See also 2ear
1ear ಇಅರ್‍
ನಾಮವಾಚಕ
  1. ಕಿವಿ; ಕರ್ಣ; ಶ್ರೋತ್ರ; ಶ್ರವಣೇಂದ್ರಿಯ (ಮುಖ್ಯವಾಗಿ ಹೊರಭಾಗ).
  2. ಶ್ರವಣ ಶಕ್ತಿ; ಶಬ್ದಗ್ರಹಣಶಕ್ತಿ; ನಾದಜ್ಞಾನ; ನಾದ ಸಂವೇದನೆ: an ear for music ಸಂಗೀತಕ್ಕೆ ಕಿವಿ; ಸಂಗೀತಜ್ಞಾನ.
  3. ಶ್ರವಣ; ಕೇಳ್ಮೆ; ಕೇಳುವಿಕೆ.
  4. ಗಮನ; ಲಕ್ಷ್ಯ.
  5. ಕಿವಿಯಾಕಾರದ ವಸ್ತು, ಮುಖ್ಯವಾಗಿ ಹೂಜಿಯ ಹಿಡಿ.
ನುಡಿಗಟ್ಟು
  1. a word in your ears ಕಿವಿಮಾತು; ಗುಟ್ಟುಮಾತು; ಪಿಸುಮಾತು; ಕಿವಿಯಲ್ಲಿ, ಗುಟ್ಟಾಗಿ, ಅಂತರಂಗದಲ್ಲಿ — ಒಂದು ಮಾತು.
  2. be all ears ಮೈಯೆಲ್ಲಾ ಕಿವಿಯಾಗಿರು; ಮನಸ್ಸಿಟ್ಟು ಆಲಿಸು; ಕಿವಿಗೊಟ್ಟು ಕೇಳು.
  3. bring (storm, hornet’s nest, etc.) about one’s ears ಬಿರುಗಾಳಿ ಮೇಲೆರಗುವಂತೆ ಮಾಡಿಕೊ; ಕಣಜಗಳನ್ನು ಎಬ್ಬಿಸಿ ಇಲ್ಲದ ಫಜೀತಿ, ತೊಂದರೆ ಮಾಡಿಕೊ; ಇಲ್ಲದ ಅಪಾಯ ಮೈಮೇಲೆ ತಂದುಕೊ.
  4. ears $^2$burn.
  5. ear to the ground ಗಾಳಿಸುದ್ದಿ ಯಾ ಅಭಿಪ್ರಾಯಗಳ ಒಲವಿನ ಬಗೆಗೆ ಎಚ್ಚರಿಕೆ ಯಾ ಜಾಗರೂಕತೆ.
  6. give ear ಕಿವಿಗೊಡು; ಆಲಿಸಿ ಕೇಳು; ಮನಸ್ಸಿಟ್ಟು, ಗಮನವಿಟ್ಟು – ಕೇಳು.
  7. give one’s ears (ಯಾವುದೇ ವಸ್ತುವಿಗೆ, ಯಾವುದನ್ೇ ಮಾಡಲು) ಯಾವುದೇ ತ್ಯಾಗವನ್ನಾದರೂ ಮಾಡು: I would give my ears (ಒಂದು ಕಾರ್ಯಕ್ಕಾಗಿ, ವಸ್ತುವಿಗಾಗಿ) ಏನು ಬೇಕಾದರೂ ಕೊಟ್ಟೇನು; ಎಷ್ಟು ತ್ಯಾಗವನ್ನಾದರೂ ಮಾಡಿಯೇನು.
  8. have person’s ear ಒಬ್ಬನ ಪ್ರೀತಿ, ವಿಶ್ವಾಸ, ನಂಬಿಕೆ, ಅನುಗ್ರಹ — ಸಂಪಾದಿಸು: he has his master’s ear ಅವನು ಹೇಳಿದಂತೆ ಅವನ ಯಜಮಾನ ಕೇಳುತ್ತಾನೆ; ಯಜಮಾನನ ಕಿವಿ ಅವನ ಕೈಯಲ್ಲಿದೆ.
  9. head over ears = ನುಡಿಗಟ್ಟು \((12)\).
  10. in (at) one ear and out (at) the other ಒಂದು ಕಿವಿಯನ್ನು ಹೊಕ್ಕು ಇನ್ನೊಂದು ಕಿವಿಯಲ್ಲಿ ಹೋಗುತ್ತದೆ; ಯಾವ ಪರಿಮಾಣವನ್ನೂ ಉಂಟುಮಾಡುವುದಿಲ್ಲ.
  11. out on one’s ear ಅಪಮಾನಕರವಾಗಿ ತಿರಸ್ಕರಿಸಿದ ಯಾ ಕಡೆಗಣಿಸಿದ.
  12. over head and ears (ಸಾಲ, ಪ್ರೇಮ, ಮೊದಲಾದವುಗಳಲ್ಲಿ) ಇಳಿಯ ಮುಳುಗಿ; ಪೂರ್ತಿ ಮುಳುಗಿ: over head and ears in debt ಮೈಯೆಲ್ಲಾ ಸಾಲದಲ್ಲಿ ಮುಳುಗಿ.
  13. $^1$play by ear.
  14. $^2$prick up one’s ear.
  15. set (persons) by the ears ತರಲೆ ಎಬ್ಬಿಸು; (ಜನರಲ್ಲಿ) ಮನಸ್ತಾಪ ಹುಟ್ಟಿಸು; ಕಿತಾಪತಿ ಮಾಡು; ಕಿತ್ತಾಟ ಹಚ್ಚು; ಜಗಳ ಹುಟ್ಟಿಸು.
  16. to be set by the ears ಮನಸ್ತಾಪಕ್ಕೆ ಒಳಗಾಗಿ.
  17. turn a deaf ear.
  18. up to the ears (ಆಡುಮಾತು) ಕಿವಿಯವರೆಗೂ ಮುಳುಗಿ; (ಒಳಸಂಚು, ಸಾಲ, ಕೆಲಸ, ಮೊದಲಾದವುಗಳಲ್ಲಿ) ಬಹಳ ಆಳವಾಗಿ ಸಿಕ್ಕಿಹಾಕಿಕೊಂಡು ಯಾ ಮುಳುಗಿ.
  19. wet behind the ears ಅಪಕ್ವವಾದ; ಅನನುಭವಿಯಾದ; ಅನುಭವವಿಲ್ಲದ.
  20. with a flea in his ear.
See also 1ear
2ear ಇಅರ್‍
ನಾಮವಾಚಕ

ಹೊಡೆ; ಕದಿರು; (ಹೂವು ಯಾ ಬೀಜಗಳುಳ್ಳ) ಧಾನ್ಯದ ತೆನೆ.