(ನೌಕಾಯಾನ) ಹಡಗಿನ ಸೇತುವೆ; ಹಡಗಿನಲ್ಲಿ ಹಡಗಿನ ಚಾಲನೆಯನ್ನು ನೋಡಿಕೊಳ್ಳಲು, ಕ್ಯಾಪ್ಟ್ಅನ್ಗಾಗಿ ನಿರ್ಮಿಸಿರುವ, ಸೇತುವೆಯಂತೆ ಎತ್ತರವಾದ ವೇದಿಕೆ.
ಮೂಗೇಣು; ಮೂಗಿನ ಕಂಬ; ಮೂಗಿನ ಮೇಲ್ಗಡೆಯ ಎಲುಬಿನ ಭಾಗ.
ಕುದುರೆ; ಮೇರು; ಪಿಟೀಲು, ತಂಬೂರಿ, ವೀಣೆ ಮೊದಲಾದ ವಾದ್ಯಗಳಲ್ಲಿ ತಂತಿಗಳು ಯಾವುದರ ಮೇಲೆ ಹಾಯುವುದೋ ಮತ್ತು ಶ್ರುತಿ ಮಾಡುವಲ್ಲಿ ಯಾವುದನ್ನು ಹಿಂದಕ್ಕೂ ಮುಂದಕ್ಕೂ ಸರಿಸಬಹುದೋ ಅಂತಹ ಮರದ ಚೆಕ್ಕೆ.
(ಬಿಲ್ಯಡ್’) ಊರೆಗೋಲು; ದಾಂಡಿಗೆ ಊರೆಕೊಡುವಂತೆ ಒಂದು ತುದಿಯನ್ನು ಅಳವಡಿಸಿರುವ ಉದ್ದನೆ ಕೋಲು.
(ಬಿಲ್ಯಡ್’) ಊರೆ; ಸರಿಯಾಗಿ ಗುರಿಯಿಡಲು ಬಿಲ್ಯಡ್’ ಕೋಲಿಗೆ ಊರೆಕೊಡುವ, ಎಡಗೈಯ ಹೆಬ್ಬೆರಳು ಮತ್ತು ತೋರುಬೆರಳಿಗೆ ನಡುವಣ ಭಾಗ.