(ಆಡುಮಾತು) (ಹುದ್ದೆ, ಬಹುಮಾನ, ಮೊದಲಾದವನ್ನು, ಮುಖ್ಯವಾಗಿ ತೀವ್ರ ಸ್ಪರ್ಧೆಯನ್ನು ಎದುರಿಸಿ) ಗೆಲ್ಲು; ಗಳಿಸು; ಸಂಪಾದಿಸು; ಗಿಟ್ಟಿಸು; ಪಡೆ: land a good contract ಒಳ್ಳೆ ಗುತ್ತಿಗೆ ಗಳಿಸು, ಗಿಟ್ಟಿಸು.
(ಜಾಕಿಯು ಕುದುರೆಯನ್ನು) ಮೊದಲನೆಯದಾಗಿ, ಪ್ರಥಮ ಸ್ಥಾನದಲ್ಲಿ ಬರುವಂತೆ – ತರು, ಮಾಡು.
ಅಕರ್ಮಕ ಕ್ರಿಯಾಪದ
(ಹಡಗು ಮೊದಲಾದವು) ದಡಸೇರು; ತೀರ ಮುಟ್ಟು; ಕರೆ ತಲುಪು.
(ವಿಮಾನ, ಹಡಗು, ಮೊದಲಾದವುಗಳಿಂದ) ಇಳಿ; ಕೆಳಗಿಳಿ; ನೆಲಕ್ಕೆ ಇಳಿ: landed at the harbour ರೇವಿನಲ್ಲಿ ಇಳಿಯಿತು.
(ರೂಪಕವಾಗಿ ಸಹ) (ನೆಗೆದ, ಕುಪ್ಪಳಿಸಿದ ತರುವಾಯ) ನೆಲ – ತಾಕು, ಮುಟ್ಟು: catch the ball before it lands ನೆಲ ಮುಟ್ಟುವುದಕ್ಕಿಂತ ಮುಂಚೆ ಚೆಂಡು ಹಿಡಿ.
(ವಿಮಾನ, ಪಕ್ಷಿ, ಪ್ಯಾರಾಷೂಟುಗಾರ, ಮೊದಲಾದವರ ವಿಷಯದಲ್ಲಿ) (ನೆಲ ಯಾ ನೀರಿನ ಮೇಲೆ) ಇಳಿ; ಕೆಳಗಿಳಿ.
(ಆಡುಮಾತು) (ಆತ್ಮಾರ್ಥಕ ಸಹ) ಒಂದು ಗೊತ್ತಾದ ಸ್ಥಳಕ್ಕೆ, ದೆಶೆಗೆ, ಸ್ಥಾನಕ್ಕೆ – ಬರು, ಸೇರು, ತಲುಪು, ಮುಟ್ಟು: landed up in France ಹ್ರಾನ್ಸ್‍ಗೆ ಹೋಗಿ ತಲುಪಿದ. landed up penniless ನಿರ್ಗತಿಕ ಸ್ಥಿತಿ ಮುಟ್ಟಿದ.
(ಕುದುರೆ ಜೂಜಿನಲ್ಲಿ) ಮೊದಲನೆಯದಾಗಿ ಬರು; ಮೊದಲ ಸ್ಥಾನ ಗಳಿಸು.
ನುಡಿಗಟ್ಟು
land on one’s feet ಕಷ್ಟ, ನಷ್ಟ, ಕಾಯಿಲೆ, ಮೊದಲಾದವುಗಳಿಂದ (ಮುಖ್ಯವಾಗಿ ಅದೃಷ್ಟದ ಮೂಲಕ) – ಪಾರಾಗು, ಬಚಾವಾಗು, ಬೇಗನೆ ಸುಧಾರಿಸಿಕೊ.
land up doing (something) (ಆಡುಮಾತು) (ಮುಖ್ಯವಾಗಿ ಮನಸ್ಸಿಲ್ಲದಿದ್ದರೂ, ಇಚ್ಛೆಯಿಲ್ಲದಿದ್ದರೂ) ಕೊನೆಯಲ್ಲಿ (ಯಾವುದನ್ನೋ) ಮಾಡು ಯಾ ಮಾಡುವಂತಾಗು: they landed up not only having to apologize but also offering to pay ಅವರು ಕ್ಷಮೆ ಬೇಡುವುದಷ್ಟೇ ಅಲ್ಲದೆ ಹಣ ಕಟ್ಟಿಕೊಡಲೂ ಒಪ್ಪಿಗೆ ನೀಡಬೇಕಾಯಿತು.