See also 2elbow
1elbow ಎಲ್ಬೋ
ನಾಮವಾಚಕ
  1. ಮೊಣಕೈ; ಮೊಳಕೈ.
  2. (ಪ್ರಾಣಿಗಳ) ಮುಮ್ಮೊಣಕಾಲು; ಮುಂಗಾಲುಗಳ ಮೊಣಕಾಲು ಭಾಗ.
  3. ಮೊಣಕೈ:
    1. (ನದಿ, ರಸ್ತೆ, ಮೊದಲಾದವುಗಳ) ಮೊಣಕೈ ಆಕಾರದ ತಿರುವು ಯಾ ಮೂಲೆ.
    2. ಲಂಬಕೋನದಲ್ಲಿ ತಿರುಗಿಸಿರುವ ಕೊಳವೆ.
    3. ಉಡುಪಿನ ಮೊಣಕೈ ಭಾಗ.
ನುಡಿಗಟ್ಟು
  1. at one’s elbow ಪಕ್ಕದಲ್ಲೇ; ಬಳಿಯಲ್ಲೇ.
  2. bend one’s elbow ಪಟ್ಟಾಗಿ ಕುಡಿ; ವಿಪರೀತ ಕುಡಿ.
  3. lift one’s elbow = ನುಡಿಗಟ್ಟು \((2)\).
  4. out at elbows
    1. (ಅಂಗಿಯ ವಿಷಯದಲ್ಲಿ) ತೋಳು ಹರಿದ, ಹರುಕಲಾದ.
    2. (ಮನುಷ್ಯನ ವಿಷಯದಲ್ಲಿ) ದರಿದ್ರ; ಬಡವ; ನಿರ್ಗತಿಕ.
  5. up to the elbows (ಒಂದು ಕೆಲಸದಲ್ಲಿ) ಪೂರ್ತಿ ಮುಳುಗಿ; ಮಗ್ನನಾಗಿ.