1cake
ಕೇಕ್
ನಾಮವಾಚಕ
- ಕೇಕು; ಹಿಟ್ಟಿನ ಜತೆಗೆ ದ್ವೀಪ ದ್ರಾಕ್ಷಿ, ಬೆಣ್ಣೆ, ಮೊಟ್ಟೆ ಮೊದಲಾದವುಗಳನ್ನು ಹಾಕಿ ಮಾಡಿದ, ಹುದುಗು ಹಾಕಿಲ್ಲದ, ಸಿಹಿಯಾದ ಬ್ರೆಡ್ಡು.
- (ದಪ್ಪನಾದ ಬಿಲ್ಲೆಯ ಯಾ ಅಲಂಕಾರದ ಆಕಾರಗಳಲ್ಲಿ ಬೇಯಿಸಿದ) ದೊಡ್ಡ ಪ್ರಮಾಣದ ಕೇಕು.
- (ಸ್ಕಾಟ್ಲಂಡ್, ಉತ್ತರ ಇಂಗ್ಲಂಡ್ಗಳಲ್ಲಿ ಓಟ್ ಧಾನ್ಯದ) ತೆಳು ಬ್ರೆಡ್ಡು.
- ತಿನಿಸುಬಿಲ್ಲೆ; ತಿಂಡಿಬಿಲ್ಲೆ; ಒತ್ತಿ ಮಾಡಿದ, ಚಪ್ಪಟೆಯಾದ ಇತರ ಆಹಾರದ ದಪ್ಪ ಬಿಲ್ಲೆ: pancake, fish cake.
- (ಯಾವುದೇ ವಸ್ತುವಿನ ಒತ್ತಿದ) ಬಿಲ್ಲೆ; ಹಲ್ಲೆ: cake of soap ಸೋಪಿನ ಬಿಲ್ಲೆ.
ನುಡಿಗಟ್ಟು
- piece of cake (ಆಡುಮಾತು) ಸುಲಭ ಕೆಲಸ; ಸುಲಿದ ಬಾಳೆಹಣ್ಣು; ಸುಲಭವಾದ ಯಾ ಪ್ರಿಯವಾದ ಕೆಲಸ.
- cakes and ale ಮಜಾಕೂಟ; ಸಂತೋಷಸಮಾರಂಭ.
- land of cakes ಸ್ಕಾಟ್ಲಂಡು.
- take the cake (ಅಶಿಷ್ಟ) (ಯಾವುದರಲ್ಲೇ) ಎಲ್ಲರನ್ನೂ ಮೀರಿಸು.
- cannot eat one’s cake and have it too ಉಂಡ ಬಳಿಕ ಕೊಂಡೂ ಹೋಗಲಾಗದು; ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ.
- cannot have one’s cake and eat it = ನುಡಿಗಟ್ಟು \((5)\).
- slice of the cake ಲಾಭದಲ್ಲಿ ಪಾಲು; ಪ್ರಯೋಜನದಲ್ಲಿ ಭಾಗ.
- go or sell like hot cakes ಬೇಗನೆ ಖರ್ಚಾಗು; ಶೀಘ್ರವಾಗಿ ಮಾರಾಟವಾಗು.