See also 2track  3track
1track ಟ್ರಾಕ್‍
ನಾಮವಾಚಕ
  1. ಜಾಡು; (ವ್ಯಕ್ತಿ, ಪ್ರಾಣಿ, ಯಾ ವಸ್ತು ಹೋಗುವಾಗ ಹಿಂದೆ ಬಿಟ್ಟ) ಹೆಜ್ಜೆ ಗುರುತುಗಳ ಸಾಲು.
  2. (ಬಹುವಚನದಲ್ಲಿ) ಅಂಥ ಜಾಡು ಯಾ ಗುರುತುಗಳು; (ಮುಖ್ಯವಾಗಿ) ಹೆಜ್ಜೆ ಗುರುತುಗಳು.
  3. ದಾರಿ; ಹಾದಿ; ಮಾರ್ಗ; ಪಥ: followed in his track ಅವನ ಹಾದಿಯನ್ನೇ ಅನುಸರಿಸಿದ.
  4. ಕಾಲುಹಾದಿ; ಬಳಕೆಯ ದಾರಿ: a rough track round the hill side ಗುಡ್ಡದ ಪಕ್ಕವನ್ನು ಬಳಸಿದ ಒರಟು ಕಾಲುಹಾದಿ.
  5. ಜೀವನದ ರೂಢಿಯ ಮಾರ್ಗ; ಜಾಡು; ಅಭ್ಯಾಸ; ಪದ್ಧತಿ.
    1. ವೈಹಾಳಿ ಪಥ; ಕುದುರೆಗಳು, ನಾಯಿಗಳು, ಮೊದಲಾದವುಗಳ ಓಟದ ಪಂದ್ಯದ ಹಾದಿ.
    2. (ವ್ಯವಸ್ಥೆ ಮಾಡಿ ರಚಿಸಿದ) ಓಟದ ಹಾದಿ, ಪಥ: grass track ಹಸಿರು ಹುಲ್ಲಿನ ಪಥ.
  6. ನಿರಂತರವಾದ ನೇರವಾದ–ರೈಲು ಹಾದಿ, ಮಾರ್ಗ: laid three miles of track ಮೂರು ಮೈಲಿ ಉದ್ದದ ರೈಲುಮಾರ್ಗ ಹಾಕಲಾಯಿತು.
  7. (ಟ್ರ್ಯಾಕ್ಟರ್‍, ಶಸ್ತ್ರಸಜ್ಜಿತ ಟ್ಯಾಂಕ್‍, ಮೊದಲಾದವುಗಳ) ಚಕ್ರದ ಸುತ್ತಲಿನ–ಜಾಡುಪಟ್ಟೆ, ತಿರುಗುಪಟ್ಟೆ.
  8. ವಾಹನದ ಚಕ್ರಗಳ ನಡುವೆ ಅಡ್ಡಡ್ಡಲಾಗಿರುವ ದೂರ.
  9. = soundtrack.
    1. ಗ್ರಾಮಹೋನ್‍ ತಟ್ಟೆಯ ಮೇಲೆ ಮುಳ್ಳು ಚಲಿಸಲು ಮಾಡಿರುವ ಗಾಡಿ ಯಾ ತೋಡು.
    2. (ಗ್ರಾಮಹೋನ್‍ ತಟ್ಟೆಯ ಮೇಲೆ) ಒಂದು ಹಾಡು ಮೊದಲಾದವನ್ನು ಮುದ್ರಿಸಿರುವ ಭಾಗ: this side has six tracks ಈ ಪಕ್ಕದಲ್ಲಿ ಆರು ಭಾಗಗಳಿವೆ.
  10. ಟೇಪ್‍ ರೆಕಾರ್ಡರ್‍ನಲ್ಲಿ ಒಂದು ಕ್ರಮಾನುಗತಿಯ ಸಂಜ್ಞೆಗಳು ಮುದ್ರಿತವಾಗಿರುವ ಕಾಂತಪಟ್ಟೆಯ ಉದ್ದತುಂಡು.
  11. (ಹಡಗು, ವಿಮಾನ, ಮೊದಲಾದವುಗಳ) ಪ್ರಯಾಣದ ಪಥ, ಮಾರ್ಗ; ಪಯಣದ ಹಾದಿ: the track of the hurricane ಚಂಡಮಾರುತದ ಹಾದಿ. followed the same track ಅದೇ ಹಾದಿಯಲ್ಲಿ ಸಾಗಿತು; ಅದೇ ಹಾದಿ ತುಳಿಯಿತು.
  12. ಚಿಂತನೆಯ ಯಾ ತರ್ಕದ–ದಿಕ್ಕು, ಮಾರ್ಗ: this track proved fruitless ಈ ಮಾರ್ಗ ವ್ಯರ್ಥವಾಯಿತು, ನಿಷ್ಫಲವಾಯಿತು.
ಪದಗುಚ್ಛ
  1. across (or on the wrong side of)the tracks (ಆಡುಮಾತು) ಊರಿನ ಸಂಶಯಾಸ್ಪದವಾದ ಯಾ ಸಾಮಾಜಿಕವಾಗಿ ಕೆಳದರ್ಜೆಯ ಭಾಗದಲ್ಲಿ.
  2. cover one’s track (ಮಾಡಿದ ಅಪರಾಧ ಮೊದಲಾದವುಗಳ) ಸಾಕ್ಷ , ಪುರಾವೆ, ಮೊದಲಾದವನ್ನು ಮುಚ್ಚಿಬಿಡು, ಮರೆಮಾಡು; ಜಾಡು ಅಳಿಸು.
  3. in one’s tracks (ಆಡುಮಾತು) ನಿಂತೆಡೆಯೆ; ಇದ್ದಲ್ಲೆ; ಆಗಲೇ ಅಲ್ಲಿಯೇ.
  4. keep track of (ಹೊಸ ಬೆಳವಣಿಗೆ ಮೊದಲಾದವುಗಳ) ಜಾಡು ಹಿಡಿ; ಜಾಡು ಅನುಸರಿಸಿ ನಡೆ.
  5. lose track of (ಹೊಸ ಬೆಳವಣಿಗೆ ಮೊದಲಾದವುಗಳ) ಜಾಡು ತಪ್ಪು; ಜಾಡು ಕಾಣದಾಗು.
  6. make tracks (ಆಡುಮಾತು) ಓಟ ಕೀಳು; ಪರಾರಿಯಾಗು.
  7. make tracks for (ಆಡುಮಾತು) ಹಿಂಬಾಲಿಸಿ ಹೋಗು; ಬೆನ್ನು ಹತ್ತಿ ಹೋಗು; (ಒಂದರತ್ತ) ಧಾವಿಸು.
  8. off the track
    1. ದಾರಿ ತಪ್ಪಿ; ಜಾಡು ತಪ್ಪಿ.
    2. ವಿಷಯ ಬಿಟ್ಟು.
  9. on a person’s track
    1. (ಒಬ್ಬನನ್ನು) ಬೆನ್ನಟ್ಟಿ; ಹಿಂಬಾಲಿಸಿ.
    2. (ವ್ಯಕ್ತಿಯ ನಡತೆ, ಯೋಜನೆಗಳು, ಮೊದಲಾದವುಗಳ) ಜಾಡು ಹಿಡಿದು; ಸುಳಿವು ಪಡೆದು; ಪತ್ತೆ ಹಚ್ಚಿ.
  10. on the wrong (or right) track (ವಿಚಾರಣೆ ನಡೆಸುವಾಗ) ತಪ್ಪು (ಯಾ ಸರಿಯಾದ) ದಾರಿ ಹಿಡಿದು, ಅನುಸರಿಸಿ.
  11. single track ಒಂದೇ ರೈಲು ಹಾದಿ; ಒಂದು ರೈಲು ಹೋಗಬಹುದಾದ ಮಾರ್ಗ. double track (ಎರಡು ರೈಲುಗಳು ಅಕ್ಕಪಕ್ಕದಲ್ಲಿ ಹೋಗಬಹುದಾದ) ಜೋಡಿ ರೈಲು ಹಾದಿಗಳು.