See also 2king
1king ಕಿಂಗ್‍
ನಾಮವಾಚಕ
  1. (ಸಾಮಾನ್ಯವಾಗಿ ಬಿರುದು King). (ವಂಶಪರಂಪರೆಯಾಗಿ ರಾಜ್ಯವಾಳುವ, ಸ್ವತಂತ್ರ – ರಾಷ್ಟ್ರದ, ರಾಜ್ಯದ) ದೊರೆ; ಅರಸ; ರಾಜ.
  2. (ವಾಣಿಜ್ಯ, ಕ್ರೀಡೆ, ಮೊದಲಾದ ಕ್ಷೇತ್ರದ) ಶ್ರೇಷ್ಠ ವ್ಯಕ್ತಿ ಯಾ ಭಾರಿ ವ್ಯಕ್ತಿ: fur king ಭಾರಿ ಹರ್‍ ವ್ಯಾಪಾರಿ. king of cricket ಕ್ರಿಕೆಟ್ಟಿನ ರಾಜ.
  3. ರಾಜ; ಸಸ್ಯ, ಪ್ರಾಣಿ, ಮೊದಲಾದವುಗಳಲ್ಲಿ ದೊಡ್ಡದು, ಎಲ್ಲಕ್ಕಿಂತ ದೊಡ್ಡದು: king penguin ದೊಡ್ಡ ಪೆಂಗ್ವಿನ್‍.
  4. ರಾಜ:
    1. (ಚದುರಂಗ) ‘ಶಹಾ’ ಆಗದಂತೆ ರಕ್ಷಿಸಬೇಕಾದ ಕಾಯಿ.
    2. (ಡ್ರಾಹ್ಟ್ಸ್‍ ಆಟದಲ್ಲಿ) ಹಾಸುಗಳನ್ನೆಲ್ಲ ದಾಟಿದ ಬಳಿಕ ಎದುರಾಳಿಯ ಆರಂಭರೇಖೆಯನ್ನು ಮುಟ್ಟಿ ರಾಜಪದವಿ ಗಳಿಸುವ ಕಾಯಿ.
    3. (ಇಸ್ಪೀಟಾಟ) (ಯಾವುದೇ ರಂಗಿನಲ್ಲಿ ಹಾಸಿಗಿಂತಲೂ ಕಡಿಮೆ ಬೆಲೆಯ) ರಾಜನ ಚಿತ್ರವಿರುವ ಎಲೆ: Spades king ಇಸ್ಪೀಟು ರಾಜ. Hearts king ಆಠೀನ್‍ ರಾಜ.
  5. (Kings) ಮುಖ್ಯವಾಗಿ ಜೂಡಾ ರಾಜ್ಯದ ಚರಿತ್ರೆಯನ್ನು ಕುರಿತ, ಹಳೆಯ ಒಡಂಬಡಿಕೆಯಲ್ಲಿನ ಎರಡು ಪುಸ್ತಕಗಳು.
ಪದಗುಚ್ಛ
  1. Books of Kings = 1king(5).
  2. King Charles head
    1. (ಶಿರಚ್ಛೇದಕ್ಕೆ ಗುರಿಯಾದ ಬ್ರಿಟನ್ನಿನ ದೊರೆ) ಮೊದಲನೇ ಚಾರ್ಲ್ಸ್‍ನ ತಲೆ.
    2. (ರೂಪಕವಾಗಿ) ಮನಸ್ಸನ್ನೆಲ್ಲ ಆಕ್ರಮಿಸಿಕೊಂಡು ಕಾಡುವ ಒಂದೇ ಭಾವನೆ; ಏಕಮಾತ್ರ ಚಿಂತೆ, ಗೀಳು.
  3. King Charles Spaniel
    1. ಕಪ್ಪು ಮತ್ತು ಕಂದು ಬಣ್ಣದ, ಸಣ್ಣ ಗಾತ್ರದ ಸ್ಪ್ಯಾನಿಯಲ್‍ ನಾಯಿ.
    2. (ರೂಪಕವಾಗಿ) ಬೇಡುವ ದೀನ ವ್ಯಕ್ತಿ; ಗೋಳು ಕರೆದು, ಹಲ್ಲು ಕಿರಿದು ಬೇಡಿಕೊಳ್ಳುವ ವ್ಯಕ್ತಿ.
  4. King Emperor (ಚರಿತ್ರೆ)
    1. ಗ್ರೇಟ್‍ ಬ್ರಿಟನ್ನಿನ ದೊರೆ ಮತ್ತು ಇಂಡಿಯದ ಚಕ್ರವರ್ತಿ ಯಾ ಸಾರ್ವಭೌಮ.
    2. ಆಸ್ಟ್ರಿಯ – ಹಂಗರಿಗಳ ಚಕ್ರವರ್ತಿ.
  5. King of Arms ನಾಮವಾಚಕ (ವಂಶಲಾಂಛನ ವಿದ್ಯೆ) (ಬ್ರಿಟನ್ನಿನ ಐದು ಮಂದಿ ವಂದಿಗಳ ಪೈಕಿ) ಪ್ರಧಾನ ವಂದಿ; ರಾಜ ಯಾ ರಾಣಿಯ ಆಗಮನವನ್ನು ಅವರ ಬಿರುದಾವಳಿಗಳೊಡನೆ ಘೋಷಿಸುವ ಅಧಿಕಾರಿ.
  6. king of beasts ಸಿಂಹ.
  7. king of birds ಹದ್ದು; ಗಿಡುಗ.
  8. King of Kings
    1. ರಾಜಾಧಿರಾಜ; ಜಗದೀಶ್ವರ; ಪರಮೇಶ್ವರ; ಭಗವಂತ.
    2. ರಾಜಾಧಿರಾಜ; ಚಕ್ರವರ್ತಿ; ಸಾರ್ವಭೌಮ; ಸಮ್ರಾಟ.
  9. king of terrors ಯಮ; ಮೃತ್ಯು(ದೇವತೆ); ಭಯಗಳ ರಾಜ.
  10. King of the Castle (ಮಕ್ಕಳ ಆಟ); “ಅರಮನೆ ಅರಸ”; ಆಟವಾಡುವ ಮಕ್ಕಳ ಪೈಕಿ ಒಂದು ದಿಬ್ಬದ ಮೇಲೆ ನಿಂತು “ನಾನೇ ಅರಮನೆಯ ಅರಸ” ಎಂದು ಘೋಷಿಸಿಕೊಳ್ಳುವ, ಉಳಿದೆಲ್ಲ ಮಕ್ಕಳೂ ಸೇರಿ ಅದನ್ನು ಕೆಳಕ್ಕಿಳಿಸಲು ಪ್ರಯತ್ನಿಸುವ ಆಟ.
  11. Kings $^1$bench(5) (United Kingdom ನಲ್ಲಿ) ಹೈಕೋರ್ಟ್‍ ಆಹ್‍ ಜಸ್ಟಿಸ್‍ನ ಒಂದು ವಿಭಾಗ, ಪೀಠ.
  12. king’s bishop, knight, pawn, rook (ಚದುರಂಗ) ಆಟದ ಆರಂಭದಲ್ಲಿ ಹಾಸಿನಲ್ಲಿ ರಾಜನಿಗೆ ಅತ್ಯಂತ ಹತ್ತಿರ ಇರಿಸುವ ಕಾಯಿಗಳು.
  13. King’s bounty (ಚರಿತ್ರೆ) ರಾಜಧನ; ಇಂಗ್ಲೆಂಡಿನಲ್ಲಿ ಒಟ್ಟಿಗೆ ಮೂರು ಮಕ್ಕಳನ್ನು ಹೆತ್ತವಳಿಗೆ ಕೊಡುವ ಪುರಸ್ಕಾರ.
  14. King’s $^1$colour(13). ಸೈನ್ಯದ ‘ರೆಜಿಮೆಂಟು’ ಹೊತ್ತುಕೊಂಡು ಹೋಗುವ ಧ್ವಜ.
  15. King’s $^1$counsel. (ಇತರ ಬ್ಯಾರಿಸ್ಟರುಗಳಿಗಿಂತ ಹೆಚ್ಚಿನ ಅಧಿಕಾರವುಳ್ಳ ಇಂಗ್ಲೆಂಡಿನ) ಸರ್ಕಾರಿ ವಕೀಲ.
  16. King’s $^1$guide ರಾಜನ ಯಾ ರಾಣಿಯ ಮಾರ್ಗದರ್ಶಿ; ರಾಜನ ಯಾ ರಾಣಿಯ ಆಸ್ಥಾನದಲ್ಲಿ ಅತ್ಯಂತ ಹೆಚ್ಚಿನ ಪರಿಣತಿ, ದಕ್ಷತೆ ಉಳ್ಳ ಅಧಿಕಾರಿಗೆ ಕೊಡುವ ಮಾರ್ಗದರ್ಶಿ ಪದವಿ.
  17. King’s highway ಹೆದ್ದಾರಿ; ರಾಜಮಾರ್ಗ.
  18. King’s messenger ರಾಣಿದೂತ; ರಾಜತಾಂತ್ರಿಕ ಸೇವೆಯಲ್ಲಿ ನಿಯುಕ್ತನಾದ ದೂತ, ಚಾರ.
  19. King’s proctor (ಬ್ರಿಟಿಷ್‍ ಪ್ರಯೋಗ) ಸರ್ಕಾರಿ ಪ್ರಾಕ್ಟರ್‍; ಉಯಿಲುಗಳನ್ನು ರುಜುವಾತು ಪಡಿಸುವುದು, ವಿವಾಹ ವಿಚ್ಛೇದನ, ಮೊದಲಾದವುಗಳ ವಿಷಯದಲ್ಲಿ ಒಳಸಂಚಿನ ಇಲ್ಲವೇ ನಿಜವನ್ನು ಮುಚ್ಚಿರುವ ದೂರು ಬಂದಿದ್ದರೆ ಅಂತಹ ಮೊಕದ್ದಮೆಯಲ್ಲಿ ಪ್ರವೇಶಮಾಡುವ ಅಧಿಕಾರವುಳ್ಳ ಕೋರ್ಟಿನ ಅಧಿಕಾರಿ.
  20. king’s ransom ಭಾರಿ ಹಣ; ದೊಡ್ಡ ಮೊತ್ತದ ಹಣ.
  21. King’s Scholar (ಬ್ರಿಟಿಷ್‍ ಪ್ರಯೋಗ) ರಾಜ ವಿದ್ಯಾರ್ಥಿ; ರಾಜನ ದತ್ತಿಯಿಂದ ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿ.
  22. King’s $^1$scout ರಾಜನ ಬಾಲಚಮೂ; ಅತ್ಯಂತ ದಕ್ಷನಾದ ಬಾಲಚಮೂ.
  23. King’s speech ರಾಜ ಭಾಷಣ; ಪಾರ್ಲಿಮೆಂಟಿನ ಅಧಿವೇಶನದ ಆರಂಭದಲ್ಲಿ ಆ ಸಭೆಯ ಪರ್ಯಾಲೋಚನೆಗಾಗಿ ಸರ್ಕಾರವು ಸಿದ್ಧಪಡಿಸುವ, ರಾಜ, ರಾಣಿ ಯಾ ಅವರ ಪ್ರತಿನಿಧಿಯ ಸಭೆಯ ಮುಂದೆ ಓದುವ, ವಿದೇಶಾಂಗ ಮತ್ತು ಒಳ ಆಡಳಿತಗಳ ಬಗ್ಗೆ ಸರ್ಕಾರದ ನೀತಿಯೇನೆಂಬುದನ್ನೂ ಅದನ್ನು ಕಾರ್ಯಗತ ಮಾಡಲು ಸರ್ಕಾರವು ಕೈಗೊಳ್ಳಲಿರುವ ಕ್ರಮಗಳನ್ನೂ ವಿವರಿಸುವ ಭಾಷಣ.
  24. King’s weather ರಾಜಹವಾ; ಹಬ್ಬದ ಹವಾ; ಉತ್ಸವದ ಸಂದರ್ಭದಲ್ಲಿ ಹಿತವಾದ, ಆಪ್ಯಾಯಮಾನವಾದ ಹವಾ.
  25. the King (ಇಂಗ್ಲೆಂಡಿನಲ್ಲಿ) (ಮುಖ್ಯವಾಗಿ ರಾಜನಿರುವಾಗ) ರಾಷ್ಟ್ರಗೀತೆ.
  26. the King’s $^2$english. ರಾಜ ಇಂಗ್ಲಿಷ್‍; ಶಿಷ್ಟ ಇಂಗ್ಲಿಷ್‍; ಸರಿಯಾಗಿ ಬರೆದ ಯಾ ಆಡಿದ ಇಂಗ್ಲಿಷ್‍ ಭಾಷೆ; ಇಂಗ್ಲಿಷ್‍ಭಾಷೆಯ ಸಾಧು ರೂಪ, ಶುದ್ಧ ರೂಪ.
See also 1king
2king ಕಿಂಗ್‍
ಸಕರ್ಮಕ ಕ್ರಿಯಾಪದ

(ವ್ಯಕ್ತಿಯನ್ನು) ದೊರೆಯನ್ನಾಗಿಸು; ರಾಜನನ್ನಾಗಿಸು, ಅರಸನನ್ನಾಗಿ ಮಾಡು.

ಅಕರ್ಮಕ ಕ್ರಿಯಾಪದ

ದೊರೆತನ ಮಾಡು; ಅರಸನಂತೆ ಆಳು; ಪ್ರಭುತ್ವ ನಡೆಸು.

ಪದಗುಚ್ಛ

king it

  1. ಅರಸಾಗಿ ಆಳು; ದೊರೆತನ ಮಾಡು.
  2. (ಸಾಮಾನ್ಯವಾಗಿ over ಜೊತೆಗೆ) ಒಂದನ್ನು ಆಳು; ಒಂದರ ಮೇಲೆ ಆಡಳಿತ, ಆಳ್ವಿಕೆ ನಡೆಸು.