See also 2catch
1catch ಕ್ಯಾಚ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ caught ಉಚ್ಚಾರಣೆ– ಕಾಟ್‍).
  1. (ಮುಖ್ಯವಾಗಿ ಬೆನ್ನಟ್ಟಿ) ಹಿಡಿ; ಹಿಡಿದುಕೊ; ವಶಪಡಿಸಿಕೊ: catch a thief ಕಳ್ಳನನ್ನು ಹಿಡಿ.
  2. (ಬೋನು, ಗಾಳ, ಪಾಶ ಮೊದಲಾದವುಗಳಲ್ಲಿ) ಹಿಡಿ; ಸಿಕ್ಕಿಸು: catch a fish ಮೀನು ಹಿಡಿ.
  3. (ಕೆಲಸ, ಪ್ರಯಾಣ ಮೊದಲಾದವುಗಳಲ್ಲಿ) ಹಿಡಿ; (ಸಮಕ್ಕೆ) ಬರು; (ಜೊತೆ) ಸೇರಿಕೊ: go on in front, I’ll soon catch you up ಮುಂದೆ ಹೋಗುತ್ತಿರು, ನಾನು ಬೇಗ ನಿನ್ನನ್ನು ಸೇರಿಕೊಳ್ಳುತ್ತೇನೆ.
  4. ಹಿಡಿದಿಡು; ಹಿಡಿದುಕೊಂಡಿರು; ಹಿಡಿದುಕೊ: a barrel to catch rain ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಪೀಪಾಯಿ.
  5. (ಪ್ರಯಾಣ ಮಾಡಲು ಸಿದ್ಧವಾದ ವ್ಯಕ್ತಿಯ ವಿಷಯದಲ್ಲಿ) (ರೈಲು ಮೊದಲಾದವನ್ನು)
    1. ಹಿಡಿ; ಹತ್ತು; ಏರು.
    2. ಸಕಾಲದಲ್ಲಿರು; ಸಮಯಕ್ಕೆ ಸಿದ್ಧವಾಗಿರು.
  6. (ಚಲನಚಿತ್ರ ಮೊದಲಾದವನ್ನು) ನೋಡು; ಈಕ್ಷಿಸು; ವೀಕ್ಷಿಸು.
  7. (ರೇಡಿಯೊ ಮೊದಲಾದವನ್ನು) ಕೇಳು; ಆಲಿಸು.
  8. (ಕೆಲಸ ಮಾಡುತ್ತಿರುವಾಗ, ಮುಖ್ಯವಾಗಿ ತಪ್ಪು ಮಾಡುತ್ತಿರುವಾಗ, ಏಕಾಏಕಿ) (ಕಂಡು) ಹಿಡಿ; ನೋಡು: I caught the boys stealing apples from my garden ನನ್ನ ತೋಟದಿಂದ ಸೇಬುಗಳನ್ನು ಕದಿಯುತ್ತಿರುವಾಗ ಆ ಹುಡುಗರನ್ನು ಹಿಡಿದೆ, ಪತ್ತೆ ಮಾಡಿದೆ.
  9. (ಕರ್ಮಣಿಪ್ರಯೋಗ, ಆಡುಮಾತು) ಗರ್ಭಿಣಿಯಾಗಿರು; ಗರ್ಭವತಿಯಾಗು.
  10. (ಸಾಮಾನ್ಯವಾಗಿ ಸೂಚಿಸಿದ ಸ್ಥಳಕ್ಕೆ) ಹೊಡೆ; (ಪೆಟ್ಟು) ಕೊಡು; ಏಟು ಹಾಕು: I caught him on the nose ಅವನ ಮೂಗಿಗೆ ಒಂದು ಏಟು ಹಾಕಿದೆ, ಪೆಟ್ಟು ಕೊಟ್ಟೆ.
  11. (ಥಟ್ಟನೆ) ಕಸಿದುಕೊ; ಕಿತ್ತುಕೊ; ಸೆಳೆದುಕೊ.
  12. (ತಡೆ) ಹಿಡಿ; ಸಿಕ್ಕಿಸು; ಚಲನೆಗೆ ತಡೆಯೊಡ್ಡಿ ಹಿಡಿದಿಡು: nail catches dress ಮೊಳೆ ಉಡುಪಿಗೆ ಸಿಕ್ಕಿಕೊಳ್ಳುತ್ತದೆ. put something to catch the drips ಒಣಗಲು ನೇತು ಹಾಕಿರುವ ಬಟ್ಟೆಗಳನ್ನು ಹಿಡಿದಿಡಲು ಏನನ್ನಾದರೂ ಹಾಕು.
  13. (ಕ್ರಿಕೆಟ್‍) ಬುತ್ತಿ ಹಿಡಿ; ಕ್ಯಾಚು ಹಿಡಿ; ಬ್ಯಾಟಿನಿಂದ ಹೊಡೆದ ಚೆಂಡು ನೆಲಕ್ಕೆ ತಗಲುವುದಕ್ಕೆ ಮುಂಚೆಯೇ ಅದನ್ನು ಹಿಡಿ, ಹಿಡಿದು ಹಾಕು.
  14. (ಕ್ರಿಕೆಟ್‍) ಕ್ಯಾಚು ಹಿಡಿದು ಬ್ಯಾಟ್ಸ್‍ಮನ್ನನ್ನು ಹೊರಕಳಿಸು, ಔಟು ಮಾಡು.
  15. (ಉಸಿರು ಮೊದಲಾದವನ್ನು ಇದ್ದಕ್ಕಿದ್ದಂತೆ ಹಿಡಿದು) ಕಟ್ಟು; ತಡೆ ಹಿಡಿ; ಬಿಗಿ ಹಿಡಿ; ನಿಗ್ರಹಿಸು; ನಿಯಂತ್ರಿಸು.
  16. ಪಡೆ; ಹೊಂದು; ಈಡಾಗು; ಪಕ್ಕಾಗು; ಗುರಿಯಾಗು; ಸೋಂಕು ಹತ್ತಿರು; ಅಂಟು ತಗುಲಿರು: he caught a cold ಅವನಿಗೆ ನೆಗಡಿ ಅಂಟಿತು.
  17. (ಅರ್ಥ, ಸ್ವರ, ಧ್ವನಿ, ರಾಗ ಮೊದಲಾದವುಗಳನ್ನು ಇಂದ್ರಿಯ ಯಾ ಮನಸ್ಸಿನಿಂದ) ಹಿಡಿ; ಗ್ರಹಿಸು: ಅರ್ಥ ಮಾಡಿಕೊ; ತಿಳಿದುಕೊ; ಗೊತ್ತಾಗು: did you catch the meaning of the sentence? ನಿನಗೆ ವಾಕ್ಯದ ಅರ್ಥ ತಿಳಿಯಿತೆ?
  18. ಮೋಸಗೊಳಿಸು; ವಂಚಿಸು: flattery catches the simple-minded ಸರಳ ಸ್ವಭಾವದವರನ್ನು ಹೊಗಳಿಕೆ ವಂಚಿಸುತ್ತದೆ.
  19. (ಗಮನ, ಚಿತ್ತ, ಕಣ್ಣು ಮೊದಲಾದವನ್ನು) ಸೆಳೆ; ಮೋಹಗೊಳಿಸು; ವಶೀಕರಿಸು; ಆಕರ್ಷಿಸು; ಸೆರೆಹಿಡಿ; ಮರುಳುಗೊಳಿಸು; ವಶಮಾಡಿಕೊ: her smile catches many ಅವಳ ಮುಗುಳುನಗು ಅನೇಕರನ್ನು ಸೆಳೆಯುತ್ತದೆ.
  20. (ಕೊಂಡಿ, ಅಗುಳಿ ಮೊದಲಾದವನ್ನು) ಸಿಕ್ಕಿಸು; ತಗುಲಿಸು; ಹಾಕು: catch the clasp of a necklace ಸರದ ಕೊಕ್ಕೆ ಹಾಕು.
ಅಕರ್ಮಕ ಕ್ರಿಯಾಪದ
  1. (ಬೆಂಕಿ ಯಾ ಉರಿಯುವ ವಸ್ತುವಿನ ವಿಷಯದಲ್ಲಿ) ಹೊತ್ತಿಕೊ; ಉರಿಯಲು ಪ್ರಾರಂಭಿಸು.
  2. ಸಿಕ್ಕಿಕೊ; ಸಿಕ್ಕಿ ಹಾಕಿಕೊ; ತೊಡರಿಕೊ: his foot caught in the hole ಅವನ ಕಾಲು ಕುಳಿಯಲ್ಲಿ ಸಿಕ್ಕಿಕೊಂಡಿತು. caught in the net ಬಲೆಯಲ್ಲಿ ಸಿಕ್ಕಿಬೀಳು.
  3. (ಬಾಗಿಲು, ಬೀಗ ಮೊದಲಾದವು) ಹಾಕಿಕೊ; ಮುಚ್ಚಿಕೊ: take care, the door lock catches ಎಚ್ಚರ, ಬಾಗಿಲಿನ ಬೀಗ ಹಾಕಿಕೊಳ್ಳುತ್ತದೆ.
  4. ಹಿಡಿದುಕೊ; ಕಸಿದುಕೊ: catch at an opportunity ಅವಕಾಶ ಹಿಡಿ.
ನುಡಿಗಟ್ಟು
  1. catch a 2cold.
  2. catch a glimpse of ಮಿಂಚುನೋಟ ಪಡೆ; ಕ್ಷಣದರ್ಶನ ಪಡೆ.
  3. catch a likeness ಆಕಾರ ಹಿಡಿ; ಸದೃಶವಾಗಿರುವಂತೆ ಅನುಕರಿಸು; ಯಥಾವತ್ತಾಗಿ–ಚಿತ್ರಿಸು, ವರ್ಣಿಸು, ನಿರೂಪಿಸು, ರೂಪಿಸು.
  4. catch at
    1. ಆತುರದಿಂದ–ಹಿಡಿ, ಹಿಡಿಯಲು ಪ್ರಯತ್ನಿಸು; ಆತುರದಿಂದ ಕೈಚಾಚು.
    2. ತಕ್ಷಣ ಸ್ವೀಕರಿಸು; ಕೂಡಲೇ ಒಪ್ಪಿಕೊ.
  5. catch a $^2$tartar.
  6. catch at a straw.
  7. catch away ಫಕ್ಕನೆ–ಎತ್ತಿಕೊ, ಸೆಳೆದುಕೊ; ಥಟ್ಟನೆ–ಕಸಿದುಕೊ, ಕಿತ್ತುಕೊ.
  8. catch $^1$fire.
  9. catch hold of ಹಿಡಿದುಕೊ.
  10. catch it (ಆಡುಮಾತು) (ಬಯ್ಗಳು, ಖಂಡನೆ, ದೂಷಣೆ, ಶಿಕ್ಷೆ, ಏಟು ಮೊದಲಾದವನ್ನು) ತಿನ್ನು: you’ll catch it if you’re not careful ನೀನು ಎಚ್ಚರಿಕೆ ವಹಿಸದಿದ್ದರೆ ನಿನಗೆ (ಏಟು) ಬೀಳುತ್ತದೆ, (ಶಿಕ್ಷೆ ಮೊದಲಾದವು) ಆಗುತ್ತದೆ. he’ll catch it from his mother ಅವನು ತನ್ನ ತಾಯಿಯಿಂದ ಏಟು ತಿನ್ನುತ್ತಾನೆ.
  11. catch me!, him! (ವ್ಯಂಗ್ಯವಾಗಿ) ನಾನು, ಅವನು, ಹಾಗೆ ಮಾಡುವುದಿಲ್ಲ ಎಂದು–ಭರವಸೆಯಿಂದಿರು, ಗ್ಯಾರಂಟಿಯಾಗಿರು.
  12. catch $^1$napping.
  13. catch on (ಆಡುಮಾತು)
    1. ಜನಪ್ರಿಯವಾಗು; ಜನಾದರಣೀಯವಾಗು; ಇಷ್ಟವಾಗು.
    2. ಗ್ರಹಿಸು; ಅರ್ಥ ಮಾಡಿಕೊ; ತಿಳಿದುಕೊ.
  14. catch one’s breath.
  15. catch one’s death.
  16. catch out
    1. (ಕ್ರಿಕೆಟ್‍) ಕ್ಯಾಚು ಹಿಡಿದು ಔಟು ಮಾಡು.
    2. (ತಪ್ಪು ಮಾಡುತ್ತಿರುವಾಗ ಮೊದಲಾದ ಸಂದರ್ಭಗಳಲ್ಲಿ) ಹಿಡಿದು ಹಾಕು; ಪತ್ತೆ ಹಿಡಿ.
    3. ಏಕಾಏಕಿ ಹಿಡಿ; ಅನಿರೀಕ್ಷಿತವಾಗಿ ಕಂಡುಹಿಡಿ.
  17. catch sight of = ನುಡಿಗಟ್ಟು \((2)\).
  18. catch Speaker’s eye (ಪಾರ್ಲಿಮಂಟ್‍ ಮೊದಲಾದ ಸಭೆಯಲ್ಲಿ ಭಾಷಣದ ಸರದಿಗಾಗಿ) ಅಧ್ಯಕ್ಷನ ಕಣ್ಣಿಗೆ ಬೀಳು; ಅಧ್ಯಕ್ಷನ ಗಮನ ಸೆಳೆ.
  19. catch the $^1$sun.
  20. catch up
    1. = ನುಡಿಗಟ್ಟು \((7)\).
    2. ಜೊತೆಗೆ ಬರು; ಸಮಕ್ಕೆ ಬರು; ಹಿಡಿ: catch up with the leader in the race ಪಂದ್ಯದಲ್ಲಿ ಮುಂದೆ ಓಡುತ್ತಿರುವವನ ಸಮಕ್ಕೆ ಬಾ.
    3. ಒಳಗಾಗು; ಭಾಗಿಯಾಗು; ಸಿಕ್ಕಿಬೀಳು; ಸಿಕ್ಕಿಕೊ: caught up in the excitement of the crowd ಗುಂಪಿನ ಉತ್ಸಾಹದಲ್ಲಿ ಸಿಕ್ಕಿಬಿದ್ದ.
    4. ಉಳಿದ ಯಾ ಬಾಕಿ ಬಿದ್ದ ಕೆಲಸವನ್ನು ಮಾಡಿ ಮುಗಿಸು.
  21. catch up a habit ಅಭ್ಯಾಸ–ಮಾಡಿಕೊ, ಬೆಳೆಸಿಕೊ.