(ಸಾಮಾನ್ಯವಾಗಿ ಬಹುವಚನದಲ್ಲಿ) ಗಡ್ಡೆಸಸ್ಯಗಳ ನೆಲದ ಮೇಲಣ(ಎಲೆ ಮೊದಲಾದ) ಭಾಗ: turnip tops ಮೂಲಂಗಿ ಎಲೆಗಳು.
(ಬಹುವಚನದಲ್ಲಿ) ನೂಲು ತೆಗೆಯಲು ಸಿದ್ಧಪಡಿಸುವ ಉದ್ದನೆಯ ಉಣ್ಣೆ ಎಳೆಗಳ ಕಟ್ಟು.
(ನೆಲ, ಮೇಜು, ಮೊದಲಾದವುಗಳ) ಮೇಲ್ಭಾಗ; ಮೇಲ್ಮೆ ಭಾಗ.
(ಪಾದರಕ್ಷೆ, ಮೋಜ, ಮೊದಲಾದವುಗಳ) ಮೇಲುಭಾಗ.
(ಗಾಡಿಯ) ಚಾವಣಿ; ಮುಚ್ಚಿಗೆ.
(ಮೋಟಾರು ಕಾರು, ಮಕ್ಕಳ ತಳ್ಳುಬಂಡಿ, ಮೊದಲಾದವುಗಳ) ಮಡಿಸುವ ಚಾವಣಿ; ಮಡಿಚಬಲ್ಲ ಮುಚ್ಚಿಗೆ.
(ಡಬರಿ ಮೊದಲಾದವುಗಳ) ಮುಚ್ಚಳ.
ಸೀಸೆಯ ಮುಚ್ಚಳ, ಬಿರಡೆ.
(ಹಾಲಿನ) ಕೆನೆಯ ಭಾಗ.
(ಪುಸ್ತಕದ) ಪುಟದ ಮೇಲಂಚು ಯಾ ಅಂಚುಗಳು: gilt top ಗಿಲೀಟು ಅಂಚಿನ (ಪುಟಗಳು).
ಜಾಕಿಟ್; (ಸೊಂಟದಿಂದ) ಮೇಲುಭಾಗ ಮುಚ್ಚುವ ಉಡುಪು.
ಕಾಲುಚೀಲದ–ಮೇಲುಗಡೆಯ ಮಡಿಕೆಯ ಭಾಗ, ಮೇಲಿನ ಪಟ್ಟೆಯಂಚು.
ನೀಳ ಬಊಟಿನ ಮೇಲುತುದಿ.
ಅತ್ಯಂತ ಮೇಲುದರ್ಜೆ; ಅಗ್ರಸ್ಥಾನ.
ಅಗ್ರಸ್ಥಾನದಲ್ಲಿರುವ ವ್ಯಕ್ತಿ: came out (at the) top of the school ಶಾಲೆಗೆಲ್ಲಾ ಮೇಲಿನವನಾಗಿ ಬಂದ.
ಮೇಲ್ತುದಿ; ಅಗ್ರಸ್ಥಾನ; ಶಿರೋಭಾಗ: top of the table ಭೋಜನ ಗೋಷ್ಠಿಯಲ್ಲಿ ಅಗ್ರಸ್ಥಾನ; ಊಟದ ಮೇಜಿನಲ್ಲಿ ಉಚ್ಚಸ್ಥಾನ.
ತುತ್ತತುದಿ; ಶಿಖರ; ಪರಮಾವಧಿ; ಪರಾಕಾಷ್ಠೆ; ಅತ್ಯಂತ ಮೇಲಿನ ಮಟ್ಟ: realised the top of my ambition ನನ್ನ ಮಹತ್ವಾಕಾಂಕ್ಷೆಯ ಶಿಖರ ಮುಟ್ಟಿದೆ. called at the top of his voice ಅವನು ಉಚ್ಚಕಂಠದಲ್ಲಿ ಕೂಗಿದ.
(ಬಹುವಚನದಲ್ಲಿ) (ಆಡುಮಾತು) ಉತ್ತಮೋತ್ತಮ ವಸ್ತು ಯಾ ವ್ಯಕ್ತಿ: he’s tops at cricket ಅವನು ಕ್ರಿಕೆಟ್‍ನಲ್ಲಿ ಉತ್ತಮೋತ್ತಮ ವ್ಯಕ್ತಿ.
(ನೌಕಾಯಾನ) ತಲೆಕಟ್ಟೆ; ನೆತ್ತಿಕಟ್ಟೆ; ಮೇಲ್ಕೂವೆಯ ಹಗ್ಗ ಹುರಿಗಳನ್ನು ವಿಸ್ತರಿಸಲು ಯಾ ಬಂದೂಕಗಳನ್ನಿರಿಸಲು ಅನುಕೂಲಿಸುವ, ಕೆಳಕೂವೆಯ ಮೇಲ್ತುದಿಯಲ್ಲಿರುವ ಕಟ್ಟೆ, ಜಗಲಿ.
(ಬಹುವಚನದಲ್ಲಿ) (ಮುಖ್ಯವಾಗಿ ಬ್ರಿಡ್ಜ್ ಆಟ) ಒಂದೇ ರಂಗಿನ ಎರಡು ಯಾ ಮೂರು ಉಚ್ಚತಮ ಎಲೆಗಳು.