ಶಿಲುಬೆಯಾಗಿಡು; ಕತ್ತರಿಯಂತಿಡು; ಶಿಲುಬೆಯಾಕಾರದಲ್ಲಿ, ಕತ್ತರಿಯಾಕಾರದಲ್ಲಿ–ಇಡು; ಒಂದರ ಮೇಲೊಂದನ್ನು ಅಡ್ಡಡ್ಡಲಾಗಿ ಇಡು: cross one’s legs ಕಾಲುಗಳನ್ನು ಕತ್ತರಿಯಾಕಾರದಲ್ಲಿ ಇಡು; ಕಾಲಿನ ಮೇಲೆ ಕಾಲು ಹಾಕು.
(ಭಯ ಭಕ್ತಿ ಸೂಚಿಸಲು, ದೇವರ ರಕ್ಷಣೆ ಪಡೆಯಲು) ಶಿಲುಬೆ ಮುದ್ರೆಮಾಡು; ಶಿಲುಬೆಯ ಸನ್ನೆ ಮಾಡು; ಶಿಲುಬೆಯಾಕಾರದಲ್ಲಿ ಕೈಗಳನ್ನು ಜೋಡಿಸು.
(ಶಿಲುಬೆ ಸನ್ನೆಮಾಡಿ) ಹರಸು; ಆಶೀರ್ವದಿಸು.
ಕತ್ತರಿಗುರುತು ಹಾಕು; ಅಡ್ಡಗೆರೆ ಎಳೆ; ಹೊಡೆದು ಹಾಕು; ಕಾಟು ಹಾಕು.
(ಆಗಲೇ ಬರೆದಿರುವುದರ ಮೇಲೆ) ಅಡ್ಡಲಾಗಿ ಬರೆ.
(ರಸ್ತೆ, ನದಿ, ಸಮುದ್ರ ಮೊದಲಾದವನ್ನು) ದಾಟು; ಹಾಯು ಯಾ ಹಾಯಿಸು.
(ಜೀನು, ಕುದುರೆ ಮೊದಲಾದವುಗಳ ಮೇಲೆ) ಅಡ್ಡಗಾಲು ಹಾಕಿ ಕುಳಿತುಕೊ.
ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ವಿಸ್ತರಿಸು, ವ್ಯಾಪಿಸು.
ಸಾಮಾನುಗಳನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗಿಸು, ಹೊತ್ತುಕೊಂಡು ಹೋಗು.
(ಒಬ್ಬರನ್ನೊಬ್ಬರು, ಒಂದು ವಸ್ತು ಇನ್ನೊಂದನ್ನು) ಹಾದುಹೋಗು; ಅಡ್ಡಹಾಯಿ.
(ವ್ಯಕ್ತಿ, ಯೋಜನೆ, ಅಪೇಕ್ಷೆ ಮೊದಲಾದವುಗಳಿಗೆ) ಅಡ್ಡಬರು; ಅಡ್ಡಿಮಾಡು; ಭಂಗತರು; ಭಂಗಗೊಳಿಸು; ಭಗ್ನಗೊಳಿಸು: he crossed me in everything ಅವನು ಎಲ್ಲದರಲ್ಲೂ ನನಗೆ ಅಡ್ಡಿಮಾಡಿದ. he has been crossed in love ಆತ ಪ್ರೇಮದಲ್ಲಿ ಭಗ್ನನಾಗಿದ್ದಾನೆ.
cross a cheque (ಬ್ರಿಟಿಷ್ ಪ್ರಯೋಗ) ಚೆಕ್ಕಿಗೆ–ಕಾಟುಹಾಕು, ಅಡ್ಡಗೆರೆಹಾಕು; ಚೆಕ್ಕನ್ನು ಕ್ರಾಸು ಮಾಡು; ಬ್ಯಾಂಕಿನ ಮೂಲಕ ಮಾತ್ರ ಹಣ ಪಡೆಯುವಂತೆ ಮಾಡಲು, ಚೆಕ್ಕಿನ ಎಡತುದಿಯಲ್ಲಿ & Co. ಎಂದು ಬರೆದು ಎರಡು ಅಡ್ಡಗೆರೆಗಳನ್ನು ಹಾಕು, ಕ್ರಾಸುಮಾಡು.