See also 1prick
2prick ಪ್ರಿಕ್‍
ಸಕರ್ಮಕ ಕ್ರಿಯಾಪದ
  1. ಕೊಂಚ ಚುಚ್ಚು; ಸಣ್ಣ ತೂತು, ರಂಧ್ರ – ಮಾಡು.
  2. (ರೂಪಕವಾಗಿ) ಚುಚ್ಚು; ತಿವಿ; ಇರಿ; ಕುಟುಕು: my conscience pricked me ನನ್ನ ಅಂತಃಸಾಕ್ಷಿ ನನ್ನನ್ನು ಚುಚ್ಚಿತು, ಕುಟುಕಿತು.
  3. (ಪ್ರಾಚೀನ ಪ್ರಯೋಗ) (ಕುದುರೆಯನ್ನು) ಚುಚ್ಚಿ ಓಡಿಸು; ತಿವಿದು ನಡೆಸು.
  4. (ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ)
    1. (ಪಟ್ಟಿಯಲ್ಲಿ ಹೆಸರು ಮೊದಲಾದವನ್ನು) ಚುಚ್ಚಿ ಗುರುತುಮಾಡು.
    2. (ಕೌಂಟಿಯ ನ್ಯಾಯಪರಿಪಾಲನಾಧಿಕಾರಿಯನ್ನು) ಚುಚ್ಚುಗುರುತುಮಾಡಿ – ಚುನಾಯಿಸು, ಆರಿಸು.
  5. ಚುಕ್ಕೆಗಳನ್ನು ಹಾಕಿ (ಮಾದರಿಯನ್ನು) ಗುರುತುಮಾಡು, ರೂಪಿಸು.
ಅಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ಕುದುರೆ ಸವಾರಿ ಮಾಡುತ್ತ ಮುಂದುವರಿ.
  2. ಚುಚ್ಚಿದಂತಾಗು; ಚುಚ್ಚಿದ ಅನುಭವವಾಗು.
  3. ಚುಚ್ಚುವಂತೆ ತಿವಿ, ಇರಿ.
ಪದಗುಚ್ಛ
  1. prick a (or the) bladder (or bubble) (ದೊಡ್ಡಸ್ತಿಕೆಯುಳ್ಳವನು ಯಾ ದೊಡ್ಡಸ್ತಿಕೆಯುಳ್ಳದ್ದು ಎಂದು ತಿಳಿದಿರುವ) ವ್ಯಕ್ತಿಯ ಯಾ ವಸ್ತುವಿನ ಪೊಳ್ಳುತನವನ್ನು ತೋರಿಸು; ಟೊಳ್ಳು ಮನುಷ್ಯನೆಂದು ಯಾ ವಸ್ತುವೆಂದು ತೋರಿಸು.
  2. prick in, out, off ನೆಲದಲ್ಲಿ ಮಾಡಿದ ಸಣ್ಣ ಕುಳಿಗಳಲ್ಲಿ (ಸಸಿ ಮೊದಲಾದವುಗಳನ್ನು) ನೆಡು.
  3. prick up one’s ears
    1. (ನಾಯಿಯ ವಿಷಯದಲ್ಲಿ, ಎಚ್ಚರಿಕೆಯಿಂದಿದ್ದಾಗ) ಕಿವಿ ನಿಮಿರಿಸು.
    2. (ರೂಪಕವಾಗಿ, ವ್ಯಕ್ತಿಯ ವಿಷಯದಲ್ಲಿ) ಕಿವಿ ನೆಟ್ಟಗೆ ಮಾಡಿಕೊ; ಥಟ್ಟನೆ ಗಮನಕೊಡು.