See also 1watch
2watch ವಾಚ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ ಮೊದಲಾದವರ ಮೇಲೆ) ಕಣ್ಣಿಟ್ಟಿರು; ದೃಷ್ಟಿ ಇಟ್ಟಿರು; ಕಾವಲಿಡು; ಎಚ್ಚರದಿಂದ ನೋಡು; ಗಮನಿಸು: they had him watched by detectives ಅವರು ಅವನ ಮೇಲೆ ಪತ್ತೇದಾರರ ಕಾವಲಿಟ್ಟಿದ್ದರು. I was watching television ನಾನು ಗಮನವಿಟ್ಟು ದೂರದರ್ಶನವನ್ನು ನೋಡುತ್ತಿದ್ದೆ. the boy was paid to watch sheep ಆ ಹುಡುಗನಿಗೆ ಕುರಿಗಳನ್ನು ಕಾಯಲು ವೇತನ ಕೊಡಲಾಗುತ್ತಿತ್ತು. I shall watch your career with interest ನಾನು ನಿನ್ನ ಪುರೋಭಿವೃದ್ಧಿಯನ್ನು ಆಸಕ್ತಿಯಿಂದ ಗಮನಿಸುತ್ತಿರುವೆನು. I have to watch my weight ನಾನು ನನ್ನ ತೂಕವನ್ನು (ಹೆಚ್ಚದಂತೆ) ನೋಡಿಕೊಳ್ಳಬೇಕಾಗಿದೆ.
  2. ಅವಕಾಶಕ್ಕಾಗಿ (ಸಮಯ) ಕಾಯುತ್ತಿರು.
ಅಕರ್ಮಕ ಕ್ರಿಯಾಪದ
  1. ಎಚ್ಚರವಾಗಿರು; ಜಾಗರೂಕನಾಗಿರು; ಹುಷಾರಾಗಿರು; ಒಳ್ಳೆಯ ಅವಕಾಶ ಮೊದಲಾದವುದಕ್ಕಾಗಿ ಗಮನವಿಟ್ಟು ಕಾಯುತ್ತಿರು.
  2. ಕಾವಲಿರು; ಪಹರೆ ಇರು; ಯಾವುದನ್ನೇ ಕಾಪಾಡಲು ಗಮನವಿಟ್ಟು ನೋಡುತ್ತಿರು.
  3. (ಪ್ರಾಚೀನ ಪ್ರಯೋಗ) (ಪ್ರಾರ್ಥನೆ ಮೊದಲಾದ ಧಾರ್ಮಿಕ ಕ್ರಿಯೆಗಾಗಿ) ಎಚ್ಚರವಾಗಿರು; ಜಾಗರಣೆಮಾಡು.
ಪದಗುಚ್ಛ
  1. watched pot never boils ಕಳವಳದಿಂದ ಕಾಯುತ್ತಿದ್ದರೆ ಕಾಲ ಅತಿ ದೀರ್ಘವೆನಿಸುತ್ತದೆ.
  2. watch it (or oneself) ಎಚ್ಚರವಾಗಿರು; ಮುನ್ನೆಚ್ಚರಿಕೆ ವಹಿಸು.
  3. watch one’s chance ಅವಕಾಶಕ್ಕಾಗಿ ಸಮಯ ಕಾಯುತ್ತಿರು.
  4. watch one’s step (ಆಡುಮಾತು)
    1. ನೋಡಿ ಹೆಜ್ಜೆಯಿಡು; ಮುಗ್ಗರಿಸದಂತೆ ಎಚ್ಚರವಾಗಿರು.
    2. ಹೆಜ್ಜೆ ಗಮನಿಸು; ತಪ್ಪು ಮಾಡದಂತೆ ಎಚ್ಚರವಾಗಿರು; ನಿನ್ನ ತಪ್ಪಿನಿಂದ ಬೇರೊಬ್ಬನಿಗೆ ಸಂಧಾನ ಮೊದಲಾದವುಗಳಲ್ಲಿ ಅನುಕೂಲವಾಗದಂತೆ ಜಾಗರೂಕನಾಗಿರು.
  5. watch out (or for)
    1. (ಆಕ್ರಮಣ, ಅಕಸ್ಮಾತ್‍ ಘಟನೆ, ಮೊದಲಾದವನ್ನು ಎದುರಿಸಲು) ತನ್ನ ಹುಷಾರಿನಲ್ಲಿ, ಎಚ್ಚರಿಕೆಯಿಂದ ಇರು.
    2. (ಅಪಾಯಸೂಚನೆಯಾಗಿ) ಎಚ್ಚರಿಕೆಯಿಂದಿರು; ಹುಷಾರು.
  6. watch the $^1$clock.