See also 1rest  3rest  4rest  5rest
2rest ರೆಸ್ಟ್‍
ನಾಮವಾಚಕ
  1. (ಮುಖ್ಯವಾಗಿ ಹಾಸಿಗೆಯ ಮೇಲೆ) ಶಯನ; ಮಲಗಿಕೊಂಡಿರುವುದು ಯಾ ನಿದ್ರಿಸುತ್ತಿರುವುದು: retire to rest ಮಲಗಲು ಹೋಗು.
    1. (ದುಡಿಮೆ, ಕೆಲಸಕಾರ್ಯ, ಓಡಾಟ, ಚಿಂತೆ ಮೊದಲಾದವುಗಳಿಂದ) ಬಿಡುವು; ವಿರಾಮ; ವಿಶ್ರಾಂತಿ; ಆರಾಮ: take one’s rest ವಿಶ್ರಾಂತಿ ತೆಗೆದುಕೊ; ವಿರಮಿಸಿಕೊ. a day of rest ವಿರಾಮದ ದಿನ (ಸಾಮಾನ್ಯವಾಗಿ ಭಾನುವಾರ). give person, animal, or thing a rest (ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದವಕ್ಕೆ) ಬಿಡುವು ಕೊಡು. give the subject a rest ಆ ವಿಷಯಕ್ಕೆ ವಿರಾಮಕೊಡು; ಆ ವಿಷಯದ ಪ್ರಸ್ತಾಪ, ವಾದ ಮೊದಲಾದವನ್ನು ನಿಲ್ಲಿಸು.
    2. ಬಿಡುವು; ಬಿಡುವಿನ ವೇಳೆ; ವಿರಾಮಕಾಲ: take a 15 minutes, rest ಹದಿನೈದು ನಿಮಿಷಗಳ ವಿರಾಮ ತೆಗೆದುಕೊ.
  2. (ನಾವಿಕರು, ಗಾಡಿಕಾರರು, ಮೊದಲಾದ ವರ್ಗಗಳಿಗಾಗಿ ಕಟ್ಟಿರುವ) ವಿಶ್ರಾಂತಿ ಮಂದಿರ, ಗೃಹ.
  3. (ಬಂದೂಕಿನ ಗುರಿ ಕದಲದಿರಲು, ಬೈಸಿಕಲ್‍ ಮೊದಲಾದ ವಾಹನವನ್ನು ಹತ್ತಲು, ಕಲ್ಪಿಸಿರುವ) ಊರೆ; ತಲ; ಆಧಾರ; ಪೀಠ; ಆನಿಕೆ.
  4. (ಸಂಗೀತ)
    1. (ಗಾಯನ, ವಾದನಗಳನ್ನು ತುಸುಹೊತ್ತು ನಿಲ್ಲಿಸಲು ನಿಗದಿಮಾಡಿದ) ನಿಲುಗಡೆ; ವಿರಾಮಕಾಲ.
    2. ಇಂಥ ನಿಲುಗಡೆಯ ಚಿಹ್ನೆ; ವಿರಾಮ–ಸೂಚಿ, ಸಂಕೇತ.
    1. (ವಾಗ್ಮಿತೆಯಿಂದ ಮಾಡುವ ಭಾಷಣದಲ್ಲಿ ನಡುನಡುವೆ ಪರಿಣಾಮಕ್ಕಾಗಿ ಮಾಡುವ) ಬಿಡುವು; ನಿಲುಗಡೆ; ವಿರಾಮ.
    2. (ಪದ್ಯರಚನೆಯಲ್ಲಿ) ಯತಿ.
ಪದಗುಚ್ಛ
  1. at rest
    1. ನಿಶ್ಚಲವಾಗಿರುವ; ಕದಲದಿರುವ.
    2. ನಿಶ್ಚಿಂತನಾಗಿರುವ; ಯಾವೊಂದು ಚಿಂತೆಯೂ ಇಲ್ಲದ.
    3. (ರೂಪಕವಾಗಿ) (ಸತ್ತು) ನಿಶ್ಚಿಂತನಾದ; ಚಿಂತೆಯೆಲ್ಲವನ್ನೂ ಕಳೆದುಕೊಂಡ.
  2. lay to rest (ವ್ಯಕ್ತಿಯನ್ನು) ಸಮಾಧಿಮಾಡು.
  3. set person’s mind at rest ವ್ಯಕ್ತಿಯ (ಚಿಂತೆಯನ್ನು ತೊಲಗಿಸಿ) ಮನಸ್ಸನ್ನು ಹಗುರಗೊಳಿಸು, ಶಾಂತಗೊಳಿಸು.
  4. set question at rest ಸಮಸ್ಯೆಯನ್ನು ಬಗೆಹರಿಸು, ಪರಿಹರಿಸು.