death ಡೆತ್‍
ನಾಮವಾಚಕ
  1. ಸಾಯುವುದು; ಮರಣ; ನಿಧನ; ಅವಸಾನ; ಮೃತ್ಯು; ಅಂತ್ಯ; ಬದುಕಿನ ಕೊನೆ, ಮುಕ್ತಾಯ ಯಾ ಅದನ್ನು ಕೊನೆಗೊಳಿಸುವ ಘಟನೆ.
  2. ಕೊಲೆಗೀಡಾಗುವುದು; ಹತ್ಯೆಗೀಡಾಗುವುದು.
  3. ಕೊಲೆ; ಹತ್ಯೆ; ವಧೆ.
  4. ಅಳಿವು; ಅವಸಾನ; ಅಂತ್ಯ; ಕೊನೆ; ಇಲ್ಲವಾಗುವಿಕೆ: death of his hopes ಅವನ ಆಶೆಗಳ ಅಳಿವು.
  5. ಹಾಳು; ವಿನಾಶ; ಸರ್ವನಾಶ; ಧ್ವಂಸ.
  6. (Death) ಮೃತ್ಯುದೇವತೆ; ಯಮ; ಜವರಾಯ; ಮೃತ್ಯುವಿನ ಮೂರ್ತರೂಪ.
  7. ಸಾವಿನ ಸ್ಥಿತಿ; ಮೃತಾವಸ್ಥೆ.
  8. ಅಧ್ಯಾತ್ಮಾಭಾವ; ಅಧ್ಯಾತ್ಮಿಕ ಜೀವನದ ಅಭಾವ, ಕೊರತೆ.
ಪದಗುಚ್ಛ
  1. Black Death
    1. 14ನೆ ಶತಮಾನದಲ್ಲಿ ಯೂರೋಪಿಗೆ ತಗುಲಿದ್ದ ಮಹಾ ಪ್ಲೇಗು.
    2. (ರೂಪಕವಾಗಿ) ಅಂತ್ಯ; ವಿನಾಶ.
  2. 2die the death.
  3. field of death ರಣರಂಗ; ಯುದ್ಧ ಭೂಮಿ.
ನುಡಿಗಟ್ಟು
  1. as sure as death ಖಾತ್ರಿಯಾಗಿ; ಖಡಾಖಂಡಿತವಾಗಿ; (ಸಾವಿನಷ್ಟು) ಖಚಿತವಾಗಿ.
  2. at death’s door
    1. ಮರಣಶಯ್ಯೆಯಲ್ಲಿ; ಮೃತ್ಯುದ್ವಾರದಲ್ಲಿ; ಸಾಯುವ ಅಂಚಿನಲ್ಲಿ; ಸಾವಿನ ಹೊಸ್ತಿಲಲ್ಲಿ.
    2. ಸಾಯುತ್ತ; ಸಾವಿನ ಸ್ಥಿತಿಯಲ್ಲಿ.
  3. be death on
    1. (ಅಶಿಷ್ಟ) ಬೇಟೆ ಪ್ರಾಣಿಯನ್ನು ಕೊಲ್ಲುವುದರಲ್ಲಿ ಕುಶಲನಾಗಿರು; ಷಿಕಾರಿ ಕೊಲ್ಲುವುದರಲ್ಲಿ ಚತುರನಾಗಿರು.
    2. (ಯಾವುದೇ ಕಾರ್ಯ ಮಾಡುವುದರಲ್ಲಿ) ಕುಶಲನಾಗಿರು; ಚತುರನಾಗಿರು.
  4. be in at the death
    1. (ಬೇಟೆಯ ಕೊನೆಯಲ್ಲಿ) ನರಿಯನ್ನು ಕೊಲ್ಲುವಾಗ ಹಾಜರಿರು; ನರಿಯನ್ನು ಕೊಲ್ಲುವುದನ್ನು ನೋಡು.
    2. (ಯಾವುದೇ ಉದ್ಯಮ, ಕಾರ್ಯ, ಮೊದಲಾದವುಗಳ ) ಅಂತ್ಯ ನೋಡು; ಕೊನೆ ಕಾಣು; ಮುಕ್ತಾಯ ನೋಡು; ಕೊನೆಕಾಣು; ಮುಕ್ತಾಯ ನೋಡು; ಕೊನೆಗೊಂಡಿದ್ದನ್ನು ನೋಡು.
  5. be the death of ಸಾವಿಗೆ ಕಾರಣವಾಗು; ಸಾವನ್ನು ತರು: the motor bike will be the death of you ನೀನು ಮೋಟಾರು ಸೈಕಲಿನ ಅಪಘಾತಕ್ಕೆ ಒಳಗಾಗಿ ಸಾಯುತ್ತೀಯೆ.
  6. catch one’s death (ಆಡುಮಾತು) ಸಾಯುವಷ್ಟು ಶೀತ ಮೊದಲಾದವು ಹಿಡಿ; ಮಾರಕವಾಗುವಂತೆ ಶೀತ ಮೊದಲಾದವು ಆಗು.
  7. do to death ಕೊಲ್ಲು; ಸಾಯಿಸು: bleed to death ರಕ್ತಸೋರಿ ಸಾಯು. stone to death ಕಲ್ಲು ಹೊಡೆದು ಸಾಯಿಸು.
  8. everlasting death ಶಾಶ್ವತ ನರಕ; ನಿತ್ಯ ನರಕವಾಸ.
  9. eyes closed in death ಸತ್ತಿರು; (ಸತ್ತು) ಕಣ್ಣು ಮುಚ್ಚಿರು.
  10. fate worse than death
    1. ವಿಪರೀತ ಅಪಾಯದ ಸ್ಥಿತಿ; ಬಹಳ ಹೆದರಬೇಕಾದ ಸ್ಥಿತಿ; ಸಾವಿಗಿಂತ ಕೇಡಿನ ಯಾ ಕೆಟ್ಟ ಸ್ಥಿತಿ.
    2. (ಹಾಸ್ಯ ಪ್ರಯೋಗ) (ಹೆಂಗಸಿನ ವಿಷಯದಲ್ಲಿ) ಅತ್ಯಾಚಾರಕ್ಕೊಳಗಾದ ಸ್ಥಿತಿ; ಮಾನಹಾನಿಯ ಸ್ಥಿತಿ.
  11. hold on like grim death ಸಾವಿನಂತೆ ಪಟ್ಟು ಹಿಡಿ; ತನ್ನ ಬಲವನ್ನೆಲ್ಲ ಪ್ರಯೋಗಿಸಿ ಹಿಡಿ; ಬಿಡದೆ ಹಿಡಿ.
  12. it is death to ಮರಣಕ್ಕೆ ಗುರಿಯಾಗುತ್ತದೆ.
  13. jaws of death ಸಾವಿನ ದವಡೆ; ಮೃತ್ಯುಮುಖ.
  14. like death warmed up (ಅಶಿಷ್ಟ)
    1. ತುಂಬಬಳಲಿ.
    2. ಬಹಳ ರೋಗಿಯಾಗಿ; ಕಾಯಿಲೆಯಿಂದ ತೀವ್ರ ನರಳುತ್ತಾ.
  15. pale as death ಹೆಣಕಳೆಯಂತೆ; ಪ್ರೇತಕಳೆಯಂತೆ; ಬಿಳಿಚಿಕೊಂಡು.
  16. put to death
    1. ಕೊಲ್ಲು; ಸಾಯಿಸು.
    2. ಗಲ್ಲಿಗೇರಿಸು.
  17. to death ಅತಿ; ಬಹಳ; ತೀವ್ರ ; ತುಂಬ; ವಿಪರೀತ: bore to death ಬೇಸರ ಹಿಡಿಸು; ಚಿಟ್ಟು ಹಿಡಿಸು; ಅತಿಯಾಗಿ ಕೊರೆದು ಕೊಲ್ಲು. sick to death ಅತಿಯಾಗಿ ಕಾಯಿಲೆ ಬೀಳು; ತೀವ್ರ ರೋಗದಿಂದ ಬಳಲು. tried to death ಬಹಳ ಆಯಾಸವಾಗು; ಸಾಯುವಷ್ಟು ಸುಸ್ತಾಗು: scared to death ಬಹಳ ಭೀತಿಗೊಂಡ.
  18. war to the death ಸಾವಿನವರೆಗೂ ಹೋರಾಟ; ಅಳಿವಿನವರೆಗೆ ಹೋರಾಟ; ಆಮರಣಾಂತ ಯುದ್ಧ.
  19. worked to death ಹಳಸಲಾದ; ತೇಯ್ದು ಹೋದ; ಚರ್ವಿತಚರ್ವಣವಾದ.