See also 1cross  3cross
2cross ಕ್ರಾಸ್‍
ಸಕರ್ಮಕ ಕ್ರಿಯಾಪದ
  1. ಶಿಲುಬೆಯಾಗಿಡು; ಕತ್ತರಿಯಂತಿಡು; ಶಿಲುಬೆಯಾಕಾರದಲ್ಲಿ, ಕತ್ತರಿಯಾಕಾರದಲ್ಲಿ–ಇಡು; ಒಂದರ ಮೇಲೊಂದನ್ನು ಅಡ್ಡಡ್ಡಲಾಗಿ ಇಡು: cross one’s legs ಕಾಲುಗಳನ್ನು ಕತ್ತರಿಯಾಕಾರದಲ್ಲಿ ಇಡು; ಕಾಲಿನ ಮೇಲೆ ಕಾಲು ಹಾಕು.
  2. (ಭಯ ಭಕ್ತಿ ಸೂಚಿಸಲು, ದೇವರ ರಕ್ಷಣೆ ಪಡೆಯಲು) ಶಿಲುಬೆ ಮುದ್ರೆಮಾಡು; ಶಿಲುಬೆಯ ಸನ್ನೆ ಮಾಡು; ಶಿಲುಬೆಯಾಕಾರದಲ್ಲಿ ಕೈಗಳನ್ನು ಜೋಡಿಸು.
  3. (ಶಿಲುಬೆ ಸನ್ನೆಮಾಡಿ) ಹರಸು; ಆಶೀರ್ವದಿಸು.
  4. ಕತ್ತರಿಗುರುತು ಹಾಕು; ಅಡ್ಡಗೆರೆ ಎಳೆ; ಹೊಡೆದು ಹಾಕು; ಕಾಟು ಹಾಕು.
  5. (ಆಗಲೇ ಬರೆದಿರುವುದರ ಮೇಲೆ) ಅಡ್ಡಲಾಗಿ ಬರೆ.
  6. (ರಸ್ತೆ, ನದಿ, ಸಮುದ್ರ ಮೊದಲಾದವನ್ನು) ದಾಟು; ಹಾಯು ಯಾ ಹಾಯಿಸು.
  7. (ಜೀನು, ಕುದುರೆ ಮೊದಲಾದವುಗಳ ಮೇಲೆ) ಅಡ್ಡಗಾಲು ಹಾಕಿ ಕುಳಿತುಕೊ.
  8. ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ವಿಸ್ತರಿಸು, ವ್ಯಾಪಿಸು.
  9. ಸಾಮಾನುಗಳನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗಿಸು, ಹೊತ್ತುಕೊಂಡು ಹೋಗು.
  10. (ಒಬ್ಬರನ್ನೊಬ್ಬರು, ಒಂದು ವಸ್ತು ಇನ್ನೊಂದನ್ನು) ಹಾದುಹೋಗು; ಅಡ್ಡಹಾಯಿ.
  11. (ವ್ಯಕ್ತಿ, ಯೋಜನೆ, ಅಪೇಕ್ಷೆ ಮೊದಲಾದವುಗಳಿಗೆ) ಅಡ್ಡಬರು; ಅಡ್ಡಿಮಾಡು; ಭಂಗತರು; ಭಂಗಗೊಳಿಸು; ಭಗ್ನಗೊಳಿಸು: he crossed me in everything ಅವನು ಎಲ್ಲದರಲ್ಲೂ ನನಗೆ ಅಡ್ಡಿಮಾಡಿದ. he has been crossed in love ಆತ ಪ್ರೇಮದಲ್ಲಿ ಭಗ್ನನಾಗಿದ್ದಾನೆ.
  12. (ಪ್ರಾಣಿಗಳಲ್ಲಿ) ಹೋರಿ ಕೊಡಿಸು; ಹೋರಿ ಹಾರಿಸು; ಹೋರಿ ಹಾಯಿಸು.
  13. (ಪ್ರಾಣಿ ಯಾ ಸಸ್ಯಗಳಲ್ಲಿ) ಮಿಶ್ರತಳಿ ಮಾಡು.
  14. (ಅಶಿಷ್ಟ) ಮೋಸಮಾಡು; ವಂಚಿಸು.
ಅಕರ್ಮಕ ಕ್ರಿಯಾಪದ
  1. ಅಡ್ಡಹಾಯಿ.
  2. ಮಿಶ್ರತಳಿ ಆಗು.
  3. ಹಾದುಹೋಗು; ಸಂಧಿಸಿ ಮುಂದಕ್ಕೆ–ಸಾಗು, ಹೋಗು.
ಪದಗುಚ್ಛ
  1. cross a cheque (ಬ್ರಿಟಿಷ್‍ ಪ್ರಯೋಗ) ಚೆಕ್ಕಿಗೆ–ಕಾಟುಹಾಕು, ಅಡ್ಡಗೆರೆಹಾಕು; ಚೆಕ್ಕನ್ನು ಕ್ರಾಸು ಮಾಡು; ಬ್ಯಾಂಕಿನ ಮೂಲಕ ಮಾತ್ರ ಹಣ ಪಡೆಯುವಂತೆ ಮಾಡಲು, ಚೆಕ್ಕಿನ ಎಡತುದಿಯಲ್ಲಿ & Co. ಎಂದು ಬರೆದು ಎರಡು ಅಡ್ಡಗೆರೆಗಳನ್ನು ಹಾಕು, ಕ್ರಾಸುಮಾಡು.
  2. cross off = ಪದಗುಚ್ಛ \((4)\).
  3. cross one’s heart (ಪ್ರಾಮಾಣಿಕತೆಯನ್ನು ಸಮರ್ಥಿಸಲು) ಎದೆಯ ಮೇಲೆ ಶಿಲುಬೆಸನ್ನೆ ಮಾಡಿಕೊ.
  4. cross out ಕತ್ತರಿಗುರುತು ಹಾಕು; ಹೊಡೆದುಹಾಕು; ಅಡ್ಡಗೆರೆ ಎಳೆ; ಕಾಟುಹಾಕು.
  5. cross over = 2cross(6).
  6. cross wires
    1. ಬೇರೆಬೇರೆ ಲೈನುಗಳಿಗೆ ಯಾ ಮಂಡಲಗಳಿಗೆ ಸೇರಿದ ಟೆಲಿಹೋನ್‍ ಯಾ ಟೆಲಿಗ್ರಾಹ್‍ ವೈರುಗಳ ನಡುವೆ ಸಂಬಂಧ ಕಲ್ಪಿಸು.
    2. (ರೂಪಕವಾಗಿ) ಮನಸ್ತಾಪ ಇರು; ವೈಮನಸ್ಯ ಹೊಂದಿರು.
ನುಡಿಗಟ್ಟು
  1. cross a $^1$bridge when one comes to it.
  2. cross fortune-teller’s hand (or palm) with ಕಣಿಹೇಳುವವಳ ಕೈಗೆ ಕಾಸು ಕೊಡು.
  3. cross oneself ಶಿಲುಬೆ ಗುರುತು ಎಳೆದುಕೊ; (ದೇವರ ರಕ್ಷಣೆಯನ್ನು ಕೋರಿ, ತನ್ನ ಮೇಲೆ) ಶಿಲುಬೆಯಾಕಾರದ ಕೈಸನ್ನೆಮಾಡು.
  4. cross one’s fingers = ನುಡಿಗಟ್ಟು \((11)\).
  5. cross one’s mind ಮನಸ್ಸಿಗೆ ಹೊಳೆ.
  6. cross one’s path
    1. ಅನಿರೀಕ್ಷಿತವಾಗಿ–ಎದುರಾಗು, ಸಂಧಿಸು, ಭೇಟಿಯಾಗು.
    2. ಅಡ್ಡಬರು; ಅಡ್ಡಹಾಯಿ; ವಿರೋಧಿಸು; ಪ್ರತಿಭಟಿಸು.
  7. cross one’s t’s and dot one’s i’s ಸಣ್ಣ ವಿವರಗಳಲ್ಲೂ–ನಿಷ್ಕೃಷ್ಟವಾಗಿರು, ಸರಿಯಾಗಿರು, ಎಚ್ಚರಿಕೆಯಿಂದ ತಪ್ಪಿಲ್ಲದಿರು.
  8. cross swords
    1. ಯುದ್ಧಕ್ಕೆ ಮೊದಲು ಕತ್ತಿಗೆ ಕತ್ತಿಯನ್ನು ಅಡ್ಡವಾಗಿ–ಒಡ್ಡು, ಮುಟ್ಟಿಸು.
    2. (ರೂಪಕವಾಗಿ) ಹೋರಾಡು; ಕಾದಾಡು.
    3. ವಿವಾದಕ್ಕೆ ತೊಡಗು; ವಾದಮಾಡು; ವಾದಕ್ಕಿಳಿ.
    4. ಸ್ಪರ್ಧಿಸು; ವಿರೋಧಿಸು; ಎದುರಿಸು.
  9. cross the floor (ಬ್ರಿಟಿಷ್‍ ಪ್ರಯೋಗ) (ಶಾಸನಸಭೆಯಲ್ಲಿ) ವಿರೋಧಿ ಪಕ್ಷದವರೊಡನೆ ಮತ ನೀಡು; ತನ್ನ ಪಕ್ಷದವರೇ ತಂದಿರುವ ಮಸೂದೆಗೆ ವಿರೋಧವಾಗಿ ಪ್ರತಿಪಕ್ಷದವರೊಡನೆ ಸೇರಿ ಮತ ಕೊಡು.
  10. cross the path of ಅಡಚಣೆಯೊಡ್ಡು; ಅಡ್ಡಬರು.
  11. keep one’s fingers crossed (ಅದೃಷ್ಟವುಂಟಾಗಲೆಂದು) ಒಂದು ಬೆರಳನ್ನು ಇನ್ನೊಂದರ ಮೇಲೆ ಕತ್ತರಿಯಾಕಾರದಲ್ಲಿಡು.
  12. to be crossed in love ಪ್ರಣಯಭಂಗ ಹೊಂದು.
  13. letters cross ಇಬ್ಬರ ಪತ್ರಗಳು ಅಡ್ಡಹಾಯಿ; ಇಬ್ಬರೂ ಪರಸ್ಪರ ಪತ್ರಬರೆದಿದ್ದು, ಒಬ್ಬರ ಪತ್ರ ಇನ್ನೊಬ್ಬರಿಗೆ ಇನ್ನೂ ತಲುಪದೆ ಇರು.
  14. would not cross the road to do (ಆಡುಮಾತು) ಕೆಲಸ ಮೊದಲಾದವನ್ನು ಮಾಡಲು ಸ್ವಲ್ಪವೂ ಆಸಕ್ತಿಯಿಲ್ಲದಿರು.