See also 2loose  3loose
1loose ಲೂಸ್‍
ಗುಣವಾಚಕ
    1. (ಬಂಧನದಿಂದ ಯಾ ನಿರ್ಬಂಧದಿಂದ) ಬಿಡುಗಡೆ ಹೊಂದಿದ; ಬಂಧಮುಕ್ತ; ಕಟ್ಟುಹರಿದ.
    2. (ಪ್ರಾಣಿಯ ವಿಷಯದಲ್ಲಿ) ಕಟ್ಟು ಬಿಚ್ಚಿದ; ಕಟ್ಟಿ ಹಾಕಿರದ ಯಾ ಕೂಡಿ ಹಾಕಿರದ: a horse loose of his tether ಹಗ್ಗ ಬಿಚ್ಚಿದ ಕುದುರೆ.
  1. (ತನ್ನ ಸ್ಥಾನದಿಂದ) ಕಳಚಿದ ಯಾ ಕಳಚಬಲ್ಲ; ಬಿಡಿಸಿದ ಯಾ ಬಿಡಿಸಬಹುದಾದ: come loose ಕಳಚಿಕೊಂಡು ಬರು.
  2. (ರಸಾಯನವಿಜ್ಞಾನ) ಮುಕ್ತ; ಅಸಂಯುಕ್ತ; ಸಂಯುಕ್ತ ಸ್ಥಿತಿಯಲ್ಲಿಲ್ಲದ.
  3. ಒಂದು ಭಾಗ (ಕಟ್ಟಿಲ್ಲದೆ) ಜೋಲಾಡುತ್ತಿರುವ; ಸ್ವಲ್ಪ ಭಾಗ ಇಳಿಬಿದ್ದಿರುವ: loose end (ಸ್ವಲ್ಪ) ಇಳಿಬಿಟ್ಟಿರುವ ಯಾ ಇಳಿಬಿದ್ದಿರುವ ತುದಿ.
  4. ಬಿಡಿಬಿಡಿಯಾದ; ಒಟ್ಟಾಗಿ ಸೇರಿಸಿ – ಕಟ್ಟಿರದ, ಹಿಡಿದಿಡದ, ಜೋಡಿಸಿರದ, ಬಿಗಿದಿರದ, ಗಂಟು ಹಾಕಿರದ: loose papers ಬಿಡಿ ಹಾಳೆಗಳು. had her hair loose ಕೂದಲನ್ನು ಕಟ್ಟಿರಲಿಲ್ಲ, ಜಡೆ ಹಾಕಿರಲಿಲ್ಲ.
  5. ಸಡಿಲವಾದ; ಕದಲಬಹುದಾದ; ಅಲ್ಲಾಡಬಹುದಾದ; ಭದ್ರವಾಗಿ – ಬಿಗಿದಿಲ್ಲದ, ಕಟ್ಟಿಲ್ಲದ.
  6. ಸಡಿಲ; ಡೀಲ; ಅಳ್ಳಕವಾದ; ಬಿಗಿಯಿಲ್ಲದ; ಬಿಗುವಿಲ್ಲದ; ಭದ್ರವಿಲ್ಲದ.
  7. ಒತ್ತಾಗಿಲ್ಲದ; ಸಾಂದ್ರವಿಲ್ಲದ; ಒತ್ತುಗೂಡಿರದ; ವಿರಳವಾದ; ಸಡಿಲವಾದ; ಜಾಳಾದ; ದಟ್ಟವಾಗಿರದ: loose soil ಸಡಿಲ ಮಣ್ಣು; ಜಾಳು ನೆಲ, ಭೂಮಿ.
  8. (ಹೇಳಿಕೆ, ಭಾವನೆ, ಮೊದಲಾದವುಗಳ ವಿಷಯದಲ್ಲಿ) ಕರಾರುವಾಕ್ಕಲ್ಲದ; ಸಡಿಲವಾದ; ನಿಷ್ಕೃಷ್ಟವಲ್ಲದ; ಖಚಿತವಲ್ಲದ; ನಿಖರವಲ್ಲದ; ಅಸ್ಪಷ್ಟ; ಯಥಾವತ್ತಾಗಿರದ: a loose interpretation of the law ಕಾನೂನಿನ ಸಡಿಲ ವಿವರಣೆ.
  9. (ಭಾಷಾಂತರ) ಯಥಾ ಮೂಲವಲ್ಲದ; ಯಥಾವತ್ತಾಗಿಲ್ಲದ; ಮೂಲದಂತಿಲ್ಲದ; ಮೂಲಕ್ಕೆ ಸರಿಯಾಗಿರದ.
  10. (ಶೈಲಿ) ವ್ಯಾಕರಣಶುದ್ಧವಲ್ಲದ; ವ್ಯಾಕರಣಸಮ್ಮತವಲ್ಲದ; ವ್ಯಾಕರಣಬದ್ಧವಾಗಿರದ.
  11. (ಕರ್ತನ ವಿಷಯದಲ್ಲಿ) ಬೇಕಾಬಿಟ್ಟಿ ಮಾಡುವ; ಕ್ರಮ, ಶಿಸ್ತು ಯಾ ವ್ಯವಸ್ಥೆಯಿಲ್ಲದೆ ಕೆಲಸ ಮಾಡುವ; ಹರುಕು ಮುರುಕಾಗಿ ಕಾರ್ಯ ಮಾಡುವ: loose thinker ಕ್ರಮಬದ್ಧವಾಗಿ ಆಲೋಚಿಸದವ.
  12. ಸಡಿಲ ನೀತಿಯ; ನೀತಿಗೆಟ್ಟ; ವಿಷಯಲಂಪಟನಾದ; ವ್ಯಭಿಚಾರಿಯಾದ.
  13. (ನಾಲಿಗೆಯ ವಿಷಯದಲ್ಲಿ) ಹರಕು; ಹಿಡಿತವಿಲ್ಲದ; ಸಂಯಮರಹಿತ.
  14. (ಉಡುಪಿನ ವಿಷಯದಲ್ಲಿ) ಅಳ್ಳಕ; ಸಡಿಲ; (ಮೈಗೆ ತೀರ) ಬಿಗಿಯಾಗಿ ಅಂಟಿಕೊಳ್ಳದ.
  15. (ಹೊಟ್ಟೆಯ ವಿಷಯದಲ್ಲಿ) ಭೇದಿಯಾಗುವಂತಿರುವ.
  16. (ಆಟದ ಚೆಂಡಿನ ವಿಷಯದಲ್ಲಿ) ಮುಕ್ತವಾದ; ಯಾವ ಆಟಗಾರನ ವಶದಲ್ಲೂ ಇರದ.
  17. (ಆಟ ಮೊದಲಾದವುಗಳ ವಿಷಯದಲ್ಲಿ) ಆಟಗಾರರು ಗುಂಪಾಗಿರದೆ ಹರಡಿಕೊಂಡಿರುವ, ಚೆದುರಿರುವ.
  18. (ಕ್ರಿಕೆಟ್‍)
    1. (ಬೋಲಿಂಗ್‍ ವಿಷಯದಲ್ಲಿ) ಸಡಿಲವಾದ; ಕರಾರುವಾಕ್ಕಾಗಿ ಪುಟವೇಳುವಂತೆ ಮಾಡದ.
    2. (ಕ್ಷೇತ್ರರಕ್ಷಣೆಯ ವಿಷಯದಲ್ಲಿ) ಅಸಡ್ಡೆಯ ಯಾ ಅಸಮರ್ಪಕವಾದ.
  19. (ಸಂಯುಕ್ತ ಪದಗಳಲ್ಲಿ) ಸಡಿಲವಾಗಿರುವ; ಅಳ್ಳಕವಾಗಿರುವ: loose fitting clothes ಅಳ್ಳಕವಾಗಿರುವ ಬಟ್ಟೆಬರೆ.
ಪದಗುಚ್ಛ
  1. loose build (or make) ಸಡಿಲ, ಶಿಥಿಲ, ಜಾಳು – ಮೈಕಟ್ಟು; ಅಂದವಿಲ್ಲದ ಆಕಾರ.
  2. loose play (or game) (ಕಾಲ್ಚೆಂಡಾಟದಲ್ಲಿ) ಬಿಗಿಯಿಲ್ಲದ ಆಟ; ಸಡಿಲ ಆಟ; ಆಟಗಾರರು ಹೊಂದಿಕೊಂಡು ಆಡದ ಆಟ.
  3. with a loose rein
    1. (ಕುದುರೆ ಸವಾರಿಯಲ್ಲಿ) ಲಗಾಮು ಸಡಿಲ ಬಿಟ್ಟು.
    2. (ರೂಪಕವಾಗಿ) ಹತೋಟಿ ಸಡಿಲಿಸಿ; ದಯೆ ತೋರುವ ರೀತಿಯಲ್ಲಿ; ತೀರ ಬಿಗಿ ತೋರಿಸದೆ.
ನುಡಿಗಟ್ಟು
  1. at a loose end ಒಂದು ಗೊತ್ತಾದ – ಕೆಲಸವಿಲ್ಲದೆ, ಉದ್ಯೋಗವಿಲ್ಲದೆ: he spent two years wandering about the country at a loose end ಅವನು ಒಂದು ಗೊತ್ತಾದ ಉದ್ಯೋಗವಿಲ್ಲದೆ ದೇಶ ಸುತ್ತಾಡುತ್ತಾ ಎರಡು ವರ್ಷ ಕಳೆದ.
  2. at loose ends (ಅಮೆರಿಕನ್‍ ಪ್ರಯೋಗ) = ನುಡಿಗಟ್ಟು \((1)\).
  3. cut loose ಸ್ವತಂತ್ರವಾಗಿ ವರ್ತಿಸಲು – ತೊಡಗು, ಪ್ರಾರಂಭಿಸು.
  4. have a screw loose ಮೊಳೆ ಸಡಿಲವಾಗಿರು; ಸ್ವಲ್ಪ ಮೆದುಳು ಕೆಟ್ಟಿರು; ತಲೆ ನೆಟ್ಟಗಿರದಿರು; ಬುದ್ಧಿ ಐಬಾಗಿರು; ಯಾವುದೇ ವಸ್ತು (ಮುಖ್ಯವಾಗಿ ತಲೆ) ಸರಿಯಾಗಿ ಕೆಲಸ ಮಾಡದ ಸ್ಥಿತಿಯಲ್ಲಿರು: the kids thought the old lady must have a screw loose to keep so many cats ಅಷ್ಟು ಬೆಕ್ಕುಗಳನ್ನು ಸಾಕಬೇಕಾದರೆ ಆ ಮುದುಕಿಗೆ ಬುದ್ಧಿ ಸ್ವಲ್ಪ ಸಡಿಲಾಗಿರಬೇಕೆಂದು ಮಕ್ಕಳು ಭಾವಿಸಿದರು.
  5. 1let loose.
  6. loose fish ವಿಷಯ ಲಂಪಟ; ವ್ಯಭಿಚಾರಿ.
  7. loose tongue ಹರಕು ನಾಲಿಗೆ; ಹಿಡಿತವಿಲ್ಲದ ನಾಲಿಗೆ; ಅವಿವೇಕವಾಗಿ, ಅಚಾತುರ್ಯವಾಗಿ ಮಾತನಾಡುವ ನಾಲಿಗೆ.
  8. on the loose
    1. ಯಾವ ಅಂಕೆಯೂ ಇಲ್ಲದಂತೆ; ಲಂಗುಲಗಾಮಿಲ್ಲದೆ; ನಿರಂಕುಶವಾಗಿ; ಸ್ವಚ್ಛಂದವಾಗಿ; ಕುಡಿತ ಮೊದಲಾದವುಗಳ – ಆಮೋದದಲ್ಲಿ, ಖುಷಿಯಲ್ಲಿ.
    2. ಬಂಧನದಿಂದ ತಪ್ಪಿಸಿಕೊಂಡಿರುವ.
    3. ಖುಷಿಯಾಗಿರಲು, ಮೋಜಿನಿಂದಿರಲು – ಪುರುಸೊತ್ತಿರುವ.
  9. play $^3$fast and loose.
See also 1loose  3loose
2loose ಲೂಸ್‍
ಸಕರ್ಮಕ ಕ್ರಿಯಾಪದ
  1. ಬಂಧನ ಬಿಡಿಸು; ಕಟ್ಟು ಕಳಚು; (ನಿರ್ಬಂಧದಿಂದ) ಬಿಡುಗಡೆ ಮಾಡು; ಸ್ವೇಚ್ಛೆಯಾಗಿ ಬಿಡು, ಹರಿಬಿಡು: wine loosed his tongue ಮದ್ಯ ಅವನ ನಾಲಗೆಯನ್ನು ಹರಿ ಬಿಡಿಸಿತು; ಮದ್ಯ ನಾಲಗೆಯ ಬಿಗಿ ಕಳಚಿತು.
  2. (ಗಂಟು, ಕಟ್ಟು, ಬೇಡಿ, ಮುದ್ರೆ, ತಲೆಗೂದಲು – ಇವನ್ನು) ಬಿಚ್ಚು; ಕಳಚು.
  3. (ಹಡಗು) ಲಂಗರು ಎತ್ತು; ಲಂಗರುಗಳನ್ನೂ ಸರಪಣಿಗಳನ್ನೂ ಕಳಚು, ಬಿಚ್ಚು.
  4. (ಬಾಣ) ಬಿಡು; ಎಸೆ.
  5. ಸಡಿಲಿಸು; ಸಡಿಲ ಬಿಡು: loose hold ಹಿಡಿತ ಸಡಿಲಿಸು; ಹತೋಟಿ ಬಿಡು.
  6. ಬಂದೂಕನ್ನು (ಒಂದರತ್ತ) ಹಾರಿಸು.
See also 1loose  2loose
3loose ಲೂಸ್‍
ನಾಮವಾಚಕ
  1. ಮುಕ್ತಾಭಿವ್ಯಕ್ತಿ; ತಡೆಯಿಲ್ಲದೆ – ವ್ಯಕ್ತಪಡಿಸುವುದು, ಹೇಳಿ ಬಿಡುವುದು, ಆಡಿ ಬಿಡುವುದು: give loose (or a loose) to one’s feelings ತನ್ನ ಭಾವಗಳನ್ನು ಯಾವ ತಡೆಯೂ ಇಲ್ಲದೆ ವ್ಯಕ್ತಪಡಿಸು, ಹೊರಗೆಡಹು, ತೋಡಿಕೊ; ಭಾವಗಳಿಗೆ ಮುಕ್ತ ಅಭಿವ್ಯಕ್ತಿ ಕೊಡು.
  2. (ಕಾಲ್ಚೆಂಡಾಟದಲ್ಲಿ) ಬಿಗಿಯಿಲ್ಲದ ಆಟ; ಸಡಿಲ ಆಟ; ಆಟಗಾರನಿಂದ ಆಟಗಾರನಿಗೆ ಚೆಂಡು ತಡೆ ಇಲ್ಲದೆ ಹೋಗುವಂತೆ ಆಡುವ ಆಟ: in the loose ಬಿಗಿಯಿಲ್ಲದ ಆಟವಾಡುತ್ತಾ.
  3. ಸ್ವಚ್ಛಂದ ಸ್ಥಿತಿ; ಲಂಗುಲಗಾಮಿಲ್ಲದ ಸ್ವತಂತ್ರ ಸ್ಥಿತಿ.
  4. ಬಿಡಿ ಹಾಳೆ (ಟಿಪ್ಪಣಿ) ಪುಸ್ತಕ ಮೊದಲಾದವು.
ನುಡಿಗಟ್ಟು

on the loose

  1. ಬಂಧನದಿಂದ ತಪ್ಪಿಸಿಕೊಂಡು; ಜೈಲಿನಿಂದ ಪರಾರಿಯಾಗಿ.
  2. ಮಜಾ ಮಾಡುತ್ತಾ; ಸ್ವಚ್ಛಂದವಾಗಿ, ಖುಷಿಯಾಗಿ ಜೀವಿಸುತ್ತ.