(ಹೇಳಿಕೆ, ಭಾವನೆ, ಮೊದಲಾದವುಗಳ ವಿಷಯದಲ್ಲಿ) ಕರಾರುವಾಕ್ಕಲ್ಲದ; ಸಡಿಲವಾದ; ನಿಷ್ಕೃಷ್ಟವಲ್ಲದ; ಖಚಿತವಲ್ಲದ; ನಿಖರವಲ್ಲದ; ಅಸ್ಪಷ್ಟ; ಯಥಾವತ್ತಾಗಿರದ: a loose interpretation of the law ಕಾನೂನಿನ ಸಡಿಲ ವಿವರಣೆ.
loose play (orgame) (ಕಾಲ್ಚೆಂಡಾಟದಲ್ಲಿ) ಬಿಗಿಯಿಲ್ಲದ ಆಟ; ಸಡಿಲ ಆಟ; ಆಟಗಾರರು ಹೊಂದಿಕೊಂಡು ಆಡದ ಆಟ.
with a loose rein
(ಕುದುರೆ ಸವಾರಿಯಲ್ಲಿ) ಲಗಾಮು ಸಡಿಲ ಬಿಟ್ಟು.
(ರೂಪಕವಾಗಿ) ಹತೋಟಿ ಸಡಿಲಿಸಿ; ದಯೆ ತೋರುವ ರೀತಿಯಲ್ಲಿ; ತೀರ ಬಿಗಿ ತೋರಿಸದೆ.
ನುಡಿಗಟ್ಟು
at a loose end ಒಂದು ಗೊತ್ತಾದ – ಕೆಲಸವಿಲ್ಲದೆ, ಉದ್ಯೋಗವಿಲ್ಲದೆ: he spent two years wandering about the country at a loose end ಅವನು ಒಂದು ಗೊತ್ತಾದ ಉದ್ಯೋಗವಿಲ್ಲದೆ ದೇಶ ಸುತ್ತಾಡುತ್ತಾ ಎರಡು ವರ್ಷ ಕಳೆದ.
cut loose ಸ್ವತಂತ್ರವಾಗಿ ವರ್ತಿಸಲು – ತೊಡಗು, ಪ್ರಾರಂಭಿಸು.
have a screw loose ಮೊಳೆ ಸಡಿಲವಾಗಿರು; ಸ್ವಲ್ಪ ಮೆದುಳು ಕೆಟ್ಟಿರು; ತಲೆ ನೆಟ್ಟಗಿರದಿರು; ಬುದ್ಧಿ ಐಬಾಗಿರು; ಯಾವುದೇ ವಸ್ತು (ಮುಖ್ಯವಾಗಿ ತಲೆ) ಸರಿಯಾಗಿ ಕೆಲಸ ಮಾಡದ ಸ್ಥಿತಿಯಲ್ಲಿರು: the kids thought the old lady must have a screw loose to keep so many cats ಅಷ್ಟು ಬೆಕ್ಕುಗಳನ್ನು ಸಾಕಬೇಕಾದರೆ ಆ ಮುದುಕಿಗೆ ಬುದ್ಧಿ ಸ್ವಲ್ಪ ಸಡಿಲಾಗಿರಬೇಕೆಂದು ಮಕ್ಕಳು ಭಾವಿಸಿದರು.