See also 1land  3Land
2land ಲ್ಯಾಂಡ್‍
ಸಕರ್ಮಕ ಕ್ರಿಯಾಪದ
  1. (ಹಡಗು ಮೊದಲಾದವನ್ನು) ದಡ – ಸೇರಿಸು, ಮುಟ್ಟಿಸು.
  2. (ವಿಮಾನ, ಅದರ ಪ್ರಯಾಣಿಕರು, ಮೊದಲಾದವನ್ನು) ಕೆಳಕ್ಕಿಳಿಸು; ಕೆಳಗಿಳಿಸು; ಧರೆಗಿಳಿಸು; ಭೂಮಿ ಯಾ ನೀರಿನ ಮೇಲೆ ಇಳಿಸು.
  3. (ಮೀನನ್ನು) ದಡಕ್ಕೆ ತರು.
  4. (ಆಡುಮಾತು) (ಒಂದು ಸ್ಥಳಕ್ಕೆ, ದೆಶೆಗೆ, ಸ್ಥಾನಕ್ಕೆ) ತರು: landed her in trouble ಅವಳನ್ನು ತೊಂದರೆಗೆ ಸಿಕ್ಕಿಹಾಕಿಸಿತು.
  5. (ಆಡುಮಾತು) (ವ್ಯಕ್ತಿ ಮೊದಲಾದವರಿಗೆ ಏಟು ಮೊದಲಾದವನ್ನು) ಹೊಡೆ; ಕೊಡು: landed him one in the eye ಕಣ್ಣಿಗೆ ಹೊಡೆದನು.
  6. (ಆಡುಮಾತು) (ಸಮಸ್ಯೆ ಮೊದಲಾದವನ್ನು) ಒಡ್ಡು; ನೀಡು.
  7. (ಹಡಗು, ವಾಹನ, ಮೊದಲಾದವುಗಳಿಂದ, ವ್ಯಕ್ತಿ, ಸರಕು, ಮೊದಲಾದವನ್ನು) ಇಳಿಸು; ಕೆಳಕ್ಕಿಳಿಸು.
  8. (ಆಡುಮಾತು) (ಹುದ್ದೆ, ಬಹುಮಾನ, ಮೊದಲಾದವನ್ನು, ಮುಖ್ಯವಾಗಿ ತೀವ್ರ ಸ್ಪರ್ಧೆಯನ್ನು ಎದುರಿಸಿ) ಗೆಲ್ಲು; ಗಳಿಸು; ಸಂಪಾದಿಸು; ಗಿಟ್ಟಿಸು; ಪಡೆ: land a good contract ಒಳ್ಳೆ ಗುತ್ತಿಗೆ ಗಳಿಸು, ಗಿಟ್ಟಿಸು.
  9. (ಜಾಕಿಯು ಕುದುರೆಯನ್ನು) ಮೊದಲನೆಯದಾಗಿ, ಪ್ರಥಮ ಸ್ಥಾನದಲ್ಲಿ ಬರುವಂತೆ – ತರು, ಮಾಡು.
ಅಕರ್ಮಕ ಕ್ರಿಯಾಪದ
  1. (ಹಡಗು ಮೊದಲಾದವು) ದಡಸೇರು; ತೀರ ಮುಟ್ಟು; ಕರೆ ತಲುಪು.
  2. (ವಿಮಾನ, ಹಡಗು, ಮೊದಲಾದವುಗಳಿಂದ) ಇಳಿ; ಕೆಳಗಿಳಿ; ನೆಲಕ್ಕೆ ಇಳಿ: landed at the harbour ರೇವಿನಲ್ಲಿ ಇಳಿಯಿತು.
  3. (ರೂಪಕವಾಗಿ ಸಹ) (ನೆಗೆದ, ಕುಪ್ಪಳಿಸಿದ ತರುವಾಯ) ನೆಲ – ತಾಕು, ಮುಟ್ಟು: catch the ball before it lands ನೆಲ ಮುಟ್ಟುವುದಕ್ಕಿಂತ ಮುಂಚೆ ಚೆಂಡು ಹಿಡಿ.
  4. (ವಿಮಾನ, ಪಕ್ಷಿ, ಪ್ಯಾರಾಷೂಟುಗಾರ, ಮೊದಲಾದವರ ವಿಷಯದಲ್ಲಿ) (ನೆಲ ಯಾ ನೀರಿನ ಮೇಲೆ) ಇಳಿ; ಕೆಳಗಿಳಿ.
  5. (ಆಡುಮಾತು) (ಆತ್ಮಾರ್ಥಕ ಸಹ) ಒಂದು ಗೊತ್ತಾದ ಸ್ಥಳಕ್ಕೆ, ದೆಶೆಗೆ, ಸ್ಥಾನಕ್ಕೆ – ಬರು, ಸೇರು, ತಲುಪು, ಮುಟ್ಟು: landed up in France ಹ್ರಾನ್ಸ್‍ಗೆ ಹೋಗಿ ತಲುಪಿದ. landed up penniless ನಿರ್ಗತಿಕ ಸ್ಥಿತಿ ಮುಟ್ಟಿದ.
  6. (ಕುದುರೆ ಜೂಜಿನಲ್ಲಿ) ಮೊದಲನೆಯದಾಗಿ ಬರು; ಮೊದಲ ಸ್ಥಾನ ಗಳಿಸು.
ನುಡಿಗಟ್ಟು
  1. land on one’s feet ಕಷ್ಟ, ನಷ್ಟ, ಕಾಯಿಲೆ, ಮೊದಲಾದವುಗಳಿಂದ (ಮುಖ್ಯವಾಗಿ ಅದೃಷ್ಟದ ಮೂಲಕ) – ಪಾರಾಗು, ಬಚಾವಾಗು, ಬೇಗನೆ ಸುಧಾರಿಸಿಕೊ.
  2. land up or land up in = 2land ಅಕರ್ಮಕ ಕ್ರಿಯಾಪದ \((5)\).
  3. land up doing (something) (ಆಡುಮಾತು) (ಮುಖ್ಯವಾಗಿ ಮನಸ್ಸಿಲ್ಲದಿದ್ದರೂ, ಇಚ್ಛೆಯಿಲ್ಲದಿದ್ದರೂ) ಕೊನೆಯಲ್ಲಿ (ಯಾವುದನ್ನೋ) ಮಾಡು ಯಾ ಮಾಡುವಂತಾಗು: they landed up not only having to apologize but also offering to pay ಅವರು ಕ್ಷಮೆ ಬೇಡುವುದಷ್ಟೇ ಅಲ್ಲದೆ ಹಣ ಕಟ್ಟಿಕೊಡಲೂ ಒಪ್ಪಿಗೆ ನೀಡಬೇಕಾಯಿತು.
  4. land up in = ನುಡಿಗಟ್ಟು \((2)\).