ಗ್ರಾಮಹೋನ್ ತಟ್ಟೆಯ ಮೇಲೆ ಮುಳ್ಳು ಚಲಿಸಲು ಮಾಡಿರುವ ಗಾಡಿ ಯಾ ತೋಡು.
(ಗ್ರಾಮಹೋನ್ ತಟ್ಟೆಯ ಮೇಲೆ) ಒಂದು ಹಾಡು ಮೊದಲಾದವನ್ನು ಮುದ್ರಿಸಿರುವ ಭಾಗ: this side has six tracks ಈ ಪಕ್ಕದಲ್ಲಿ ಆರು ಭಾಗಗಳಿವೆ.
ಟೇಪ್ ರೆಕಾರ್ಡರ್‍ನಲ್ಲಿ ಒಂದು ಕ್ರಮಾನುಗತಿಯ ಸಂಜ್ಞೆಗಳು ಮುದ್ರಿತವಾಗಿರುವ ಕಾಂತಪಟ್ಟೆಯ ಉದ್ದತುಂಡು.
(ಹಡಗು, ವಿಮಾನ, ಮೊದಲಾದವುಗಳ) ಪ್ರಯಾಣದ ಪಥ, ಮಾರ್ಗ; ಪಯಣದ ಹಾದಿ: the track of the hurricane ಚಂಡಮಾರುತದ ಹಾದಿ. followed the same track ಅದೇ ಹಾದಿಯಲ್ಲಿ ಸಾಗಿತು; ಅದೇ ಹಾದಿ ತುಳಿಯಿತು.
ಚಿಂತನೆಯ ಯಾ ತರ್ಕದ–ದಿಕ್ಕು, ಮಾರ್ಗ: this track proved fruitless ಈ ಮಾರ್ಗ ವ್ಯರ್ಥವಾಯಿತು, ನಿಷ್ಫಲವಾಯಿತು.
ಪದಗುಚ್ಛ
across (oron the wrong side of)the tracks (ಆಡುಮಾತು) ಊರಿನ ಸಂಶಯಾಸ್ಪದವಾದ ಯಾ ಸಾಮಾಜಿಕವಾಗಿ ಕೆಳದರ್ಜೆಯ ಭಾಗದಲ್ಲಿ.
(ಉಳಿದಿರುವ ಗುರುತು ಮೊದಲಾದವುಗಳಿಂದ) ಸುಳಿವು ಕಂಡುಹಿಡಿ; ಜಾಡು ಪತ್ತೆ ಹಚ್ಚು.
(ಅಮೆರಿಕನ್ ಪ್ರಯೋಗ) (ಹೆಜ್ಜೆಗೆ ಅಂಟಿದ ದೂಳು ಮೊದಲಾದವುಗಳಿಂದ) ಹೆಜ್ಜೆ ಗುರುತು ಬಿಟ್ಟುಹೋಗು; ಜಾಡು ಮಾಡು.
ನೆಲ ಮೊದಲಾದವುಗಳ ಮೇಲೆ ಅಂಥ ಗುರುತು ಮೂಡಿಸು.
ಅಕರ್ಮಕ ಕ್ರಿಯಾಪದ
(ವಾಹನ ಚಕ್ರಗಳ ವಿಷಯದಲ್ಲಿ) (ಹಿಂದಿನ ಚಕ್ರಗಳ ವಿಷಯದಲ್ಲಿ, ಮುಂದಿನ ಚಕ್ರಗಳ) ಜಾಡಿನಲ್ಲಿ ಹೋಗು.
(ಗ್ರಾಮಹೋನ್ ಮುಳ್ಳಿನ ವಿಷಯದಲ್ಲಿ) ಗಾಡಿಯಲ್ಲಿ ಚಲಿಸು; ತೋಡು ಅನುಸರಿಸಿ ಚಲಿಸು.
(ಚಲನಚಿತ್ರ ಯಾ ದೂರದರ್ಶನ ಕ್ಯಾಮರಾದ ವಿಷಯದಲ್ಲಿ) ಚಿತ್ರ ತೆಗೆಯುವಾಗ, ತೆಗೆಯುತ್ತಿರುವ ಚಿತ್ರಕ್ಕೆ ಅನುಸಾರವಾಗಿ ಚಲಿಸು.
ಪದಗುಚ್ಛ
track someone (orthing) down ಯಾರಾದರೊಬ್ಬರನ್ನು (ಯಾ ಯಾವುದಾದರೂ ವಸ್ತುವನ್ನು) ಆಮೂಲಾಗ್ರವಾದ ಶೋಧದಿಂದ ಯಾ ಕಷ್ಟಪಟ್ಟುಮಾಡಿದ ಶೋಧನೆಯಿಂದ ಪತ್ತೆಮಾಡು. track down ಸುಳಿವು ಹಿಡಿದು, ಬೆನ್ನಟ್ಟಿ ಯಾ ಹಿಂಬಾಲಿಸಿ–ತಲುಪು ಯಾ ಹಿಡಿದುಹಾಕು, ಕೈವಶ ಮಾಡಿಕೊ.
track with (ಆಸ್ಟ್ರೇಲಿಯ) ಸಂಬಂಧವನ್ನು ಯಾ ಪ್ರೇಮಸಂಬಂಧವನ್ನು ಇಟ್ಟುಕೊಂಡಿರು.