ಬಳೆ; ಗ್ರಹವೊಂದರ ಸುತ್ತಲೂ ಸ್ವಲ್ಪ ದೂರದಲ್ಲಿ ಅಸಂಖ್ಯಾತ ಕಣಗಳು ಒತ್ತಾಗಿ ಸೇರಿಕೊಂಡು ರೂಪಿಸಿರುವ, ಬಳೆಯಂತೆ ಕಾಣುವ ಕಣಸಮೂಹ.
ಪರಿವೇಷ; ಗುಡಿಕಟ್ಟು; ಪ್ರಭಾವಲಯ; ಕೆಲವು ವೇಳೆ ಚಂದ್ರನ ಸುತ್ತ ಕಾಣಬರುವ ವರ್ತುಲಾಕಾರದ ಪ್ರಭೆ.
(ಪ್ರಾಕ್ತನಶಾಸ್ತ್ರ) ದುಂಡುದಿಬ್ಬ; ಇತಿಹಾಸಪೂರ್ವಕಾಲದ ವರ್ತುಲಾಕಾರದ ಮಣ್ಣಿನ ದಿಂಡು ಮತ್ತು ಕಂದಕ.
(ರಸಾಯನವಿಜ್ಞಾನ) ಉಂಗುರ; ಪರಮಾಣುಗಳು ಒಂದರೊಡನೊಂದು ಬಂಧಿಸಿಕೊಂಡು ಸರಣಿಯಾಗಿ ಆ ಸರಣಿಯ ಎರಡು ತುದಿಗಳೂ ಬಂಧಿಸಿಕೊಂಡಿರುವ ರಚನೆ, ಮುಖ್ಯವಾಗಿ ಕಾರ್ಬನಿಕ ಸಂಯುಕ್ತಗಳಲ್ಲಿ ಕಂಡುಬರುವಂಥದು.
(ಗಣಿತ) ರಿಂಗು; ಧಾತುಗಳ ಒಂದು ಗಣವನ್ನು ಪರಿಗಣಿಸಿದಾಗ ಆ ಗಣದೊಡನೆ ವ್ಯತ್ಯಯನಶೀಲ ಗುಂಪಾಗುವ ಒಂದು ದ್ವಿಚರೀಯ (binary) ಪರಿಕರ್ಮ ಹಾಗೂ ಆ ಪರಿಕರ್ಮದೊಂದಿಗೆ ವಿತರಣಶೀಲವಾಗಿದ್ದು, ಗಣದ ಮೇಲೆ ಸಾಹಚರ್ಯವಾಗಿರುವಂಥ ಎರಡನೆಯ ದ್ವಿಚರೀಯ ಪರಿಕರ್ಮ–ಈ ಎರಡು ಪರಿಕರ್ಮಗಳಿಂದ ಆ ಗಣ ಸಂವೃತವಾಗಿರುವುದಾದರೆ ಅಂಥ ಗಣ.
ಪದಗುಚ್ಛ
arm ring ರಟ್ಟೆಬಳೆ; ತೋಳ್ಬಂದಿ.
make (orrun) rings round (ಆಡುಮಾತು)
(ಮತ್ತೊಬ್ಬನಿಗಿಂತ, ಮತ್ತೊಂದಕ್ಕಿಂತ) ವಿಪರೀತ ಬೇಗ ಹೋಗು; ಅತಿವೇಗವಾಗಿ ಹೋಗು.
(ಕೆಲಸ) ಇನ್ನೂ ಬೇಗ ಯಾ ಇನ್ನೂ ಉತ್ತಮವಾಗಿ ಮಾಡು.
rings in water ಉಂಗುರ ತೆರೆಗಳು; ಕೇಂದ್ರದಿಂದ ಬಳೆಬಳೆಯಾಗಿ ಹೊರಡುವ ನೀರಿನ ಅಲೆಗಳು.
rings of smoke (ಸಿಗರೇಟು ಮೊದಲಾದವನ್ನು ಸೇದಿಬಿಟ್ಟ) ಹೊಗೆಯ ಸುರುಳಿಗಳು.
rings of tree ಮರದ ವಲಯಗಳು; ವರ್ಷಕ್ಕೊಂದು ಪಟ್ಟೆಯಂತೆ ಮರಕ್ಕೆ ಆಗಿರುವ ವರ್ಷಗಳನ್ನು ಸೂಚಿಸುವ ಮರದ ಸುತ್ತುಪಟ್ಟೆಗಳು.