See also 2change
1change ಚೇಂಜ್‍
ನಾಮವಾಚಕ
  1. ಬದಲಾವಣೆ; ಮಾರ್ಪು; ಮಾರ್ಪಾಟು; ಮಾರ್ಪಾಡು; ಪರಿವರ್ತನೆ; ವ್ಯತ್ಯಾಸ; ತಬ್ದೀಲು.
  2. ಬದಲಾವಣೆ; ಬದಲಿ; ಅದೇಶ; ಒಂದು ವಸ್ತುವಿನ ಸ್ಥಾನದಲ್ಲಿ ಇನ್ನೊಂದನ್ನು–ತರುವುದು, ಇಡುವುದು, ಬಳಸುವುದು.
  3. ವೈವಿಧ್ಯ; ನಾವೀನ್ಯ; ಹೊಸತನ; ಬದಲಾವಣೆ; ಬೇರೆಯ ಯಾ ಹೊಸ–ಬಗೆ, ತೆರ, ರೂಪ, ರೀತಿ, ಸ್ಥಿತಿ: for a change ವೈವಿಧ್ಯಕ್ಕಾಗಿ; ಬದಲಾವಣೆಗಾಗಿ; ಬೇರೊಂದು ಬಗೆಯಿರಲೆಂದು.
  4. ಹೃದಯ ಪರಿವರ್ತನೆ; ಮನಸ್ಸಿನ ಬದಲಾವಣೆ; ಅಭಿಪ್ರಾಯ ಬದಲಾವಣೆ: change of heart ಹೃದಯ ಪರಿವರ್ತನೆ.
  5. ಮುಟ್ಟು ನಿಲುಗಡೆ; ರಜೋನಿವೃತ್ತಿ; ಋತುಬಂಧ; ಮುಟ್ಟು ನಿಂತುಹೋಗುವುದು.
  6. (ಬ್ರಿಟಿಷ್‍ ಪ್ರಯೋಗ) (Change ಯಾ ’Change) ಎಕ್ಸ್‍ಚೇಂಜು; ವಿನಿಮಯದ ಯಾ ಮಾರುವೆಯ ಕಟ್ಟೆ.
  7. ಬೇರೆ ಉಡುಪು; ಬದಲುಡುಪು; ಹೊಸ ಉಡುಪು.
  8. ಹಠಾತ್‍ ಬದಲಾವಣೆ.
  9. ಚಿಲ್ಲರೆ; ಚುಂಗಡಿ; ಹೆಚ್ಚು ಮಾನದ ನೋಟು ಮೊದಲಾದ ಹಣಕ್ಕೆ ಕೊಡುವ ಕಡಿಮೆ ಮಾನದ ಹಣ, ಇಲ್ಲವೆ ಒಂದು ದೇಶದ ನಾಣ್ಯಮಾನದ ಹಣಕ್ಕೆ ಬದಲಾಗಿ ಕೊಡುವ ಇನ್ನೊಂದು ದೇಶದ ನಾಣ್ಯಮಾನದ ಹಣ.
  10. ಚಿಲ್ಲರೆ (ಬಾಕಿ); ಕೊಟ್ಟ ಹಣ ಕೊಂಡ ಸಾಮಾನಿನ ಮೌಲ್ಯಕ್ಕಿಂತ ಹೆಚ್ಚಾದಾಗ ವಾಪಸ್ಸು ಕೊಡುವ ಹಣ.
  11. ಚಿಲ್ಲರೆ ನಾಣ್ಯ; ಕಡಿಮೆ ಬೆಲೆಯ ನಾಣ್ಯಗಳು.
  12. (ಮುಖ್ಯವಾಗಿ ಅಮಾವಾಸ್ಯೆಯ ಗಡಿ ದಾಟಿದ ಬಳಿಕ ಆಗುವ) ಚಂದ್ರನ ಕಳೆಯ ಬದಲಾವಣೆ.
  13. (ಸಾಮಾನ್ಯವಾಗಿ ಬಹುವಚನದಲ್ಲಿ) ಘಂಟಾಶ್ರೇಣಿಯ ಯಾ ಘಂಟಾತರಂಗವಾದ್ಯದ ವಾದನಭೇದಗಳು.
ಪದಗುಚ್ಛ
  1. change of air ಹವಾ ಬದಲಾವಣೆ.
  2. change of clothes = 1change(7).
  3. change of front ಧೋರಣೆ ಬದಲಾವಣೆ; ತಳೆದ ನಿಲುವಿನಲ್ಲಿ ಯಾ ಧೋರಣೆಯಲ್ಲಿ ಮಾಡಿಕೊಂಡ ವ್ಯತ್ಯಾಸ.
  4. change of life = 2change(5).
  5. change of pace ಚಟುವಟಿಕೆ, ಕ್ರಿಯೆ, ಆಸಕ್ತಿ ಮೊದಲಾದವುಗಳ ರೂಢಿಯ ಕ್ರಮದಲ್ಲಿ ಮಾಡಿಕೊಳ್ಳುವ ತಾತ್ಕಾಲಿಕ ಬದಲಾವಣೆ ಯಾ ವ್ಯತ್ಯಾಸ: reading a detective novel has been a change of pace for me ಪತ್ತೇದಾರಿ ಕಾದಂಬರಿಯನ್ನು ಓದುವುದು ನನ್ನ ದಿನಚರಿಯಲ್ಲಿಯ ತಾತ್ಕಾಲಿಕ ಬದಲಾವಣೆ.
  6. on Change ವಿನಿಮಯ ಮಾರುಕಟ್ಟೆಯಲ್ಲಿ ತೊಡಗಿ, ನಿರತನಾಗಿ.
  7. give change ಗಲ್ಲಾ ಪೆಟ್ಟಿಗೆಯಿಂದ ನಾಣ್ಯ ತೆಗೆದು ಗಿರಾಕಿಗೆ ಕೊಡಬೇಕಾದ ಚಿಲ್ಲರೆ ಕೊಡು.
  8. make change (ಅಮೆರಿಕನ್‍ ಪ್ರಯೋಗ) = ಪದಗುಚ್ಛ \((7)\).
ನುಡಿಗಟ್ಟು
  1. get no change out of
    1. (ಅಶಿಷ್ಟ) (ಕೋರಿದ ಸುದ್ದಿ, ತಿಳಿವಳಿಕೆ, ಮಾಹಿತಿ ಮೊದಲಾದವನ್ನು) ಒಬ್ಬನಿಂದ ದೊರೆಯದೆ, ಪಡೆಯದೆ, ಗಿಟ್ಟಿಸದೆ–ಹೋಗು.
    2. (ವ್ಯಾಪಾರದಲ್ಲಿ) ಎದುರಾಳಿಯಿಂದ ಲಾಭ ಗಿಟ್ಟಿಸುವ ಅವಕಾಶ ಪಡೆಯದೆ, ದೊರೆಯದೆ–ಹೋಗು.
    3. (ವಾದದಲ್ಲಿ ಪ್ರತಿವಾದಿಯನ್ನು) ಮೀರಿಸುವ, ಸೋಲಿಸುವ ಅವಕಾಶ ಸಿಗದೆ ಹೋಗು.
  2. ring the changes (on)
    1. ನಾದಮಾಲಿಕೆ ಬಾರಿಸು; ಘಂಟಾತರಂಗ ವಾದ್ಯವನ್ನು ವಾದನ ಮಾಡುವುದರಲ್ಲಿ ಕ್ರಮಚಯವನ್ನು ಮಾಡುವುದರ ಮೂಲಕ ನಾದಭೇದಗಳನ್ನು ಯಾ ಮೇಳಭೇದಗಳನ್ನು–ಉಂಟು ಮಾಡು, ಸೃಷ್ಟಿಸು.
    2. (ಯಾವುದನ್ನೇ ಹೇಳುವಲ್ಲಿ ಯಾ ಮಾಡುವಲ್ಲಿ) ಸಾಧ್ಯವಾಗುವ ವೈವಿಧ್ಯಗಳನ್ನೆಲ್ಲ ಬಳಸು.
  3. take one’s change out of (ಶತ್ರುವಿನ ಮೇಲೆ) ಸೇಡು ತೀರಿಸಿಕೊ; ಹಗೆ ಸಾಧಿಸಿಕೊ.
  4. take the change out of = ನುಡಿಗಟ್ಟು \((3)\).