See also 2promise
1promise ಪ್ರಾಮಿಸ್‍
ನಾಮವಾಚಕ
  1. ಕೊಟ್ಟ ಮಾತು; ಭರವಸೆ; ವಾಗ್ದಾನ; ಭಾಷೆ; ವಚನ; ಯಾವುದೇ ಒಂದನ್ನು ಮಾಡುತ್ತೇನೆಂದೋ ಮಾಡುವುದಿಲ್ಲವೆಂದೋ, ಕೊಡುತ್ತೇನೆಂದೋ ಯಾ ಕೊಡುವುದಿಲ್ಲವೆಂದೋ, ಕೊಟ್ಟ ಭರವಸೆ: a promise of help ಸಹಾಯದ ಭರವಸೆ.
  2. ಕೊಡುವುದಾಗಿ ಮಾತು ಕೊಟ್ಟ ವಸ್ತು: I claim your promise ನೀನು ನನಗೆ ಕೊಡುವುದಾಗಿ ಮಾತುಕೊಟ್ಟ ವಸ್ತುವನ್ನು ನನ್ನ ಹಕ್ಕಾಗಿ ಕೇಳುತ್ತೇನೆ.
  3. (ರೂಪಕವಾಗಿ) ಭರವಸೆ; ಭಾವೀ ಸಾಧನೆಯ ಯಾ ಯಶಸ್ಸಿನ ಚಿಹ್ನೆ, ಲಕ್ಷಣ: a writer of great promise ಒಳ್ಳೆಯ ಭರವಸೆಯ, ಭರವಸೆ ತೋರುವ ಲೇಖಕ.
ಪದಗುಚ್ಛ

$^1$breach of promise.