See also 2out  3out  4out  5out  6out
1out ಔಟ್‍
ಕ್ರಿಯಾವಿಶೇಷಣ
  1. ಹೊರಗೆ; ಹೊರಗಡೆ; ಆಚೆ; ಹೊರಕ್ಕೆ; ಹೊರಗಡೆಗೆ; ಆಚೆಗೆ: he is out ಅವನು (ಮನೆಯಿಂದ) ಹೊರಗೆ ಹೋಗಿದ್ದಾನೆ. keep him out ಅವನನ್ನು ಹೊರಗಿಡು. turn him out ಅವನನ್ನು ಹೊರಕ್ಕೆ ಅಟ್ಟು. get out of here ಇಲ್ಲಿಂದ ಹೊರಕ್ಕೆ ಹೋಗು. my son is out in Canada ನನ್ನ ಮಗ ಕೆನಡಾದಲ್ಲಿ ಇದ್ದಾನೆ.
  2. ( ಪದಗುಚ್ಛದ ಕ್ರಿಯಾಪದಗಳನ್ನು ರೂಪಿಸುವಾಗ)
    1. ಒಂದು ಸ್ಥಳ ಮೊದಲಾದವುಗಳಿಂದ ಚೆದರಿ ಹೋಗುವುದನ್ನು ಸೂಚಿಸುವಲ್ಲಿ: hire out ಬಾಡಿಗೆಗೆ ತೆಗೆದುಕೊಂಡು ಹೋಗು. board out ಬೇರೆ ಕಡೆ ಹೋಗಿ ಊಟ ಮಾಡು.
    2. ಸಾರ್ವಜನಿಕರ ಗಮನ ಮೊದಲಾದವುಗಳಿಗೆ ಬರುವುದು ಯಾ ತರುವುದನ್ನು ಸೂಚಿಸಲು: call out (i) ಕೂಗು; ಘೋಷಿಸು. (ii) ಕೂಗಿ ಕರೆ. (iii) ಲಕ್ಷ್ಯವಿಡಬೇಕಾದ ಆವಶ್ಯಕತೆಯನ್ನು ಸೂಚಿಸಲು: watch out ಗಮನಿಸು. look out ನೋಡು.
  3. ಹೊರಗೆ; ಹೊರಗಡೆ; ಮನೆ, ಕಚೇರಿ, ಮೊದಲಾದ ಕಡೆಗಳಲ್ಲಿ ಇಲ್ಲದೆ: went out for a walk ಹೊರಗಡೆ ನಡಗೆಗೆ ಹೋದರು. she has her Sundays out ಅವಳು ಭಾನುವಾರಗಳನ್ನು ಮನೆಯಿಂದ ಹೊರಗೆ ಕಳೆಯುತ್ತಾಳೆ.
  4. ಪೂರ್ಣವಾಗಿ; ಪೂರ್ತಿ(ಯಾಗಿ); ಮುಗಿಯುವವರೆಗೆ; ಕೊನೆತನಕ: she had her cry out ಆಕೆ (ತನ್ನ ದುಃಖವೆಲ್ಲ ಮುಗಿಯುವವರೆಗೂ) ಪೂರ್ತಿಯಾಗಿ ಅತ್ತು ಬಿಟ್ಟಳು, ಅಳುವಷ್ಟು ಅತ್ತು ಮುಗಿಸಿದಳು. tried out (ಶಕ್ತಿಯೆಲ್ಲ ಮುಗಿದು ಹೋಗುವಷ್ಟು) ಪೂರ್ತಿ ಆಯಾಸವಾಗಿರು; ಬಸವಳಿದಿರು; ಸುಸ್ತಾಗಿ ಹೋಗಿರು. die out ಪೂರ್ತಿ ಅಳಿದು ಹೋಗು. fight it out ಕೊನೆ ತನಕ ಹೋರಾಡು. typed it out ಪೂರ್ತಿ ಬೆರಳಚ್ಚು ಮಾಡಿದ.
  5. (ಬೆಂಕಿ, ಮೋಂಬತ್ತಿ, ಮೊದಲಾದವುಗಳ ವಿಷಯದಲ್ಲಿ) ಆರಿ; ನಂದಿ; ಉರಿಯದೆ.
  6. (ಲೆಕ್ಕಾಚಾರ, ಅಂದಾಜು, ನಿರೀಕ್ಷಣೆ) ತಪ್ಟಾಗಿ: I was out in my calculations ನನ್ನ ಲೆಕ್ಕಾಚಾರವೆಲ್ಲ, ನಿರೀಕ್ಷಣೆಯೆಲ್ಲ ತಪ್ಪಾಗಿ ಹೋಯಿತು.
  7. (ಆಡುಮಾತು) ಪ್ರಜ್ಞೆಯಿಲ್ಲದೆ; ಮೂರ್ಛೆ ಹೋಗಿ; ಜ್ಞಾನ ತಪ್ಪಿ: she was out for five minutes ಅವಳು ಐದು ನಿಮಿಷ ಮೂರ್ಛೆ ಹೋಗಿದ್ದಳು.
    1. (ಹಲ್ಲಿನ ವಿಷಯದಲ್ಲಿ) ಕಿತ್ತು; ತೆಗೆದು ಹಾಕಿ.
    2. (ಕೀಲು, ಮೂಳೆ, ಮೊದಲಾದವುಗಳ ವಿಷಯದಲ್ಲಿ) ಕೀಲು ತಪ್ಪಿ; ಸ್ಥಾನ ಪಲ್ಲಟವಾಗಿ: his arm is out ಅವನ ತೋಳು ಕೀಲು ತಪ್ಪಿ ಹೋಗಿದೆ. put his shoulder out ಭುಜ ಸ್ಥಾನಪಲ್ಲಟವಾಯಿತು.
  8. (ಒಂದು ಪಕ್ಷ, ರಾಜಕಾರಣಿ, ಮೊದಲಾದವರ ವಿಷಯದಲ್ಲಿ) ಪದವಿ, ಅಧಿಕಾರ – ಕಳೆದುಕೊಂಡು: the Tories are out ಟೋರಿಗಳು ಅಧಿಕಾರ ಕಳೆದುಕೊಂಡಿದ್ದಾರೆ.
  9. (ಜೂರಿ ಯಾ ನ್ಯಾಯದರ್ಶಿಗಳ ವಿಷಯದಲ್ಲಿ) ತಮ್ಮ ತೀರ್ಪನ್ನು ಗೋಪ್ಯವಾಗಿ ಪರಿಶೀಲಿಸುತ್ತ.
  10. (ಕೆಲಸಗಾರರ ವಿಷಯದಲ್ಲಿ) ಕೆಲಸ ಬಿಟ್ಟು; ಚಳುವಳಿ ಮಾಡುತ್ತಾ; ಮುಷ್ಕರ ಹೂಡಿ; ಹರತಾಳದಲ್ಲಿ: miners are out ಗಣಿಗಾರರು ಮುಷ್ಕರ ಹೂಡಿದ್ಡಾರೆ.
  11. (ಗುಟ್ಟಿನ ವಿಷಯದಲ್ಲಿ) ಹೊರಕ್ಕೆ; ಬಯಲಿಗೆ; ಬಹಿರಂಗಕ್ಕೆ; ಬೆಳಕಿಗೆ: the secret is out ಗುಟ್ಟು ಬಯಲಿಗೆ ಬಂದಿದೆ.
  12. (ಹೂವಿನ ವಿಷಯದಲ್ಲಿ) ಅರಳಿ; ಬಿರಿದು; ವಿಕಸಿಸಿ: the rose is out ಗುಲಾಬಿ ಅರಳಿದೆ.
  13. (ಪುಸ್ತಕದ ವಿಷಯದಲ್ಲಿ) ಪ್ರಕಟನಗೊಂಡು; ಪ್ರಕಾಶಕ್ಕೆ, ಬೆಳಕಿಗೆ–ಬಂದು; ಹೊರ ಬಂದು: the book is out ಪುಸ್ತಕ ಹೊರ ಬಿದ್ದಿದೆ.
  14. (ನಕ್ಷತ್ರದ ವಿಷಯದಲ್ಲಿ) (ಕತ್ತಲೆಯಾದ ನಂತರ) ಕಾಣಿಸುತ್ತ; ಗೋಚರವಾಗಿ.
  15. ಬಳಕೆ, ರೂಢಿ, ವಾಡಿಕೆ, ಹ್ಯಾಷನ್‍–ತಪ್ಪಿ: crinolines are out ಕ್ರಿನೊಲಿನ್‍ ಬಟ್ಟೆಗಳು ಹ್ಯಾಷನ್‍ ತಪ್ಪಿಹೋಗಿವೆ.
  16. (ಬ್ಯಾಟುಗಾರ ಮೊದಲಾದವರ ವಿಷಯದಲ್ಲಿ)
    1. (ಕ್ಯಾಚ್‍ ಕೊಟ್ಟು ಸ್ಟಂಪ್‍ ಆಗಿ, ಮೊದಲಾದ ಕಾರಣದಿಂದ) ಹೊರಕ್ಕೆ; ವಿಕೆಟ್‍ ಕಳೆದುಕೊಂಡು; ಔಟಾಗಿ: the batsman is out ಬ್ಯಾಟುಗಾರನು ಔಟಾಗಿದ್ದಾನೆ, ವಿಕೆಟನ್ನು ಕಳೆದುಕೊಂಡಿದ್ದಾನೆ. all out ಎಲ್ಲರೂ, ಒಂದು ಕಡೆಯ ಬ್ಯಾಟುಗಾರರೆಲ್ಲರೂ, ಔಟ್‍ ಆಗಿದ್ದಾರೆ.
    2. ಔಟ್‍; ಬ್ಯಾಟುಗಾರನು ಔಟ್‍ ಆದನೆಂದು ಅಂಪೈರ್‍ ಕೊಡುವ ತೀರ್ಪು. not out ಔಟಿಲ್ಲ; ಔಟಾಗಿಲ್ಲ; ಬ್ಯಾಟುಗಾರನು ಔಟ್‍ ಆಗಿಲ್ಲವೆಂದು ಅಂಪೈರ್‍ ಕೊಡುವ ತೀರ್ಪು.
  17. ಪರಿಗಣನೆಗೆ ಯೋಗ್ಯವಾಗಿರದೆ; ತಿರಸ್ಕರಿಸಲ್ಪಟ್ಟು: that idea is out ಆ ಭಾವನೆ ತಿರಸ್ಕರಿಸಲ್ಪಟ್ಟಿದೆ.
  18. (ಆಡುಮಾತು) (ತಮರೂಪದ ತರುವಾಯ ಪ್ರಯೋಗ) ಇದೆಯೆಂದು ಗೊತ್ತಾಗಿ: the best game out ಅತ್ಯುತ್ತಮ ಆಟವಾಗಿದೆಯೆಂದು ಗೊತ್ತಾಗಿ.
  19. (ಕಲೆ, ಗುರುತು, ಮೊದಲಾದವುಗಳ ವಿಷಯದಲ್ಲಿ) ಕಾಣದಂತಾಗಿಸಿ; ತೆಗೆದು ಹಾಕಿ: paint out the sign ಬಣ್ಣ ಬಳಿದು ಗುರುತನ್ನು ತೆಗೆದುಹಾಕು.
  20. (ಕಾಲದ ವಿಷಯದಲ್ಲಿ) ಕೆಲಸ ಮಾಡದೆ ಕಳೆದು; ವಿರಾಮದಲ್ಲಿ ಕಳೆದು: took five minutes out ಐದು ನಿಮಿಷ ಕೆಲಸ ಮಾಡದೆ ಕಳೆದರು.
  21. (ಗುಳ್ಳೆಗಳು, ತರಚುಗಾಯ, ಮೊದಲಾದವುಗಳ ವಿಷಯದಲ್ಲಿ) ಕಾಣುವಂತೆ; ತೋರುವಂತೆ; ಪ್ರಕಟವಾಗಿ; ಗೋಚರವಾಗಿ.
  22. (ಉಬ್ಬರವಿಳಿತದ ವಿಷಯದಲ್ಲಿ) ಅತ್ಯಂತ ತಳದ ಮಟ್ಟ ತಲುಪಿ.
  23. (ಕುಸ್ತಿಯ ವಿಷಯದಲ್ಲಿ) ನೆಲದ ಮೇಲಿಂದ ಮೇಲೇಳಲಾರದೆ: out for the count ಎಣಿಕೆಯ ಕೊನೆಯವರೆಗೆ ನೆಲದ ಮೇಲೆ ಬಿದ್ದಿದ್ದು.
  24. (ಪ್ರಾಚೀನ ಪ್ರಯೋಗ) (ಶಿಷ್ಟ ಸಮಾಜದ ತರುಣಿಯ ವಿಷಯದಲ್ಲಿ) ಶಿಷ್ಟ ಸಮಾಜಕ್ಕೆ ಪ್ರವೇಶ ಪಡೆದು, ಸೇರಿ: the girl is out ಆ ಹುಡುಗಿ ಶಿಷ್ಟ ಸಮಾಜಕ್ಕೆ ಪ್ರವೇಶ ಪಡೆದಿದ್ದಾಳೆ (ಇದೀಗ ಕುಟುಂಬದಿಂದ ಹೊರ ಬಂದಿದ್ದಾಳೆ).
  25. (ರೇಡಿಯೋ ಸಂಭಾಷಣೆ ಮೊದಲಾದವುಗಳಲ್ಲಿ) ಪ್ರಸಾರ ಮುಗಿಯುತ್ತದೆ: over and out ಕೊನೆಯಾಯಿತು; ಮುಗಿಯಿತು.
  26. ಆಚೆ; ದೂರ; ದೂರಕ್ಕೆ ; ದೂರದಲ್ಲಿ: the ship is anchored out ಹಡಗು (ಬಂದರಿನಿಂದ) ಆಚೆ ಲಂಗರಿನಲ್ಲಿದೆ.
  27. ಹೊರಗೆ; ಬಯಲಿನಲ್ಲಿ; ಮೈದಾನದಲ್ಲಿ: that is the best game out ಮೈದಾನದಲ್ಲಿ ಆಡಲು ಅದು ಅತ್ಯುತ್ತಮ ಆಟ.
  28. (ಕಣ್ಣು, ಕಿವಿ, ಮೊದಲಾದವಕ್ಕೆ) ಗೋಚರವಾಗಿರು; ಗಮನಕ್ಕೆ ಬಂದಿರು: it is out before our eyes ಅದು ನಮ್ಮ ಕಣ್ಣಿಗೆ ಬಿದ್ದಿದೆ, ಗಮನಕ್ಕೆ ಬಂದಿದೆ.
ಪದಗುಚ್ಛ
  1. all out (ಅಶಿಷ್ಟ) ಸರ್ವ ಪ್ರಯತ್ನವನ್ನೂ ಮಾಡು: he is going all out for securing his ambition ತನ್ನ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಅವನು ಬೇಕಾದ್ದನ್ನೆಲ್ಲಾ ಮಾಡಹೊರಟಿದ್ದಾನೆ, ಸರ್ವ ಪ್ರಯತ್ನವನ್ನೂ ಮಾಡುತ್ತಿದ್ದಾನೆ. we must make all out efforts to strengthen the national economy ರಾಷ್ಟ್ರದ ಆರ್ಥಿಕ ಸ್ಥಿತಿಯನ್ನು ಬಲಗೊಳಿಸಲು ನಾವು ಸರ್ವಪ್ರಯತ್ನಗಳನ್ನೂ ಮಾಡಬೇಕು.
  2. will out ಹೊರಕ್ಕೆ ಬರು; ಬಯಲಿಗೆ, ಬೆಳಕಿಗೆ, ಪ್ರಕಾಶಕ್ಕೆ–ಬರು: the murder is out ಆ ಕೊಲೆಯು ಈಗ ಬೆಳಕಿಗೆ ಬಂದಿದೆ.
  3. out for ಹಾತೊರೆಯುತ್ತಿರು; ತವಕ ಪಡುತ್ತಿರು; ಉತ್ಸುಕನಾಗಿರು; ಹೊರಟಿರು; ಯಾವುದನ್ನೇ ಪಡೆಯಲು ಕಟ್ಟಾಸಕ್ತಿ ತೋರು ಯಾ ಪ್ರಯತ್ನ ಪಡು: he is out for publicity ತನ್ನ ಹೆಸರಿನ ಪ್ರಚಾರಕ್ಕಾಗಿ ಅವನು ಹೊರಟಿದ್ದಾನೆ.
  4. out to do (something) (ಯಾವುದೋ ಕಾರ್ಯಮಾಡಲು, ಗುರಿ ಸಾಧಿಸಲು) ತೀವ್ರವಾಗಿ–ಶ್ರಮಿಸುತ್ತಿರು, ಉದ್ಯುಕ್ತನಾಗಿರು, ಹೊರಟಿರು: he is out to gain popularity ಜನಪ್ರಿಯತೆಯನ್ನು ಗಳಿಸಲು ಅವನು ಹೊರಟಿದ್ದಾನೆ.
  5. out with a person (ಒಬ್ಬನೊಡನೆ) ಸ್ನೇಹ ತಪ್ಪಿ ಹೋಗಿರು: I was out with him ನನಗೂ ಅವನಿಗೂ ಸ್ನೇಹ ತಪ್ಪಿಹೋಗಿತ್ತು.
  6. out with him! ( ಭಾವಸೂಚಕ ಅವ್ಯಯ) ಅಟ್ಟು ಆಚೆಗೆ ಅವನನ್ನು!
  7. out and away ಹೋಲಿಕೆಯೇ ಇಲ್ಲದಷ್ಟು; ಅನುಪಮವಾಗಿ; ಅಸದಳವಾಗಿ: he is out and away the best competitor ಅವನು ಅನುಪಮ ಶ್ರೇಷ್ಠ ಸ್ಪರ್ಧಿ; ಅವನು ಹೋಲಿಕೆಯೇ ಇಲ್ಲದಷ್ಟು, ಎಣಿಕೆಯಿಲ್ಲದಷ್ಟು ಉತ್ತಮ ಸ್ಪರ್ಧಾಳು.
  8. out and about (ರೋಗಿಯಾಗಿದ್ದವನ ವಿಷಯದಲ್ಲಿ) ಹಾಸಿಗೆ ಬಿಟ್ಟು (ಮನೆಯಿಂದ) ಹೊರಗೆ ಮಾಮೂಲಾಗಿ ಒಡಾಡುವಂತಾಗಿರು: the patient is now out and about ರೋಗಿಯು ಈಗ ಹಾಸಿಗೆ ಬಿಟ್ಟಿದ್ದು ಮಾಮೂಲಾಗಿ ಓಡಾಡುತ್ತಿದ್ದಾನೆ.
  9. out and out
    1. ಸಂಪೂರ್ಣ; ಪರಮ; ಮಿತಿಮೀರಿದ; ತೀರ; ಆದ್ಯಂತ: he is an out and out scoundrel ಅವನೊಬ್ಬ ಪರಮ ನೀಚ.
    2. ಸಂಪೂರ್ಣವಾಗಿ; ಪಕ್ಕಾ; ಅಪ್ಪಟ; ಶುದ್ಧ; ತೀರಾ; ನಖಶಿಖಾಂತ; ಆದ್ಯಂತವಾಗಿ: he is a scoundrel out and out ಅವನು ಪಕ್ಕಾ ಬದ್ಮಾಷ್‍; ಅವನು ಆದ್ಯಂತವಾಗಿ, ತೀರಾ ನೀಚ.
  10. out at $^1$elbows.
  11. out to lunch (ಆಡುಮಾತು) ಹುಚ್ಚುಹಿಡಿದ; ತಲೆಕೆಟ್ಟ.
See also 1out  3out  4out  5out  6out
2out ಔಟ್‍
ಉಪಸರ್ಗ
  1. ಒಳಗಿನಿಂದ; ಒಳಗಿಂದ ಹೊರಕ್ಕೆ: come out the house ಮನೆಯೊಳಗಿನಿಂದ (ಹೊರಕ್ಕೆ) ಬಾ. looked out the window ಕಿಟಕಿಯಿಂದ ಹೊರಗೆ ನೋಡಿದ.
  2. (ಪ್ರಾಚೀನ ಪ್ರಯೋಗ) ಹೊರಗಡೆ; ಹೊರಗೆ; ಆಚೆ; ಆಚೆಕಡೆ: the incident occurred out of England ಆ ಘಟನೆ ಇಂಗ್ಲೆಂಡಿನಿಂದ ಹೊರಗೆ ನಡೆಯಿತು.
ಪದಗುಚ್ಛ
  1. out of
    1. ಒಳಗಿನಿಂದ; ಒಳಗಿಂದ; ಹೊರಕ್ಕೆ: come out of the house ಮನೆಯೊಳಗಿಂದ (ಹೊರಕ್ಕೆ) ಬಾ.
    2. ಹೊರಗಡೆ; ಹೊರಗೆ; ಆಚೆ: I was never out of India ನಾನು ಎಂದೂ ಭಾರತದಿಂದ ಆಚೆ ಹೋಗಿಲ್ಲ.
    3. -ರ ಯಾ -ಗಳ ನಡುವೆ, ಪೈಕಿ: you must choose one out of these ಇವುಗಳ ಪೈಕಿ ನೀನು ಒಂದನ್ನು ಆರಿಸಬೇಕು. nine out of ten ಹತ್ತರಲ್ಲಿ ಒಂಬತ್ತು; ಹತ್ತರ ಪೈಕಿ ಒಂಬತ್ತು.
    4. ವ್ಯಾಪ್ತಿಯಿಂದಾಚೆ; ಹಿಡಿತಕ್ಕೆ ಸಿಗದೆ, ಮೀರಿ; ಅಳವಿನಿಂದಾಚೆ; ಎಟುಕದೆ: he was soon out of sight ಅವನು ಬೇಗ ದೃಷ್ಟಿಪಥದಿಂದಾಚೆ ಹೊರಟುಹೋದ. out of reach ಎಟುಕಿಗೆ ಮೀರಿ; ಆಳವಿನಿಂದಾಚೆಗೆ.
    5. ಇಲ್ಲದಂತಾಗಿ ಯಾ ಇಲ್ಲದಂತಾಗುವಂತೆ: he is out of breath ಅವನು ಉಸಿರುಕಟ್ಟಿದಂತಾಗಿದ್ದಾನೆ. was swindled out of his money ಮೋಸಕ್ಕೆ ಒಳಗಾಗಿ ಹಣ ಇಲ್ಲದಂತಾದ; ಮೋಸಕ್ಕೆ ಸಿಕ್ಕಿ ಹಣ ಕಳೆದುಕೊಂಡ.
    6. -ಇಂದ; ಕೈಯಿಂದ: got some money out of him ಅವನಿಂದ, ಅವನ ಕೈಯಿಂದ ಸ್ವಲ್ಪ ಹಣ ಕಿತ್ತೆ.
    7. -ಇಂದ; ಕಾರಣದಿಂದ; ದೆಸೆಯಿಂದ: out of curiosity ಕುತೂಹಲದಿಂದ; ಕುತೂಹಲದ ಕಾರಣ.
    8. ದ್ರವ್ಯ ಯಾ ಸಾಮಗ್ರಿಯಿಂದ; ಯಾವುದೇ ಮೂಲದಿಂದ; ಮೂಲಕ: he made a fortune out of agarbathis ಅವನು ಗಂಧದಕಡ್ಡಿಗಳಿಂದ ರಾಶಿ ಹಣ ಗಳಿಸಿದ. what did you make it out of? ಅದನ್ನು ಯಾವುದರಿಂದ ಮಾಡಿದೆ?
    9. (ಊರು, ಬಂದರು, ಮೊದಲಾದವುಗಳಿಂದ) -ರಷ್ಟು ದೂರ ಆಚೆ: it is seven miles out of Mysore ಅದು ಮೈಸೂರಿನಿಂದ ಏಳು ಮೈಲಿ (ದೂರ) ಆಚೆ ಇದೆ.
    10. (ಕುದುರೆಪಂದ್ಯ) (ಪ್ರಾಣಿಯ, ಮುಖ್ಯವಾಗಿ ಕುದುರೆಯ ವಿಷಯದಲ್ಲಿ) (ಹೆಣ್ಣು ಪ್ರಾಣಿ) -ಗೆ ಹುಟ್ಟಿದ, ಜನಿಸಿದ.
  2. out of it
    1. ಸೇರಿರದೆ; ತ್ಯಕ್ತವಾಗಿ; ಹೊರಗೆ: out of wedlock ವಿವಾಹಬಂಧನವನ್ನು ತ್ಯಜಿಸಿದ; ದಾಂಪತ್ಯದ ಕಟ್ಟಿನಿಂದ ಹೊರಬಂದ.
    2. ಸೇರಿಸಲ್ಪಡದೆ; ತೊರೆಯಲ್ಪಟ್ಟು.
    3. ದಿಕ್ಕೇ ತೋರದೆ.
    4. ತಪ್ಪು ತಿಳುವಳಿಕೆ, ಸುದ್ದಿ–ಪಡೆದು; ತಪ್ಪುತಪ್ಪಾಗಿ ತಿಳಿದುಕೊಂಡು.
    5. ಹೊರಗಾಗಿ; ತ್ಯಜಿಸಿ ಹೊರಟು.
  3. out of doubt ನಿಸ್ಸಂದೇಹವಾಗಿ; ನಿಸ್ಸಂಶಯವಾಗಿ.
  4. out of number ಅಸಂಖ್ಯಾತ; ಎಣಿಸಲಾರದಷ್ಟು; ಲೆಕ್ಕವಿಲ್ಲದಷ್ಟು; ಎಣಿಕೆಯಿಲ್ಲದಷ್ಟು; ಅಸಂಖ್ಯೆ: times out of number ಎಣಿಕೆಯಿಲ್ಲದಷ್ಟು ಸಲ.
  5. out of drawing ತಪ್ಪುತಪ್ಪಾಗಿ –ರೇಖಿಸಿ, ರೇಖಿಸಿದ.
See also 1out  2out  4out  5out  6out
3out ಔಟ್‍
ನಾಮವಾಚಕ
  1. (ಆಡುಮಾತು) (ಸ್ಥಳ, ಶಿಕ್ಷೆ, ಪ್ರತೀಕಾರ, ಮೊದಲಾದವುಗಳಿಂದ) ತಪ್ಪಿಸಿಕೊಳ್ಳುವ–ಮಾರ್ಗ, ವಿಧಾನ.
  2. ನೆಪ; ನೆವ; ಸಬೂಬು.
  3. (ಬಹುವಚನದಲ್ಲಿ) ಅಧಿಕಾರ ಕಳೆದುಕೊಂಡ (ರಾಜಕೀಯ) ಪಕ್ಷ ವರ್ಗ, ಜನ,.
  4. (ಟೆನಿಸ್‍ ಮೊದಲಾದ ಆಟಗಳಲ್ಲಿ) ಮೈದಾನದ ಎಲ್ಲೆಗಳಿಂದ ಹೊರಕ್ಕೆ ಯಾ ಆಚೆಗೆ ಹೊಡೆದ ಚೆಂಡು ಹೊಡೆತ.
ಪದಗುಚ್ಛ
  1. at outs (with)
    1. ಭಿನ್ನಾಭಿಪ್ರಾಯದಿಂದ ಕೂಡಿ; ಒಮ್ಮತವಿಲ್ಲದೆ.
    2. ವಿರೋಧವಾಗಿ; ವೈರದಿಂದ.
  2. the outs = 3out\((3)\).
See also 1out  2out  3out  5out  6out
4out ಔಟ್‍
ಗುಣವಾಚಕ
  1. (ಪಂದ್ಯದ ವಿಷಯದಲ್ಲಿ) ಆಡಿ ಮುಗಿಸಿದ.
  2. (ದ್ವೀಪದ ವಿಷಯದಲ್ಲಿ) ಭೂಭಾಗದಿಂದ–ದೂರದ, ದೂರವಿರುವ.
  3. ಪರರ; ಹೆರವರ; ಬೇರೆಯ(ವರ): an out match (ಸ್ವಂತ ಮೈದಾನದಲ್ಲಲ್ಲದೆ) ಬೇರೆಯವರ ಮೈದಾನದಲ್ಲಿ ಆಡುವ ಪಂದ್ಯ.
See also 1out  2out  3out  4out  6out
5out ಔಟ್‍
ಭಾವಸೂಚಕ ಅವ್ಯಯ

(ಜುಗುಪ್ಸೆ, ಹೇಸಿಕೆ, ಮೊದಲಾದವನ್ನು ಸೂಚಿಸುತ್ತ ಬಳಸುವ) ತೊಲಗಾಚೆ! ನಡೆ ಆಚೆ!: out, you scoundrel! ನೀಚ, ತೊಲಗಾಚೆ!

ಪದಗುಚ್ಛ

out upon you! = 5out.

See also 1out  2out  3out  4out  5out
6out ಔಟ್‍
ಸಕರ್ಮಕ ಕ್ರಿಯಾಪದ
  1. ಆರಿಸು; ನಂದಿಸು.
  2. (ಆಡುಮಾತು) (ಬಲವಂತವಾಗಿ, ಬಲಾತ್ಕಾರವಾಗಿ) ಹೊರಕ್ಕೆ ಹಾಕು; ಹೊರದೂಡು.
  3. (ಮುಷ್ಟಿಕಾಳಗ) ಹೊಡೆದುರುಳಿಸಿಬಿಡು.
ಅಕರ್ಮಕ ಕ್ರಿಯಾಪದ
  1. ಹೊರಬರು; ಹೊರಬೀಳು; ಹೊರಕ್ಕೆ ಬಾ: murder will out ಖೂನಿ ಹೊರ ಬೀಳುತ್ತದೆ, ಬಯಲಾಗುತ್ತದೆ.
  2. ಹೊರ ಹೊರಡು; ನಿರ್ಗಮಿಸು.
ಪದಗುಚ್ಛ
  1. out with (ಬೇಡವಾದ ವ್ಯಕ್ತಿಯನ್ನು) ಹೊರದೂಡು;ಹೊರದಬ್ಬು; ಹೊರಹಾಕು.
  2. out with it ನೀನು ಯೋಚಿಸುತ್ತಿರುವುದನ್ನು ಹೇಳು, ಹೇಳಿಬಿಡು, ಪ್ರಕಟಿಸು.