪರೀತ ಬೇಗ ಹೋಗು; ಅತಿವೇಗವಾಗಿ ಹೋಗು.
    2. (ಕೆಲಸ) ಇನ್ನೂ ಬೇಗ ಯಾ ಇನ್ನೂ ಉತ್ತಮವಾಗಿ ಮಾಡು.
  3. rings in water ಉಂಗುರ ತೆರೆಗಳು; ಕೇಂದ್ರದಿಂದ ಬಳೆಬಳೆಯಾಗಿ ಹೊರಡುವ ನೀರಿನ ಅಲೆಗಳು.
  4. rings of smoke (ಸಿಗರೇಟು ಮೊದಲಾದವನ್ನು ಸೇದಿಬಿಟ್ಟ) ಹೊಗೆಯ ಸುರುಳಿಗಳು.
  5. rings of tree ಮರದ ವಲಯಗಳು; ವರ್ಷಕ್ಕೊಂದು ಪಟ್ಟೆಯಂತೆ ಮರಕ್ಕೆ ಆಗಿರುವ ವರ್ಷಗಳನ್ನು ಸೂಚಿಸುವ ಮರದ ಸುತ್ತುಪಟ್ಟೆಗಳು.
  6. the ring ಜೂಜಾಟಗಳ ಬಾಜಿಗಾರರು.
See also 1ring  3ring  4ring
2ring ರಿಂಗ್‍
ಸಕರ್ಮಕ ಕ್ರಿಯಾಪದ
  1. ಸುತ್ತುಗಟ್ಟು; ಸುತ್ತುವರಿ.
  2. (ಬೇಟೆ, ದನ ಮೊದಲಾದವನ್ನು) ಸುತ್ತುಬಳಸಿ ಒಳಗಡೆಗೆ ತರುಬು, ಓಡಿಸು.
  3. (ಹಂದಿ, ಗೂಳಿ ಮೊದಲಾದವಕ್ಕೆ) ಮೂಗುಬಳೆ ಹಾಕು; ಬಳೆ ಹಾಕು, ತೊಡಿಸು.
  4. (ಮರದ ತೊಗಟೆಯಲ್ಲಿ) ಸುತ್ತುಕೊರೆ; ಬಳೆಯಂತೆ ಕೊರೆ, ಗಾಡಿ ಮಾಡು.
  5. (ಈರುಳ್ಳಿ, ಸೇಬು ಮೊದಲಾದವನ್ನು) ಉಂಗುರ ಉಂಗುರವಾಗಿ ಕತ್ತರಿಸು; ದುಂಡು ಬಿಲ್ಲೆಗಳಾಗಿ ಕತ್ತರಿಸು.
  6. (ಹಕ್ಕಿ ಮೊದಲಾದವುಗಳಿಗೆ) ಉಂಗುರ ಕಟ್ಟು; ಸುತ್ತುಪಟ್ಟಿ ಹಾಕು.
ಅಕರ್ಮಕ ಕ್ರಿಯಾಪದ
  1. (ಡೇಗೆ ಮೊದಲಾದವು) ಸುರುಳಿಯಾಕಾರದಲ್ಲಿ ಮೇಲಕ್ಕೆ ಹಾರು.
  2. (ಬೇಟೆಯಲ್ಲಿ ಸಿಕ್ಕಿಕೊಂಡ ನರಿ) ಸುತ್ತು ತಿರುಗು; ಸುತ್ತ ಓಡು; ಸುತ್ತುಗಟ್ಟು.
See also 1ring  2ring  4ring
3ring ರಿಂಗ್‍
ಕ್ರಿಯಾಪದ

(ಭೂತರೂಪ rang ಉಚ್ಚಾರಣೆ ರ್ಯಾಂಗ್‍; ಭೂತಕೃದಂತ rung ಉಚ್ಚಾರಣೆ\ ರಂಗ್‍)

ಸಕರ್ಮಕ ಕ್ರಿಯಾಪದ
  1. (ಗಂಟೆಯನ್ನು) ಬಾರಿಸು; ಹೊಡೆ.
  2. (ನಾಣ್ಯವನ್ನು) ಪರೀಕ್ಷಿಸಲು ಗಲ್ಲದಪೆಟ್ಟಿಗೆಯ ಮೇಲೆ ಕುಟ್ಟಿ, ಹೊಡೆದು ನೋಡು; ಹಣದ ಮೇಜಿನ ಮೇಲೆ ಶಬ್ದಮಾಡುವಂತೆ ಎಸೆದು ನೋಡು.
  3. (ಯಾರನ್ನಾದರೂ ಕರೆಯಲು ಯಾ ಯಾರದಾದರೂ ಗಮನ ಸೆಳೆಯಲು) ಗಂಟೆ ಬಾರಿಸು; ಗಂಟೆ ಹೊಡೆ.
  4. (ಘಂಟಾತರಂಗದ ನಾದದ, ಮರಣ ಘಂಟಾನಾದದ ಯಾ ನಾದಭೇದಗಳನ್ನು ಸೂಚಿಸುವ) ಗಂಟೆಗಳನ್ನು ಬಾರಿಸು.
  5. (ಗಂಟೆಯ ಯಾ ಗಂಟೆಗಳ ಶಬ್ದದಿಂದ) ಕಾಲ ಮೊದಲಾದವನ್ನು ಸಾರು; ಹೊತ್ತೆಷ್ಟಾಯಿತೆಂಬುದನ್ನು ತಿಳಿಸು.
  6. ಗಂಟೆ ಬಾರಿಸಿ–ಬರಹೇಳು, ಕರೆ ಯಾ ಹೊರಕ್ಕೆ ಕಳುಹಿಸು, ಹೊರಕ್ಕೆ ಹೋಗಲು ಸೂಚಿಸು.
  7. (ಬ್ರಿಟಿಷ್‍ ಪ್ರಯೋಗ) ದೂರವಾಣಿಯ ಮೂಲಕ ಕರೆ ( ಅಕರ್ಮಕ ಕ್ರಿಯಾಪದ ಸಹ).
ಅಕರ್ಮಕ ಕ್ರಿಯಾಪದ
  1. ಮೊಳಗು; ಅನುರಣಿಸು; ತುಂಬುನಾದ ಮಾಡು; ಗಂಟೆಯಂತೆ ಸ್ಪಷ್ಟವಾದ ತುಂಬುನಾದ ಯಾ ಅನುರಣನ ಧ್ವನಿ ಕೊಡು: trumpet rings out ಕಹಳೆ ಮೊಳಗುತ್ತದೆ. a shot rang out ಗುಂಡು ಢಮ್ಮೆನ್ನುತ್ತಾ ಹಾರಿತು; ಗುಂಡು ಹಾರಿದಾಗ ಅನುರಣನ ಶಬ್ದವಾಯಿತು.
    1. (ಪ್ರಾರ್ಥನೆ, ಊಟ, ಕೆಲಸ ಮೊದಲಾದವಕ್ಕೆ ಬರಬೇಕೆಂದು) ಗಂಟೆಹೊಡೆ; ಗಂಟೆ ಶಬ್ದವಾಗು.
    2. ಗಂಟೆ ಹೊಡೆದು ಕರೆ ಕೊಡು, ಕರೆಕಳಿಸು; ಗಂಟೆ ಹೊಡೆದು ಕರೆಯ ಸೂಚನೆ ಕೊಡು.
  2. (ಸ್ಥಳ) ಪ್ರತಿಧ್ವನಿ ಕೊಡು; ಮೊಳಗು; ಹೊಳಲು ಕೊಡು; ಅನುರಣಿಸು; ಅನುರಣನಮಾಡು; ನಾದದಿಂದ ತುಂಬಿಹೋಗು: the theatre rang with applause ನಾಟಕಶಾಲೆ ಚಪ್ಪಾಳೆಯಿಂದ ಮೊಳಗಿತು.
    1. (ಕಿವಿಗಳ ವಿಷಯದಲ್ಲಿಮಾತು, ಧ್ವನಿ ಮೊದಲಾದವುಗಳಿಂದ) ಮೊರೆಯುತ್ತಿರು; ಪ್ರತಿಧ್ವನಿತವಾಗು.
    2. (ಕಿವಿ) ಗಂಟೆಯ ನಾದದಂಥ ಶಬ್ದತುಂಬಿರು; ಧ್ವನಿ ತುಂಬಿರು: he has a ringing in the ears ಅವನ ಕಿವಿಗಳು (ಗಂಟೆಯ ನಾದದಂಥ ಶಬ್ದದಿಂದ) ಮೊರೆಯುತ್ತಿವೆ, ತುಂಬಿಹೋಗಿವೆ; ಅವನ ಕಿವಿಗಳಲ್ಲಿ ಗಂಟೆ ಹೊಡೆದಂತೆ ಆಗಿದೆ.
  3. (ಭಾವನೆ ಮೊದಲಾದವುಗಳ ವಿಷಯದಲ್ಲಿ) ನಿರ್ದಿಷ್ಟಭಾವ, ಅಭಿಪ್ರಾಯ ಸೂಚಿಸು: his words ring hollow ಅವನ ಮಾತುಗಳು ಹುರುಳಿಲ್ಲದಿರುವುದನ್ನು ಸೂಚಿಸುತ್ತವೆ.
  4. (ಜವಾನನನ್ನು ಬರ ಮಾಡಿಕೊಳ್ಳಲು, ಕಾಹಿ ಮೊದಲಾದವನ್ನು ತರಿಸಿಕೊಳ್ಳಲು) ಗಂಟೆ ಬಾರಿಸು: did you ring sir? ಸ್ವಾಮಿ ನನಗೆ ಹೇಳಿ ಕಳಿಸಿದಿರಾ? (ಗಂಟೆ ಹೊಡೆದದ್ದನ್ನು ಕೇಳಿ ಬಂದಾಗ ಹೇಳುವ ಮಾತು).
ಪದಗುಚ್ಛ
  1. ring a bell (ಆಡುಮಾತು)
    1. ಬಹಳ ಹಿಂದಿನದನ್ನು ಮತ್ತೆ ಸ್ಮರಣೆಗೆ ತರು.
    2. ಸುಪರಿಚಿತವಾಗಿ ಕಾಣು.
  2. ring at door (ಪ್ರವೇಶ ಪಡೆಯಲು) ಬಾಗಿಲ ಗಂಟೆಹೊಡೆ; ಬಾಗಿಲ ಗಂಟೆ ಹೊಡೆಯುವಂತೆ ಗುಂಡಿಯನ್ನು ಒತ್ತು.
  3. ring back ಹಿಂದೆ ದೂರವಾಣಿ ಮಾಡಿದ ವ್ಯಕ್ತಿಗೆ ಮತ್ತೆ ದೂರವಾಣಿ ಮಾಡು.
  4. ring down the curtain
    1. (ರಂಗಮಂಟಪದಲ್ಲಿ) ಪರದೆಯನ್ನು ಇಳಿಸುವಂತೆ ಗಂಟೆಹೊಡೆ, ಬಾರಿಸು,
    2. (ಯಾವುದೇ ಕೆಲಸ ಮೊದಲಾದವನ್ನು) ಮುಗಿಸು; ಅಂತ್ಯಗೊಳಿಸು; ಮುಕ್ತಾಯಮಾಡು; ಸಮಾಪ್ತಿಗೊಳಿಸು: this accident rang down the curtain on the adventurous enterprise ಈ ಅಪಘಾತ ಸಾಹಸದ ಉದ್ಯಮಕ್ಕೆ ಮುಕ್ತಾಯ ಮಾಡಿತು.
  5. ring false
    1. (ಪರೀಕ್ಷೆಮಾಡಲು ಶಬ್ದ ಮಾಡಿದಾಗ ನಾಣ್ಯ) ಸರಿಯಾದ ನಾದ ಕೊಡದಿರು: ಶಬ್ದ ಸರಿಯಾಗಿಲ್ಲದಿರು.
    2. (ರೂಪಕವಾಗಿ) (ಭಾವ\ ಮೊದಲಾದವು) ಖೋಟಾ ಆಗಿರು; ಕೃತಕವಾಗಿ ತೋರು.
  6. ring in
    1. ಗಂಟೆ ಹೊಡೆದು ಒಳಕ್ಕೆ ಕರೆ ಯಾ ಕರೆಸು.
    2. ಘಂಟಾಘೋಷದಿಂದ ಆಗಮನವನ್ನು ಸೂಚಿಸು: ring in the new year ಹೊಸವರ್ಷದ ಆಗಮನವನ್ನು ಘಂಟಾನಾದದಿಂದ ಘೋಷಿಸು.
    3. ದೂರವಾಣಿಯ ಮೂಲಕ ತಿಳಿಸು ಯಾ ಸಂಪರ್ಕಿಸು.
    4. (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) (ಅಶಿಷ್ಟ) ಮೋಸದಿಂದ ಬದಲಾಯಿಸು, ಅದಲುಬದಲು ಮಾಡು.
  7. ring in one’s ears (or heart)
    1. ವಿಯಲ್ಲಿ ಅನುರಣಿಸುತ್ತಿರು, ಮೊರೆಯುತ್ತಿರು.
    2. ಹೃದಯದಲ್ಲಿ–ನೆಲೆಸಿರು, ತುಂಬಿರು.
    3. ಸ್ಮರಣೆಗೆ ಸದಾ ಬರುತ್ತಿರು.
  8. ring knell
    1. (ಒಬ್ಬನು ಸತ್ತುಹೋದಾಗ ಯಾ ಅವನ ಶವಸಂಸ್ಕಾರದಲ್ಲಿ ನಿಧಾನವಾಗಿ, ಗಂಭೀರವಾಗಿ) ಗಂಟೆ ಬಾರಿಸು; ಮರಣ ಘಂಟಾನಾದ ಮಾಡು.
    2. ಅಂತ್ಯಗೊಳಿಸು; ಕೊನೆಗೊಳಿಸು.
  9. ring off (ಬ್ರಿಟಿಷ್‍ ಪ್ರಯೋಗ) (ಗ್ರಾಹಕವನ್ನು ಮತ್ತೆ ಅದರ ಸ್ಥಾನದಲ್ಲಿಟ್ಟು) ದೂರವಾಣಿ ಕರೆಯನ್ನು, ಸಂಭಾಷಣೆಯನ್ನು ಮುಗಿಸು, ಅಂತ್ಯಗೊಳಿಸು.
  10. ring out
    1. ಗಂಟೆ ಬಾರಿಸಿ ಹೊರಕ್ಕೆ ಕಳಿಸು.
    2. ಘಂಟಾ ಘೋಷದಿಂದ ನಿರ್ಗಮನವನ್ನು ಸೂಚಿಸು: ring out the old year ಹಳೆಯ ವರ್ಷ ಹೋಯಿತೆಂದು ಘಂಟಾನಾದ ಮಾಡಿ ಘೋಷಿಸು.
    3. (ಗಂಟೆಯಂತೆ) ಮೊಳಗು.
  11. ring peal ತರಂಗ ತರಂಗವಾಗಿ ನಾದ ಹೊರಡುವಂತೆ ಗಂಟೆಗಳನ್ನು ಬಾರಿಸು.
  12. ring the bell
    1. (ಮುಖ್ಯವಾಗಿ ಜವಾನನನ್ನು ಕರೆಯುವುದಕ್ಕಾಗಿ) ಗಂಟೆ ಬಾರಿಸು.
    2. (ಆಡುಮಾತು) ಯಶಸ್ವಿಯಾಗು; ಜಯಹೊಂದು; ವಿಜಯಿಯಾಗು.
    3. ಸಹಾನುಭೂತಿಯಿಂದ ಮಿಡಿಯುವಂತೆ ಮಾಡು; ಸಮಾನವಾದ ಭಾವನೆಗಳು ಮೂಡುವಂತೆ ಮಾಡು.
  13. ring the $^1$changes.
  14. ring the knell of ಒಂದರ ಅಂತ್ಯ, ಅವಸಾನ, ಮುಕ್ತಾಯ, ಮೊದಲಾದವನ್ನು–ಸೂಚಿಸು, ಸಾರು, ಘೋಷಿಸು.
  15. ring true
    1. (ನಾಣ್ಯವನ್ನು ಪರೀಕ್ಷೆಮಾಡಲು ಹಣದ ಮೇಜಿನ ಮೇಲೆ ಎಸೆದಾಗ) ಸರಿಯಾದ ನಾದಕೊಡು; ಶಬ್ದ ಸರಿಯಾಗಿರು.
    2. (ರೂಪಕವಾಗಿ) (ಭಾವ ಮೊದಲಾದವು) ಸಾಚಾ ಆಗಿರು; ಸತ್ಯವುಳ್ಳದ್ದಾಗಿತೋರು.
  16. ring up
    1. (ಬ್ರಿಟಿಷ್‍ ಪ್ರಯೋಗ) ದೂರವಾಣಿ ಮಾಡು; ಹೋನ್‍ ಮಾಡು.
    2. ನಗದು ದಾಖಲೆ ಪುಸ್ತಕದಲ್ಲಿ (ಹಣದ ಮೊತ್ತ ಮೊದಲಾದವನ್ನು) ದಾಖಲಿಸು, ನಮೂದಿಸು.
  17. ring up bell ಚರ್ಚು ಗಂಟೆಯನ್ನು ತೊಲೆಯ ಮೇಲಕ್ಕೆತ್ತಿ ಬಾರಿಸು.
  18. ring up the curtain
    1. (ರಂಗಮಂಟಪದಲ್ಲಿ) ಪರದೆ ಎತ್ತಲು ಗಂಟೆ ಹೊಡೆ, ಬಾರಿಸು.
    2. (ಯಾವುದೇ ಕೆಲಸ ಮೊದಲಾದವನ್ನು) ಆರಂಭಿಸು; ಉದ್ಘಾಟಿಸು; ಮೊದಲುಮಾಡು: the dinner rang up the curtain on the fund-raising drive ನಿಧಿಸಂಗ್ರಹದ ಏರ್ಪಾಡನ್ನು ಭೋಜನಕೂಟ ಆರಂಭಿಸಿತು.
See also 1ring  2ring  3ring
4ring ರಿಂಗ್‍
ನಾಮವಾಚಕ
  1. (ಚರ್ಚಿನ) ಗಂಟೆ(ಗಳ) ತಂಡ; ಘಂಟಾಮಾಲೆ; ಘಂಟಾಪಂಕ್ತಿ.
  2. ಅದಿರುಲಿ; ಅನುರಣನ; ಝಣತ್ಕಾರ.
    1. (ಕಂಠ, ಧ್ವನಿ ಮೊದಲಾದವುಗಳ) ನಾದ.
    2. (ನಾಣ್ಯದ, ಪಾತ್ರೆಯ) ನಾದ; ಶಬ್ದ (ನಾದ).
  3. ಘಂಟಾವಾದನ; ಗಂಟೆಬಾರಿಕೆ.
  4. ಗಂಟೆಯ ಶಬ್ದ; ಘಂಟಾನಾದ: heard a loud ring at the door ಬಾಗಿಲಿನ ಹತ್ತಿರ ಗಟ್ಟಿಯಾದ ಗಂಟೆಯ ಶಬ್ದವನ್ನು ಕೇಳಿದೆ.
  5. (ಆಡುಮಾತು) ದೂರವಾಣಿ ಕರೆ: give me a ring ನನಗೆ ದೂರವಾಣಿ ಕರೆ ಕೊಡು.
  6. (ಮಾತು ಮೊದಲಾದವುಗಳಿಂದ ಸೂಚಿತವಾದ ನಿರ್ದಿಷ್ಟ) ಭಾವ; ದನಿ: had a melancholy ring ವಿಷಾದದ ದನಿಯಿತ್ತು.