(ಭೂತರೂಪ rang ಉಚ್ಚಾರಣೆ ರ್ಯಾಂಗ್; ಭೂತಕೃದಂತ rung ಉಚ್ಚಾರಣೆ\ ರಂಗ್)
ಸಕರ್ಮಕ ಕ್ರಿಯಾಪದ
(ಗಂಟೆಯನ್ನು) ಬಾರಿಸು; ಹೊಡೆ.
(ನಾಣ್ಯವನ್ನು) ಪರೀಕ್ಷಿಸಲು ಗಲ್ಲದಪೆಟ್ಟಿಗೆಯ ಮೇಲೆ ಕುಟ್ಟಿ, ಹೊಡೆದು ನೋಡು; ಹಣದ ಮೇಜಿನ ಮೇಲೆ ಶಬ್ದಮಾಡುವಂತೆ ಎಸೆದು ನೋಡು.
(ಯಾರನ್ನಾದರೂ ಕರೆಯಲು ಯಾ ಯಾರದಾದರೂ ಗಮನ ಸೆಳೆಯಲು) ಗಂಟೆ ಬಾರಿಸು; ಗಂಟೆ ಹೊಡೆ.
(ಘಂಟಾತರಂಗದ ನಾದದ, ಮರಣ ಘಂಟಾನಾದದ ಯಾ ನಾದಭೇದಗಳನ್ನು ಸೂಚಿಸುವ) ಗಂಟೆಗಳನ್ನು ಬಾರಿಸು.
(ಗಂಟೆಯ ಯಾ ಗಂಟೆಗಳ ಶಬ್ದದಿಂದ) ಕಾಲ ಮೊದಲಾದವನ್ನು ಸಾರು; ಹೊತ್ತೆಷ್ಟಾಯಿತೆಂಬುದನ್ನು ತಿಳಿಸು.
ಗಂಟೆ ಬಾರಿಸಿ–ಬರಹೇಳು, ಕರೆ ಯಾ ಹೊರಕ್ಕೆ ಕಳುಹಿಸು, ಹೊರಕ್ಕೆ ಹೋಗಲು ಸೂಚಿಸು.
(ಬ್ರಿಟಿಷ್ ಪ್ರಯೋಗ) ದೂರವಾಣಿಯ ಮೂಲಕ ಕರೆ ( ಅಕರ್ಮಕ ಕ್ರಿಯಾಪದ ಸಹ).
ಅಕರ್ಮಕ ಕ್ರಿಯಾಪದ
ಮೊಳಗು; ಅನುರಣಿಸು; ತುಂಬುನಾದ ಮಾಡು; ಗಂಟೆಯಂತೆ ಸ್ಪಷ್ಟವಾದ ತುಂಬುನಾದ ಯಾ ಅನುರಣನ ಧ್ವನಿ ಕೊಡು: trumpet rings out ಕಹಳೆ ಮೊಳಗುತ್ತದೆ. a shot rang out ಗುಂಡು ಢಮ್ಮೆನ್ನುತ್ತಾ ಹಾರಿತು; ಗುಂಡು ಹಾರಿದಾಗ ಅನುರಣನ ಶಬ್ದವಾಯಿತು.
(ಪ್ರಾರ್ಥನೆ, ಊಟ, ಕೆಲಸ ಮೊದಲಾದವಕ್ಕೆ ಬರಬೇಕೆಂದು) ಗಂಟೆಹೊಡೆ; ಗಂಟೆ ಶಬ್ದವಾಗು.
ಗಂಟೆ ಹೊಡೆದು ಕರೆ ಕೊಡು, ಕರೆಕಳಿಸು; ಗಂಟೆ ಹೊಡೆದು ಕರೆಯ ಸೂಚನೆ ಕೊಡು.
(ಸ್ಥಳ) ಪ್ರತಿಧ್ವನಿ ಕೊಡು; ಮೊಳಗು; ಹೊಳಲು ಕೊಡು; ಅನುರಣಿಸು; ಅನುರಣನಮಾಡು; ನಾದದಿಂದ ತುಂಬಿಹೋಗು: the theatre rang with applause ನಾಟಕಶಾಲೆ ಚಪ್ಪಾಳೆಯಿಂದ ಮೊಳಗಿತು.
(ಕಿವಿಗಳ ವಿಷಯದಲ್ಲಿಮಾತು, ಧ್ವನಿ ಮೊದಲಾದವುಗಳಿಂದ) ಮೊರೆಯುತ್ತಿರು; ಪ್ರತಿಧ್ವನಿತವಾಗು.
(ಕಿವಿ) ಗಂಟೆಯ ನಾದದಂಥ ಶಬ್ದತುಂಬಿರು; ಧ್ವನಿ ತುಂಬಿರು: he has a ringing in the ears ಅವನ ಕಿವಿಗಳು (ಗಂಟೆಯ ನಾದದಂಥ ಶಬ್ದದಿಂದ) ಮೊರೆಯುತ್ತಿವೆ, ತುಂಬಿಹೋಗಿವೆ; ಅವನ ಕಿವಿಗಳಲ್ಲಿ ಗಂಟೆ ಹೊಡೆದಂತೆ ಆಗಿದೆ.
(ಭಾವನೆ ಮೊದಲಾದವುಗಳ ವಿಷಯದಲ್ಲಿ) ನಿರ್ದಿಷ್ಟಭಾವ, ಅಭಿಪ್ರಾಯ ಸೂಚಿಸು: his words ring hollow ಅವನ ಮಾತುಗಳು ಹುರುಳಿಲ್ಲದಿರುವುದನ್ನು ಸೂಚಿಸುತ್ತವೆ.
(ಜವಾನನನ್ನು ಬರ ಮಾಡಿಕೊಳ್ಳಲು, ಕಾಹಿ ಮೊದಲಾದವನ್ನು ತರಿಸಿಕೊಳ್ಳಲು) ಗಂಟೆ ಬಾರಿಸು: did you ring sir? ಸ್ವಾಮಿ ನನಗೆ ಹೇಳಿ ಕಳಿಸಿದಿರಾ? (ಗಂಟೆ ಹೊಡೆದದ್ದನ್ನು ಕೇಳಿ ಬಂದಾಗ ಹೇಳುವ ಮಾತು).
ಪದಗುಚ್ಛ
ring a bell (ಆಡುಮಾತು)
ಬಹಳ ಹಿಂದಿನದನ್ನು ಮತ್ತೆ ಸ್ಮರಣೆಗೆ ತರು.
ಸುಪರಿಚಿತವಾಗಿ ಕಾಣು.
ring at door (ಪ್ರವೇಶ ಪಡೆಯಲು) ಬಾಗಿಲ ಗಂಟೆಹೊಡೆ; ಬಾಗಿಲ ಗಂಟೆ ಹೊಡೆಯುವಂತೆ ಗುಂಡಿಯನ್ನು ಒತ್ತು.
ring back ಹಿಂದೆ ದೂರವಾಣಿ ಮಾಡಿದ ವ್ಯಕ್ತಿಗೆ ಮತ್ತೆ ದೂರವಾಣಿ ಮಾಡು.
(ಯಾವುದೇ ಕೆಲಸ ಮೊದಲಾದವನ್ನು) ಮುಗಿಸು; ಅಂತ್ಯಗೊಳಿಸು; ಮುಕ್ತಾಯಮಾಡು; ಸಮಾಪ್ತಿಗೊಳಿಸು: this accident rang down the curtain on the adventurous enterprise ಈ ಅಪಘಾತ ಸಾಹಸದ ಉದ್ಯಮಕ್ಕೆ ಮುಕ್ತಾಯ ಮಾಡಿತು.
ring false
(ಪರೀಕ್ಷೆಮಾಡಲು ಶಬ್ದ ಮಾಡಿದಾಗ ನಾಣ್ಯ) ಸರಿಯಾದ ನಾದ ಕೊಡದಿರು: ಶಬ್ದ ಸರಿಯಾಗಿಲ್ಲದಿರು.
(ರೂಪಕವಾಗಿ) (ಭಾವ\ ಮೊದಲಾದವು) ಖೋಟಾ ಆಗಿರು; ಕೃತಕವಾಗಿ ತೋರು.
ring in
ಗಂಟೆ ಹೊಡೆದು ಒಳಕ್ಕೆ ಕರೆ ಯಾ ಕರೆಸು.
ಘಂಟಾಘೋಷದಿಂದ ಆಗಮನವನ್ನು ಸೂಚಿಸು: ring in the new year ಹೊಸವರ್ಷದ ಆಗಮನವನ್ನು ಘಂಟಾನಾದದಿಂದ ಘೋಷಿಸು.
ದೂರವಾಣಿಯ ಮೂಲಕ ತಿಳಿಸು ಯಾ ಸಂಪರ್ಕಿಸು.
(ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್) (ಅಶಿಷ್ಟ) ಮೋಸದಿಂದ ಬದಲಾಯಿಸು, ಅದಲುಬದಲು ಮಾಡು.
ring in one’s ears (orheart)
ವಿಯಲ್ಲಿ ಅನುರಣಿಸುತ್ತಿರು, ಮೊರೆಯುತ್ತಿರು.
ಹೃದಯದಲ್ಲಿ–ನೆಲೆಸಿರು, ತುಂಬಿರು.
ಸ್ಮರಣೆಗೆ ಸದಾ ಬರುತ್ತಿರು.
ring knell
(ಒಬ್ಬನು ಸತ್ತುಹೋದಾಗ ಯಾ ಅವನ ಶವಸಂಸ್ಕಾರದಲ್ಲಿ ನಿಧಾನವಾಗಿ, ಗಂಭೀರವಾಗಿ) ಗಂಟೆ ಬಾರಿಸು; ಮರಣ ಘಂಟಾನಾದ ಮಾಡು.
ಅಂತ್ಯಗೊಳಿಸು; ಕೊನೆಗೊಳಿಸು.
ring off (ಬ್ರಿಟಿಷ್ ಪ್ರಯೋಗ) (ಗ್ರಾಹಕವನ್ನು ಮತ್ತೆ ಅದರ ಸ್ಥಾನದಲ್ಲಿಟ್ಟು) ದೂರವಾಣಿ ಕರೆಯನ್ನು, ಸಂಭಾಷಣೆಯನ್ನು ಮುಗಿಸು, ಅಂತ್ಯಗೊಳಿಸು.
ring out
ಗಂಟೆ ಬಾರಿಸಿ ಹೊರಕ್ಕೆ ಕಳಿಸು.
ಘಂಟಾ ಘೋಷದಿಂದ ನಿರ್ಗಮನವನ್ನು ಸೂಚಿಸು: ring out the old year ಹಳೆಯ ವರ್ಷ ಹೋಯಿತೆಂದು ಘಂಟಾನಾದ ಮಾಡಿ ಘೋಷಿಸು.
(ಗಂಟೆಯಂತೆ) ಮೊಳಗು.
ring peal ತರಂಗ ತರಂಗವಾಗಿ ನಾದ ಹೊರಡುವಂತೆ ಗಂಟೆಗಳನ್ನು ಬಾರಿಸು.
ring the bell
(ಮುಖ್ಯವಾಗಿ ಜವಾನನನ್ನು ಕರೆಯುವುದಕ್ಕಾಗಿ) ಗಂಟೆ ಬಾರಿಸು.
(ಆಡುಮಾತು) ಯಶಸ್ವಿಯಾಗು; ಜಯಹೊಂದು; ವಿಜಯಿಯಾಗು.
ಸಹಾನುಭೂತಿಯಿಂದ ಮಿಡಿಯುವಂತೆ ಮಾಡು; ಸಮಾನವಾದ ಭಾವನೆಗಳು ಮೂಡುವಂತೆ ಮಾಡು.
ನಗದು ದಾಖಲೆ ಪುಸ್ತಕದಲ್ಲಿ (ಹಣದ ಮೊತ್ತ ಮೊದಲಾದವನ್ನು) ದಾಖಲಿಸು, ನಮೂದಿಸು.
ring up bell ಚರ್ಚು ಗಂಟೆಯನ್ನು ತೊಲೆಯ ಮೇಲಕ್ಕೆತ್ತಿ ಬಾರಿಸು.
ring up the curtain
(ರಂಗಮಂಟಪದಲ್ಲಿ) ಪರದೆ ಎತ್ತಲು ಗಂಟೆ ಹೊಡೆ, ಬಾರಿಸು.
(ಯಾವುದೇ ಕೆಲಸ ಮೊದಲಾದವನ್ನು) ಆರಂಭಿಸು; ಉದ್ಘಾಟಿಸು; ಮೊದಲುಮಾಡು: the dinner rang up the curtain on the fund-raising drive ನಿಧಿಸಂಗ್ರಹದ ಏರ್ಪಾಡನ್ನು ಭೋಜನಕೂಟ ಆರಂಭಿಸಿತು.