See also 2play
1play ಪ್ಲೇ
ಸಕರ್ಮಕ ಕ್ರಿಯಾಪದ
  1. ಪ್ರಯೋಗಿಸು; ಸಲೀಸಾಗಿ ಉಪಯೋಗಿಸು.
  2. ಗಾಳದ ಹುರಿಯನ್ನು ಎಳೆದೆಳೆದು (ಮೀನನ್ನು) ಸುಸ್ತುಬೀಳಿಸು, ಸುಸ್ತಾಗುವಂತೆ ಮಾಡು, ಸುಸ್ತುಬೀಳುವಂತೆ ಮಾಡು.
  3. (ಬೆಳಕನ್ನು) ಬೀಳಿಸು; ತಿರುಗಿಸು; ಆಡಿಸು: play a searchlight on the clouds ಶೋಧನದೀಪಗಳನ್ನು ಮೋಡಗಳ ಮೇಲೆ ತಿರುಗಿಸು.
  4. (ತಂತ್ರ, ಕುಚೋದ್ಯ, ಹಾಸ್ಯ, ಮೊದಲಾದವನ್ನು ವ್ಯಕ್ತಿಯ ಮೇಲೆ) ನಡಸು ; ಮಾಡು; ಪ್ರಯೋಗಿಸು: played a trick on me ನನ್ನ ಮೇಲೆ ಕುತಂತ್ರ ಮಾಡಿದ.
  5. (ಕ್ರಿಕೆಟ್‍, ಇಸ್ಪೀಟು, ಮೊದಲಾದ ಆಟ) ಆಡು.
  6. (ಅಕರ್ತೃಕವಾಗಿ ಸಹ) (ಕ್ರಿಕೆಟ್‍, ಟೆನಿಸ್‍, ಮೊದಲಾದ ಆಟಗಳಲ್ಲಿ ಚೆಂಡೆಸೆತಗಾರ ಚೆಂಡನ್ನು ಎಸೆಯುವ, ಹೊಡೆಯುವ ಮೊದಲು ಆಟಗಾರನಿಗೆ ಕೊಡುವ ಆದೇಶವಾಗಿ) ಆಡು.
    1. ಆಟದಲ್ಲಿ (ಒಬ್ಬನ ಮೇಲೆ) ಹೋರಾಡು; (ಒಬ್ಬನೊಡನೆ) ಸೆಸು; ಸ್ಪರ್ಧಿಸು: will you play him at wrestling? ನೀನು ಅವನ ಮೇಲೆ ಕುಸ್ತಿ ಆಡುತ್ತೀಯಾ?
    2. (ಒಂದು ಆಟ ಯಾ ಮನರಂಜನಾ ಕಾರ್ಯಕ್ರಮದಲ್ಲಿ) ಭಾಗವಹಿಸು.
    3. (ಒಂದು ನಿರ್ದಿಷ್ಟ ಸ್ಥಾನದಲ್ಲಿ) ತಂಡದಲ್ಲಿ ಆಡು.
    4. (play in, on, at, ಮೊದಲಾದ) (ಆಟಗಾರನಿಗೆ) ನಿರ್ದಿಷ್ಟಸ್ಥಾನ ಕೊಡು.
  7. (ವ್ಯಕ್ತಿಯನ್ನು) ಆಟವಾಡಲು ನೇಮಿಸು; ಆಟಗಾರರ ತಂಡದಲ್ಲಿ ಸೇರಿಸು; ಆಡಿಸು: shall we play Smith in the next match? ಮುಂದಿನ ಪಂದ್ಯದಲ್ಲಿ ನಾವು ಸ್ಮಿತ್‍ನನ್ನು ಆಡಿಸೋಣವೇ?
  8. (ಚದುರಂಗ ಮೊದಲಾದ ಆಟಗಳಲ್ಲಿ) ಕಾಯಿ ನಡಸು: play a pawn ಒಂದು ಪ್ಯಾದೆಯನ್ನು ನಡೆಸು.
  9. (ಇಸ್ಪೀಟ್‍ನಲ್ಲಿ ತನ್ನ ಸರದಿ ಬಂದಾಗ) ಎಲೆ ಇಳಿ; ಎಲೆಹಾಕು.
  10. (ಕ್ರಿಕೆಟ್‍ ಮೊದಲಾದ, ಆಟಗಳಲ್ಲಿ) ನಿರ್ದಿಷ್ಟರೀತಿಯಲ್ಲಿ (ಮುಖ್ಯವಾಗಿ ತನ್ನ ಕಡೆಯ ವಿಕೆಟ್‍, ಗೋಲು, ಮೊದಲಾದವನ್ನು ರಕ್ಷಿಸಿಕೊಂಡು) ಚೆಂಡು ಹೊಡೆ.
  11. (ಸಂಗೀತವಾದ್ಯವನ್ನು) ನುಡಿಸು; ಬಾಜಿಸು.
  12. (ಸಂಗೀತವನ್ನು, ಸಂಗೀತದ ಭಾಗವನ್ನು) ವಾದ್ಯದ ಮೇಲೆ ನುಡಿಸು, ಬಾಜಿಸು: he played an old tune on the flute ಅವನು ಕೊಳಲಿನಲ್ಲಿ ಒಂದು ಹಳೆಯ ರಾಗವನ್ನು ನುಡಿಸಿದನು.
  13. ರಂಗಸ್ಥಳದ ಮೇಲೆ (ನಾಟಕ) ಆಡು; ಪ್ರದರ್ಶಿಸು: play ‘Hamlet’ ಹ್ಯಾಮ್ಲೆಟ್‍ ನಾಟಕವನ್ನು ಆಡು.
  14. (ನಾಟಕ, ಸಿನಿಮಾ, ಮೊದಲಾದವುಗಳಲ್ಲಿ ಪಾತ್ರವನ್ನು) ಅಭಿನಯಿಸು; ಪಾತ್ರವಹಿಸು: play Shylock ಷೈಲಾಕ್‍ ಪಾತ್ರವಹಿಸು.
  15. (ರೂಪಕವಾಗಿ) ವಾಸ್ತವ ಜೀವನದಲ್ಲಿ (ಒಂದರ ಪಾತ್ರದಂತೆ) ನಡೆದುಕೋ, ವರ್ತಿಸು: play the fool ಮೂರ್ಖನಂತೆ ಆಡು. play the man ಗಂಡಿನಂತೆ ನಡೆ; ಪೌರುಷದಿಂದ ವರ್ತಿಸು. play truant ಕೆಲಸಕ್ಕೆ, ಶಾಲೆಗೆ ತಪ್ಪಿಸಿಕೊ; ಚಕ್ಕರ್‍ ಹೊಡೆ.
  16. (ರೆಕಾರ್ಡ್‍, ರೆಕಾರ್ಡ್‍ ಪ್ಲೇಯರ್‍, ಮೊದಲಾದವನ್ನು) ಚಾಲನೆಗೊಳಿಸು; ಧ್ವನಿಯುಂಟುಮಾಡುವಂತೆ ಮಾಡು.
  17. (ವ್ಯಕ್ತಿಯನ್ನು) (ನಿರ್ದಿಷ್ಟ ರೀತಿಯಲ್ಲಿ) ಪರಿಗಣಿಸು; ಭಾವಿಸು: played me for a fool ನನ್ನನ್ನು ಮೂರ್ಖನೆಂದು ಭಾವಿಸಿದನು.
  18. ಜೂಜಾಡು; ಬಾಜಿ ಕಟ್ಟು.
  19. (play in, out) ಸಂಗೀತದಲ್ಲಿ ವ್ಯಕ್ತಿಯ ಜೊತೆಗೆ ಬಾಜಿಸು ಯಾ ಹಾಡು.
ಅಕರ್ಮಕ ಕ್ರಿಯಾಪದ
  1. ಆಟವಾಡು; ಕುಣಿದಾಡು; ನಲಿದಾಡು; ಹಾರಾಡು; ನೆಗೆದಾಡು; ಮೆಲ್ಲಗೆ ಸುಳಿದಾಡು; ಚಟುವಟಿಕೆಯಿಂದ ಮನಬಂದಂತೆ, ಓಡಾಡು: bees play about flowers ದುಂಬಿಗಳು ಹೂವುಗಳ ಸುತ್ತ ಹಾರಾಡುತ್ತವೆ.
    1. (ಅಲೆ, ಗಾಳಿ, ಬೆಳಕು, ಮೊದಲಾದವು) ಹಗುರವಾಗಿ ಬಡಿ, ತಾಗು, ಹೊಡೆ; ಸುಳಿದಾಡು: wind plays on water ಗಾಳಿ ನೀರಿನ ಮೇಲೆ ಸುಳಿದಾಡುತ್ತದೆ.
    2. ಮೆಲ್ಲಗೆ ಸ್ಪರ್ಶಿಸು, ತಾಗು.
  2. ಸುತ್ತಾಡು; ಸುಳಿದಾಡು; ಇಲ್ಲಿಂದಲ್ಲಿಗೆ ಚಲಿಸು, ವಿಲಾಸವಾಡು: his fancy played round the idea ಅವನ ಕಲ್ಪನೆಯು ಭಾವನೆಯ ಸುತ್ತ ವಿಲಾಸವಾಡಿತು.
  3. (ಯಂತ್ರ ಮೊದಲಾದವುಗಳ ಭಾಗಗಳು) ಸಲೀಸಾಗಿ ಚಲಿಸು; ಸರಾಗವಾಗಿ ಆಡು: the piston rod plays within a cylinder ಆಡುಬೆಣೆಯ ಸರಳು ಸಿಲಿಂಡರಿನೊಳಗೆ ಆಡುತ್ತದೆ.
  4. (ಬಂದೂಕು ಮೊದಲಾದವು) ಹಾರು; ಗುಂಡುಹೊಡೆ: the cannon on both sides began to play ಎರಡು ಕಡೆಯೂ ಫಿರಂಗಿ ಹಾರಲು ಪ್ರಾರಂಭವಾಯಿತು.
  5. ವಿನೋದವಾಗಿ ಕಾಲ ಕಳೆ; ವಿನೋದವಾಡು; ಕ್ರೀಡಿಸು; ವಿಹರಿಸು; ಆಟವಾಡು: to play with fools, what a fool was I! ಮೂರ್ಖರೊಡನೆ ವಿನೋದವಾಗಿ ಕಾಲ ಕಳೆಯಲು ನಾನೆಂಥ ಮೂರ್ಖನಾಗಿದ್ದೆ!
  6. (ಪ್ರಾಚೀನ ಪ್ರಯೋಗ) (ಮುಖ್ಯವಾಗಿ ಮುಷ್ಕರ ಹೂಡಿರುವ ಕೆಲಸಗಾರರ ವಿಷಯದಲ್ಲಿ) ಕೆಲಸಕ್ಕೆ ಹೋಗದೆ ನಿಂತುಬಿಡು: of the 70,೦೦೦ ಮೆ ಲಯಿ ೪೦,೦೦೦ ಅರೆ ನೊನುನಿಒನಿ ಕೆಲಸಕ್ಕೆ ಹೋಗದೆ ನಿಂತ $70,000$ ಜನಗಳ ಪೈಕಿ $40,000$ ಸಂಘೇತರರು.
  7. ತಮಾಷೆಗಾಗಿ ವರ್ತಿಸು, ಸೋಗುಹಾಕು, ನಟಿಸು: let us play that we are gypsies ನಾವು ಜಿಪ್ಸಿಗಳೆಂದು ತಮಾಷೆಗಾಗಿ ನಟಿಸೋಣ.
  8. ಜೂಜಾಡು: played for heavy stakes ಭಾರಿ ಹಣ ಕಟ್ಟಿ ಜೂಜಾಡಿದನು.
  9. (ಸಂಗೀತ ವಾದ್ಯದ ಮೇಲೆ) ನುಡಿಸು; ಬಾಜಿಸು.
  10. (ಆಡುಮಾತು) ಭಾಗವಹಿಸು; ಸಹಕರಿಸು; ಮಾಡಬೇಕಾದ್ದನ್ನು ಮಾಡು: they won’t play ಅವರು (ಮಾಡಬೇಕಾದ್ದನ್ನು) ಮಾಡುವುದಿಲ್ಲ.
  11. (ಕ್ರಿಕೆಟ್‍ ಮೈದಾನದ ವಿಷಯದಲ್ಲಿ) ನಿರ್ದಿಷ್ಟ ರೀತಿಯಲ್ಲಿ ಆಟಕ್ಕೆ ಅನುಕೂಲವಾಗಿರು: the pitch is playing fast ಪಿಚ್ಚು ವೇಗದ ಬೋಲಿಂಗಿಗೆ ಅನುಕೂಲವಾಗಿದೆ.
  12. (ಆಡುಮಾತು) ಒಂದು ನಿರ್ದಿಷ್ಟ ರೀತಿಯಲ್ಲಿ ನಡೆ, ವರ್ತಿಸು: play fair ಸರಿಯಾಗಿ, ನ್ಯಾಯವಾಗಿ ವರ್ತಿಸು.
  13. (ನಾಟಕ ಮೊದಲಾದವುಗಳಲ್ಲಿ) ಪಾತ್ರವೊಂದನ್ನು ವಹಿಸು, ಅಭಿನಯಿಸು.
ಪದಗುಚ್ಛ
  1. play about (or around) ಬೇಜವಾಬ್ದಾರಿಯಿಂದ ನಡೆದುಕೊ, ವರ್ತಿಸು.
  2. play a good $^1$knife and fork.
  3. play a good stick ಕತ್ತಿವರಸೆ ಚೆನ್ನಾಗಿ ಮಾಡು.
  4. play along ಸಹಕರಿಸುವಂತೆ ನಟಿಸು, ನಟನೆಮಾಡು.
  5. play at
    1. (ಆಟದಲ್ಲಿ) ತೊಡಗು; ಆಟವಾಡು.
    2. ಆಟದಂತೆ ಆಡು ಯಾ ಮಾಡು; ಮಾಡುವಂತೆ ನಟಿಸು; ಅಶ್ರದ್ಧೆಯಿಂದ ಕಳಪೆಯಾಗಿ, ಅರೆ ಮನಸ್ಸಿನಿಂದ (ಹೋರಾಟ ಮೊದಲಾದವನ್ನು) ಮಾಡು: he was only playing at boxing ಅವನು ಕೇವಲ ಮುಷ್ಟಿಕಾಳಗದ ಆಟವಾಡುತ್ತಿದ್ದ; ಅವನು ಅರೆ ಮನಸ್ಸಿನಿಂದ ಮಾತ್ರ ಮುಷ್ಟಿಕಾಳಗವನ್ನು ಮಾಡುತ್ತಿದ್ದ.
  6. play back (ಮುಖ್ಯವಾಗಿ ಧ್ವನಿ ಮುದ್ರಣಗಳ ಗುಣಮಟ್ಟವನ್ನು ನೋಡಿ ನಿಯಂತ್ರಿಸಲು, ಸದ್ಯದಲ್ಲಿ ಮುದ್ರಿಸಿದ ಧ್ವನಿಗಳನ್ನು) ಮತ್ತೆ ಹಾಕು; ಪುನರಾವರ್ತಿಸು; ಮತ್ತೆ ಕೇಳಿಸುವಂತೆ ಮಾಡು.
  7. play ball (ಆಟವನ್ನು) ಆರಂಭಿಸು; ಆಟವನ್ನು ಮುಂದುವರಿಸು; ಮತ್ತೆ ಆರಂಭಿಸು; ಸಹಕರಿಸು: you play ball with me and I’ll play ball with you ನೀನು ನನ್ನೊಡನೆ ಸಹಕರಿಸಿದರೆ ನಾನು ನಿನ್ನ ಜೊತೆ ಸಹಕರಿಸುತ್ತೇನೆ.
  8. play both ends against the middle (ತನ್ನ ಲಾಭಕ್ಕೋಸ್ಕರ) ವಿರೋಧ ಗುಂಪುಗಳನ್ನು ಒಂದರ ಮೇಲೊಂದು ಎತ್ತಿಕಟ್ಟು.
  9. play by ear
    1. ಕೇಳ್ಮೆಯಿಂದ ನುಡಿಸು; ಸಂಗೀತದ ಸ್ವರಪ್ರಸ್ತಾರದ ಲಿಖಿತ ಪುಟದ ನೆರವಿಲ್ಲದೆ ವಾದ್ಯವನ್ನು ನುಡಿಸು, ಬಾಜಿಸು.
    2. (play it by ear ಸಹ) ಪರಿಣಾಮ ಮತ್ತು ಸಂದರ್ಭಗಳಿಗೆ ಅನುಸಾರವಾಗಿ ಸಹಜ ಪ್ರವೃತ್ತಿಯಿಂದ ಯಾ ಹೆಜ್ಜೆಹೆಜ್ಜೆಯಾಗಿ ಮುಂದುವರಿ.
    3. (ಒಬ್ಬನ ಶಕ್ತಿಯನ್ನು ತೋರಿಸುವಂಥ ಅನಿರೀಕ್ಷಿತ ಸಂದರ್ಭದಲ್ಲಿ) ಥಟಕ್ಕನೆ ಯೋಚಿಸಿಕೊಂಡು ಹೇಳು, ಮಾಡು, ಕಲ್ಪಿಸು: faced by his two wives he had to play it by ear ಇಬ್ಬರು ಹೆಂಡತಿಯರು ಅವನ ಎದುರು ನಿಂತಾಗ ಅವನು ಥಟಕ್ಕನೆ ಏನನ್ನೋ ಕಲ್ಪಿಸಿಕೊಂಡು ಹೇಳಬೇಕಾಯಿತು.
  10. play (congregation etc.,) in (or out) (ತಂಡ ಮೊದಲಾದವು ಒಳಗೆ ಬರುವಾಗ ಯಾ ಹೊರಗೆ ಹೋಗುವಾಗ) ಆರ್ಗನ್‍ ವಾದ್ಯವನ್ನು ಬಾಜಿಸು.
  11. play down
    1. ಕೆಳಕ್ಕಿಳಿಸು; ಮಹತ್ವ ಕಡಮೆಮಾಡು; ಅಲ್ಪವಾಗೆಣಿಸು; ಕಡೆಗಣಿಸು; ಅಪ್ರಧಾನವೆಂದು ಭಾವಿಸು: he has played down his own part in this successful enterprise ಈ ಯಶಸ್ವಿ ಉದ್ಯಮದಲ್ಲಿ ತನ್ನ ಪಾತ್ರವನ್ನೇ ಅಲ್ಪವಾಗೆಣಿಸಿದ್ದಾನೆ.
    2. (ಒಂದರ, ಒಬ್ಬನ) ಮಹತ್ವವನ್ನು, ಪ್ರಾಮುಖ್ಯವನ್ನು – ಇಳಿಸು, ತಗ್ಗಿಸು.
  12. play ducks and $^2$drakes.
  13. played out
    1. ಶಕ್ತಿಯೆಲ್ಲಾ ಕುಗ್ಗಿಹೋದ; ಸತ್ವ ಹೀರಿದಂತಾದ; ಸತ್ವಗುಂದಿದ; ಸುಸ್ತಾದ: our horses were played out ನಮ್ಮ ಕುದುರೆಗಳು ಶಕ್ತಿಯಿಲ್ಲದೆ ಸುಸ್ತಾದವು.
    2. ಕೆಲಸಕ್ಕೆ ಬಾರದೆ ಹೋದ; ಉಪಯೋಗಕ್ಕೆ ಬಾರದ; ಪ್ರಯೋಜನಕ್ಕೆ ಬರದಂತಾದ: free trade is played out ಮುಕ್ತವ್ಯಾಪಾರದ ದಿನಗಳು ಮುಗಿದಿವೆ; ಮುಕ್ತ ವ್ಯಾಪಾರದಿಂದ ಈಗ ಯಾವ ಪ್ರಯೋಜನವೂ ಇಲ್ಲ.
  14. play fair
    1. ನ್ಯಾಯವಾಗಿ ಆಡು.
    2. ನ್ಯಾಯವಾಗಿ ವರ್ತಿಸು.
  15. play false
    1. (ವ್ಯಕ್ತಿಯನ್ನು) ಮೋಸದಿಂದ ಯಾ ದ್ರೋಹದಿಂದ ಕಾಣು.
    2. (ವ್ಯಕ್ತಿಯ ಬಗ್ಗೆ) ಮೋಸದಿಂದ ಯಾ ದ್ರೋಹದಿಂದ ವರ್ತಿಸು.
  16. play $^3$fast and loose.
  17. play first $^1$fiddle.
  18. play second $^1$fiddle.
  19. play for time (ತನ್ನ ಅನುಕೂಲಕ್ಕಾಗಿ) ನಿಧಾನಮಾಡು; ಕಾಲವನ್ನು ಎಳೆ; ಹೆಚ್ಚು ಕಾಲ ತೆಗೆದುಕೊ; (ಯಾವುದೇ ಘಟನೆ ಯಾ ನಿರ್ಣಯ) ಸಂಭವಿಸದಂತೆ, ಕಾರ್ಯಗತವಾಗದಂತೆ, ಸಾಗದಂತೆ – ಮಾಡು: their manoeuvring at the conference was calculated to play for time ಸಮ್ಮೇಳನದಲ್ಲಿ ಅವರು ಹೂಡಿದ ತಂತ್ರ (ಹೂಟ) ಕಾಲವನ್ನು ಎಳೆಯುವ ಉದ್ದೇಶದಿಂದ ಕೂಡಿತ್ತು.
  20. play foul
    1. ಅನ್ಯಾಯವಾಗಿ, ನ್ಯಾಯವಿರುದ್ಧವಾಗಿ ಆಡು.
    2. ಅನ್ಯಾಯವಾಗಿ, ನ್ಯಾಯರಹಿತವಾಗಿ ವರ್ತಿಸು.
  21. play $^2$havoc with.
  22. play hell with
  23. play hookey.
  24. play horse ಮೂರ್ಖನಂತೆ ವರ್ತಿಸು: don’t play horse with me ನನ್ನ ಹತ್ತಿರ ಮೂರ್ಖನಂತೆ ವರ್ತಿಸಬೇಡ.
  25. play into the hands of (or into a person’s hands) (ಎದುರಾಳಿಗೆ, ಪಾಲುದಾರನಿಗೆ) ಅನುಕೂಲವಾಗುವಂತೆ, ಲಾಭವಾಗುವಂತೆ ವರ್ತಿಸು: (ಎದುರಾಳಿಯ ಯಾ ಪಾಲುದಾರನ) ಕೈಯಲ್ಲಿ ಸಿಕ್ಕಿಬೀಳು, ಸಿಕ್ಕಿ ಬೀಳುವಂತೆ ವರ್ತಿಸು: if you lose your temper when he abuses you, you will be laying into his hands ಅವನು ನಿನ್ನನ್ನು ಬಯ್ದಾಗ ನೀನು ಕೋಪಗೊಂಡರೆ, ಅದು ಅವನಿಗೆ ಲಾಭವಾಗುವಂತೆ ನೀನು ವರ್ತಿಸಿದಂತಾಗುತ್ತದೆ.
  26. play it cool
    1. (ಆಡುಮಾತು) ಅಸಡ್ಡೆ, ಉಪೇಕ್ಷೆ – ನಟಿಸು; ಆಸಕ್ತಿಯಿಲ್ಲದಂತೆ ತೋರಿಸಿಕೊ.
    2. ಆರಾಮವಾಗಿರು; ನಿಶ್ಚಿಂತೆಯಿಂದಿರು.
    3. ನಿರ್ಭಾವದಿಂದಿರು; ಭಾವರಹಿತವಾಗಿರು; ತಣ್ಣಗಿರು; ಉತ್ಸಾಹ, ಆಸಕ್ತಿ – ಇಲ್ಲದಿರು.
  27. play it on (or low on) (ಅಶಿಷ್ಟ) (ವ್ಯಕ್ತಿಯನ್ನು) ಕೀಳುರೀತಿಯಲ್ಲಿ ಉಪಯೋಗಿಸಿಕೊಂಡು ಸ್ವಪ್ರಯೋಜನ ಪಡೆ.
  28. play off
    1. (ಮುಖ್ಯವಾಗಿ ಸ್ವಪ್ರಯೋಜನಕ್ಕಾಗಿ ಒಬ್ಬನನ್ನು ಮತ್ತೊಬ್ಬನ ಮೇಲೆ) ಎತ್ತಿಕಟ್ಟು: she played off one suitor against another ಅವಳು ಒಬ್ಬ ವಿವಾಹಾರ್ಥಿಯನ್ನು ಮತ್ತೊಬ್ಬನ ಮೇಲೆ ಎತ್ತಿಕಟ್ಟಿದಳು.
    2. ‘ಡ್ರಾ’ ಯಾ ಸರಿಸಮವಾದ ಪಂದ್ಯವನ್ನು ನಿರ್ಣಯಿಸಲು ಒಂದು ಹೆಚ್ಚಿನ ಆಟವನ್ನು ಆಡು.
    3. (ಒಬ್ಬನ ಬಗ್ಗೆ) ಇತರರಿಗೆ ಒಳ್ಳೆಯ ಅಭಿಪ್ರಾಯ ಮೂಡದಂತೆ (ಒಬ್ಬನನ್ನು) ನಡೆದುಕೊಳ್ಳುವಂತೆ ಮಾಡು: his delight was in finding new fools and playing them off ಹೊಸ ಹೊಸ ಮೂರ್ಖರನ್ನು ಹಿಡಿದು ಅವರನ್ನು ಇತರರ ಅನಾದರಕ್ಕೆ ಪಕ್ಕಾಗುವಂತೆ ಮಾಡುವುದೇ ಅವನಿಗೆ ಸಂತೋಷ.
    4. (ಒಂದು ವಸ್ತುವನ್ನು) ಮತ್ತೊಂದು ವಸ್ತುವೆಂದು ಹೇಳಿ – ತಟಾಯಿಸು, ಏಮಾರಿಸು, ಪ್ರದರ್ಶಿಸು: playing off Jacobite effusions as the national literature of Scotland ಎರಡನೆಯ ಜೇಮ್ಸ್‍ನ ಬೆಂಬಲಿಗರ ಜ್ಯಾಕೊಬೈಟ್‍ ಉದ್ಗಾರಗಳನ್ನು (ನಿರರ್ಗಳ ಮಾತುಗಳನ್ನು) ಸ್ಕಾಟ್ಲೆಂಡಿನ ರಾಷ್ಟ್ರೀಯ ಸಾಹಿತ್ಯವೆಂದು ಪ್ರದರ್ಶಿಸುತ್ತಾ.
  29. play one’s cards well (or right)
    1. ಅವಕಾಶಗಳ ಸದುಪಯೋಗ ಮಾಡಿಕೊ.
    2. ತನ್ನ ಕೆಲಸವನ್ನು ಬುದ್ಧಿವಂತಿಕೆಯಿಂದ, ವಿವೇಚನೆಯಿಂದ ಮಾಡು.
  30. play one’s part well ತನ್ನ ಪಾತ್ರದಲ್ಲಿ ಸರಿಯಾಗಿ ವರ್ತಿಸು; ತನ್ನ ಪಾತ್ರವನ್ನು ಚೆನ್ನಾಗಿ ನಿರ್ವಹಿಸು.
  31. play on to one’s wicket (ಕ್ರಿಕೆಟ್‍) ತನ್ನ ವಿಕೆಟ್ಟಿಗೇ ಚೆಂಡು ಹೊಡೆದು ಆಟ ಕಳೆದುಕೊ, ಔಟಾಗು.
  32. play oneself in (ಆಟ ಮೊದಲಾದವುಗಳಲ್ಲಿ) ಆಗಿನ, ತತ್ಕಾಲದ ಪರಿಸ್ಥಿತಿಗಳಿಗೆ ಹೊಂದಿಕೊ.
  33. play out
    1. (ಆಟ ಮೊದಲಾದವನ್ನು ಪೂರ್ತಿ ಆಡಿ) ಮುಗಿಸು; ಕೊನೆಗಾಣಿಸು; ಮುಕ್ತಾಯಕ್ಕೆ ತರು.
    2. ಎಲ್ಲವನ್ನೂ ಬಳಸಿಬಿಡು; ಖಾಲಿಮಾಡು; ಬರಿದುಮಾಡು: play out one’s supplies ತನ್ನ ಸರಬರಾಯಿಗಳನ್ನೆಲ್ಲಾ ಬರಿದು ಮಾಡು.
  34. play politics
    1. (ಸಾಮಾನ್ಯ ಹಿತದೃಷ್ಟಿಯಿಂದಾಗಲಿ ತತ್ವದೃಷ್ಟಿಯಿಂದಾಗಲಿ ಅಲ್ಲದೆ) ಪಕ್ಷದ ರಾಜಕೀಯ ಲಾಭದ ದೃಷ್ಟಿಯಿಂದ ವರ್ತಿಸು; ರಾಜಕೀಯ ಲಾಭದ ದೃಷ್ಟಿಯಿಂದ ವರ್ತಿಸು; ರಾಜಕೀಯ ಮಾಡು; ರಾಜಕೀಯ ನಡಸು; refused to play politics with foreign policy ವಿದೇಶ ನೀತಿಯಲ್ಲಿ ರಾಜಕೀಯ ಮಾಡಲು (ಪಕ್ಷೀಯ ರಾಜಕೀಯ ಲಾಭದ ದೃಷ್ಟಿಯಿಂದ ವರ್ತಿಸಲು) ನಿರಾಕರಿಸಿದ.
    2. (ಮಸಲತ್ತಿನಿಂದ ಯಾ ಒಳಸಂಚಿನಿಂದ) ತನ್ನ ಸ್ವಾರ್ಥ ಸಾಧಿಸಬಯಸು: play office politics ಕಚೇರಿ ರಾಜಕೀಯ ನಡಸು; ಕಚೇರಿ ವ್ಯವಹಾರಗಳಲ್ಲಿ ಮಸಲತ್ತುಮಾಡಿ ಸ್ವಾರ್ಥಸಾಧಿಸಲು ಪ್ರಯತ್ನಿಸು.
  35. play possum.
    1. ಮಲಗಿರುವಂತೆ ಯಾ ಸತ್ತಿರುವಂತೆ ನಟಿಸು: after they have once drugged you, you play possum ನಶೀಲಿ ವಸ್ತುವನ್ನು ಒಮ್ಮೆ ಸೇವಿಸಲು ನಿನಗೆ ಕೊಟ್ಟುಬಿಟ್ಟ ಮೇಲೆ, ನೀನು ಮಲಗಿದವನಂತೆ ನಟಿಸು.
    2. ಏನೂ ತಿಳಿಯದವನಂತೆ ನಟನೆ ಮಾಡು.
  36. play safe (or for safety) ಅಪಾಯವಾಗದಂತೆ ವರ್ತಿಸು; ಎಚ್ಚರಿಕೆಯಿಂದ ವರ್ತಿಸು.
  37. play well (ಕ್ರಿಕೆಟ್‍ ಮೈದಾನದ ವಿಷಯದಲ್ಲಿ) ಆಟಕ್ಕೆ ಚೆನ್ನಾಗಿರು. ಹದವಾಗಿರು.
  38. play the $^1$field.
  39. play the game
    1. ಆಟದ ನಿಯಮಗಳನ್ನು ಪಾಲಿಸು; ನ್ಯಾಯವಾಗಿ ಆಟವಾಡು.
    2. (ರೂಪಕವಾಗಿ) ಸಭ್ಯರೀತಿಯಲ್ಲಿ, ನ್ಯಾಯವಾಗಿ, ಗೌರವದಿಂದ – ನಡೆದುಕೊ; ಸಂಭಾವಿತವಾಗಿ ವರ್ತಿಸು.
  40. play the market ಬಂಡವಾಳ ಪತ್ರ ಮೊದಲಾದವುಗಳಲ್ಲಿ ಜೂಜಾಡು.
  41. play to the $^1$gallery.
  42. play up
    1. (ಒಂದರ) ಮಹತ್ವವನ್ನು ಹೆಚ್ಚಿಸು; ಪ್ರಾಶಸ್ತ್ಯಕೊಡು.
    2. ಜಾಹೀರಾತು ಮಾಡು; ಪ್ರಚಾರಮಾಡು: the schools are playing up their science programmes ಶಾಲೆಗಳು ತಮ್ಮ ವಿಜ್ಞಾನ ಕಾರ್ಯಕ್ರಮಗಳನ್ನು ಪ್ರಚಾರ ಮಾಡುತ್ತಿವೆ.
    3. ಕುಚೇಷ್ಟೆ ಮಾಡು; ಕುಚೋದ್ಯದಿಂದ ವರ್ತಿಸು.
    4. ತೊಂದರೆ, ಕಾಟ ಕೊಡು; ಕಿರಿಕಿರಿ ಉಂಟುಮಾಡು: my rheumatism is playing up again ನನ್ನ ಸಂಧಿವಾತ ಮತ್ತೆ ತೊಂದರೆ ಕೊಡುತ್ತಿದೆ.
    5. ಅಡ್ಡಿಪಡಿಸು ಯಾ ಅಡ್ಡಿಯುಂಟುಮಾಡಿ ಕಿರಿಕಿರಿಗೊಳಿಸು: played the teacher up ಅಡ್ಡಿಪಡಿಸಿ ಉಪಾಧ್ಯಾಯನಿಗೆ ಕಿರಿಕಿರಿ ಉಂಟು ಮಾಡಿದ .
    6. (ಆಟವನ್ನು) ಸರಿಯಾಗಿ ಆಡು; ಪೂರ್ಣಶಕ್ತಿಯನ್ನು ಉಪಯೋಗಿಸಿ ಆಡು.
    7. (ಒಂದರ) ಪೂರ್ಣ ಲಾಭಪಡೆದುಕೊ; (ಒಂದರ) ದುರುಪಯೋಗಮಾಡಿಕೊ.
    8. (ಆಡುಮಾತು) ರೇಗಿಸು; ಕಿರಿಕಿರಿ ಉಂಟುಮಾಡು.
  43. play on (or upon) (ವ್ಯಕ್ತಿಯ ಭಯ, ವಿಚಾರ ಮಾಡದ ನಂಬಿಕೆ, ಮೊದಲಾದವನ್ನು) ಬಳಸಿಕೊ; ದುರುಪಯೋಗಪಡಿಸಿಕೊ: she is one of those people who will go through life playing on the good nature of others ಇತರರ ಒಳ್ಳೆಯ ಸ್ವಭಾವವನ್ನು ದುರುಪಯೋಗಪಡಿಸಿಕೊಂಡು ಜೀವನವನ್ನು ಸಾಗಿಸುವ ಜನರ ಪೈಕಿ ಅವಳೊಬ್ಬಳು.
  44. play upon the square ನ್ಯಾಯವಾಗಿ ವರ್ತಿಸು.
  45. play up to
    1. (ಮತ್ತೊಬ್ಬ ನಟನಿಗೆ) ಬೆಂಬಲವಾಗಿ ನಾಟಕದಲ್ಲಿ ಅಭಿನಯಿಸು.
    2. (ರೂಪಕವಾಗಿ) ಬೆಂಬಲಕೊಡು; ಬೆನ್ನುತಟ್ಟು; ಪ್ರೋತ್ಸಾಹಿಸು.
    3. (ಮುಖ್ಯವಾಗಿ ಅನುಗ್ರಹ ಗಳಿಸಲು) ಹೊಗಳು; ಮುಖಸ್ತುತಿಮಾಡು; ಭಟ್ಟಂಗಿ ಕೆಲಸಮಾಡು: he always plays up to his political boss ಅವನು ಯಾವಾಗಲೂ ತನ್ನ ರಾಜಕೀಯ ದಣಿಯ ಮುಖಸ್ತುತಿಮಾಡುತ್ತಾನೆ.
  46. play (up)on words ಹದಿರು ನುಡಿಯಾಡು; ಶ್ಲೇಷೆಯಿಂದ ಮಾತನಾಡು; ಪದಚಮತ್ಕಾರ ತೋರಿಸು.
  47. play with
    1. (-ಒಡನೆ) ವಿನೋದವಾಡು; ವಿನೋದವಾಗಿ ಆಟವಾಡು.
    2. ಕಡೆಗಣಿಸು; ಉಪೇಕ್ಷಿಸು; ಹುಡುಗಾಟಿಕೆ ಮಾಡು; ಅಸಡ್ಡೆಯಿಂದ ಕಾಣು; ಲಘುವಾಗಿ ಕಾಣು, ವರ್ತಿಸು: it is wrong for a man to play with a woman’s affections ಹೆಂಗಸಿನ ಪ್ರೀತಿಯೊಡನೆ ಗಂಡಸು ಹುಡುಗಾಟಿಕೆಯಾಡುವುದು ತಪ್ಪು.
  48. play with fire ಬೆಂಕಿಯೊಡನೆ ಸರಸವಾಡು.