See also 2rest  3rest  4rest  5rest
1rest ರೆಸ್ಟ್‍
ಸಕರ್ಮಕ ಕ್ರಿಯಾಪದ
  1. (ಮಾಡುತ್ತಿರುವ ಕೆಲಸವನ್ನು) ಸದ್ಯಕ್ಕೆ, ತುಸುಹೊತ್ತು – ನಿಲ್ಲಿಸಿರು. ತಟಸ್ಥಗೊಳಿಸಿರು, ಸ್ಥಗಿತಗೊಳಿಸಿರು: he rested the work for a moment ಮಾಡುತ್ತಿದ್ದ ಕೆಲಸವನ್ನವನು ಕ್ಷಣಕಾಲ ನಿಲ್ಲಿಸಿದ.
  2. (ಆತ್ಮಾರ್ಥಕ) ಸುಧಾರಿಸಿಕೊಳ್ಳಲು ಬಿಡು; ಸುಧಾರಿಸಿಕೊ; ಆಯಾಸ ಪರಿಹರಿಸಿಕೊಳ್ಳಲು ಅವಕಾಶ ಕೊಡು ಯಾ ತೆಗೆದುಕೊ: I stayed a day to rest myself ಸುಧಾರಿಸಿಕೊಳ್ಳಲು ಒಂದು ದಿನ ತಂಗಿದೆ. rest your horse for an hour ನಿನ್ನ ಕುದುರೆಗೆ ಸುಧಾರಿಸಿಕೊಳ್ಳಲು ಒಂದು ಗಂಟೆ ಅವಕಾಶ ಕೊಡು.
  3. ಶಾಂತಿ ಕೊಡು, ನೀಡು: God rest his soul ದೇವರು ಮೃತನ ಆತ್ಮಕ್ಕೆ ಶಾಂತಿಯನ್ನೀಯಲಿ.
  4. ಇರಿಸು; ಇಟ್ಟುಕೊಂಡಿರು: he rests is hand on the table ಕೈಯನ್ನವನು ಮೇಜಿನ ಮೇಲೆ ಇಟ್ಟುಕೊಂಡಿದ್ದಾನೆ.
  5. (ವ್ಯಕ್ತಿ ಮೊದಲಾದವರನ್ನು) ನೆಚ್ಚಿಕೊಂಡಿರು: I rests upon your promise ನೀನು ಕೊಟ್ಟಿರುವ ವಚನವನ್ನೇ, ವಾಗ್ದಾನವನ್ನೇ ನಾನು ನೆಚ್ಚಿಕೊಂಡಿದ್ದೇನೆ.
  6. ನಂಬಿಕೆ–ಇರಿಸು; ಇಟ್ಟಿರು ( ಅಕರ್ಮಕ ಕ್ರಿಯಾಪದ ಸಹ): he rests his trust in God ಅವನು ತನ್ನ ನಂಬಿಕೆಯನ್ನು ದೇವರಲ್ಲಿಟ್ಟಿದ್ದಾನೆ. am content to rest in God ದೇವರಲ್ಲಿ ನಂಬಿಕೆಯಿಡುವುದರಿಂದ ತೃಪ್ತನಾಗಿದ್ದೇನೆ.
  7. (ಯಾವುದೇ ಆಧಾರದ ಮೇಲೆ) ಇಡು; ಸ್ಥಾಪಿಸು; ನಿಲ್ಲಿಸು: I rest my case on equity ನನ್ನ ಮೊಕದ್ದಮೆಯನ್ನು ನಾನು ನ್ಯಾಯದ ಆಧಾರದ ಮೇಲೆ ಸ್ಥಾಪಿಸಿದ್ದೇನೆ.
ಅಕರ್ಮಕ ಕ್ರಿಯಾಪದ
  1. ನಿಶ್ಚಲವಾಗಿರು; ಚಲಿಸದಿರು; ಕದಲದಿರು: waves can never rest ಅಲೆಗಳು ಕದಲದೆ ಇರಲೇ ಅರವು.
  2. ಸುಮ್ಮನಿರು; ನಿಷ್ಕ್ರಿಯವಾಗಿರು; ತಟಸ್ಥವಾಗಿರು: never let your enemy rest ನಿನ್ನ ಶತ್ರುವನ್ನು ಸುಮ್ಮನಿರಗೊಡಲೇಬೇಡ.
  3. (ನಡೆತವನ್ನು ಯಾ ದುಡಿಮೆಯನ್ನು ನಿಲ್ಲಿಸಿ) ಒಂದೆಡೆಯಲ್ಲಿ ಯಾ ಒಂದು ಘಟ್ಟದಲ್ಲಿ–ನಿಂತಿರು, ವಿರಮಿಸಿರು: let us rest here
    1. ನಡೆಯುವುದನ್ನು ನಿಲ್ಲಿಸಿ ಇಲ್ಲಿಯೇ (ಸ್ವಲ್ಪ) ಇರೋಣ.
    2. ನಮ್ಮ ಕೆಲಸವನ್ನು ಇಲ್ಲಯೇ ನಿಲ್ಲಿಸಿರೋಣ.
  4. (ನಿದ್ರಿಸುತ್ತ ಹಾಸಿಗೆಯಲ್ಲಿ, ಯಾ ತೀರಿಕೊಂಡು ಮುತ್ಯುಶಯ್ಯೆ ಇಲ್ಲವೆ ಸಮಾಧಿಯಲ್ಲಿ) ಮಲಗಿರು: he is resting in bed ಅವನು ಹಾಸಿಗೆಯಲ್ಲಿ ಮಲಗಿದ್ದಾನೆ. he is resting in the graveyard ಆತ ಸ್ಮಶಾನದಲ್ಲಿ ಮಲಗಿದ್ದಾನೆ.
  5. ವಿಶ್ರಾಂತಗೊಂಡಿರು; ವಿಶ್ರಾಂತಿ ಪಡೆದಿರು: he is too feverish to rest ತೀರ ಜ್ವರದಿಂದ ಅವನಿಗೆ ವಿಶ್ರಾಂತಿ ಸಾಧ್ಯವಿಲ್ಲ.
  6. ಸಮಾಧಾನದಿಂದಿರು; ಮನಶ್ಶಾಂತಿಯಿಂದಿರು: I cannot rest under an imputation ಆಪಾದನೆ ಹೊತ್ತು ನಾನು ಸಮಾಧಾನದಿಂದಿರಲಾರೆ.
  7. (ಜಮೀನಿನ ವಿಷಯದಲ್ಲಿ) ಬೇಸಾಯವಿಲ್ಲದೆ, (ವಸ್ತುವಿನ ವಿಷಯದಲ್ಲಿ) ಬಳಸದೆ ಬಿದಿರು: the land rests fallow ಆ ಜಮೀನು ಬರಡಾಗಿ ಬಿದ್ದಿದೆ.
  8. (ವಿಷಯ, ಕಾರ್ಯ ಮೊದಲಾದವುಗಳ ವಿಷಯದಲ್ಲಿ) ಇದ್ದಂತೆಯೇ ಇರು; ಹಾಗೆಯೇ ಇರು; ಮುಂದುವರಿಸದೆ ಬಿಟ್ಟಿರು: this matter cannot rest here ಈ ವಿಷಯ ಹೀಗೆಯೇ ಇರಲು ಸಾಧ್ಯವಿಲ್ಲ; ಈ ವಿಷಯವನ್ನು ಇಲ್ಲಿಗೇ ಬಿಟ್ಟಿರಲು ಸಾಧ್ಯವಿಲ್ಲ.
  9. ಇರು: the picture rests on the wall ಆ ಚಿತ್ರ ಗೋಡೆಯ ಮೇಲಿದೆ.
  10. (ಹರಡಿಕೊಂಡು, ಚಾಚಿಕೊಂಡು) ಬಿದ್ದಿರು: the light rests upon the altar ಪ್ರಾರ್ಥನಾ ವೇದಿಕೆಯ ಮೇಲೆ ಬೆಳಕು ಬಿದ್ದಿದೆ.
  11. (ಊರೆಯ, ಆಧಾರದ ಮೇಲೆ) ನಿಂತಿರು: the roof rests on the pillars ಚಾವಣಿಯು ಕಂಬಗಳ ಮೇಲೆ ನಿಂತಿದೆ.
  12. ಅವಲಂಬಿಸಿರು; ಆಧಾರಗೊಂಡಿರು: science rests on phenomena ವಿಜ್ಞಾವು (ನಿಸರ್ಗದ ಯಾ ಸಮಾಜದ) ತಥ್ಯಗಳನ್ನು ಅವಲಂಬಿಸಿದೆ.
  13. ನೆಟ್ಟಿರು: his gaze rests upon the scene ಅವನ ದೃಷ್ಟಿ ಆ ದೃಶ್ಯದ ಮೇಲೆ ನೆಟ್ಟಿದೆ.
  14. ಊರಿರು; ಒರಗಿರು: his elbow rests on the table ಅವನ ಮೊಣಕೈ ಮೇಜದ ಮೇಲೆ ಊರಿದೆ. cushion rests on the chair ದಿಂಬು ಕುರ್ಚಿಯ ಮೇಲೆ ಒರಗಿದೆ.
  15. (ಅಮೆರಿಕನ್‍ ಪ್ರಯೋಗ) ಒಂದು ಮೊಕದ್ದಮೆಯಲ್ಲಿ ಸಾಕ್ಷಿಗಳನ್ನು ಕರೆಯುವುದನ್ನು ಮುಗಿಸು: the prosecution rests ಆರೋಪದಲ್ಲಿ ಸಾಕ್ಷಿಗಳನ್ನು ಕರೆಸುವುದನ್ನು ಮುಗಿಸಲಾಗಿದೆ.
  16. (ಮುಖ್ಯವಾಗಿ ವಿಶ್ರಾಂತಿ ಪಡೆಯಲು ಯಾ ಚೇತರಿಸಿಕೊಳ್ಳಲು) ಏನೂ ಮಾಡದೆ ಸುಮ್ಮನಿರು ಯಾ ಮಲಗಿರು.
ಪದಗುಚ್ಛ
  1. rest on (or upon) one’s oars
    1. ಹುಟ್ಟುಹಾಕುವುದನ್ನು ಯಾ ಜಲ್ಲೆ ಬೀಸುವುದನ್ನು ತುಸುಹೊತ್ತು ನಿಲ್ಲಿಸು.
    2. ಮಾಡುತ್ತಿರುವ ಯಾವುದೇ ಪ್ರಯತ್ನ ಯಾ ಕಾರ್ಯವನ್ನು ತಟಸ್ಥಗೊಳಿಸು, ಸ್ಥಗಿತಗೊಳಿಸು.
  2. rest one’s case ಒಂದು ವಾದ ಮೊದಲಾದವನ್ನು ಮುಗಿಸು.
  3. be resting (ಸದ್ಯದಲ್ಲಿ) ಕೆಲಸವಿಲ್ಲದಿರು; ಉದ್ೋಗ ಇಲ್ಲದಿರು; ನಿರುದ್ಯೋಗಿಯಾಗಿರು: the actor is resting ಆ ನಟನು ಈಗ ಉದ್ಯೋಗ ಇಲ್ಲದೆ ಇದ್ದಾನೆ.
  4. rest up (ಅಮೆರಿಕನ್‍ ಪ್ರಯೋಗ) ಸಂಪೂರ್ಣವಾಗಿ ವಿಶ್ರಾಂತಿ ತೆಗೆದುಕೊ.
  5. rest on one’s $^1$laurels.