See also 2land  3Land
1land ಲ್ಯಾಂಡ್‍
ನಾಮವಾಚಕ
  1. ಭೂಭಾಗ; ಸಮುದ್ರ, ನೀರು, ಎಂಬುವಕ್ಕೆ ಪ್ರತಿಯಾಗಿ ಭೂಮಿಯ ಮೇಲ್ಮೈಯ ಗಟ್ಟಿಭಾಗ.
    1. ನೆಲ; ಭೂಮಿ; ಜಮೀನು; ಭೂಪ್ರದೇಶ; ದೇಶದ ವಿಸ್ತಾರ, ಹರವು.
    2. (ಬಳಕೆ, ಗುಣಮಟ್ಟ, ಮೊದಲಾದವುಳ್ಳ) ಭೂಮಿ; ಜಮೀನು: arable land ಸಾಗುವಳಿ ಮಾಡಬಹುದಾದ ಜಮೀನು; ವ್ಯವಸಾಯ ಯೋಗ್ಯ ಜಮೀನು. building land ಕಟ್ಟಡದ ಜಮೀನು.
  2. ದೇಶ; ನಾಡು; ರಾಜ್ಯ; ರಾಷ್ಟ್ರ: a land of dreams ಕನಸುಗಳ ನಾಡು.
  3. ಭೂಸ್ವತ್ತು; ಭೂಸ್ಥಿತಿ.
  4. (ಬಹುವಚನದಲ್ಲಿ) ಭೂಮಿಕಾಣಿ; ಜಮೀನುಗಳು; ಹೊಲಗದ್ದೆ; ಎಸ್ಟೇಟುಗಳು.
  5. ಕೋವಿಯ ಒಳಗಂಡಿಯಲ್ಲಿ ಗುಂಡು ಹೋಗಲು ಮಾಡಿರುವ ಜಾಡುಗಳನ್ನು ಬಿಟ್ಟು ಉಳಿದ ಭಾಗ, ಮೈ
  6. (ಸ್ಕಾಟ್ಲಂಡ್‍) ಹಲವಾರು ಮನೆಗಳುಳ್ಳ ಕಟ್ಟಡ; ಬಹುಗೃಹ ಸೌಧ.
  7. (ದಕ್ಷಿಣ ಆಹ್ರಿಕ) (ಬೇಲಿಯಿಂದ ಸುತ್ತುವರಿದ) ಸಾಗುವಳಿ ಜಮೀನು; ಕೃಷಿಭೂಮಿ.
  8. (ನೀರ್ಗಾಲುವೆಗಳಿಂದ ಬೇರ್ಪಡಿಸಿದ) ಸಾಗುವಳಿ ಜಮೀನಿನ ಯಾ ಹುಲ್ಲುಗಾವಲಿನ ಪಟ್ಟಿ ಯಾ ಪ್ರದೇಶ.
ಪದಗುಚ್ಛ
  1. land of hope and glory ಕೀರ್ತಿ ಭರವಸೆಗಳ ನಾಡು.
  2. travel by land ಭೂಮಾರ್ಗವಾಗಿ ಸಂಚರಿಸು, ಪ್ರಯಾಣ ಮಾಡು.
ನುಡಿಗಟ್ಟು
  1. how the land lies ಏನು ಸಂದರ್ಭ; ಪರಿಸ್ಥಿತಿ ಎಂಥದ್ದು; ಸ್ಥಿತಿಗತಿ ಹೇಗಿದೆ; ವ್ಯವಹಾರ ಎಂತಿದೆ.
  2. in the land of the living (ಹಾಸ್ಯ ಪ್ರಯೋಗ) ಇನ್ನೂ ಜೀವಂತವಾಗಿರುವ, ಬದುಕಿರುವ, ಜೀವಸಹಿತ ಇರುವ.
  3. land of $^1$cakes ಸ್ಕಾಟ್‍ಲಂಡು
  4. land of Nod ನಿದ್ದೆ; ನಿದ್ದೆನಾಡು; ನಿದ್ರಾಲೋಕ.
  5. land of $^1$promise ಸ್ವರ್ಗ; ಸುಖಧಾಮ; ಬಯಸಿದ ಯಾ ನಿರೀಕ್ಷಿಸಿದ ಯಾವುದೇ ಸುಖದ ನೆಲೆ.
  6. land of the leal ಪುಣ್ಯಲೋಕ; ಸ್ವರ್ಗ.
  7. land of the living ಬದುಕಿನ ಲೋಕ; ಈ – ಜೀವಮಾನ, ಬಾಳು, ಬದುಕು; ಇಹಲೋಕ.