straw ಸ್ಟ್ರಾ
ನಾಮವಾಚಕ
  1. (ಹಾಸಿಗೆಗೆ ತುಂಬಉವುದು, ಛಾವಣಿಗೆ ಹೊದಿಸುವುದು, ಮೆತ್ತೆಯಾಗಿ ಬಳಸುವುದು, ಹ್ಯಾಟುಗಳು, ಹುರಿಗಳು, ಮೊದಲಾದವುಗಳ ಹೆಣಿಗೆ, ಪ್ರಾಣಿಗಳ ಮೇವು, ಮೊದಲಾದವುಗಳಿಗೆ ಬಳಸುವ) ಒಣ ಹುಲ್ಲು: made of straw (ಒಣ)ಹುಲ್ಲಿನಿಂದ ಮಾಡಿದ. thatched with straw ಹುಲ್ಲು ಹೊದಿಸಿದ. a load of straw ಹುಲ್ಲು ಹೊರೆ. straw mattress ಹುಲ್ಲು ಹಾಸಿಗೆ. a straw hat ಹುಲ್ಲಿನ ಹ್ಯಾಟು. straw rope ಹುಲ್ಲಿನ ಹುರಿ, ಹಗ್ಗ.
  2. ಹುಲ್ಲು ಹ್ಯಾಟು.
  3. ಒಂದು ಹುಲ್ಲು ಕಡ್ಡಿ.
  4. ಹುಲ್ಲಿಗೆ ಸಮಾನವಾದದ್ದು; ತೃಣ – ಸದೃಶ, ಸಮಾನ, ಪ್ರಾಯ ಆದದ್ದು.
  5. ಅಲ್ಪ, ಕ್ಷುದ್ರ, ಕ್ಷುಲ್ಲಕ, ಕೆಲಸಕ್ಕೆ ಬಾರದ – ವಸ್ತು, ವಿಷಯ: it is not worth a straw ಅದಕ್ಕೆ ಹುಲ್ಲುಕಡ್ಡಿಯಷ್ಟೂ ಬೆಲೆಯಿಲ್ಲ. I don’t care a straw for him ಅವನನ್ನು ನಾನು ಹುಲ್ಲುಕಡ್ಡಿಗಿಂತಲೂ ಕೀಳಾಗಿ ಕಾಣುತ್ತೇನೆ.
  6. ಪಾನೀಯವನ್ನು ಹೀರಿ ಕುಡಿಯುವ ಕಾಗದದ ಯಾ ಪ್ಲಾಸ್ಟಿಕ್ಕಿನ ಕೊಳವೆ, ನಳಿಕೆ.
  7. ಒಣಹುಲ್ಲಿನ ಬಣ್ಣ; ಒಣ ಹುಲ್ಲಿನ ಮಾಸಲು ಹಳದಿ ಬಣ್ಣ.
ಪದಗುಚ್ಛ
  1. catch (or grasp) at a straw (ಮುಳುಗಿ ಹೋಗುತ್ತಿರುವವನಂತೆ) ಹುಲ್ಲುಕಡ್ಡಿ ಹಿಡಿದುಕೊ; ನಿಷ್ಪ್ರಯೋಜಕ ಸಾಧನವನ್ನು ಯಾ ಆಧಾರವನ್ನು ನೆಚ್ಚಿಕೊ, ಆಶ್ರಯಿಸು.
  2. in the straw (ಪ್ರಾಚೀನ ಪ್ರಯೋಗ) ಕೂಸು ಹೆತ್ತು; ಪ್ರಸವಿಸಿ; ಬಾಣಂತಿಯಾಗಿ; ಬಾಣಂತಿ ಸ್ಥಿತಿಯಲ್ಲಿ.
  3. make bricks without straw ಅಗತ್ಯ ಸಾಧನ ಸಾಮಗ್ರಿಗಳಿಲ್ಲದೆ (ಯಾವುದನ್ನೇ) ಮಾಡಲು ಯತ್ನಿಸು.
  4. man of straw
    1. ಹುಲ್ಲಿನ ಮನುಷ್ಯಾಕೃತಿ; ಹುಲ್ಲಿನಲ್ಲಿ ಮಾಡಿ, ಹುಲ್ಲು ತುಂಬಿದ ಮನುಷ್ಯ ಬೊಂಬೆ.
    2. (ಎದುರಾಳಿಯಾಗಿ, ಪ್ರತಿದ್ವಂದ್ವಿಯಾಗಿ ನಿಲ್ಲಿಸಿದ) ಹುಸಿ ಎದುರಾಳಿ; ಕಲ್ಪಿತ – ವಿರೋಧಿ, ಪ್ರತಿದ್ವಂದ್ವಿ; ಕಾಲ್ಪನಿಕ ಶತ್ರು.
    3. ಜಾಮೀನಾಗಿ ಒಡ್ಡಿದ ಹುರುಳಿಲ್ಲದ ವ್ಯಕ್ತಿ; ಬಂಡವಾಳವಿಲ್ಲದ ಜಾಮೀನುದಾರ; ಪೊಳ್ಳು ಜಾಮೀನುದಾರ.
    4. (ಸಾಕಷ್ಟು ಆರ್ಥಿಕ ಸಾಮರ್ಥ್ಯವಿಲ್ಲದೆ ಆರ್ಥಿಕ – ಹೊಣೆಯನ್ನು, ಜವಾಬ್ದಾರಿಯನ್ನು ಹೊತ್ತುಕೊಳ್ಳುವ) ಟೊಳ್ಳು – ಉದ್ಯಮಿ, ಪಾಲುದಾರ, ಮೊದಲಾದವರು.
    5. ಯಾವ ಕೆಲಸಕ್ಕೂ ಬಾರದವನು; ಹುಲುಮನುಜ.
    6. (ಖಂಡನೆಗಾಗಿ ಕಲ್ಪಿಸಿಕೊಂಡ) ಹುಸಿ ವಾದ; ಕಲ್ಪಿತ ವಾದ.
  5. straw in the wind ಭವಿಷ್ಯಸೂಚಿ; ಮುನ್ಸೂಚಿ; ಮುಂದಿನ ಆಗುಹೋಗುಗಳನ್ನು, ಇಷ್ಟಾನಿಷ್ಟಗಳನ್ನು, ಸೂಚಿಸುವ ಸಣ್ಣ ಸುಳಿವು.
  6. the last straw
    1. ಕಟ್ಟಕಡೆಯ ಹುಲ್ಲು; ಕಡೆ ಕಡ್ಡಿ; (ಅಪಾರ ಹೇರನ್ನು ಹೊರಬಲ್ಲ ಒಂಟೆಯ ಬೆನ್ನನ್ನೂ ಮುರಿಯಬಲ್ಲ) ಕಟ್ಟ ಕಡೆಯಲ್ಲಿ ಹೇರಿದ ಅಲ್ಪ ಹೊರೆ.
    2. ತಾಳ್ಮೆಯ ತುದಿ; ಸಹನೆಯ – ಪರಮಾವಧಿ, ಎಲ್ಲೆ, ಪರಿಮಿತಿ.