See also 1smack  3smack  4smack  5smack  6smack  7smack
2smack ಸ್ಮಾಕ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯ ಮುಖವನ್ನು) ಅಪ್ಪಳಿಸು; ತಟ್ಟು; ಅಂಗೈ ಮೊದಲಾದವುಗಳಿಂದ ಹೊಡೆ.
  2. (ಕಾತರದ ನಿರೀಕ್ಷಣೆಯಿಂದ, ಆಹಾರದ ಯಾ ಇತರ ಸುಖದ ಸಂತೋಷದಿಂದ ಸದ್ದಾಗುವಂತೆ) ಲೊಟ್ಟೆ ಹೊಡೆ; ಲೊಟಿಕೆ ಹಾಕು; ತುಟಿ ಚಪ್ಪರಿಸು.
  3. (ಚಾವಟಿಯನ್ನು) ಚಟೀರೆನ್ನಿಸು; ಚಟಗುಟ್ಟಿಸು.
  4. (ಚಪ್ಪರಿಸುವ ಯಾ ಅಪ್ಪಳಿಕೆ ಶಬ್ದ ಮಾಡುತ್ತ) ಚಲಿಸುವಂತೆ ಮಾಡು ಯಾ ಹೊಡೆ.
  5. ಚಪ್ಪರಿಸುತ್ತ ರುಚಿ ನೋಡು; ಲೊಟಿಕೆ ಹಾಕುತ್ತ ಸವಿಷಯದಲ್ಲಿ
  6. (ಚೆಂಡನ್ನು) ಫಟೀರೆಂದು ಹೊಡೆ; ಶಬ್ದ ಮಾಡುವಂತೆ ಬಿರುಸಿನಿಂದ ಹೊಡೆದು ಕಳುಹಿಸು.
ಅಕರ್ಮಕ ಕ್ರಿಯಾಪದ
  1. ತುಟಿ ಚಪ್ಪರಿಸು; ಲೊಟಿಕೆ ಹಾಕು.
  2. (ಚಾವಟಿ) ಚಟೀರೆನ್ನು.
  3. ಫಟೀರೆಂದು ಹೊಡೆ: the batsman smacked ಬ್ಯಾಟುಗಾರ ಫಟೀರೆಂದು ಹೊಡೆದ.
  4. ಚಪ್ಪರಿಸುತ್ತ ಯಾ ಅಪ್ಪಳಿಕೆ ಶಬ್ದದೊಡನೆ ಓಡಾಡು, ಚಲಿಸು ಯಾ ನಡೆ.