See also 2laurel
1laurel ಲಾರ್‍(ರ)ಲ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) = $^1$bay(1).
  2. (ಏಕವಚನ ಯಾ ಬಹುವಚನದಲ್ಲಿ) ವಿಜಯಮಾಲೆ; ಜಯಪರ್ಣ; ಜಯಪತ್ರೆ; ಜಯದ ಯಾ ಕವಿತಾ ಪ್ರಶಸ್ತಿಯ ಸಂಕೇತವಾದ ‘ಬೇ’ ಮರದ ಎಲೆಗಳು.
  3. (ಬಹುವಚನ ದಲ್ಲಿ) ಗೌರವ; ವಿಶೇಷ ಮನ್ನಣೆ.
  4. ‘ಬೇ’ ಮರದ ಎಲೆಯಂತೆ ಹೊಳೆಯುವ ಕಡುಹಸುರು ಎಲೆಗಳುಳ್ಳ ಯಾವುದೇ ಸಸ್ಯ: cherry laurel, Japanese laurel, mountain laurel.
ಪದಗುಚ್ಛ
  1. reap laurels ಪ್ರಶಸ್ತಿ ಪಡೆ; ಕೀರ್ತಿಗಳಿಸು; ಹೆಸರುಗಳಿಸು; ಖ್ಯಾತಿಹೊಂದು.
  2. win laurels =ಪದಗುಚ್ಛ \((1)\).
ನುಡಿಗಟ್ಟು
  1. look to one’s laurels ಸ್ಥಾನ ಉಳಿಸಿಕೊ; ಖ್ಯಾತಿ ಕಾಪಾಡಿಕೊ; ಗೌರವ ಕಾಯ್ದುಕೊ; ಹೆಸರು ಉಳಿಸಿಕೊ; ತನ್ನ ಖ್ಯಾತಿ, ಹಿರಿಮೆಗೆ, ಉಚ್ಚಸ್ಥಾನಕ್ಕೆ ಲೋಪಬರದಂತೆ ಎಚ್ಚರಿಕೆಯಿಂದಿರು; ಇತರರು ತನ್ನನ್ನು ಮೀರಿಸದಂತೆ ನೋಡಿಕೊ: new developments in industry are forcing old firms to look to their laurels ಕೈಗಾರಿಕೆಯ ಹೊಸ ಬೆಳವಣಿಗೆಗಳು ಹಳೆಯ ವಾಣಿಜ್ಯ ಸಂಸ್ಥೆಗಳನ್ನು ಅವುಗಳ ಖ್ಯಾತಿಗೆ (ಹಿರಿಮೆಗೆ) ಲೋಪ ಬರದಂತೆ ಎಚ್ಚರವಹಿಸಲು ಒತ್ತಾಯಪಡಿಸುತ್ತಿವೆ.
  2. rest on one’s laurels (ಗಳಿಸಿರುವುದಕ್ಕಿಂತ) ಹೆಚ್ಚಿನ ಗೌರವಕ್ಕೆ, ಖ್ಯಾತಿಗೆ – ಶ್ರಮಿಸದಿರು, ಪ್ರಯತ್ನಿಸದಿರು.