5round
ರೌಂಡ್
ಸಕರ್ಮಕ ಕ್ರಿಯಾಪದ
- ದುಂಡಗೆ, ಗುಂಡಗೆ ಮಾಡು: rounded mouth ದುಂಡಗೆ ಮಾಡಿದ, ದುಂಡಗಿರುವ ಬಾಯಿ.
- ಪೂರ್ಣಮಾಡು; ಪೂರ್ತಿಮಾಡು; ಸಮಗ್ರಮಾಡು; ಸಮರೂಪಕ್ಕೆ ತರು; ಸುವ್ಯವಸ್ಥೆಗೆ ತರು: round off a sentence ವಾಕ್ಯವನ್ನು (ಸರಳವಾಗಿ) ಪೂರ್ತಿಮಾಡಿದನು.
-
- (ಸುತ್ತ ಸವಾರಿಮಾಡಿ) ದನಗಳನ್ನು ಒಟ್ಟುಗೂಡಿಸು, ಮಂದೆಗೂಡಿಸು.
- (ಅಲೆದಾಡುವವರು, ಅಪರಾಧಿಗಳು ಮೊದಲಾದವರನ್ನು) ಒಂದು ಕಡೆ ಸೇರಿಸು.
- (ಭೂಶಿರ ಮೊದಲಾದವನ್ನು) ಸುತ್ತಿಕೊಂಡು ಹೋಗು; ಬಳಸಿಕೊಂಡು ಸಾಗು.
- (ವಿರಳ ಪ್ರಯೋಗ) ತಿರುಗಿಸು; ಸುತ್ತಿಸು.
- (ಸ್ವರವನ್ನು) ತುಟಿಗಳನ್ನು ದುಂಡಗೆ ಮಾಡಿ ಉಚ್ಚರಿಸು.
- (ಸಂಖ್ಯೆಯನ್ನು) ಕರಾರುವಾಕ್ಕಲ್ಲದ, ಆದರೆ ಅನುಕೂಲಕರವಾದ ರೂಪದಲ್ಲಿ ಹೇಳು; ಭಾಗಾಂಶಗಳನ್ನು ತೆಗೆದುಹಾಕಿ ಪೂರ್ಣಾಂಕ ಮಾಡು.
ಅಕರ್ಮಕ ಕ್ರಿಯಾಪದ
- ದುಂಡಗೆ, ಗುಂಡಗೆ ಆಗು: her form is rounding ಅವಳ ಆಕಾರ ದುಂಡಗೆ ಆಗುತ್ತಿದೆ.
- (ವಿರಳ ಪ್ರಯೋಗ) ತಿರುಗು; ಸುತ್ತು: rounded on his heel to look at me ನನ್ನ ಕಡೆ ನೋಡಲು ಅವನ ಹಿಮ್ಮಡಿಯ ಮೇಲೆ ತಿರುಗಿದನು.
ಪದಗುಚ್ಛ
- round boat off ಅಲೆ ಎದುರಿಸುವಂತೆ ದೋಣಿಯನ್ನು ತಿರುಗಿಸು.
- round dog’s ears ನಾಯಿಯ ಕಿವಿಗಳನ್ನು ದುಂಡಗೆ ಕತ್ತರಿಸು.
- round down (ಸಂಖ್ಯೆಗಳನ್ನು) ತಗ್ಗಿಸು; ಕಡಿಮೆ ಮಾಡು; ಇಳಿಸು; ಇಳಿಸಿ ಪೂರ್ಣಾಂಕ ಮಾಡು.
- round off (or out)
- ಪೂರ್ಣವಾದ, ಸಮನಾದ ಯಾ ವ್ಯವಸ್ಥಿತ ಸ್ಥಿತಿಗೆ ತರು.
- ನಯಗೊಳಿಸು; ಮೂಲೆಗಳನ್ನು ಯಾ ಕೋನಗಳನ್ನು ಸಮರಿ ಗುಂಡಾಗಿಸು: round off the angles ಮೂಲೆಗಳನ್ನು ತಿರುಗಿಸು, ದುಂಡುಮಾಡು; ಮೂಲೆಗಳ ಚೂಪನ್ನು ಕಡಿಮೆ ಮಾಡು.
- round on a person
- ಒಬ್ಬನಿಗೆ ಥಟ್ಟನೆ ಪ್ರತ್ಯುತ್ತರ ಕೊಡು.
- (ಒಬ್ಬನ ಮೇಲೆ) ಅನಿರೀಕ್ಷಿತವಾಗಿ, ಹಠಾತ್ತಾಗಿ–ಎದುರು ಬೀಳು, ತಿರುಗಿ ಬೀಳು.
- (ಅಪರಾಧ ತಿಳಿಸುವವನ ವಿಷಯದಲ್ಲಿ) ಒಬ್ಬನ ಅಪರಾಧ ತಿಳಿಸು; ದೋಷಾಪಾದಕನಾಗು.
- round the angles = ಪದಗುಚ್ಛ(4b).
- round up (ಮುಖ್ಯವಾಗಿ ಸುತ್ತಲೂ ಸುತ್ತಾಡಿ) ಸಂಗ್ರಹಿಸು ಯಾ ಒಟ್ಟು ತರು, ಸೇರಿಸು.
- round vowel ತುಟಿಯನ್ನು ದುಂಡು ತಿರುವಿ ಸ್ವರೋಚ್ಚಾರ ಮಾಡು.
- ship rounds ಹಡಗು ಅಲೆಗೆದುರಾಗಿ ತಿರುಗಿ ನಿಲ್ಲುತ್ತದೆ.