See also 1subject  2subject  4subject
3subject ಸಬ್ಜಿಕ್ಟ್‍
ನಾಮವಾಚಕ
  1. (ರಾಜಕೀಯ ಆಳ್ವಿಕೆಗೆ ಒಳಪಟ್ಟ) ಪ್ರಜೆ: rulers and subjects ಆಳುವವರೂ ಪ್ರಜೆಗಳೂ. subjects of the Sultan ಸುಲ್ತಾನನ ಪ್ರಜೆಗಳು. the liberty of the subject ಪ್ರಜಾ ಸ್ವಾತಂತ್ರ.
  2. ಆಶ್ರಿತ; ಅಧೀನ; ಪರತಂತ್ರ; ಇನ್ನೊಬ್ಬನಿಗೆ ವಿಧೇಯನಾಗಿರುವ ವ್ಯಕ್ತಿ.
  3. (ತರ್ಕಶಾಸ್ತ್ರ) (ವಿಧೇಯ ಪದವು ಯಾವುದನ್ನು ಕುರಿತದ್ದೋ ಆ ಪದ) ಉದ್ದೇಶ; ಕರ್ತೃ: man is mortal ಮಾನವನು ಮರ್ತ್ಯ ಎಂಬ ಪ್ರಮೇಯದಲ್ಲಿ man ಎಂಬಉದು.
  4. (ವ್ಯಾಕರಣ) ಕರ್ತೃಪದ; ವಾಕ್ಯವು ಯಾವುದರ ವಿಷಯ ತಿಳಿಸುತ್ತದೆಯೋ ಮತ್ತು ವಾಕ್ಯದ ಕ್ರಿಯಾಪದವು ಯಾವ ಪದದೊಡನೆ ಹೊಂದಿಕೊಂಡು ಇರುತ್ತದೆಯೋ ಆ ನಾಮಪದ ಯಾ ತತ್ಸಮಾನವಾದ ಪದ: every verb has a subject ಪ್ರತಿಯೊಂದು ಕ್ರಿಯಾಪದಕ್ಕೂ ಒಂದು ಕರ್ತೃಪದ ಇರುತ್ತದೆ (ಇಲ್ಲಿ every verb ಎಂಬಉದು ಕರ್ತೃಪದ).
  5. (ತತ್ತ್ವಶಾಸ್ತ್ರ)
    1. ಜ್ಞಾತೃ; ವಿಷಯಿ; ಆತ್ಮ; ಅಹಂ; ಚಿಂತನೆ ಮಾಡುವ, ಭಾವಾನುಭವಗಳನ್ನು ಅನುಭವಿಸುವ ಚೇತನ.
    2. (ಅದರ ಗುಣ ಯಾ ಧರ್ಮಗಳಿಗಿಂತ ಭಿನ್ನವಾಗಿದ್ದು ಅವುಗಳಿಗೆ ಆಶ್ರಯವಾದ) ಧರ್ಮಿ; ಪದಾರ್ಥವೊಂದರ ಮೂಲ ನಿರುಪಾಧಿಕ ತತ್ತ್ವ, ಶುದ್ಧ ಸ್ವರೂಪ.
  6. (ಚರ್ಚೆ, ವರ್ಣನೆ, ವಿವರಣೆ, ನಿರೂಪಣೆ, ಇವುಗಳ) ವಿಷಯ; ವಸ್ತು: he never talks on serious subjects ಅವನು ಗಂಭೀರವಾದ ವಿಷಯಗಳನ್ನು ಕುರಿತು ಮಾತನಾಡುವುದೇ ಇಲ್ಲ. he proposed a subject for the debate ಅವನು ಚರ್ಚೆಗೆ ಒಂದು ವಿಷಯವನ್ನು ಸೂಚಿಸಿದ. what is the subject of the poem? ಆ ಕವಿತೆಯ ವಸ್ತು ಏನು? he constantly wanders from the subject ಅವನು ಸಂತತವಾಗಿ ವಿಷಯ ಬಿಟ್ಟು ದೂರ ಹೋಗು ತ್ತಾನೆ. he made it the subject of his experiment ಅವನು ಅದನ್ನು ತನ್ನ ಪ್ರಯೋಗಕ್ಕೆ ವಸ್ತುವನ್ನಾಗಿ, ವಿಷಯವನ್ನಾಗಿ ಮಾಡಿಕೊಂಡ.
  7. ಅಧ್ಯಯನ ಕ್ಷೇತ್ರ; ವ್ಯಾಸಂಗದ ವಿಷಯ; ಪಠ್ಯ ವಿಷಯ: he was examined in six subjects ಅವನನ್ನು ಆರು ಪಠ್ಯವಿಷಯಗಳಲ್ಲಿ ಪರೀಕ್ಷಿಸಲಾಯಿತು.
  8. (ಸಂಗೀತ) (ಹ್ಯೂಗ್‍ ಮತ್ತು ಸೊನಾಟಾ ಎಂಬ ಗೀತಪ್ರಕಾರಗಳ ವಿಷಯವನ್ನು, ವಸ್ತುವನ್ನು ಸೂಚಿಸುವ) ಪಲ್ಲವಿ.
  9. [ಅಂಗವಿಚ್ಛೇದನಕ್ಕೆ ವಸ್ತು(ವಾದ)] ಹೆಣ; ಶವ; ಮೃತದೇಹ.
  10. (ನಿರ್ದೇಶಿಸಿದ ಭಾವ ಯಾ ಕ್ರಿಯೆಯನ್ನು ಪ್ರಚೋದಿಸುವ ಯಾ ಅವಕ್ಕೆ ಪಾತ್ರವಾದ) ಸಂದರ್ಭ, ವ್ಯಕ್ತಿ, ವಸ್ತು ಯಾ ವಿಷಯ: he became a subject for ridicule ಅವನು ಅಪಹಾಸ್ಯಕ್ಕೆ ವಿಷಯವಾದ, ಗುರಿಯಾದ. this is a subject for congratulation ಇದು ಅಭಿನಂದನೆಗೆ ಪಾತ್ರವಾದ ವಿಷಯ.
  11. (ಮುಖ್ಯವಾಗಿ ವೈದ್ಯಶಾಸ್ತ್ರ) ನಿರ್ದಿಷ್ಟ ಮಾನಸಿಕ ಯಾ ಭೌತಿಕ ಪ್ರವೃತ್ತಿಗಳಿರುವ ವ್ಯಕ್ತಿ: a hysterical subject ಉನ್ಮಾದ ಹತ್ತಿದ ವ್ಯಕ್ತಿ.
ಪದಗುಚ್ಛ
  1. change the subject (ಮುಖ್ಯವಾಗಿ ಪೇಚಾಟದ ಪರಿಸ್ಥಿತಿಯನ್ನು ತಪ್ಪಿಸಿಕೊಳ್ಳುವುದಕ್ಕಾಗಿ) ವಿಷಯವನ್ನು ಬದಲಾಯಿಸು; ಬೇರೊಂದು ಮಾತನ್ನೆತ್ತು.
  2. on the subject of ವಿಷಯವನ್ನು ಕುರಿತು; ವಿಷಯದ ಬಗೆಗೆ.
  3. subject and object
    1. (ತತ್ತ್ವಶಾಸ್ತ್ರ) ವಿಷಯಿ ಮತ್ತು ವಿಷಯ; ಜ್ಞಾತೃ ಮತ್ತು ಜ್ಞೇಯ; ಆತ್ಮ ಮತ್ತು ಅನಾತ್ಮ; ಚೇತನ ಮತ್ತು ಅದು ಯಾವುದನ್ನು ಗ್ರಹಿಸುತ್ತದೆಯೋ ಅದು.
    2. ಧರ್ಮ ಮತ್ತು ಧರ್ಮಿ; ಗುಣಗಳು ಮತ್ತು ಅವುಗಳಿಗೆ ಆಶ್ರಯವಾಗಿರುವ ಮೂಲವಸ್ತು.
    3. (ಮನಶ್ಶಾಸ್ತ್ರ) = padagucaCx (3a).
    4. (ತರ್ಕಶಾಸ್ತ್ರ) ಕರ್ತೃ ಯಾ ಉದ್ದೇಶ ಮತ್ತು ವಿಧೇಯ.
    5. (ವ್ಯಾಕರಣ) ಕರ್ತೃ ಮತ್ತು ಕರ್ಮ(ಪದ).
  4. subject for (ವ್ಯಕ್ತಿ, ಸಂದರ್ಭ, ವಿಷಯ, ಮೊದಲಾದವುಗಳ ವಿಷಯದಲ್ಲಿ) ಗುರಿಯಾದ; ಒಳಗಾದ; ವಿಷಯವಾದ: subject for discussion ಚರ್ಚಾವಿಷಯ.
  5. subject for dissection = 3subject\((9)\).