See also 1burn  3burn
2burn ಬರ್ನ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ burnt ಯಾ burned)

ಸಕರ್ಮಕ ಕ್ರಿಯಾಪದ
  1. ಸುಡು; ಸುಟ್ಟು – ಬಿಡು, ಹಾಕು; ದಹಿಸಿಬಿಡು; ಸುಟ್ಟು – ಬೂದಿಮಾಡು, ಭಸ್ಮಮಾಡು.
  2. (ದೀಪ, ಎಣ್ಣೆ, ಅನಿಲ, ಮೊದಲಾದವನ್ನು) ಉರಿಸು; ಹೊತ್ತಿಸು; ಬೆಳಗಿಸು; ಬೆಳಗುವಂತೆ ಯಾ ಪ್ರಕಾಶಿಸುವಂತೆ ಮಾಡು.
  3. (ವ್ಯಕ್ತಿಯನ್ನು) ಸುಟ್ಟುಕೊಲ್ಲು; ದಹಿಸಿ ಸಾಯಿಸು.
  4. (ಜೇಡಿಮಣ್ಣು, ಸುಣ್ಣದ ಕಲ್ಲು, ಮೊದಲಾದವನ್ನು ನಿರ್ದಿಷ್ಟ ಉದ್ದೇಶಕ್ಕಾಗಿ) ಸುಡು.
  5. (ಸುಣ್ಣಕಲ್ಲನ್ನು) ಸುಡು; ಸುಟ್ಟು ಸುಣ್ಣ ತಯಾರಿಸು.
  6. (ಇಟ್ಟಿಗೆ, ಮಡಕೆ, ಮೊದಲಾದವನ್ನು) ಸುಡು; ಸುಟ್ಟು – ಗಟ್ಟಿಗೊಳಿಸು ಯಾ ಮೆರುಗು ಕೊಡು.
  7. (ಕಟ್ಟಿಗೆಯನ್ನು) ಸುಟ್ಟು ಇದ್ದಿಲು ತಯಾರಿಸು.
  8. (ಬೆಂಕಿ, ತೀವ್ರಶಾಖ, ಮೊದಲಾದವುಗಳ ವಿಷಯದಲ್ಲಿ) ಸುಟ್ಟು ಗಾಯಗೊಳಿಸು; ಸುಡುಗಾಯವನ್ನುಂಟುಮಾಡು.
  9. ಸುಡುವ ಮೂಲಕ (ತೂತು, ಮೊದಲಾದವನ್ನು) ಮಾಡು.
  10. (ಅಡುಗೆಯಲ್ಲಿ) ಸೀಯಿಸು; ಕರಿಕಾಗುವಂತೆ ಮಾಡು.
  11. (ಅಡುಗೆಯಲ್ಲಿ) ಅಡಿಹತ್ತಿಸು; ತಳಹೊತ್ತಿಸು.
  12. (ಚಿಕಿತ್ಸೆಯಲ್ಲಿ, ಆಮ್ಲ ಮೊದಲಾದ ದಾಹದಿಂದ ಯಾ ಕಾಸಿದ ಕಬ್ಬಿಣದಿಂದ) ಸುಟ್ಟುಬಿಡು; ಬರೆಹಾಕು.
  13. (ಆಮ್ಲ ಮೊದಲಾದವುಗಳ ವಿಷಯದಲ್ಲಿ) ಸುಟ್ಟು – ತಿಂದುಹಾಕು, ದಹಿಸಿಹಾಕು.
  14. (ಆಮ್ಲ ಮೊದಲಾದವು) ಸುಟ್ಟುಹಾಕುವಂತೆ, ದಹಿಸುವಂತೆ – ಮಾಡು; (ಆಮ್ಲ ಮೊದಲಾದವುಗಳಿಂದ) ಸುಡಿಸು.
  15. (ಬಿಸಿಲಿನ ವಿಷಯದಲ್ಲಿ) (ಪೈರುಪಚ್ಚೆ, ಕೆರೆ, ಮೊದಲಾದವನ್ನು) ಒಣಗಿಸು; ಬತ್ತಿಸು.
  16. (ಬಿಸಿಲು ಯಾ ಬೆಂಕಿಯ ವಿಷಯದಲ್ಲಿ) ಸುಟ್ಟು ಕಲೆಗಳನ್ನು ಯಾ ಮಚ್ಚೆಗಳನ್ನು – ಉಂಟುಮಾಡು.
  17. (ಬಿಸಿಲು ಯಾ ಬೆಂಕಿಯ ವಿಷಯದಲ್ಲಿ) ಕಂದಿಸು; ಕಂದುಬಣ್ಣಕ್ಕೆ ತಿರುಗಿಸು.
  18. (ರೂಪಕವಾಗಿ ಸಹ) ಸುಡುವಂತಾಗಿಸು; ಬಿಸಿ ತಾಗಿಸು; ಕಾವು ಮುಟ್ಟಿಸು; ಉರಿಯುವಂತೆ ಮಾಡು: ಉರಿ ಉಂಟುಮಾಡು; ಸುಡುವಿಕೆಯ – ಅನುಭವ ಯಾ ನೋವನ್ನು ಉಂಟುಮಾಡು: the soup burns the throat ಹುಳಿ ಗಂಟಲನ್ನು ಸುಡುತ್ತದೆ.
  19. ರೇಗಿಸು; ಕೆರಳಿಸು; ಕ್ರೋಧವನ್ನುಂಟುಮಾಡು.
  20. (ಯುರೇನಿಯಂ, ಹೈಡ್ರೊಜನ್‍, ಮೊದಲಾದವುಗಳನ್ನು) ಉರಿಸು; ದಹಿಸು; ವಿದಳಿಸಿ ಯಾ ಸಮ್ಮಿಳಿಸಿ ಉಪಯೋಗಿಸು: hundred grammes of uranium were burnt in this reactor ಈ ರಿಯಾಕ್ಟರಿನಲ್ಲಿ ನೂರು ಗ್ರಾಮ್‍ ಯುರೇನಿಯಮ್ಮನ್ನು ದಹಿಸಲಾಯಿತು. hydrogen is burnt to helium ಹೈಡ್ರಿಜನ್ನನ್ನು ಸುಟ್ಟು (ಸಮ್ಮಿಳಿಸಿ) ಹೀಲಿಯಮ್ಮನ್ನು ತಯಾರಿಸಲಾಯಿತು.
  21. ಭಾವೋದ್ರೇಕಗೊಳಿಸು.
ಅಕರ್ಮಕ ಕ್ರಿಯಾಪದ
  1. ಸುಟ್ಟು, ದಹಿಸಿ – ಹೋಗು; ಸುಟ್ಟು – ಭಸ್ಮವಾಗು, ಬೂದಿಯಾಗು.
  2. (ಬೆಂಕಿಯ ವಿಷಯದಲ್ಲಿ) ಉರಿ; ಜ್ವಲಿಸು.
  3. (ದೀಪ, ಎಣ್ಣೆ, ಮೊದಲಾದವುಗಳ ವಿಷಯದಲ್ಲಿ) ಉರಿ; ಬೆಳಗು; ಪ್ರಕಾಶಿಸು.
  4. (ವ್ಯಕ್ತಿಯ ವಿಷಯದಲ್ಲಿ) ಸುಟ್ಟುಸಾಯು.
  5. (ಬೆಂಕಿ ಯಾ ತೀವ್ರ ಶಾಖದಿಂದ) ಸುಟ್ಟಗಾಯವಾಗು.
  6. (ಅಡುಗೆಯಲ್ಲಿ) ಸೀದುಹೋಗು; ಕರಿಕಾಗು; ತಳಹೊತ್ತು.
  7. (ಆಮ್ಲ ಮೊದಲಾದವುಗಳ ವಿಷಯದಲ್ಲಿ) ತಿಂದು, ಸುಟ್ಟು – ಹಾಕು.
  8. (ಬಿಸಿಲಿನಿಂದ ಪೈರುಪಚ್ಚೆ, ಕೆರೆ, ಮೊದಲಾದವು) ಒಣಗಿ, ಬತ್ತಿ – ಹೋಗು.
  9. (ಬಿಸಿಲು ಯಾ ಬೆಂಕಿಯಿಂದ) ಸುಟ್ಟ – ಕಲೆಗಳಾಗು, ಮಚ್ಚೆಗಳಾಗು.
  10. (ರೂಪಕವಾಗಿ ಸಹ) ಸುಡು; ಉರಿ; ಬಿಸಿತಾಗು; ಸುಡುವಿಕೆಯ ಅನುಭವ ಯಾ ನೋವು ಉಂಟಾಗು.
  11. (ಬೆಂಕಿ ಯಾ ತೀವ್ರಶಾಖದಿಂದ) ಸುಡುವಂತಿರು; ಕಾಯ್ದಿರು; ತಪ್ತವಾಗಿರು.
  12. (ಭಾವಗಳ ವಿಷಯದಲ್ಲಿ) ರೇಗು; ಕೆರಳು; ಉರಿ; ಜ್ವಲಿಸು; ಉದ್ರಿಕ್ತವಾಗಿರು; ಆವೇಶದಿಂದ ತುಂಬಿರು.
  13. (ಪ್ರೇಮ, ಹಂಬಲ, ಮೊದಲಾದವುಗಳಿಂದ) ತವಕಿಸು; ತವಕಪಡು; ಹಂಬಲಿಸು; ಹಾತೊರೆ.
  14. (ಯುರೇನಿಯಂ ಯಾ ಹೈಡ್ರೊಜನ್‍) ಸುಟ್ಟು, ದಹಿಸಿ – ಹೋಗು; ದಹನವಾಗು; ವಿದಳನವಾಗು ಯಾ ಸಮ್ಮಿಳನಗೊಳ್ಳು: uranium burns by absorbing neutrons ನ್ಯೂಟ್ರಾನುಗಳನ್ನು ಹೀರಿಕೊಂಡು ಯುರೇನಿಯಂ ದಹಿಸುತ್ತದೆ. hydrogen burns to form helium ಹೈಡ್ರೊಜನ್‍ ಸುಟ್ಟು (ಸಮ್ಮಿಳನ ಹೊಂದಿ) ಹೀಲಿಯಂ ಆಗುತ್ತದೆ.
  15. (ಅಶಿಷ್ಟ) ವೇಗವಾಗಿ ವಾಹನ ನಡೆಸು.
ಪದಗುಚ್ಛ
  1. burn away
    1. ಉರಿಯುತ್ತಿರು: the light was burning away all night ರಾತ್ರಿಯೆಲ್ಲ ದೀಪ ಉರಿಯುತ್ತಿತ್ತು.
    2. ಸುಟ್ಟು, ಉರಿದು, ದಹಿಸಿ – ಹೋಗು; ಉರಿಯುತ್ತಿರುವುದರ ಮೂಲಕ ಯಾ ಇಂಧನ ಖರ್ಚಾಗಿ ಕಡಮೆಯಾಗು ಯಾ ಪೂರ್ತಿ ನಾಶವಾಗು: half the candle had burnt away ಅರ್ಧ ಮೋಂಬತ್ತಿ ಉರಿದುಹೋಗಿತ್ತು.
  2. burn blue ನೀಲಿಬಣ್ಣದಲ್ಲಿ, ನೀಲಿಯಾಗಿ – ಉರಿ.
  3. burn down
    1. (ಇಂಧನ ಕಡಮೆಯಾದಂತೆ) ತಗ್ಗಿ, ಮೆಲ್ಲಗೆ – ಉರಿ; ಉರಿ ಕಡಮೆಯಾಗು.
    2. (ಕಟ್ಟಡ ಮೊದಲಾದವನ್ನು) ಸುಟ್ಟುಹಾಕಿಬಿಡು; ಪೂರ್ತಿ ಭಸ್ಮಗೊಳಿಸು.
  4. burn low = ಪದಗುಚ್ಛ \((3a)\).
  5. burn metals together ಲೋಹಗಳನ್ನು ಬೆಸೆ.
  6. burn oneself out ವಿಪರೀತ ಕೆಲಸದಿಂದ ಯಾ ಅತಿಯಾದ ಭೋಗದಿಂದ – ನಿತ್ರಾಣನಾಗು, ಬಳಲಿಹೋಗು, ನಿಶ್ಯಕ್ತನಾಗು.
  7. burn out
    1. ಪದಗುಚ್ಛ(1).
    2. ಉರಿದುಹೋಗುವ ಮೂಲಕ – ನಿಷ್ಕ್ರಿಯವಾಗು ಯಾ ನಿಷ್ಕ್ರಿಯಗೊಳಿಸು; ಸುಟ್ಟುಹೋಗಿ – ಕೆಲಸಮಾಡದಾಗು ಯಾ ಕೆಲಸ ಮಾಡದಂತೆ ಮಾಡು.
    3. (ಯಾವುದರದೇ ಘಟಕಾಂಶಗಳನ್ನು) ಸುಟ್ಟುಹಾಕು; ದಹಿಸಿಬಿಡು.
    4. (ರೂಪಕವಾಗಿ ಸಹ) ಬೆಂಕಿಯಿಂದ ಮನೆ, ಮಠ, ವ್ಯಾಪಾರ, ಮೊದಲಾದವನ್ನು – ಸುಟ್ಟುಹಾಕಿಬಿಡು.
  8. burn person out ಮನೆಗೆ ಬೆಂಕಿಯಿಟ್ಟು ಯಾ ಒಬ್ಬನ ವ್ಯಾಪಾರ ಮೊದಲಾದವನ್ನು ನಾಶಮಾಡಿ ವ್ಯಕ್ತಿಯನ್ನು – ಓಡಿಸಿ ಬಿಡು, ಅಟ್ಟಿಬಿಡು: I was burnt out of house and home ನನ್ನ ಮನೆಮಠ ಎಲ್ಲವನ್ನೂ ಸುಟ್ಟು ನನ್ನನ್ನು ಓಡಿಸಿಬಿಟ್ಟರು.
  9. burn up
    1. ಸುಟ್ಟು ಧ್ವಂಸಮಾಡು, ಭಸ್ಮಮಾಡು, ನಾಶಮಾಡು.
    2. ಉರಿಯೇಳು; ಜ್ವಾಲೆಯೇಳು.
    3. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಸಿಟ್ಟಾಗು ಯಾ ಸಿಟ್ಟು ಬರಿಸು; ರೇಗು ಯಾ ರೇಗಿಸು.
ನುಡಿಗಟ್ಟು
  1. burn $^1$candle at both ends.
  2. burn daylight ಹಗಲಿನಲ್ಲಿ ಪಂಜು ಉರಿಸು; ಕೆಲಸಬಿಟ್ಟು ಕಾಡುಹರಟೆಯಲ್ಲಿ ಕಾಲ ಕಳೆ.
  3. burn in
    1. ಒಂದು ವಿಷಯವನ್ನು ಒಬ್ಬನ ಮನಸ್ಸಿನಲ್ಲಿ ಅಚ್ಚಳಿಯದಂತೆ ಮುದ್ರೆ ಒತ್ತು.
    2. ಒಂದು ವಿಷಯ ಒಬ್ಬನ ಮನಸ್ಸಿನಲ್ಲಿ ಅಚ್ಚಳಿಯದಂತೆ ಮುದ್ರಿತವಾಗು.
    3. ಸುಡುಮುದ್ರೆಯೊತ್ತು; ಸುಡುವ ಯಾ ತಾಪದ ಮೂಲಕ ಅಚ್ಚೊತ್ತು; ತಪ್ತಾಂಕನ ಮಾಡು.
  4. burn into = ನುಡಿಗಟ್ಟು \((3)\).
  5. burn one’s boats ಹಿಂದಡಿಯಿಡಲಾಗದೆ ಆಗು; ಹಿಮ್ಮೆಟ್ಟಲಾಗದ ಹೆಜ್ಜೆಯಿಟ್ಟು ಹಿಮ್ಮೆಟ್ಟುವ ಅವಕಾಶವನ್ನು ಕಳೆದುಕೊ; ಬದಲಾಯಿಸಲಾಗದ ಕೆಲಸಮಾಡಿ ಬದಲಾಯಿಸಲಾರದಂತೆ ಮಾಡಿಕೊ.
  6. burn one’s bridges = ನುಡಿಗಟ್ಟು \((5)\).
  7. burn one’s fingers (ದುಡುಕಿನ ಉದ್ಯಮದಿಂದ ಯಾ ಬೇರೊಬ್ಬರ ಗೊಡವಗೆ ಹೋದದ್ದರಿಂದ) ಕೈಸುಟ್ಟುಕೊ; ನಷ್ಟಕ್ಕೆ ಯಾ ಕಷ್ಟಕ್ಕೊಳಗಾಗು.
  8. burnt child dreads fire ಸುಟ್ಟುಕೊಂಡ ಮಗುವಿಗೆ ಬೆಂಕಿ ಕಂಡರೇ ಹೆದರಿಕೆ; ಪೆಟ್ಟು ತಿಂದವಗೆ ಕೋಲು ಕಂಡರೂ ಅಂಜಿಕೆ.
  9. burn the midnight $^1$oil.
  10. burn the water ಪಂಜಿನ ಬೆಳಕಿನಲ್ಲಿ ಸ್ಯಾಮನ್‍ ಜಾತಿಯ ಮೀನನ್ನು ಈಟಿಯಿಂದ ಇರಿ.
  11. ears burn (ತನ್ನನ್ನು ಕುರಿತು ಹಿಂದೆ ಆಡಿಕೊಳ್ಳುತ್ತಿದ್ದಾರೆಂಬುದನ್ನು ಕೇಳಿ) ಕಿವಿಗಳು – ಉರಿಯುತ್ತವೆ, ಸುಡುತ್ತವೆ: my ears burned to hear what they were saying of me behind my back ನನ್ನ ಬೆನ್ನ ಹಿಂದೆ ಅವರು ಏನೇನು ಅನ್ನುತ್ತಿದ್ದಾರೆಂಬುದನ್ನು ಕೇಳಿದಾಗ ನನ್ನ ಕಿವಿ ಸುಟ್ಟಂತಾಯಿತು.
  12. money burns a hole in one’s pocket ಹಣ ಜೇಬಿನಲ್ಲಿ ತೂತು ಕೊರೆಯುತ್ತದೆ; ಹಣ ಅವನ ಕೈಯಲ್ಲಿದ್ದರೆ ಅದು ಅವನ ಕೈಯನ್ನು ಸುಡುತ್ತದೆ; ಜೇಬಿನ ಹಣ ಮುಗಿಯುವವರೆಗೂ ಅವನನ್ನು(ಸುಮ್ಮನೆ) ಇರಗೊಡುವುದಿಲ್ಲ.
  13. money to burn ಹೇರಳವಾದ ಹಣ; ಸುಟ್ಟುಹಾಕುವಷ್ಟು ಹಣ.