See also 1track  3track
2track ಟ್ರಾಕ್‍
ಸಕರ್ಮಕ ಕ್ರಿಯಾಪದ
    1. (ಮೃಗಗಳ ಇಕ್ಕೆಗೆ) ಜಾಡು ಹಿಡಿದು ಹೋಗು.
    2. (ವ್ಯಕ್ತಿ ಮೊದಲಾದವನ್ನು) ಹಿಂಬಾಲಿಸಿ ಹೋಗು; ಬೆನ್ನು ಹತ್ತಿ ಹೋಗು.
    3. (ಬಾಹ್ಯಾಕಾಶ ನೌಕೆ ಮೊದಲಾದವನ್ನು) ಹಿಂಬಾಲಿಸಿ ಹೋಗು; ಅಟ್ಟಿಸಿಕೊಂಡು ಹೋಗಿ ಪತ್ತೆ ಮಾಡು.
  1. (ಪ್ರಗತಿ, ಬೆಳೆವಣಿಗೆ, ಮೊದಲಾದವನ್ನು) ಗುರುತಿಸು; ಪತ್ತೆಹಚ್ಚು.
  2. (ಉಳಿದಿರುವ ಗುರುತು ಮೊದಲಾದವುಗಳಿಂದ) ಸುಳಿವು ಕಂಡುಹಿಡಿ; ಜಾಡು ಪತ್ತೆ ಹಚ್ಚು.
  3. (ಅಮೆರಿಕನ್‍ ಪ್ರಯೋಗ) (ಹೆಜ್ಜೆಗೆ ಅಂಟಿದ ದೂಳು ಮೊದಲಾದವುಗಳಿಂದ) ಹೆಜ್ಜೆ ಗುರುತು ಬಿಟ್ಟುಹೋಗು; ಜಾಡು ಮಾಡು.
  4. ನೆಲ ಮೊದಲಾದವುಗಳ ಮೇಲೆ ಅಂಥ ಗುರುತು ಮೂಡಿಸು.
ಅಕರ್ಮಕ ಕ್ರಿಯಾಪದ
  1. (ವಾಹನ ಚಕ್ರಗಳ ವಿಷಯದಲ್ಲಿ) (ಹಿಂದಿನ ಚಕ್ರಗಳ ವಿಷಯದಲ್ಲಿ, ಮುಂದಿನ ಚಕ್ರಗಳ) ಜಾಡಿನಲ್ಲಿ ಹೋಗು.
  2. (ಗ್ರಾಮಹೋನ್‍ ಮುಳ್ಳಿನ ವಿಷಯದಲ್ಲಿ) ಗಾಡಿಯಲ್ಲಿ ಚಲಿಸು; ತೋಡು ಅನುಸರಿಸಿ ಚಲಿಸು.
  3. (ಚಲನಚಿತ್ರ ಯಾ ದೂರದರ್ಶನ ಕ್ಯಾಮರಾದ ವಿಷಯದಲ್ಲಿ) ಚಿತ್ರ ತೆಗೆಯುವಾಗ, ತೆಗೆಯುತ್ತಿರುವ ಚಿತ್ರಕ್ಕೆ ಅನುಸಾರವಾಗಿ ಚಲಿಸು.
ಪದಗುಚ್ಛ
  1. track someone (or thing) down ಯಾರಾದರೊಬ್ಬರನ್ನು (ಯಾ ಯಾವುದಾದರೂ ವಸ್ತುವನ್ನು) ಆಮೂಲಾಗ್ರವಾದ ಶೋಧದಿಂದ ಯಾ ಕಷ್ಟಪಟ್ಟುಮಾಡಿದ ಶೋಧನೆಯಿಂದ ಪತ್ತೆಮಾಡು. track down ಸುಳಿವು ಹಿಡಿದು, ಬೆನ್ನಟ್ಟಿ ಯಾ ಹಿಂಬಾಲಿಸಿ–ತಲುಪು ಯಾ ಹಿಡಿದುಹಾಕು, ಕೈವಶ ಮಾಡಿಕೊ.
  2. track with (ಆಸ್ಟ್ರೇಲಿಯ) ಸಂಬಂಧವನ್ನು ಯಾ ಪ್ರೇಮಸಂಬಂಧವನ್ನು ಇಟ್ಟುಕೊಂಡಿರು.