See also 2watch
1watch ವಾಚ್‍
ನಾಮವಾಚಕ
    1. ರಾತ್ರಿ ಎಚ್ಚರದ ಕಾಲ; ಜಾಗರಣೆ.
    2. ಪ್ರಹರ; ಪ್ರಾಚೀನ ಕಾಲದಲ್ಲಿ ರಾತ್ರಿಯನ್ನು ವಿಭಾಗಿಸುತ್ತಿದ್ದ ಅವಧಿಗಳಲ್ಲಿ ಒಂದು.
  1. ಎಚ್ಚರಿಕೆ; ಎಚ್ಚರ; ಎಚ್ಚರದಿಂದ ನೋಡುತ್ತ, ಕಾಯುತ್ತ ಇರುವುದು; ಎಡೆಬಿಡದೆ, ಸಂತತವಾಗಿ – ಗಮನಿಸುತ್ತಿರುವುದು: keep (a) watch ಎಚ್ಚರದಿಂದ ಕಾಯು, ಕಾವಲಿರು. keep (a) good watch ಚೆನ್ನಾಗಿ ಕಾಯು; ಎವೆಯಿಕ್ಕದೆ ಕಾಯು.
  2. (ಚರಿತ್ರೆ) ರಾತ್ರಿ ಕಾವಲಿನವನು ಯಾ ಕಾವಲುದಳ, ಪಹರೆಯವನು ಯಾ ಪಹರೆ ದಳ; ರಾತ್ರಿಯ ವೇಳೆಯಲ್ಲಿ ಬೀದಿಗಳಲ್ಲಿ ಗಸ್ತು ತಿರುಗುವವನು ಯಾ ಗಸ್ತು ತಿರುಗುವ ಪಡೆ.
  3. (ಚರಿತ್ರೆ) (18ನೆಯ ಶತಮಾನದಲ್ಲಿ ಸೇನೆಗೆ ಸೇರದ) ಹೈಲ್ಯಾಂಡ್‍ ಪಡೆ.
  4. (ಹಡಗಿನ ಮೇಲೆ) (ನಾಲ್ಕು ಗಂಟೆಗಳ) ಕೆಲಸದ ವೇಳೆ, ಸರದಿ.
  5. (ನೌಕಾಯಾನ)
    1. ಪರ್ಯಾಯ ದಳ; ಒಂದಾದ ಮೇಲೊಂದರಂತೆ, ಕೆಲಸ ಮಾಡಲು ನಾವಿಕ ದಳವನ್ನು ವಿಭಾಗಿಸಿರುವ ಎರಡು ದಳಗಳಲ್ಲೊಂದು.
    2. ನಾಲ್ಕು ಗಂಟೆಗಳ ಅವಧಿಯ ನಿಗದಿತ ಕೆಲಸ.
  6. ಕೈಗಡಿಯಾರ ಯಾ ಜೇಬಿನಲ್ಲಿಟ್ಟುಕೊಳ್ಳುವ ಚಿಕ್ಕ ಗಡಿಯಾರ.
ಪದಗುಚ್ಛ
  1. be on the watch (ಸಾಮಾನ್ಯವಾಗಿ ನಿರೀಕ್ಷಿಸುತ್ತಿರುವ ಯಾ ಬಯಸುತ್ತಿರುವ ಯಾ ಅಂಜುತ್ತಿರುವ ಘಟನೆಗಾಗಿ) ಕಾಯುತ್ತಿರು; ಎದುರು ನೋಡುತ್ತಿರು.
  2. in the watches of the night ರಾತ್ರಿಯ ಜಾಗರದ ಅವಧಿಗಳಲ್ಲಿ ಒಂದು: the ghost appears in the fourth watch of the night ರಾತ್ರಿಯ ನಾಲ್ಕನೇ ಜಾಗರದಲ್ಲಿ ಆ ಪ್ರೇತವು ಕಾಣಿಸಿಕೊಳ್ಳುತ್ತದೆ.
  3. pass as a watch in the night
    1. ರಾತ್ರಿಯ ಒಂದು ಜಾಗರದಂತೆ ಕಳೆದುಹೋಗು
    2. (ರೂಪಕವಾಗಿ) ಬೇಗ ಮರೆತು ಹೋಗು; ಶೀಘ್ರವಾಗಿ ಸ್ಮೃತಿಯಿಂದ ಮರೆಯಾಗು
  4. $^1$set a (or the) watch.
  5. star board and port watch (ಹಡಗಿನಲ್ಲಿ ಸರದಿಯ ಮೇಲೆ ಕೆಲಸ ಮಾಡಬೇಕಾದ) ಬಲನಾವಿಕ ದಳ, ಎಡನಾವಿಕ ದಳ.
  6. watch below ಬಿಡುವು (ಕಾಲ, ವೇಳೆ).
See also 1watch
2watch ವಾಚ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ ಮೊದಲಾದವರ ಮೇಲೆ) ಕಣ್ಣಿಟ್ಟಿರು; ದೃಷ್ಟಿ ಇಟ್ಟಿರು; ಕಾವಲಿಡು; ಎಚ್ಚರದಿಂದ ನೋಡು; ಗಮನಿಸು: they had him watched by detectives ಅವರು ಅವನ ಮೇಲೆ ಪತ್ತೇದಾರರ ಕಾವಲಿಟ್ಟಿದ್ದರು. I was watching television ನಾನು ಗಮನವಿಟ್ಟು ದೂರದರ್ಶನವನ್ನು ನೋಡುತ್ತಿದ್ದೆ. the boy was paid to watch sheep ಆ ಹುಡುಗನಿಗೆ ಕುರಿಗಳನ್ನು ಕಾಯಲು ವೇತನ ಕೊಡಲಾಗುತ್ತಿತ್ತು. I shall watch your career with interest ನಾನು ನಿನ್ನ ಪುರೋಭಿವೃದ್ಧಿಯನ್ನು ಆಸಕ್ತಿಯಿಂದ ಗಮನಿಸುತ್ತಿರುವೆನು. I have to watch my weight ನಾನು ನನ್ನ ತೂಕವನ್ನು (ಹೆಚ್ಚದಂತೆ) ನೋಡಿಕೊಳ್ಳಬೇಕಾಗಿದೆ.
  2. ಅವಕಾಶಕ್ಕಾಗಿ (ಸಮಯ) ಕಾಯುತ್ತಿರು.
ಅಕರ್ಮಕ ಕ್ರಿಯಾಪದ
  1. ಎಚ್ಚರವಾಗಿರು; ಜಾಗರೂಕನಾಗಿರು; ಹುಷಾರಾಗಿರು; ಒಳ್ಳೆಯ ಅವಕಾಶ ಮೊದಲಾದವುದಕ್ಕಾಗಿ ಗಮನವಿಟ್ಟು ಕಾಯುತ್ತಿರು.
  2. ಕಾವಲಿರು; ಪಹರೆ ಇರು; ಯಾವುದನ್ನೇ ಕಾಪಾಡಲು ಗಮನವಿಟ್ಟು ನೋಡುತ್ತಿರು.
  3. (ಪ್ರಾಚೀನ ಪ್ರಯೋಗ) (ಪ್ರಾರ್ಥನೆ ಮೊದಲಾದ ಧಾರ್ಮಿಕ ಕ್ರಿಯೆಗಾಗಿ) ಎಚ್ಚರವಾಗಿರು; ಜಾಗರಣೆಮಾಡು.
ಪದಗುಚ್ಛ
  1. watched pot never boils ಕಳವಳದಿಂದ ಕಾಯುತ್ತಿದ್ದರೆ ಕಾಲ ಅತಿ ದೀರ್ಘವೆನಿಸುತ್ತದೆ.
  2. watch it (or oneself) ಎಚ್ಚರವಾಗಿರು; ಮುನ್ನೆಚ್ಚರಿಕೆ ವಹಿಸು.
  3. watch one’s chance ಅವಕಾಶಕ್ಕಾಗಿ ಸಮಯ ಕಾಯುತ್ತಿರು.
  4. watch one’s step (ಆಡುಮಾತು)
    1. ನೋಡಿ ಹೆಜ್ಜೆಯಿಡು; ಮುಗ್ಗರಿಸದಂತೆ ಎಚ್ಚರವಾಗಿರು.
    2. ಹೆಜ್ಜೆ ಗಮನಿಸು; ತಪ್ಪು ಮಾಡದಂತೆ ಎಚ್ಚರವಾಗಿರು; ನಿನ್ನ ತಪ್ಪಿನಿಂದ ಬೇರೊಬ್ಬನಿಗೆ ಸಂಧಾನ ಮೊದಲಾದವುಗಳಲ್ಲಿ ಅನುಕೂಲವಾಗದಂತೆ ಜಾಗರೂಕನಾಗಿರು.
  5. watch out (or for)
    1. (ಆಕ್ರಮಣ, ಅಕಸ್ಮಾತ್‍ ಘಟನೆ, ಮೊದಲಾದವನ್ನು ಎದುರಿಸಲು) ತನ್ನ ಹುಷಾರಿನಲ್ಲಿ, ಎಚ್ಚರಿಕೆಯಿಂದ ಇರು.
    2. (ಅಪಾಯಸೂಚನೆಯಾಗಿ) ಎಚ್ಚರಿಕೆಯಿಂದಿರು; ಹುಷಾರು.
  6. watch the $^1$clock.