See also 2clock  3clock
1clock ಕ್ಲಾಕ್‍
ನಾಮವಾಚಕ
  1. ಗಡಿಯಾರ; ಕಾಲವನ್ನಳೆಯುವ ಯಾ ಸೂಚಿಸುವ ಸಾಧನ.
  2. ಸೂಚಿಮಾಪಕ; ಸೂಚಿ–ಬಿಲ್ಲೆ, ಫಲಕ; ಗಡಿಯಾರದಂಥ ಮುಖಬಿಲ್ಲೆಯಿರುವ ಯಾವುದೇ ಸೂಚಕ: range clock ದೂರಸೂಚಕ; ಗುರಿಯ ದೂರವನ್ನು ಸೂಚಿಸುವ ಯಂತ್ರ.
  3. (ಆಡುಮಾತು) ಟ್ಯಾಕ್ಸಿ ಮೀಟರು; ಮೋಟಾರಿನಲ್ಲಿ ಚಲಿಸಿದ ದೂರಕ್ಕೆ ಆಗುವ ಬಾಡಿಗೆಯನ್ನು ತೋರಿಸುವ ಯಂತ್ರ.
  4. (ಆಡುಮಾತು) ವೇಗಮಾಪಕ.
  5. (ಆಡುಮಾತು) ದೂರಮಾಪಕ; ವಾಹನವು ಚಲಿಸಿದ ದೂರ ತೋರಿಸುವ ಯಂತ್ರ.
  6. (ಆಡುಮಾತು) (ಪಂದ್ಯ ಮೊದಲಾದವಲ್ಲಿ ಬಳಸುವ) ನಿಲ್ಗಡಿಯಾರ; ಸ್ಟಾಪ್‍ವಾಚು; ಸ್ಥಗನ ಗಡಿಯಾರ; ಬೇಕಾದಾಗ ನಡೆಸಬಲ್ಲ ಯಾ ನಿಲ್ಲಿಸಬಲ್ಲ ಗಡಿಯಾರ.
  7. (ಅಶಿಷ್ಟ) ಮುಖ; ಮೋರೆ; ಮೂತಿ.
  8. (ಡ್ಯಾಂಡಿಲಿಯನ್‍ ಮೊದಲಾದ ಗಿಡಗಳ) ತುಪ್ಪುಳು ತಲೆ; ತುಪ್ಪುಳಿನಂತಿರುವ ತಲೆಯ ಭಾಗ.
ಪದಗುಚ್ಛ

o’clock ಸಾಮಾನ್ಯವಾಗಿ ಇದನ್ನು ನಿರ್ದಿಷ್ಟ ಗಂಟೆಯನ್ನು ಹೇಳುವಾಗ ಮಾತ್ರ ಬಳಸುತ್ತಾರೆ, ನಿಮಿಷ ಮೊದಲಾದ ಅದರ ಅಂಶಗಳನ್ನು ಹೇಳುವಾಗ ಬಳಸುವುದಿಲ್ಲ: six o’clock ಆರು ಗಂಟೆ. what o’clock is it? ಈಗ ಗಂಟೆ ಎಷ್ಟು?

ನುಡಿಗಟ್ಟು
  1. (a)round the clock
    1. 24 ಗಂಟೆಯೂ; ರಾತ್ರಿ ಹಗಲೂ.
    2. (ಕೆಲವು ವೇಳೆ) ಹನ್ನೆರಡು ಗಂಟೆಯೂ.
    3. ಎಡೆಬಿಡದೆ; ನಿರಂತರವಾಗಿ; ಅವಿಶ್ರಾಂತವಾಗಿ; ವಿಶ್ರಾಂತಿ ಪಡೆಯದೆ ಯಾ ಸಮಯದ ಪರಿವೆಯಿಲ್ಲದೆ.
  2. beat the clock ಕೊಟ್ಟ ಸಮಯಕ್ಕೆ ಮೊದಲೇ ಮಾಡಿ ಮುಗಿಸು.
  3. hold the clock on (ಪಂದ್ಯ, ಓಡುವವನು, ಪ್ರಕ್ರಿಯೆ ಮೊದಲಾದವು ತೆಗೆದುಕೊಳ್ಳುವ) ಕಾಲವನ್ನು–ಲೆಕ್ಕ ಹಾಕು, ಎಣಿಸು, ಗೊತ್ತು ಮಾಡು.
  4. put back the clock ಪ್ರಾಚೀನ ಕಾಲಕ್ಕೆ ಹಿಂದಿರುಗು; ಹಿಂದಿನ ಕಾಲಕ್ಕೆ ಮರಳು; ಬಳಕೆ ತಪ್ಪಿದ ಪದ್ಧತಿ ಮೊದಲಾದವನ್ನು ಅನುಸರಿಸು ಯಾ ಪ್ರಾರಂಭಿಸು.
  5. the clock round = ನುಡಿಗಟ್ಟು \((1)\).
  6. watch the clock ಗಡಿಯಾರ ನೋಡುತ್ತಿರು; ಗಂಟೆ ಎಣಿಸುತ್ತಿರು; ಕೆಲಸದ ದಿನ ಮುಗಿಯುವುದನ್ನು ಕಾತುರದಿಂದ ಕಾಯುತ್ತಿರು.
  7. work against the clock ಜಾಗ್ರತೆ ಮಾಡು; ಅವಸರಪಡು; ನಿರ್ದಿಷ್ಟ ಅವಧಿಯ ಒಳಗೆ ಮುಗಿಸಲು ಬೇಗ ಬೇಗನೆ ಕೆಲಸ ಮಾಡು, ಕಾರ್ಯತತ್ಪರನಾಗು.