See also 2subject  3subject  4subject
1subject ಸಬ್ಜಿಕ್ಟ್‍
ಗುಣವಾಚಕ
  1. (ಸರ್ಕಾರ ಯಾ ವ್ಯಕ್ತಿಯ) ಆಳ್ವಿಕೆಗೆ ಒಳಪಟ್ಟ; ಪರತಂತ್ರ; ಅಧೀನ; ಆಶ್ರಿತ: a subject province ಆಶ್ರಿತ ಸಂಸ್ಥಾನ. a subject tribe ಆಶ್ರಿತ ಜನಾಂಗ, ಬಉಡಕಟ್ಟು. states subject to foreign rule ವಿದೇಶೀಯ ಆಡಳಿತಕ್ಕೊಳಪಟ್ಟ ರಾಜ್ಯಗಳು. we are all subject to the laws of nature ನಾವೆಲ್ಲ ಪ್ರಕೃತಿನಿಯಮಗಳಿಗೆ, ನಿಸರ್ಗ ನಿಯಮಗಳಿಗೆ – ಒಳಪಟ್ಟಿದ್ದೇವೆ. we are all subject to the laws of the land ನಾವೆಲ್ಲ ದೇಶದ ಶಾಸನಗಳಿಗೆ ಅಧೀನರಾಗಿದ್ದೇವೆ.
  2. ಈಡಾಗುವ; ಒಳಗಾಗುವ; ಗುರಿಯಾಗುವ ಸಂಭವವಿರುವ; ವಶವಾಗುವ:he is subject to infection ಅವನಿಗೆ ಸೋಂಕು ತಗುಲುವ ಸಂಭವವಿದೆ. some people are subject to envy ಕೆಲವು ಜನ ಅಸೂಯೆಗೆ ವಶವಾಗಿರುತ್ತಾರೆ.