See also 1rest  2rest  3rest  5rest
4rest ರೆಸ್ಟ್‍
ನಾಮವಾಚಕ
    1. ಉಳಿಕೆ; ಶೇಷ; ಅವಶೇಷ; ಉಳಿದ ಭಾಗ, ಭಾಗಗಳು; ಮಿಕ್ಕದ್ದು ಯಾ ಮಿಕ್ಕವು.
    2. ಉಳಿದವನು, ಉಳಿದವರು; ಮಿಕ್ಕವನು, ಮಿಕ್ಕವರು: and the rest, (or all the rest) ಉಳಿದವರೆಲ್ಲ ಯಾ ಉಳಿದದ್ದೆಲ್ಲ.
  1. (ಬ್ರಿಟಿಷ್‍ ಪ್ರಯೋಗ) (ಬ್ಯಾಂಕಿನ ವಿಷಯದಲ್ಲಿ) ಲಾಭಾಂಶಗಳನ್ನು ಹಂಚಿದ ಬಳಿಕ ಉಳಿಯುವ ಹಣ; ಎತ್ತಿಟ್ಟ, ಕಾದಿಟ್ಟ–ಹಣ, ನಿಕ್ಷೇಪ, ನಿಧಿ.
  2. (ವಾಣಿಜ್ಯ) ಆಯವ್ಯಯ, ಲೇಣಿದೇಣಿಗಳನ್ನು ಪರಿಶೀಲಿಸಿ ಸಮಗೊಳಿಸಿ ಲೆಕ್ಕಾಚಾರ ಮಾಡುವುದು; ಒಟ್ಟು ವ್ಯವಹಾರದ ತಪಶೀಲು ತಯಾರಿಸುವುದು.
  3. (ಟೆನಿಸ್‍ ಮೊದಲಾದ ಆಟ) ಎಡೆಬಿಡದೆ ಹಿಂದಿರುಗಿಸಿದ ಚೆಂಡಿನ ಹೊಡೆತಗಳ ಸರಣಿ; ಚೆಂಡಿನ ಪುಂಖಾನುಪುಂಖ ಹೊಡೆತ, ‘ರ್ಯಾಲಿ’.
ಪದಗುಚ್ಛ
  1. and all the rest (or the rest of it) ಮತ್ತು ಉಳಿದೆಲ್ಲವು; ಮೊದಲಾದವು; ಇತ್ಯಾದಿ.
  2. for the rest (ಹೇಳದೆ) ಉಳಿದಿರುವುದರ ಬಗೆಗೆ, ವಿಷಯದಲ್ಲಿ; ಉಳಿದ ವಿಚಾರ ತೆಗೆದುಕೊಂಡರೆ.