See also 2hot  3hot
1hot ಹಾಟ್‍
ಗುಣವಾಚಕ
( ತರರೂಪ hotter, ತಮರೂಪ hottest).
  1. ಹೆಚ್ಚು – ಶಾಖದ, ಕಾವಿನ; ಬಹಳ ಬಿಸಿಯಾದ, ಉಷ್ಣದ, ಕಾಯ್ಪಿನ, ಸುಡುವ.
  2. (ಆಹಾರ ಮೊದಲಾದವುಗಳ ವಿಷಯದಲ್ಲಿ) ಬಿಸಿಬಿಸಿ(ಯಾದ); ಬೇಯಿಸಿ ಮಾಡಿ, ಆರುವುದಕ್ಕೆ ಮುಂಚೆ ಬಡಿಸಿದ.
  3. ಸುಡುವ; ಕಾಯುವ; ಶಾಖ ಕೊಡುವ ಯಾ ಶಾಖವಾಗಿರುವ.
  4. ಕಾಯುವ; ಸುಡುವ; ಶಾಖ ತೋರುವ; ಬಿಸಿಯಾಗಿ ಕಾಣುವ: hot fever ಕಾಯುವ ಜ್ವರ; ಸುಡುಜ್ವರ.
  5. (ಮೆಣಸು ಮೊದಲಾದವುಗಳ ವಿಷಯದಲ್ಲಿ) ಖಾರವಾದ; ಕಾರವಾದ; ಚುರುಕಾದ.
  6. ತೀವ್ರ; ಗಾಢ; ಪ್ರಬಲ; ಉತ್ಕಟ.
  7. ತೀವ್ರಾಸಕ್ತಿಯ; ಉತ್ಸುಕ; ತವಕದ: in hot pursuit ತೀವಾಸಕ್ತಿಯಿಂದ ಬೆನ್ನಟ್ಟಿ, ಅನ್ವೇಷಣೆಯಲ್ಲಿ ತೊಡಗಿ.
  8. ಕೆರಳಿದ; ಉದ್ರಿಕ್ತ; ಉದ್ರೇಕಗೊಂಡ.
  9. ಕಾಮೋದ್ರಿಕ್ತ; ಬೆದೆ ಹತ್ತಿದ.
  10. ಕೋಪದ; ಸಿಟ್ಟಿನ: hot words ಕೋಪದ ಮಾತುಗಳುhot temper ಸಿಟ್ಟಿನ ಮನೋಭಾವ.
  11. ಆವೇಶದ; ಬಿರುಸಿನ; ತೀವ್ರ: the hottest battle of the war ಕದನದ ಅತ್ಯಂತ ಆವೇಶದ ಹೋರಾಟ.
  12. ಉದ್ರೇಕಗೊಳಿಸುವ; ಉತ್ತೇಜಕ; ಕೆರಳಿಸುವ.
  13. (ಬೇಟೆಯ ವಾಸನೆಯ ವಿಷಯದಲ್ಲಿ) ತೀವ್ರ; ತೀಕ್ಷ್ಣ; ಕಟು.
  14. (ರೂಪಕವಾಗಿ) (ಸುದ್ದಿ ಮೊದಲಾದವುಗಳ ವಿಷಯದಲ್ಲಿ) ಹೊಸತಾದ; ಇತ್ತೀಚಿನ; ಈಚಿನ; ಬಿಸಿಬಿಸಿ(ಯಾದ).
  15. (ಬ್ರಿಟಿಷ್‍ ಪ್ರಯೋಗ) (ಆಡುಮಾತು) (ಖಜಾನೆಯ ನೋಟುಗಳು ವಿಷಯದಲ್ಲಿ) ಹೊಸ; ಇದೀಗ ಹೊಸದಾಗಿ ಚಲಾವಣೆಗೆ ತಂದ, ಬಂದ.
  16. ಚೆಂಡಾಟಗಳಲ್ಲಿನ ಹೊಡೆತ, ಎಸೆತ, (ಮೊದಲಾದವುಗಳ ವಿಷಯದಲ್ಲಿ) ಬಹಳ ಜೋರಾದ; (ಪ್ರತಿಪಕ್ಷಿ) ಎದುರಿಸಲು, ತಡೆಯಲು – ಕಷ್ಟವಾದ.
  17. (ಪಂದ್ಯದ ಯಾ ಕ್ರೀಡೆಗಳ ಸ್ಪರ್ಧಿಯ ವಿಷಯದಲ್ಲಿ) ಜಯನಿರೀಕ್ಷೆಯ ಗೆದ್ದೇ ಗೆಲ್ಲುತ್ತಾನೆಂದು – ಊಹಿಸಿದ, ನಿರೀಕ್ಷಿಸಿದ: a hot favourite ಗೆಲ್ಲುವ(ನೆಂದು ನಂಬಲಾದ) ಪ್ರಿಯ ಸ್ಪರ್ಧಿ.
  18. (ಬಣ್ಣಗಳ ವಿಷಯದಲ್ಲಿ) ಉಜ್ಜ್ವಲ; ಬಹಳ ಕಡು; ಅತ್ಯಂತ ತೀಕ್ಷ್ಣವಾದ.
  19. (ಜಾಸ್‍ ಮೊದಲಾದ ನೃತ್ಯ, ಸಂಗೀತ, ಮೊದಲಾದವುಗಳಲ್ಲಿ) ತೀವ್ರ; ಭಾವಪೂರ್ಣವಾಗಿ, ತ್ವರಿತ ಲಯಗತಿಗಳಿಂದ ಕೂಡಿದ.
  20. ಸದ್ಯದಲ್ಲಿ ಜನಪ್ರಿಯವಾಗಿರುವ; ಬೇಡಿಕೆಯಲ್ಲಿರುವ; ಮಾರಾಟವಾಗುವಂತಿರುವ.
  21. (ವಿದ್ಯುತ್‍) ಹೆಚ್ಚು ವೋಲ್ಟೇಜ್‍ ವಿದ್ಯುತ್ತನ್ನು ಹೊಂದಿರುವ ಯಾ ಒಯ್ಯುವ: hot wire ಹೆಚ್ಚು ವೋಲ್ಟೆಜ್‍ ತಂತಿ.
  22. (ಅಶಿಷ್ಟ)
    1. (ಕದ್ದ, ಕಳವಾದ ವಸ್ತುಗಳ ವಿಷಯದಲ್ಲಿ) ಸುಲಭವಾಗಿ – ಪತ್ತೆಸಿಕ್ಕುವ, ಗುರುತಿಸಬಹುದಾದ (ಆದ್ದರಿಂದ ವಿಲೆಮಾಡಲು ಕಷ್ಟವಾದ).
    2. ಅಪಾಯಕಾರಿಯಾದ ವಿಕಿರಣ ಶಕ್ತಿಯನ್ನು ಹರಡುವ, ಬಿತ್ತರಿಸುವ, ಪ್ರಸರಿಸುವ.
  23. (ಅಪರಾಧಿಯ ವಿಷಯದಲ್ಲಿ) ಪೋಲೀಸರಿಗೆ ಬೇಕಾದ; ಪೊಲಿಸರು ಹುಡುಕುತ್ತಿರುವ.
  24. (ಆಟಗಾರನ ವಿಷಯದಲ್ಲಿ) ಕುಶಲ; ಚತುರ.
ಪದಗುಚ್ಛ
  1. hot and cold (ಹೋಟೆಲು ಮೊದಲಾದವುಗಳಲ್ಲಿ ನೀರಿನ ಸರಬರಾಜಿನ ವಿಷಯದಲ್ಲಿ) ಬಿಸಿಯಾದ ಮತ್ತು ತಣ್ಣನೆಯ.
  2. hot and hot (ಪ್ರಾಚೀನ ಪ್ರಯೋಗ) (ಆಹಾರದ ವಿಷಯದಲ್ಲಿ) ಬಿಸಿಯಾದ; ಅಡಿಗೆ ಆದ ಕೂಡಲೇ ಬಡಿಸಿದ.
  3. hot cross $^1$bun.
ನುಡಿಗಟ್ಟು
  1. $^1$blow hot and cold.
  2. give it him hot (ಆಡುಮಾತು).
    1. ಛೀಮಾರಿ – ಮಾಡು, ಹಾಕು; ಚೆನ್ನಾಗಿ ಬಯ್ದು ಅವನಿಗೆ ಬಿಸಿ ಮುಟ್ಟಿಸು, ತೋರಿಸು.
    2. ಸರಿಯಾಗಿ, ಚೆನ್ನಾಗಿ ಶಿಕ್ಷಿಸು.
  3. go hot and cold (ಭಯ ಮೊದಲಾದ ಕಾರಣದಿಂದ) ಒಮ್ಮೆ (ಮೈ) ಬಿಸಿಯಾಗು, ಒಮ್ಮೆ ತಣ್ಣಗಾಗು.
  4. go (or sell) like hot $^1$cakes.
  5. hot and bothered ದುಗುಡಗೊಂಡ; ತಳಮಳಗೊಂಡ.
  6. hot and strong.
    1. ಉದ್ರೇಕದ; ಆವೇಶಪೂರ್ಣ.
    2. ಉದ್ರೇಕದಿಂದ; ಆವೇಶಪೂರ್ಣವಾಗಿ.
  7. hot under the collar:
    1. ಕೋಪಗೊಂಡ; ಸಿಟ್ಟಾದ.
    2. ಅಸಮಾಧಾನಗೊಂಡ.
    3. ಮುಜುಗರಕ್ಕೆ ಸಿಕ್ಕಿದ; ನಾಚಿಕೆಗೆ, ಸಂಕೋಚಕ್ಕೆ ಒಳಗಾದ.
    4. ಉದ್ರೇಕಗೊಂಡ.
  8. make it (or the place or things) hot for (ಒಬ್ಬನನ್ನು) ಕಾಡಿ, ಒಬ್ಬನಿಗೆ ಕಿರುಕುಳ ಕೊಟ್ಟು, ಚಿತ್ರಹಿಂಸೆ ಮಾಡಿ ಅವನು ಅಲ್ಲಿರಲಾರದಂತೆ ಮಾಡು.
  9. not so hot ಅಷ್ಟೇನು ಉತ್ಕೃಷ್ಟವಲ್ಲದ; ಮಧ್ಯಸ್ಥವಾದ; ಸಾಧಾರಣವಾದ; ಅಷ್ಟಕ್ಕಷ್ಟೇ ಆದ.
  10. too hot for (or to hold) him = ನುಡಿಗಟ್ಟು \((8)\).
See also 1hot  3hot
2hot ಹಾಟ್‍
ಕ್ರಿಯಾವಿಶೇಷಣ
  1. ಬಿಸಿಯಾಗಿ; ಸುಡುತ್ತ.
  2. ಉತ್ಸುಕತೆಯಿಂದ.
  3. ಸಿಟ್ಟಿನಿಂದ.
See also 1hot  2hot
3hot ಹಾಟ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ hotted ವರ್ತಮಾನ ಕೃದಂತ hotting)
ಸಕರ್ಮಕ ಕ್ರಿಯಾಪದ
  1. (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಕಾಯಿಸು; ಬಿಸಿ ಮಾಡು.
  2. ಕಾವೇರಿಸು; ಸಕ್ರಿಯವಾಗಿಸು; ಉಲ್ಲಾಸವೇರಿಸು, ಉದ್ರೇಕಿಸು ಯಾ ಅಪಾಯಕಾರಿಯಾಗಿಸು.
ಅಕರ್ಮಕ ಕ್ರಿಯಾಪದ
  1. ಕಾವೇರು; ಬಿಸಿ ಏರು; ಬಿಸಿಯಾಗು
  2. (ರೂಪಕವಾಗಿ) ಕಾವೇರು; ಸಕ್ರಿಯವಾಗು; ಉಲ್ಲಾಸವೇರು, ಉದ್ರೇಕವೇರು ಯಾ ಅಪಾಯಕಾರಿಯಾಗು.