See also 1punch  3punch  4punch  5punch
2punch ಪಂಚ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಮುಷ್ಟಿಯಿಂದ) ಹೊಡೆ; ಗುದ್ದು; ಮೊಟ್ಟು; ಮಟ್ಟು: punch his head ಅವನ ತಲೆಯ ಮೇಲೆ ಮಟ್ಟು.
  2. (ಮೊಂಡು ಕೋಲು ಮೊದಲಾದವುಗಳಿಂದ) ತಿವಿ; ಚುಚ್ಚು.
  3. (ಅಮೆರಿಕನ್‍ ಪ್ರಯೋಗ) (ಮುಖ್ಯವಾಗಿ ದನದ ಮಂದೆಯನ್ನು) ತಿವಿದು ಅಟ್ಟಿಕೊಂಡು ಹೋಗು, ಓಡಿಸಿಕೊಂಡು ಹೋಗು.
  4. (ಲೋಹ, ಚರ್ಮ, ಪ್ರಯಾಣ ಚೀಟಿ, ಮೊದಲಾದವುಗಳಲ್ಲಿ ರಂಧ್ರಕದಿಂದ ಯಾ ಅದರಿಂದ ಮಾಡಿದಂತೆ) ತೂತುಮಾಡು; ರಂಧ್ರ ಕೊರೆ.
  5. ಹೀಗೆ ತೂತು ಕೊರೆ; ತೂತುಮಾಡು.